»   » ಸ್ಯಾಂಡಲ್ವುಡ್ ಸೆಲೆಬ್ರಿಟಿಗಳ ಸಂಸಾರದಲ್ಲಿ ಸರಿಗಮ

ಸ್ಯಾಂಡಲ್ವುಡ್ ಸೆಲೆಬ್ರಿಟಿಗಳ ಸಂಸಾರದಲ್ಲಿ ಸರಿಗಮ

Posted By: ರಾಜೇಶ್ ಕಾಮತ್
Subscribe to Filmibeat Kannada

ಹಿಂದೊಮ್ಮೆ ತರಳಬಾಳು ಶ್ರೀಗಳು ಒಂದು ಮಾತನ್ನು ಹೇಳಿದ್ದರು. ಮಠದ ಸ್ವಾಮೀಜಿಯಾಗುವುದು ಸುಲಭ, ಮನೆಯಲ್ಲಿ ಎಲ್ಲರೂ ಪ್ರೀತಿಸುವ ಸೊಸೆ ಅಥವಾ ಅತ್ತೆಯಾಗುವುದು ಕಷ್ಟ ಎಂದು.

ಎಲ್ಲರೂ ಪ್ರೀತಿಸುವ ಸೊಸೆ ಅಥವಾ ಎಲ್ಲರೂ ಗೌರವಿಸುವ ಅತ್ತೆಯಾಗುವಲ್ಲಿ ಪುರುಷನ ಪಾತ್ರ ಬಹು ಮುಖ್ಯವಾಗಿದ್ದು. ಸಮಾಜದಲ್ಲಿ ಒಳ್ಳೆಯ ಹೆಸರು, ಬ್ಯಾಂಕ್ ಬ್ಯಾಲನ್ಸ್ ಅಥವಾ ತಂದುರುಸ್ತು ಆರೋಗ್ಯವಿದ್ದರೆ ಸಾಕು ಮಿಕ್ಕದೆಲ್ಲಾ ಮ್ಯಾನೇಜ್ ಮಾಡಬಹುದು ಎನ್ನುವುದು ಓವರ್ ಕಾನ್ಫಿಡೆನ್ಸ್ ಆದರೂ ಆಗಬಹುದು.

ಸಂಸಾರನೌಕೆ ಸರಿಯಾದ ನಿಟ್ಟಿನಲ್ಲಿ ಸಾಗಿದರೆ ಮಾತ್ರ ಬದುಕು ಬಂಗಾರ, ಇಲ್ಲಾಂದ್ರೆ ದುಡ್ಡಾಗಲಿ ಹೆಸರಾಗಲಿ ಯಾವುದೇ ಲೆಕ್ಕಕ್ಕೆ ಬರುವುದಿಲ್ಲ. ನೆಮ್ಮದಿಯೂ ಇರುವುದಿಲ್ಲ, ಬದುಕೂ ಹೈರಾಣ.

ಬೆಳ್ಳಿತೆರೆಯ ಮೇಲೆ ನಮ್ಮನ್ನೆಲ್ಲಾ ರಂಜಿಸುತ್ತಿರುವ ಕಲಾವಿದರಿಗೂ ವೈಯಕ್ತಿಕ ಜೀವನ ಅನ್ನೋದು ಇರುತ್ತೆ, obviously ಇರಲೇ ಬೇಕಲ್ವಾ?

ತಮ್ಮ ಕೆಲಸದ ಒತ್ತಡದ ನಡುವೆಯೂ ಉತ್ತಮ ಸಾಂಸಾರಿಕ ಜೀವನ ನಡೆಸುತ್ತಿರುವ / ನಡೆಸಿದ ನಮ್ಮ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ ಒಂದು ಕ್ವಿಕ್ ಝಲಕ್ ಸ್ಲೈಡಿನ ಮೂಲಕ..

ಕನ್ನಡಿಗರ ಕಣ್ಮಣಿ

ಅಣ್ಣಾವ್ರ ಜೀವನದಲ್ಲಿ ಅವರ ಪತ್ನಿ ಪಾರ್ವತಮ್ಮ ಅವರ ಪಾತ್ರ ಎಂಥದ್ದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ರಾಜ್ ಅವರಿಗೆ ಅರ್ಧಾಂಗಿಯಾಗಿ, ತಮ್ಮ ಸಂಸ್ಥೆಯ ಕಾರುಬಾರಿನಲ್ಲಿ, ಚಿತ್ರೋದ್ಯಮದಲ್ಲೇ ತೊಡಗಿಸಿ ಕೊಂಡಿರುವ ತಮ್ಮ ಮಕ್ಕಳ ವಿಚಾರದಲ್ಲಿ ಪಾರ್ವತಮ್ಮ ಪರ್ಫೆಕ್ಟ್ ಗೃಹಿಣಿ. ಒಟ್ಟಿನಲ್ಲಿ ರಾಜ್ ಮತ್ತು ಪಾರ್ವತಮ್ಮ ಅವರದ್ದು ಸುಂದರ ಸಂಸಾರ.

ವಿಷ್ಣು, ಭಾರತಿ

ಡಾ. ವಿಷ್ಣು ಮತ್ತು ಭಾರತಿ ಚಿತ್ರೋದ್ಯಮದಲ್ಲಿ ಉತ್ತುಂಗಕ್ಕೇರಿದ್ದ ಸಮಯದಲ್ಲಿ ಅಂದರೆ 1975ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕೀರ್ತಿ, ಚಂದನ ಇಬ್ಬರು ದಂಪತಿಗಳ ಪುತ್ರಿಯರು. ಅಳಿಯ ಅನಿರುದ್ದ್ ಕೂಡಾ ಚಿತ್ರೋದ್ಯಮದಲ್ಲಿ ತೊಡಗಿಸಿಕೊಂಡವರು.

ಅಂಬರೀಶ್

ಕನ್ನಡ ಚಿತ್ರೋದ್ಯಮದ ಲವ್ಲಿ ಕಪಲ್ ಎಂದರೆ ಅಂಬರೀಶ್ ಮತ್ತು ಸುಮಲತಾ ದಂಪತಿಗಳು. ಮಲಯಾಳಂ ಮೂಲದ ಸುಮಲತಾ ಮತ್ತು ಮಂಡ್ಯದ ಗಂಡು ಅಂಬರೀಶ್ ಇಬ್ಬರು 1991ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ದಂಪತಿಗಳ ಏಕಮೇವ ಪುತ್ರ ಅಭಿಷೇಕ್.

ರಜನೀಕಾಂತ್

ಬೆಂಗಳೂರಿನಲ್ಲಿ ಬೆಳೆದ ಮತ್ತು ಸದ್ಯ ತಮಿಳು ಚಿತ್ರೋದ್ಯಮದ ಸೂಪರ್ ಸ್ಟಾರ್ ರಜನೀಕಾಂತ್ ಅವರದ್ದು ಪತ್ನಿ ಲತಾ ಜೊತೆಗೆ ತುಂಬು ಸಂಸಾರ. ಮಗಳು ಸೌಂದರ್ಯ, ಅಳಿಯ ಧನುಸ್ಸು ಕೂಡಾ ಚಿತ್ರೋದ್ಯಮದಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಶಿವರಾಜ್ ಕುಮಾರ್

ರಾಜ್ - ಪಾರ್ವತಮ್ಮ ದಂಪತಿಗಳ ಮೊದಲ ಪುತ್ರ ಶಿವಣ್ಣ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರಿ ಗೀತಾ ಅವರನ್ನು ಮದುವೆಯಾಗಿದ್ದಾರೆ. ದಂಪತಿಗಳಿಗೆ ನಿವೇದಿತಾ ಮತ್ತು ನಿರುಪಮಾ ಎನ್ನುವ ಇಬ್ಬರು ಪುತ್ರಿಯರು.

ರಮೇಶ್ ಅರವಿಂದ್

ಚಿತ್ರೋದ್ಯಮದ ಹ್ಯಾಂಡ್ಸ್ಮ್ ಹೀರೋ ರಮೇಶ್ ಅರವಿಂದ್, ಅರ್ಚನಾ ಅವರನ್ನು ಪ್ರೀತಿಸಿ ಮದುವೆಯಾದರು. ದಂಪತಿಗಳಿಗೆ ಒಂದು ಗಂಡು ಮತ್ತು ಒಂದು ಹೆಣ್ಣು.

ಜಗ್ಗೇಶ್

ಹಾಸ್ಯ ಪ್ರಧಾನ ಚಿತ್ರಗಳ ಮೂಲಕ ಕನ್ನಡ ಬೆಳ್ಳಿತೆರೆಯಲ್ಲಿ ನಾಯಕನ ಸ್ಥಾನಕ್ಕೇರಿದ ಜಗ್ಗೇಶ್, ಪರಿಮಳ ಅವರನ್ನು ವರಿಸಿದರು. ದಂಪತಿಗಳಿಗೆ ಗುರುರಾಜ್, ಯತೀಶ್ ಎನ್ನುವ ಇಬ್ಬರು ಮಕ್ಕಳು.

ಉಪೇಂದ್ರ

H20 ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದ ಪ್ರಿಯಾಂಕರನ್ನು 2003ರಲ್ಲಿ ವರಿಸಿದ ರಿಯಲ್ ಸ್ಟಾರ್ ಉಪೇಂದ್ರ ದಂಪತಿಗಳಿಗೆ ಒಂದು ಗಂಡು, ಒಂದು ಹೆಣ್ಣು.

ಸುದೀಪ್

ಮನುಷ್ಯನಿಗೆ ಫ್ಯಾಮಿಲಿ ಎಷ್ಟು ಮುಖ್ಯ ಎನ್ನುವುದನ್ನು ಆವಾಗಾವಾಗ ಸುದೀಪ್ ಹೇಳುವುದುಂಟು. ಹೆಂಡತಿ ಪ್ರಿಯಾ ಮತ್ತು ಮಗಳು ಸಾನ್ವಿ ಜೊತೆ ಸುದೀಪ್ ಅವರದ್ದು ಹ್ಯಾಪ್ಪಿ ಸಂಸಾರ.

ದರ್ಶನ್

ತೂಗುದೀಪ ಶ್ರೀನಿವಾಸ್ - ಮೀನಾ ತೂಗುದೀಪ ದಂಪತಿಗಳ ಪುತ್ರ ದರ್ಶನ್, ವಿಜಯಲಕ್ಷ್ಮಿಯವರನ್ನು 2000ರಲ್ಲಿ ಮದುವೆಯಾದರು. ಹೆಂಡತಿಗೆ ಚಿತ್ರಹಿಂಸೆ ನೀಡಿದರು ಎನ್ನುವ ಕಾರಣಕ್ಕಾಗಿ ದರ್ಶನ್ ಜೈಲಿಗೆ ಹೋಗಿ ಬಂದರೂ ಇವರಿಬ್ಬರದ್ದೂ ಆನಂದಮಯ ಸಂಸಾರ. ಇವರಿಬ್ಬರ ಮುದ್ದಿನ ಪುತ್ರ ವಿನೀಶ್.

ಪುನೀತ್ ರಾಜಕುಮಾರ್

ಪವರ್ ಸ್ಟಾರ್ ಪುನೀತ್ , ರಾಜ್ ಮತ್ತು ಪಾರ್ವತಮ್ಮ ಅವರ ಕೊನೆಯ ಮಗ. 1999ರಲ್ಲಿ ಅಶ್ವಿನಿಯವರನ್ನು ಮದುವೆಯಾದ ಪುನೀತ್ ದಂಪತಿಗಳಿಗೆ ಧೃತಿ ಮತ್ತು ವಂದಿತಾ ಇಬ್ಬರು ಮಕ್ಕಳು.

ಗಣೇಶ್

ಮುಂಗಾರು ಮಳೆ ಚಿತ್ರದ ನಂತರ ಬ್ಯೂಸಿ ನಟನಾದ ಗೋಲ್ಡನ್ ಸ್ಟಾರ್ ಗಣೇಶ್, ಫ್ಯಾಷನ್ ಡಿಸೈನರ್ ಆಗಿದ್ದ ಶಿಲ್ಪಾ ಅವರನ್ನು 2008ರಲ್ಲಿ ಮದುವೆಯಾದರು. ದಂಪತಿಗಳಿಗೆ ಚಾರಿತ್ರ್ಯ ಎನ್ನುವ ಮಗಳಿದ್ದಾಳೆ.

ಯಶ್

ಕನ್ನಡ ಚಿತ್ರೋದ್ಯಮದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಯಶ್. ತಂದೆ ಕೆಎಸ್ಆರ್ಟಿಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಯಶ್ ಗೆ ಒಬ್ಬರು ತಂಗಿ.

ದುನಿಯಾ ವಿಜಯ್

ಮೊದಲು ಕಿರು ಪಾತ್ರಗಳಲ್ಲಿ ನಟಿಸಿ ನಂತರ 'ದುನಿಯಾ' ಚಿತ್ರದಿಂದ ನಾಯಕ ನಟನಾದ ವಿಜಯ್ ಮತ್ತು ಅವರ ಪತ್ನಿಯ ನಡುವೆ ವೈಮನಸ್ಸು ಉಂಟಾಗಿ, ಡೈವರ್ಸಿಗಾಗಿ ಕೋರ್ಟ್ ಮೆಟ್ಟಲೇರಿತ್ತು. ನಂತರ ಇಬ್ಬರೂ ಮನಸ್ಸು ಬದಲಾಯಿಸಿ ಮತ್ತೆ ಒಂದಾಗಿದ್ದಾರೆ. ದಂಪತಿಗಳಿಗೆ ಮೂವರು ಮಕ್ಕಳು.

English summary
Sandalwood actors who manage both onscreen and off-screen roles successfully, here is the list.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada