»   » 'ಭರ್ಜರಿ' ಹುಡುಗನಿಗೆ ಶುಭ ಕೋರಿದ ಸ್ಯಾಂಡಲ್ ವುಡ್ ನಟರು

'ಭರ್ಜರಿ' ಹುಡುಗನಿಗೆ ಶುಭ ಕೋರಿದ ಸ್ಯಾಂಡಲ್ ವುಡ್ ನಟರು

Posted By:
Subscribe to Filmibeat Kannada

ಕನ್ನಡದಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿದ್ದ 'ಭರ್ಜರಿ' ಸಿನಿಮಾ ಇಂದು ರಾಜ್ಯಾದ್ಯಂತ ತೆರೆಗೆ ಬಂದಿದೆ. ನಿನ್ನೆ ರಾತ್ರಿಯಿಂದಲೇ ಅನೇಕ ಜಿಲ್ಲೆಗಳಲ್ಲಿ ಸಿನಿಮಾದ ಪ್ರದರ್ಶನ ಶುರುವಾಗಿದೆ. ಈ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ನಟರು 'ಭರ್ಜರಿ' ಹುಡುಗ ಧ್ರುವಸರ್ಜಾಗೆ ಶುಭ ಕೋರಿದ್ದಾರೆ.

ನಟ ಜಗ್ಗೇಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಧ್ರುವ ಸರ್ಜಾ ಅವರಿಗೆ ವಿಶ್ ಮಾಡಿದ್ದಾರೆ. ''ಕನ್ನಡಕ್ಕೆ ಮತ್ತೊಬ್ಬ ಆಶಾದಾಯಕ ನಟ, ನನ್ನ ಸ್ನೇಹಿತ ಕಿಶೋರ್ ಮತ್ತು ಅರ್ಜುನ್ ಸರ್ಜಾ ಅವರ ತಂಗಿಮಗ. ಈ ಚಿತ್ರವು ಹ್ಯಾಟ್ರಿಕ್ ಬಾರಿಸಲಿ.' ಎಂದು ಜಗ್ಗೇಶ್ ಧ್ರುವಸರ್ಜಾ ಅವರಿಗೆ ವಿಶ್ ಮಾಡಿದ್ದಾರೆ.

Sandalwood actors wishes to 'Bharjari' movie.

ಜೊತೆಗೆ 'ರಂಗಿತರಂಗ' ಖ್ಯಾತಿಯ ಸಹೋದರರಾದ ಅನೂಪ್ ಭಂಡಾರಿ ಮತ್ತು ನಿರೂಪ್ ಭಂಡಾರಿ ಕೂಡ 'ಭರ್ಜರಿ' ಸಿನಿಮಾಗೆ ಶುಭಕೋರಿದ್ದಾರೆ. 'ಹಂಬಲ್ ಪೊಲಿಟೀಶಿಯನ್ ನಾಗರಾಜ್' ಚಿತ್ರದ ಮೂಲಕ ನಾಯಕನಟರಾದ ಡ್ಯಾನಿಶ್ ಸೇಠ್ ಅವರು ಸಹ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಧ್ರುವ ಸರ್ಜಾಗೆ 'ಆಲ್ ದಿ ಬೆಸ್ಟ್' ಹೇಳಿದ್ದಾರೆ.

Sandalwood actors wishes to 'Bharjari' movie.

ಭರ್ಜರಿ' ಧ್ರುವ ಸರ್ಜಾ ಮತ್ತು ರಚಿತಾ ರಾಮ್ ನಟಸಿರುವಸಿನಿಮಾ. 'ಬಹದ್ದೂರ್' ಖ್ಯಾತಿಯ ಚೇತನ್ ಕುಮಾರ್ ಈಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅಂದ್ಹಾಗೆ, ಚಿತ್ರಕ್ಕೆ ದೊಡ್ಡ ರೆಸ್ಪಾನ್ಸ್ ಸಿಕ್ಕಿದ್ದು, ದಾವಣಗೆರೆ, ಬಿಜಾಪುರ, ಹೊಸಪೇಟೆ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಚಿತ್ರದ ಪ್ರದರ್ಶನ ಮಧ್ಯರಾತ್ರಿಯಿಂದ ಶುರುವಾಗಿದೆ.

Sandalwood actors wishes to 'Bharjari' movie.
English summary
Sandalwood actors wishes to Dhruva sarja staring 'Bharjari' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada