ಹೆಚ್ಚುತ್ತಿದೆ ಬಿಸಿಲಿನ ತಾಪ, ಬದಲಾಯಿತು ಕುಂದಾಪುರದ ಕಿನ್ನರಿಯ ರೂಪ ; ಹೀಗಿದ್ದ ಭೂಮಿ ಶೆಟ್ಟಿ ಹೀಗಾದರು..!]

ಬದಲಾವಣೆ ಜಗದ ನಿಯಮ ಎಂಬ ಮಾತನ್ನ ಗಂಭೀರವಾಗಿ ತೆಗೆದುಕೊಂಡವರು ಸಿನಿಮಾದವರು. ಹೀಗಾಗಿ ಅಡಿಯಿಂದ ಮುಡಿವರೆಗೆ ದಿನಕ್ಕೊಂದು ಬದಲಾವಣೆ ಇವರಲ್ಲಿ ಕಂಡುಬರುತ್ತದೆ. ಇದಕ್ಕೆ ಸದ್ಯದ ಉದಾಹರಣೆ ಭೂಮಿ ಶೆಟ್ಟಿ

ಹೌದು. ಕುಂದಾಪುರದ ಕೃಷ್ಣ ಸುಂದರಿ ಭೂಮಿ ಶೆಟ್ಟಿ ಮೊದಲಿಂದ ಸಿಕ್ಕಾಪಟ್ಟೆ ಬೋಲ್ಡ್ ಹುಡುಗಿ. ಯಾರು ಏನೇ ಹೇಳಲಿ.. ಯಾರು ಏನಾದರೂ ಅಂದುಕೊಳ್ಳಲಿ.. ನಾನು ಇರುವುದೇ ಹೀಗೆ ಎನ್ನುವ ಧೋರಣೆ ಇವರದ್ದು. ಸೀರೆಗೂ ಸೈ.. ಪಾರ್ಟಿ ವೇರ್ ಡ್ರೆಸ್ ಗಳಿಗೂ ಜೈ ಅನ್ನುವ ಭೂಮಿ ಶೆಟ್ಟಿ, ಸದ್ಯಕ್ಕೆ ಹೊಚ್ಚ ಹೊಸ ರೂಪದಲ್ಲಿ ಪ್ರತ್ಯಕ್ಷವಾಗಿದ್ದಾರೆ.ಬಾಕ್ಸ್ ಬ್ರೇಡ್ ಹೇರ್ ಸ್ಟೈಲ್ ನಲ್ಲಿ ಮಿಂಚ್ತಿರುವ ಭೂಮಿ ಶೆಟ್ಟಿ, ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅನೇಕರ ಕಣ್ಮನ ಸೆಳೆಯುತ್ತಿದ್ದಾರೆ. ಕ್ಯಾಮರಾಗೆ ಥರೇವಾರಿ ಫೋಸ್ ಗಳನ್ನ ಕೊಟ್ಟಿದ್ದಾರೆ.

Sandalwood Actress Bhoomi Shetty created a sensation with her new hairstyle

ಭೂಮಿ ಶೆಟ್ಟಿಯ ಈ ಅವತಾರ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಗೀಡಾಗುತ್ತಿದೆ. ಕಮೆಂಟ್ ಗಳ ಸುರಿಮಳೆಯೂ ಆಗ್ತಿದೆ. ಎಂದಿನಂತೆ ಕೆಲವರು ಭೂಮಿ ಶೆಟ್ಟಿ ಅವರ ಈ ಕೇಶ ವಿನ್ಯಾಸ.. ಸೌಂದರ್ಯಕ್ಕೆ.. ಮನಸನ್ನ ಸೋತರೆ, ಇನ್ನೂ ಕೆಲವರು.. ಭೂಮಿ ಶೆಟ್ಟಿ ಮನಸಿಗೆ ನೋವುಂಟು ಮಾಡುವ ಪ್ರಯತ್ನವನ್ನ ಮಾಡುತ್ತಿದ್ದಾರೆ. ಕೇವಲ ಪಾಸಿಟಿವ್ ಅಂಶಗಳನ್ನಷ್ಟೇ ಸ್ವೀಕರಿಸುವ ಗುಣವನ್ನ ಹೊಂದಿರುವ ಭೂಮಿ ಶೆಟ್ಟಿ ವ್ಯಕ್ತವಾಗ್ತಿರುವ ನೆಗೆಟಿವ್ ಅಭಿಪ್ರಾಯಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಅನ್ನುವುದು ಬೇರೆ ವಿಚಾರ

ಇನ್ನೂ ತಮ್ಮ ಈ ನ್ಯೂ ಲುಕ್ ಬಗ್ಗೆ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿರುವ ಭೂಮಿ ಶೆಟ್ಟಿ, ನಾನು ಕಳೆದ ಕೆಲ ದಿನಗಳಿಂದ ಈ ಹೇರ್ ಸ್ಟೈಲ್ ಗೆ ಹಾತೊರೆಯುತ್ತಿದೆ ಯಾಕೆಂದರೆ ಈ ಕೇಶ ವಿನ್ಯಾಸ ನನಗೆ ಸಿಕ್ಕಾಪಟ್ಟೆ ಅಚ್ಚು ಮೆಚ್ಚಿನದ್ದು ಎಂದಿದ್ದಾರೆ. ಬಾಕ್ಸ್ ಬ್ರೇಡ್ ಹೇರ್ ಸ್ಟೈಲ್ ನನ್ನನ್ನೂ ಆಕರ್ಷಿಸುತ್ತಿತ್ತು ಎಂದಿದ್ದಾರೆ. ನಮ್ಮ ಸಂಸ್ಕೃತಿಯನ್ನು ಸ್ವೀಕರಿಸುವ ವಿದೇಶಿಯರನ್ನು ನಾವು ಶ್ಲಾಘಿಸುವಂತೆಯೇ, ನಮ್ಮ ಜನರು ಇತರ ಸಂಸ್ಕೃತಿಗಳನ್ನು ಮೆಚ್ಚುವುದನ್ನು ನಾವು ಏಕೆ ಒಪ್ಪಿಕೊಳ್ಳಬಾರದು? ಎಂದು ಮರು ಪ್ರಶ್ನೆಯನ್ನೂ ಮಾಡಿದ್ದಾರೆ ಭೂಮಿ ಶೆಟ್ಟಿ

Sandalwood Actress Bhoomi Shetty created a sensation with her new hairstyle

ನನ್ನ ಈ ನ್ಯೂ ಹೇರ್ ಸ್ಟೈಲ್ ಗೆ ನನ್ನ ಮನೆಯಲ್ಲಿ ಸಿಕ್ಕ ಪ್ರತಿಕ್ರಿಯೆ ಮಾತ್ರ ಹೇಳಲು ವರ್ಣನಾತೀತ ಎಂದಿರುವ ಭೂಮಿ ಶೆಟ್ಟಿ, ನನ್ನ ತಾಯಿ ನನ್ನ ಸಿಕ್ಕಾಪಟ್ಟೆ ಹೊಗಳಿದರು, ನನ್ನ ಈ ರೂಪವನ್ನ ಮನಸಾರೆ ಮೆಚ್ಚಿಕೊಂಡರು ಎಂದಿದ್ದಾರೆ. ಇನ್ನೂ ಸದ್ಯಕ್ಕೆ ಈ ಹೇರ್ ಸ್ಟೈಲ್ ಬದಲಿಸುವ ಆಲೋಚನೆ ಇಲ್ಲ ಒಂದಿಷ್ಟು ದಿನ ಇದೇ ಗೆಟಪ್ಪಿನಲ್ಲಿಯೇ ಇರುವುದಾಗಿಯೂ ಹೇಳಿರುವ ಭೂಮಿ ಶೆಟ್ಟಿ ಸದ್ಯದಲ್ಲಿಯೇ ತಮ್ಮ ಈ ಬಾಕ್ಸ್ ಬ್ರೇಡ್ ಹೇರ್ ಸ್ಟೈಲ್ ನಲ್ಲಿ ಹೊಸ ಫೋಟೋಶೂಟ್ ಕೂಡ ಮಾಡಿಸಲು ಅಣಿಯಾಗುತ್ತಿದ್ದಾರೆ. ಅಮೆರಿಕಾ ಪ್ಲೈಟ್ ಕೂಡ ಹತ್ತಲಿದ್ದಾರೆ. ಯುನೈಟೆಡ್ ಸ್ಟೇಟ್ಸ್ ತೆರಳುವ ಮುಂಚೆ ಬೇಕೆಂದೇ ಈ ಕೇಶ ವಿನ್ಯಾಸ ಮಾಡಿಸಿಕೊಂಡಿದ್ದರೆ ಭೂಮಿ ಶೆಟ್ಟಿ

ಉಳಿದಂತೆ ಭೂಮಿ ಶೆಟ್ಟಿ ಸದ್ಯಕ್ಕೆ ಹೈದ್ರಾಬಾದ್ ನಲ್ಲಿ ನೆಮ್ಮದಿಯಾಗಿದ್ದಾರೆ. ತೆಲುಗು ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.ಕುಂದಾಪುರದ ಈ ಕಿನ್ನರಿ ಕನ್ನಡಕ್ಕೆ ಮರಳುತ್ತಾರಾ ಅಥವಾ ರಶ್ಮಿಕಾ.. ಶ್ರೀಲೀಲಾ.. ನಭಾ ನಟೇಶ್.. ಅವರ ಹಾದಿಯನ್ನೇ ಅನುಸರಿಸಿ ಅಲ್ಲಿಯೇ ಬಿಡಾರ ಹೂಡ್ತಾರಾ ಅನ್ನುವುದು ಸದ್ಯಕ್ಕೆ ಇವರ ಅಭಿಮಾನಿಗಳಿಗೆ ಕಾಡುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ

More from Filmibeat

English summary
Kinnari Serial Fame Sandalwood Actress Bhoomi Shetty created a sensation with her new hairstyle. Getting Box Braids Is Not Just About Following a Trend Its About Genuinely Appreciating The Culture They Represent Says The Actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X