ಬೋಲ್ಡ್ ಲುಕ್‌ನಲ್ಲಿ ಭೂಮಿ ; ಕುಂದಾಪುರದ ಕಿನ್ನರಿಯ ಹೊಸ ಫೋಟೋಶೂಟ್..!
ಕಿನ್ನರಿ ಧಾರಾವಾಹಿ ಮೂಲಕ ಕಿರುತೆರೆಗೆ ಬಂದವರು ಭೂಮಿ ಶೆಟ್ಟಿ. ಆ ನಂತರ ಬಿಗ್ ಬಾಸ್ ಮನೆಯಲ್ಲಿಯೂ ಇವರು ಕಾಣಿಸಿಕೊಂಡರು. ಬೆಳ್ಳಿ ತೆರೆಯಲ್ಲಿ ಕೂಡ ಅದೃಷ್ಟ ಪರೀಕ್ಷೆ ಮಾಡಿಕೊಂಡರು.
ಆದರೆ.. ಅದ್ಯಾಕೋ ಅಂದ-ಚೆಂದ ಇದ್ದರೂ.. ಅಭಿನಯದ ಕಲೆ ಇದ್ದರೂ.. ಕನ್ನಡ ಚಿತ್ರರಂಗ ಮತ್ತು ಕಿರುತೆರೆ ಇವ್ರನ್ನ ಕಡೆಗಣಿಸಿತು. ಪರಿಣಾಮ.. ಭೂಮಿ ಶೆಟ್ಟಿ ಸದ್ಯಕ್ಕೆ ಆಂಧ್ರದ ಪಾಲಾಗಿದ್ದಾರೆ. ಅಲ್ಲಿ ಧಾರಾವಾಹಿಯನ್ನೂ ಮಾಡ್ತಿದ್ದಾರೆ. ಅವಕಾಶ ಸಿಕ್ಕಾಗ ಸಿನಿಮಾವನ್ನೂ ಮಾಡ್ತಿದ್ದಾರೆ.

ಇಂತಹ ಕುಂದಾಪುರದ ಕೃಷ್ಣ ಸುಂದರಿ ಮೊದಲಿಂದ ಸಿಕ್ಕಾಪಟ್ಟೆ ಬೋಲ್ಡ್ ಹುಡುಗಿ ಕೂಡ ಹೌದು. ಯಾರು ಏನೇ ಹೇಳಲಿ.. ಯಾರು ಏನಾದರೂ ಅಂದುಕೊಳ್ಳಲಿ.. ನಾನು ಇರುವುದೇ ಹೀಗೆ ಎನ್ನುವ ಧೋರಣೆ ಇವರದ್ದು. ಸೀರೆಗೂ ಸೈ.. ಪಾರ್ಟಿ ವೇರ್ ಡ್ರೆಸ್ ಗಳಿಗೂ ಜೈ ಅನ್ನುವ ಭೂಮಿ ಶೆಟ್ಟಿ ಆಗಾಗ ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚುವ ಕೆಲಸವನ್ನ ಪ್ರಾಮಾಣಿಕವಾಗಿ ಮಾಡ್ತಾನೇ ಬಂದಿದ್ದಾರೆ. ತಮ್ಮ ಹೊಸ ಫೋಟೋಗಳ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಎದೆಯನ್ನ ಮುಚ್ಚುವ ತುಂಡುಡುಗೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷವಾಗಿರುವ ಭೂಮಿ ಶೆಟ್ಟಿ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅನೇಕರ ಕಣ್ಮನ ಸೆಳೆಯುತ್ತಿದ್ದಾರೆ. ಕ್ಯಾಮರಾಗೆ ಥರೇವಾರಿ ಫೋಸ್ ಗಳನ್ನ ಕೊಟ್ಟಿದ್ದಾರೆ.

ಇನ್ನೂ ಭೂಮಿ ಶೆಟ್ಟಿಯ ಈ ಅವತಾರ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಗೀಡಾಗುತ್ತಿದೆ. ಕಮೆಂಟ್ ಗಳ ಸುರಿಮಳೆಯೂ ಆಗ್ತಿದೆ. ಎಂದಿನಂತೆ ಕೆಲವರು ಭೂಮಿ ಶೆಟ್ಟಿ ಅವರ ಸೌಂದರ್ಯಕ್ಕೆ ಮನಸನ್ನ ಸೋತರೆ, ಇನ್ನೂ ಕೆಲವರು ಕಿಡಿ ಕಾರುತ್ತಿದ್ದಾರೆ.
ಹೀಗಾಗಿಯೇ ಸೂಪರ್..ಸೆಕ್ಸಿ..ಬ್ಲಾಕ್ ಬ್ಯೂಟಿ..ಎಂಬೆಲ್ಲ ಅಭಿಪ್ರಾಯದ ನಡುವೆ,ಭೂಮಿಯ ಈ ಕಾಸ್ಟೂಮ್‌ನ ಕೆಲವರು ಸೊಳ್ಳೆ ಪರದೆಗೆ ಹೋಲಿಸಿದ್ದಾರೆ. ಮೊದಲೇ ಮಳೆ ಬೀಳ್ತಾ ಇಲ್ಲ ಅಂತ ಸಾಯ್ತಾ ಇದೀವಿ... ಇವಾಗ್ ನೀವ್ ಬೇರೆ ಹಿಂಗೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಬಾಲಿವುಡ್ ನಟಿ ಉರ್ಫಿ ಜಾವೇದ್ ಅವರ ಜೊತೆ ಕೂಡ ಭೂಮಿ ಅವರನ್ನ ಹೋಲಿಕೆ ಮಾಡಿದ್ದಾರೆ. ಇದೆಲ್ಲದರ ನಡುವೆ ಯಾಕಿಷ್ಟು ಬದಲಾವಣೆ ಅನ್ನುವ ಪ್ರಶ್ನೆಯನ್ನೂ ಕೂಡ ಇವರ ಅಭಿಮಾನಿಗಳು ಇವರಿಗೆ ಕೇಳುತ್ತಿದ್ದಾರೆ

ಆದರೆ ಭೂಮಿ ಶೆಟ್ಟಿ ತಮ್ಮ ಈ ಹೊಸ ರೂಪಕ್ಕೆ ವ್ಯಕ್ತವಾಗ್ತಿರುವ ನೆಗೆಟಿವ್ ಕಮೆಂಟ್ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಯಾಕೆಂದರೆ ಹಿಂದೊಮ್ಮೆ ಯಾರು ಏನೇ ಹೇಳಲಿ ನಾನು ಈಗ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಖುದ್ದು ಭೂಮಿ ಹೇಳಿದ್ದರು. ಹಿಂದೆ ನನ್ನ ಬಗ್ಗೆ ನನಗೆ ಕೀಳರಿಮೆ ಇತ್ತು ಆದರೆ ಈಗ ಇಲ್ಲ ಅಂದಿದ್ದರು.
ಉಳಿದಂತೆ ಭೂಮಿ ಶೆಟ್ಟಿ ಸದ್ಯಕ್ಕೆ ಹೈದ್ರಾಬಾದ್ ನಲ್ಲಿ ನೆಮ್ಮದಿಯಾಗಿದ್ದಾರೆ. ತೆಲುಗು ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.ಕುಂದಾಪುರದ ಈ ಕಿನ್ನರಿ ಕನ್ನಡಕ್ಕೆ ಮರಳುತ್ತಾರಾ ಅಥವಾ ರಶ್ಮಿಕಾ.. ಶ್ರೀಲೀಲಾ.. ನಭಾ ನಟೇಶ್.. ಅವರ ಹಾದಿಯನ್ನೇ ಅನುಸರಿಸಿ ಅಲ್ಲಿಯೇ ಬಿಡಾರ ಹೂಡ್ತಾರಾ ಅನ್ನುವುದು ಸದ್ಯಕ್ಕೆ ಇವರ ಅಭಿಮಾನಿಗಳಿಗೆ ಕಾಡುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ


Click it and Unblock the Notifications











