For Quick Alerts
  ALLOW NOTIFICATIONS  
  For Daily Alerts

  ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದ ಕಾರುಣ್ಯ ರಾಮ್

  |

  ಸತೀಶ್ ನೀನಾಸಂ ನಟನೆ 'ಪೆಟ್ರೋಮ್ಯಾಕ್ಸ್' ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಕಾರುಣ್ಯ ರಾಮ್ ಇತ್ತೀಚಿಗಷ್ಟೆ ಚಿತ್ರೀಕರಣ ಮುಗಿಸಿದ್ದರು. ಮೈಸೂರಿನಲ್ಲಿ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಬಂದಿರುವ ಕಾರುಣ್ಯ ಒಂದೊಳ್ಳೆ ವಿಷಯಕ್ಕೆ ಸುದ್ದಿಯಾಗಿದ್ದಾರೆ.

  Recommended Video

  ಅವತ್ತು Dhruva Sarja, ಇವತ್ತು Karunya Ram | Filmibeat Kannada

  ಪೆಟ್ರೋಮ್ಯಾಕ್ಸ್ ಮುಗಿಯುತ್ತಿದ್ದಂತೆ ಹೇರ್‌ಸ್ಟೈಲ್ ಬದಲಿಸಿರುವ ಕಾರುಣ್ಯ ಕ್ಯಾನ್ಸರ್ ರೋಗಿಗಳಿಗೆ ಸಹಾಯ ಮಾಡಿದ್ದಾರೆ. ಶಾರ್ಟ್‌ ಹೇರ್‌ಸ್ಟೈಲ್ ಮಾಡಿಸಿಕೊಂಡಿರುವ ನಟಿ ಕಟ್ ಮಾಡಿದ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದ್ದಾರೆ. ಕಾರುಣ್ಯ ಅವರ ಈ ಮಾನವೀಯತೆಯ ಕೆಲಸಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. 2021ರ ಆರಂಭದಲ್ಲೇ ಇತರರಿಗೆ ಮಾದರಿಯಾಗಿರುವ ಕಾರುಣ್ಯ ರಾಮ್ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮುಂದೆ ಓದಿ...

  ಸಹಾಯ ಮಾಡಿದರೂ ಟ್ರೋಲ್ ಆದ 'ವಜ್ರಕಾಯ' ನಟಿ ಕಾರುಣ್ಯಾಸಹಾಯ ಮಾಡಿದರೂ ಟ್ರೋಲ್ ಆದ 'ವಜ್ರಕಾಯ' ನಟಿ ಕಾರುಣ್ಯಾ

  14 ಇಂಚಿನ ತಲೆ ಕೂದಲು ದಾನ

  14 ಇಂಚಿನ ತಲೆ ಕೂದಲು ದಾನ

  ಸುಮಾರು 14 ಇಂಚಿನ ತಲೆ ಕೂದಲನ್ನು ಕ್ಯಾನ್ಸರ್ ಪೀಡಿತರಿಗೆ ಸಹಾಯವಾಗಲಿ ಎಂಬ ಕಾರಣಕ್ಕೆ ನಟಿ ಕಾರುಣ್ಯ ರಾಮ್ ದಾನ ಮಾಡಿದ್ದಾರೆ. ಬೆಂಗಳೂರಿನ ಹೇರ್ ಡೊನೇಷನ್ ಸಂಸ್ಥೆಯ ಮೂಲಕ ದಾನ ಮಾಡಿದ್ದಾರೆ.

  ಒಳ್ಳೆ ಕೆಲಸ ಮಾಡಬೇಕು ಎಂದುಕೊಂಡಿದ್ದೆ

  ಒಳ್ಳೆ ಕೆಲಸ ಮಾಡಬೇಕು ಎಂದುಕೊಂಡಿದ್ದೆ

  ತಲೆ ಕೂದಲನ್ನು ದಾನ ಮಾಡಿರುವ ಕುರಿತು ಫೋಟೋಗಳನ್ನು ಹಂಚಿಕೊಂಡಿರುವ ಕಾರುಣ್ಯ ''2021ರಲ್ಲಿ ಏನಾದರೂ ಒಳ್ಳೆಯ ಕೆಲಸ ಮಾಡಬೇಕು ಎಂದುಕೊಂಡಿದ್ದೇ. ಅದರಂತೆ ತನ್ನ 14 ಇಂಚಿನ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದ್ದೇನೆ. ಇಷ್ಟು ಕೂದಲು ಬೆಳೆಯಬೇಕು ಅಂದ್ರೆ ಕನಿಷ್ಠ ಮೂರು ವರ್ಷ ಬೇಕಾಗುತ್ತದೆ'' ನೀವು ಏನಾದರೂ ಒಳ್ಳೆಯ ಕೆಲಸ ಮಾಡಿ'' ಎಂದು ಸ್ಫೂರ್ತಿದಾಯಕ ಸಂದೇಶ ರವಾನಿಸಿದ್ದಾರೆ.

  ಧ್ರುವ ಸರ್ಜಾ ಕೂದಲಿಗೆ ಕತ್ತರಿ: ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಕೂದಲು ದಾನಧ್ರುವ ಸರ್ಜಾ ಕೂದಲಿಗೆ ಕತ್ತರಿ: ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಕೂದಲು ದಾನ

  ಹೆಣ್ಣಿನ ಸೌಂದರ್ಯದ ಬಹುಮುಖ್ಯ ಭಾಗ

  ಹೆಣ್ಣಿನ ಸೌಂದರ್ಯದ ಬಹುಮುಖ್ಯ ಭಾಗ

  ಮತ್ತೊಂದು ಪೋಸ್ಟ್‌ನಲ್ಲಿ ''ಪ್ರತಿಯೊಬ್ಬ ಭಾರತೀಯ ಮಹಿಳೆಗೂ ಕೂದಲು ಸ್ತ್ರೀಯತ್ವದ ಬಹುಮುಖ್ಯ ಭಾಗವಾಗಿದೆ. ಹೆಣ್ಣಿನ ಸೌಂದರ್ಯವನ್ನು ಎದ್ದು ಕಾಣುವಂತೆ ಮಾಡುತ್ತದೆ ನಮ್ಮ ಕೇಶಿರಾಶಿ ಎಂದು ಎಲ್ಲರಿಗೂ ತಿಳಿದಿದೆ. ನನ್ನ ಕೂದಲಿನ ಪ್ರತಿಯೊಂದು ಎಳೆಯನ್ನು ನಾನು ಇಷ್ಟಪಡುತ್ತೇನೆ. ಅಗತ್ಯವಿರುವವರಿಗೆ ಇದು ತಲುಪುತ್ತದೆ ಎಂದು ನಾನು ಭಾವಿಸುತ್ತಿದ್ದೇನೆ. ಅವರ ಆರೋಗ್ಯ ಉತ್ತಮವಾಗಿರಲಿ ಎಂದು ನಾನು ಕೇಳಿಕೊಳ್ಳುತ್ತಿದ್ದೇನೆ. ನನ್ನ ಜೊತೆ ನೀವು ಕೈ ಜೋಡಿಸುವಿರಿ ಎಂದು ಭಾವಿಸಿದ್ದೇನೆ'' ಎಂದು ಬರೆದುಕೊಂಡಿದ್ದಾರೆ.

  ಧ್ರುವ ಸರ್ಜಾ ಸಹ ದಾನ ಮಾಡಿದ್ದರು

  ಧ್ರುವ ಸರ್ಜಾ ಸಹ ದಾನ ಮಾಡಿದ್ದರು

  ಈ ಹಿಂದೆ ನಟ ಧ್ರುವ ಸರ್ಜಾ ಸಹ ಕೂದಲನ್ನು ದಾನ ಮಾಡಿದ್ದರು. ಪೊಗರು ಚಿತ್ರಕ್ಕಾಗಿ ಸುಮಾರು ಎರಡ್ಮೂರು ವರ್ಷದಿಂದ ಕೂದಲು ಬೆಳೆಸಿದ್ದರು. ಸಿನಿಮಾ ಚಿತ್ರೀಕರಣ ಮುಗಿದ ಬಳಿಕ ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದ್ದರು.

  English summary
  Sandalwood Actress karunya Ram Donates her Hair to Cancer Patients.
  Tuesday, January 5, 2021, 13:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X