Deepavali: ದೀಪಾವಳಿಯಂದು ಬೆಳಕಿನ ದೀಪ ಹಚ್ಚಿದ ನಟಿ ರಾಧಿಕಾ ಪಂಡಿತ್, ರಚಿತಾ ರಾಮ್, ರಾಗಿಣಿ ದ್ವಿವೇದಿ
ಇಂದು ದೇಶದೆಲ್ಲೆಡೆ ದೀಪಗಳ ಹಬ್ಬ ದೀಪಾವಳಿ. ಬದುಕಿನ ಕತ್ತಲನ್ನು ತೊಲಗಿಸಿ ಬೆಳಕು ಬರಲಿ ಎಂದು ಆಚರಿಸುವ ಈ ಸುಂದರ ದಿನವನ್ನು ಎಲ್ಲಾ ಭಾಗಗಳಲ್ಲೂ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಬೆಳಕಿನ ಹಬ್ಬಕ್ಕೆ ನಾಡಿನ ಜನತೆಗೆ ಚಂದನ ವನದ ಚಂದದ ನಟಿಯರು ಶುಭಾಶಯ ಕೋರಿದ್ದಾರೆ.
ನಟಿ ರಾಧಿಕಾ ಪಂಡಿತ್, ರಾಗಿಣಿ ದ್ವಿವೇದಿ, ರಚಿತಾ ರಾವ್, ಆಶಿಕಾ ರಂಗನಾಥ್, ರಾಗಿಣಿ ಪ್ರಜ್ವಲ್ ಸೇರಿದಂತೆ ಅನೇಕ ಸ್ಯಾಂಡಲ್‌ವುಡ್ ತಾರೆಯರು ಜನತೆಗೆ ಬೆಳಕಿನ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ರಂಗು ರಂಗಿನ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ, ತಮ್ಮ ಕುಟುಂಬ ಸದಸ್ಯರ ಜೊತೆಗಿನ ಹಬ್ಬದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

ಮಕ್ಕಳೊಂದಿಗೆ ಹಬ್ಬ ಆಚರಿಸಿದ ರಾಧಿಕಾ ಪಂಡಿತ್
ನಟಿ ರಾಧಿಕಾ ಪಂಡಿತ್ ಪ್ರತಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಇತ್ತೀಚೆಗೆ ಫ್ಯಾಮಿ ಜೊತೆಗೆ ರಾಕಿಂಗ್ ಸ್ಟಾರ್ ದಂಪತಿ ದಸರಾ ಆಚರಿಸಿ ಸಂಭ್ರಮಿಸಿದ್ದರು. ಈಗ ನಟ ಯಶ್ ಮನೆಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಗಿದೆ. ಹಬಬ್ದ ದಿನದಂದು ದೀಪವನ್ನು ಬೆಳಗಿಸಿ ನಾಡಿನ ಜನತೆಗೆ ಹಬ್ಬದ ಶುಭಾಶಯ ಹೇಳಿದ್ದಾರೆ.
'ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು. ನಿಮ್ಮ ಬಾಳಿನಲ್ಲಿ ಕತ್ತಲೆ ಕಳೆದು ಬೆಳಕು ಮೂಡಲಿ ಎಂದು ಹಾರೈಸುತ್ತೇನೆ' ಎಂದು ರಾಧಿಕಾ ಪಂಡಿತ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಮಕ್ಕಳಾದ ಯಥರ್ವ ಮತ್ತು ಐರಾ ಜೊತೆಗಿನ ಫೋಟೋ, ಆಪ್ತರೊಂದಿಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ರಾಗಿಣಿ ದ್ವಿವೇದಿ, ರಾಗಿಣಿ ಪ್ರಜ್ವಲ್ ವಿಶೇಷ ಫೋಟೋಶೂಟ್
ದೀಪಾವಳಿ ಹಬ್ಬಕ್ಕೆ ನಟಿ ರಾಗಿಣಿ ದ್ವಿವೇದಿ, ರಾಗಿಣಿ ಪ್ರಜ್ವಲ್ ವಿಶೇಷ ಫೋಟೋಶೂಟ್‌ಗಳನ್ನು ಮಾಡಿಸಿ, ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಹಬ್ಬದ ಶುಭಾಶಯ ಹೇಳಿದ್ದಾರೆ. "ಬೆಳಕಿನ ಹಬ್ಬ ದೀಪಾವಳಿ ನಿಮಗೂ ನಿಮ್ಮ ಕುಟುಂಬಕ್ಕೂ ಆರೋಗ್ಯ ಐಶ್ವರ್ಯ ತರಲಿ ದೀಪಾವಳಿಯ ಶುಭಕಾಮನೆಗಳು" ಎಂದು ನಟ ಪ್ರಜ್ವಲ್ ಪತ್ನಿ ಶುಭಾಶಯ ತಿಳಿಸಿದ್ದಾರೆ.

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸಾಂಪ್ರದಾಯಿಕವಾಗಿ ಸೀರೆ ಧರಿಸಿ, ಸಕತ್ ಆಭರಗಳನ್ನು ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ. "ಕತ್ತಲೆಯ ಮೇಲೆ ಬೆಳಕಿನ ಜಯ.... ಕೆಡುಕಿನ ಮೇಲೆ ಒಳ್ಳೆಯದು... ಅಜ್ಞಾನದ ಮೇಲೆ ಜ್ಞಾನ... ನೀವು ಪ್ರಾರಂಭಿಸಲು ಬಯಸುವ ಹೊಸ ಆರಂಭಗಳು ಮತ್ತು ಪ್ರತಿಯೊಂದರಲ್ಲೂ ಯಶಸ್ಸು ಸಿಗಲಿ ಎಂಬುದು ನನ್ನ ಆಶಯ. ದೀಪಾವಳಿಯ ಶುಭಾಶಯಗಳು" ಎಂದು ಮದಕರಿಯ ಬೆಡಗಿ ಶುಭ ಹಾರೈಸಿದ್ದಾರೆ.
ರಚಿತಾ ರಾಮ್ ಮತ್ತು ಆಶಿಕಾ ರಂಗನಾಥ್ ದೀಪಾವಳಿ
ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಮದಗಜನ ಬೆಡಗಿ ಆಶಿಕಾ ರಂಗನಾಥ್ ವಿಶೇಷವಾಗಿ ಬೆಳಕಿನ ಹಬ್ಬದ ಶುಭ ಕೋರಿದ್ದಾರೆ. ನಟಿ ರಚಿತಾ ರಾಮ್ ದೀಪಗಳನ್ನು ಹಿಡಿದುಕೊಂಡಿರುವ ಬಳೆಗಳಿಂದ ತುಂಬಿದ ಕೈಯ ಫೋಟೋವನ್ನು ಹಾಕಿದ್ದು, ದೀಪಾವಳಿ ಹಬ್ಬದ ಶುಭಾಶಯಗಳು, ನಮ್ಮ ಬದುಕನ್ನು ಪಾಸಿಟಿವಿಟಿಯಿಂದ ತುಂಬೋಣ ಎಂದು ಹೇಳಿದ್ದಾರೆ.
ನಟಿ ಆಶಿಕಾ ರಂಗನಾಥ್ ಕೂಡ ವಿಶೇಷ ಫೋಟೋಶೂಟ್ ಮೂಲಕ ಹಬ್ಬದ ಶುಭಾಶಯ ಹೇಳಿದ್ದಾರೆ. ಹಬ್ಬಕ್ಕೂ ಒಂದು ದಿನ ಮುಂಚಿತವಾಗಿಯೇ ನಟಿ ದೀಪಾವಳಿ ಶುಭಾಶಯ ಹೇಳಿದ್ದಾರೆ. ಹಬ್ಬದ ದಿನದಂದು ಚಂದವಾಗಿ ಅಲಂಕಾರ ಮಾಡಿಕೊಂಡು, ಪೂಜೆ, ಅಡುಗೆ ಅಂತ ಓಡಾಡುವುದು, ಸಂಭ್ರಮಿಸುವುದರ ಜೊತೆಗೆ ಪರಸ್ಪರ ಶುಭ ಹಾರೈಕೆ ಕೂಡ ನಡೆಯುತ್ತದೆ.


Click it and Unblock the Notifications











