For Quick Alerts
  ALLOW NOTIFICATIONS  
  For Daily Alerts

  47ನೇ ವಸಂತಕ್ಕೆ ಕಾಲಿಟ್ಟ ಕನ್ನಡದ ಕರ್ಪೂರದ ಗೊಂಬೆ: ಶುಭಾಶಯಗಳ ಮಹಾಪೂರ

  |

  ಸಪ್ಟೆಂಬರ್​ 18 ಈ ದಿನ ಕನ್ನಡ ಚಿತ್ರರಂಗದ ಪಾಲಿಗೆ ವಿಶೇಷವಾದ ದಿನ. ಸ್ಯಾಂಡ್​ವುಡ್​ನ ​ ಸೂಪರ್​ ಸ್ಟಾರ್​ ಉಪೇಂದ್ರ, ಸಾಹಸ ಸಿಂಹ ವಿಷ್ಣುವರ್ಧನ್​ ಹಾಗೂ ನಟಿ ಶ್ರುತಿ ಅವರ ಹುಟ್ಟುಹಬ್ಬ. ಚಂದನವನದ ಕರ್ಪೂರದ ಗೊಂಬೆ ಶ್ರುತಿ ಇಂದು(ಸಪ್ಟೆಂಬರ್​ 18) ತಮ್ಮ 47ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

  ತಮ್ಮ ಅದ್ಭುತ ನಟನೆಯ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಶ್ರುತಿ, ಕನ್ನಡ ಚಿತ್ರರಂಗದ ಎಂದೂ ಮರೆಯದ ತಾರೆಯರ ಸಾಲಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈವರೆಗೂ ನಾಯಕ ನಟಿ, ಪೋಷಕ ಪಾತ್ರಗಳ ಮೂಲಕ ಪ್ರೇಕ್ಷಕರ ಮನಸೂರೆಗೊಂಡಿರುವ ಶ್ರುತಿ 120ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

  ನಟಿ ಶ್ರುತಿ ಹಾಸನ್‌ಗೆ ಆರೋಗ್ಯ ಸಮಸ್ಯೆ: ಬಹಿರಂಗ ಪೋಸ್ಟ್ ಹಂಚಿಕೊಂಡ ನಟಿ!ನಟಿ ಶ್ರುತಿ ಹಾಸನ್‌ಗೆ ಆರೋಗ್ಯ ಸಮಸ್ಯೆ: ಬಹಿರಂಗ ಪೋಸ್ಟ್ ಹಂಚಿಕೊಂಡ ನಟಿ!

  ಕಲಾವಿದರ ಕುಟುಂಬದಲ್ಲೇ ಜನಿಸಿದ ಶ್ರುತಿ ಹಿರಿಯ ನಟರಾದ ಕೃಷ್ಣ ಹಾಗೂ ರಾಧ-ರುಕ್ಕು ಅವರ ಮುದ್ದಿನ ಮಗಳು. ಸ್ಯಾಂಡಲ್​ವುಡ್​ ಅಧ್ಯಕ್ಷ ಶರಣ್​ ಅವರ ಪ್ರೀತಿಯ ಸಹೋದರಿ. ತಮ್ಮ ಪ್ರಬುದ್ಧ ನಟನೆಯ ಮೂಲಕವೇ ಶ್ರುತಿ ಸುಮಾರು ಎರಡು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

  ಒಂದು ವರ್ಷದ ಮಗುವಿದ್ದಾಗಲೇ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಂಡಿದ್ದ ಶ್ರುತಿ ಅವರ ಮೊದಲ ಹೆಸರು ಪ್ರಿಯದರ್ಶಿನಿ. 1990ರಲ್ಲಿ ತೆರೆಕಂಡ ದ್ವಾರಕೀಶ್​ ನಿದೇರ್ಶನದ ಶ್ರುತಿ ಚಿತ್ರದ ಮೂಲಕ ನಾಯಕಿಯಾಗಿ ವೃತ್ತಿ ಜೀವನ ಆರಂಭಿಸಿದ ಅವರು ಶ್ರುತಿ ಎಂದೇ ಜನಪ್ರಿಯತೆ ಪಡೆದರು. ಸಾಹಸ ಸಿಂಹ ವಿಷ್ಣುವರ್ಧನ್​, ಅಂಬರೀಶ್​, ಕಮಲ ಹಾಸನ್​ರಂತಹ ದಿಗ್ಗಜ ನಟರೊಡನೆ ನಟಿಸಿ ಸೈ ಎನಿಸಿಕೊಂಡಿರುವ ಶ್ರುತಿ ಅವರು, ಪುಟ್ಟಕ್ಕನ ಹೈವೇ ಚಿತ್ರದ ಮನೋಜ್ಞ ನಟನೆಗೆ ರಾಷ್ಟ್ರ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ.

  ಕನ್ನಡ ಚಿತ್ರರಂಗದ ನಟಿಯಾಗಿರುವ ಶ್ರುತಿ ತಮಿಳು,ತೆಲುಗು, ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದ ಜೊತೆ ರಾಜಕೀಯದಲ್ಲೂ ಸಕ್ರೀಯರಾಗಿರುವ ಶ್ರುತಿ ಸದ್ಯ ಕನ್ನಡ ಕಿರುತೆರೆ ರಿಯಾಲಿಟಿ ಶೋಗಳಲ್ಲಿ ಬ್ಯೂಸಿಯಾಗಿದ್ದಾರೆ. ಬಿಗ್​ ಬಾಸ್​ ಸೀಸನ್​ 3 ವಿನ್ನರ್​ ಆಗಿದ್ದ ಅವರು ಬಳಿಕ ಕಾಮಿಡಿ ರಿಯಾಲಿಟಿ ಶೋ ಮಜಾ ಭಾರತದ ತೀರ್ಪುಗಾರರಾಗಿ ಕಾಣಿಸಿಕೊಂಡರು. ಶ್ರುತಿ ರಿಯಾಲಿಟಿ ಶೋನಲ್ಲಿ ಜಡ್ಡ್​ ಆಗಿ ಕಾಣಿಸಿಕೊಂಡಿದ್ದಾರೆ. 47ನೇ ವಸಂತಕ್ಕೆ ಕಾಲಿಡುತ್ತಿರುವ ಶ್ರುತಿ ಅವರಿಗೆ ಅಪಾರ ಅಭಿಮಾನಿಗಳು, ಚಿತ್ರರಂಗದ ತಾರೆಯರು ಹಾಗೂ ರಾಜಕೀಯ ಗಣ್ಯರು ಶುಭಾಶಯ ಕೋರಿದ್ದಾರೆ.

  English summary
  Sandalwood actress Shruti celebrating her 47th birthday. fans wish her on social media.
  Sunday, September 18, 2022, 14:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X