ಹುಟ್ಟುಹಬ್ಬಕ್ಕೆ ಮಾಲ್ಡೀವ್ಸ್ಗೆ ಹಾರಿದ ನಟಿ ಶ್ರುತಿ: ಇಲ್ಲಿವೆ ಫೋಟೋಗಳು
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ ಶ್ರುತಿ ಇಂದು(ಸಪ್ಟೆಂಬರ್ 18) ತಮ್ಮ 47ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಶ್ರುತಿ ಸುಮಾರು ಎರಡು ದಶಕಗಳ ಸ್ಯಾಂಡಲ್ವುಡ್ನಲ್ಲಿ ನೂರಾರು ಚಿತ್ರಗಳಲ್ಲಿ ನಟಿಸಿ ಜನಮನ್ನಣೆ ಗಳಿಸಿದ್ದಾರೆ. ಚಿತ್ರದ ನಾಯಕಿ ಪೋಷಕ ನಟಿ ಯಾವುದೇ ಇರಬಹುದು ಪಾತ್ರಕ್ಕೆ ನೂರಕ್ಕೆ ನೂರರಷ್ಟು ಜೀವ ತುಂಬಿ ಶ್ರುತಿ ನಟಿಸುತ್ತಿದ್ದರು.
ಕನ್ನಡ ಚಿತ್ರರಂಗದ ಅಳುಮುಂಜಿ ಎಂದು ಕರೆಸಿಕೊಳ್ಳುತ್ತಿದ್ದ ಶ್ರುತಿ ರಾಮಾ..ಶಾಮಾ..ಭಾಮದಂತಹ ಚಿತ್ರದಲ್ಲಿ ನಟಿಸಿ ಪ್ರೇಕ್ಷಕರನ್ನು ನಕ್ಕು ನಗಿಸಿದ್ದರು. ಆಕೆಯ ನಟನೆಗೆ ಆಕೆಯೇ ಸಾಟಿ ಎಂಬಂತೆ ಶ್ರುತಿ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದರು. ತಮ್ಮ ಅಮೋಘ ನಟನೆಯ ಮೂಲಕ 'ಪುಟ್ಟಕ್ಕನ ಹೈವೇ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಸಹ ಪಡೆದ್ದರು.
ಕಲಾವಿದ ಕುಟುಂಬದಲ್ಲಿ ಜನಿಸಿದ ಶ್ರುತಿ ಈವರೆಗೂ ಸುಮಾರು 120ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕೇವಲ ಚಿತ್ರರಂಗವಷ್ಟೇ ಅಲ್ಲದೇ ಶ್ರುತಿ ರಾಜಕೀಯ ರಂಗದಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. ಭಾರತೀಯ ಜನತಾ ಪಾರ್ಟಿಯಲ್ಲಿ ಸೇವೆ ಸಲ್ಲಿಸುವ ಮೂಲಕ ಶ್ರುತಿ ಇಂದಿಗೂ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.

ತಾಯಂತೆ ಪ್ರತಿಭಾನ್ವಿತೆ ಗೌರಿ ಶ್ರುತಿ
ವೃತ್ತಿ ಜೀವನದಲ್ಲಿ ಯಶಸ್ಸು ಕಂಡಿದ್ದ ಶ್ರುತಿ, ತಮ್ಮ ವೈಯಕ್ತಿಕ ಜೀವನದಲ್ಲಿ ಏರಿಳಿತಗಳನ್ನು ಕಂಡರು. ಅವರ ಜೀವನದಲ್ಲಿ ಕೆಲ ಕಹಿ ಘಟನೆಗಳು ನಡೆದು ಹೋಗಿವೆ. ಆದರೆ ಸದ್ಯ ತಮ್ಮ ಮಗಳ ಜೊತೆ ಸಂತೋಷದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಶ್ರುತಿ ಸಿಂಗಲ್ ಮದರ್ ಆಗಿ ತಮ್ಮ ಮುದ್ದಿನ ಮಗಳು ಗೌರಿ ಅವರನ್ನು ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಯಂತೆ ಮಗಳೂ ಕೂಡ ಪ್ರತಿಭಾನ್ವಿತೆಯಾಗಿದ್ದು, ಗೌರಿ ಉತ್ತಮ ಹಾಡುಗಾರರಾಗಿದ್ದಾರೆ.

ಮಾಲ್ಡೀವ್ಸ್ಗೆ ಹಾರಿದ ನಟಿ ಶ್ರುತಿ
ಶ್ರುತಿ ಇಂದು ತಮ್ಮ 47ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ತಾಯಿಯ ಹುಟ್ಟುಹಬ್ಬಕ್ಕಾಗಿ ಮಗಳು ಗೌರಿ ಸಪ್ರೈಸ್ ಪ್ಲಾನ್ ಮಾಡಿದ್ದಾರೆ. ಪ್ರತಿ ಬಾರಿಯೂ ಹೊಸ ಜಾಗಕ್ಕೆ ಭೇಟಿ ಕೊಡುತ್ತಿದ್ದ ಈ ತಾಯಿ ಮಗಳ ಜೋಡಿ ಈಗ ಮಾಲ್ಡೀವ್ಸ್ಗೆ ಹಾರಿದ್ದಾರೆ. ಶ್ರುತಿ ಈ ಬಾರಿ ಹುಟ್ಟುಹಬ್ಬವನ್ನು ತಮ್ಮ ಮಗಳ ಜೊತೆ ಮಾಲ್ಡೀವ್ಸ್ನಲ್ಲಿ ಆಚರಿಸುತ್ತಿದ್ದಾರೆ.

ಸ್ಪೆಷಲ್ ವಿಡಿಯೋ ಹಂಚಿಕೊಂಡ ಗೌರಿ ಶ್ರುತಿ
ಮಾಲ್ಡೀವ್ಸ್ನಲ್ಲಿ ಕಳೆದ ಕ್ಷಣಗಳ ಫೋಟೊವನ್ನು ಶ್ರುತಿ ಹಾಗೂ ಗೌರಿ ನಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಶ್ರುತಿ ಅವರ ಸುಂದರವಾದ ಫೋಟೊಗಳನ್ನು ಹಂಚಿಕೊಂಡಿರುವ ಗೌರಿ ಶ್ರುತಿ ತಾಯಿಯೊಂದಿಗೆ ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೂ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಸೂರಪ್ಪ ಚಿತ್ರದ ಹಾಡೊಂದನ್ನು ಶೇರ್ ಮಾಡಿರುವ ಗೌರಿ ಶ್ರುತಿ ಶುಭಾಶಯ ಕೋರಿದ್ದಾರೆ.

ನಗುತಾ ಬಾಳು ಬಾಳು ಎಂದು ಹಾರೈಸಿದ ಶರಣ್
ಇನ್ನು ನಟ ಶರಣ್ ತಮ್ಮ ಸಹೋದರಿ ಶ್ರುತಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಹಂಚಿಕೊಂಡಿರುವ ಶ್ರುತಿ ನಗುತಾ ನಗುತಾ ಬಾಳು ನೀನು ನೂರು ವರುಷ ಎಂದು ಹಾರೈಸಿದ್ದಾರೆ. ಸದ್ಯ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿರುವ ಶ್ರುತಿ ಅವರಿಗೆ ಗಿಚ್ಚಿ ಗಿಲಿ ಗಿಲಿ ತಂಡವೂ ಸಹ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಾಶಯ ಕೋರಿದ್ದಾರೆ.


Click it and Unblock the Notifications











