ಉಪೇಂದ್ರ ಬೆಂಬಲಕ್ಕೆ ನಿಂತ ದರ್ಶನ್-ಸುದೀಪ್ ಫ್ಯಾನ್ಸ್

Recommended Video

Sandalwood all stars fans are supporting for Upendra's UPP..? | FILMIBEAT KANNADA

ಸ್ಯಾಂಡಲ್ ವುಡ್ ನಲ್ಲಿ ಕಳೆದ ಕೆಲವು ದಿನಗಳಿಂದ ಫ್ಯಾನ್ಸ್ ವಾರ್ ತಾರಕಕ್ಕೆ ಏರಿತ್ತು. ಡಿ ಬಾಸ್ ದರ್ಶನ್ ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕೆಸರೆರಚಾಟ ನಡೆಸುತ್ತಿದ್ದಾರೆ. ಅಭಿಮಾನಿಗಳ ಕಿತ್ತಾಟ ಜೋರಾಗುತ್ತಿದ್ದಂತೆ ಅಭಿಮಾನಿಗಳ ಬೆಂಬಲಕ್ಕೆ ನಿಂತು ಸ್ಟಾರ್ ನಟರೇ ನೇರವಾಗಿ ಎಂಟ್ರಿಯಾಗಿದ್ದರು.

ಸದ್ಯ ಕೊಂಚ ಮಟ್ಟಕ್ಕೆ ಶಾಂತವಾಗಿರುವ ಫ್ಯಾನ್ಸ್ ಈಗ ರಿಯಲ್ ಸ್ಟಾರ್ ಕಡೆ ತಿರುಗಿದ್ದಾರೆ. ಹೌದು, ದರ್ಶನ್ ಮತ್ತು ಸುದೀಪ್ ಅಭಿಮಾನಿಗಳು ಉಪ್ಪಿ ಬೆಂಬಲಕ್ಕೆ ನಿಂತಿದ್ದಾರೆ. ಈ ಇಬ್ಬರು ಸ್ಟಾರ್ಸ್ ನಟರ ಅಭಿಮಾನಿಗಳು ಮಾತ್ರವಲ್ಲದೆ ಸ್ಯಾಂಡಲ್ ವುಡ್ ನ ಅನೇಕ ಸ್ಟಾರ್ ಅಭಿಮಾನಿಗಳು ಉಪೇಂದ್ರಗೆ ಬೆಂಬಲ ನೀಡುತ್ತಿದ್ದಾರೆ. ಅಂದ್ಹಾಗೆ ದಿಢೀರನೆ ಎಲ್ಲಾ ಅಭಿಮಾನಿಗಳು ಉಪೇಂದ್ರ ಹಿಂದೆ ಹೊರಟಿರುವ ಕಾರಣವೇನು?ಮುಂದೆ ಓದಿ..

ಉಪೇಂದ್ರ ಟ್ವಿಟ್ಟರ್ ಟ್ರೆಂಟ್

ಉಪೇಂದ್ರ ಟ್ವಿಟ್ಟರ್ ಟ್ರೆಂಟ್

ಇಂದು ಸಂಜೆ 4ಗಂಟೆಯಿಂದ ರಾತ್ರಿ 12 ಗಂಟೆವರೆಗೆ ಉಪೇಂದ್ರ ಟ್ವಿಟ್ಟರ್ ಟ್ರೆಂಡ್ ಹಮ್ಮಿಕೊಳ್ಳಲಾಗಿದೆ. #UPPforKARNATAKA ಎಂದು ಉಪೇಂದ್ರ ಅಭಿಮಾನಿಗಳು ಮತ್ತು ಪ್ರಜಾಕೀಯ ಬೆಂಬಲಿಗರು ಟ್ರೆಂಡ್ ಮಾಡುತ್ತಿದ್ದಾರೆ. ವೃತ್ತಿ ಪರ ಪ್ರಜಾಕೀಯ ವ್ಯವಸ್ಥೆಯನ್ನು ರಾಜ್ಯದಲ್ಲಿ ತರಲು ಉಪೇಂದ್ರ ಅವರ ಚಿಂತನೆ ಮತ್ತು ವಿಚಾರಧಾರೆಯನ್ನು ಬೆಂಬಲಿಸಿ ಇಂದು ಪ್ರಜಾಕೀಯದ ಬೆಂಬಲಿಗರು, ಅಭಿಮಾನಿಗಳು, ಸಂಘಗಳು, ಬಹುದೊಡ್ಡ ಟ್ವಿಟ್ಟರ್ ಟ್ರೆಂಡ್ ಮಾಡುತ್ತಿದ್ದಾರೆ.

ಉಪೇಂದ್ರಗೆ ಸಾಥ್ ನೀಡಿದ ಕಿಚ್ಚ ಫ್ಯಾನ್ಸ್

ಉಪೇಂದ್ರಗೆ ಸಾಥ್ ನೀಡಿದ ಕಿಚ್ಚ ಫ್ಯಾನ್ಸ್

ರಿಯಲ್ ಸ್ಟಾರ್ ಉಪೇಂದ್ರ ಅವರ #UPPforRKARNATAKA ಟ್ರೆಂಡ್ ಗೆ ಸುದೀಪ್ ಅಭಿಮಾನಿಗಳು ಸಾಥ್ ನೀಡಿದ್ದಾರೆ. ಸುದೀಪ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ರಿಯಲ್ ಸ್ಟಾರ್ ಗೆ ಬೆಂಬಲ ನೀಡಿ ಟ್ವೀಟ್ ಮಾಡುತ್ತಿದ್ದಾರೆ. ಸುದೀಪ್ ಮತ್ತು ರಿಯಲ್ ಸ್ಟಾರ್ ನಡುವೆ ಉತ್ತಮವಾದ ಬಾಂಧವ್ಯವಿದೆ. ಇತ್ತೀಚಿಗಷ್ಟೆ ಇಬ್ಬರು ಮುಕುಂದ ಮುರಾರಿ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದರು. ಕಿಚ್ಚ ಅಭಿಮಾನಿಗಳು ಈಗ ರಿಯಲ್ ಸ್ಟಾರೆಗೆ ಸಾಥ್ ನೀಡಿದ್ದಾರೆ.

ಪ್ರಜಾಕೀಯ ಟ್ರೆಂಡ್ ಗೆ ಡಿ ಫ್ಯಾನ್ಸ್ ಬೆಂಬಲ

ಪ್ರಜಾಕೀಯ ಟ್ರೆಂಡ್ ಗೆ ಡಿ ಫ್ಯಾನ್ಸ್ ಬೆಂಬಲ

ರಿಯಲ್ ಸ್ಟಾರ್ ಬೆಂಬಲಕ್ಕೆ ಡಿ ಬಾಸ್ ಅಭಿಮಾನಿಗಳು ನಿಂತಿದ್ದಾರೆ. ಟ್ವಿಟ್ಟರ್ ಟ್ರೆಂಡ್ ನಲ್ಲಿ ಭಾಗಿಯಾಗಲು ಡಿ ಫ್ಯಾನ್ಸ್ ಕೂಡ ಕೈಜೋಡಿಸಿದ್ದಾರೆ. ಅತಿ ದೊಡ್ಡ ಫ್ಯಾನ್ ಬೇಸ್ ಇರುವ ನಟ ಅಂದ್ರೆ ದರ್ಶನ್. ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಸಾಥ್ ನೀಡುತ್ತಿದ್ದಾರೆ ಅಂದ್ರೆ ಪ್ರಜಾಕೀಯಕ್ಕೆ ಮತ್ತಷ್ಟು ಬಲಬಂದಂತಾಗಿದೆ.

ರಿಯಲ್ ಸ್ಟಾರ್ ಗಾಗಿ ಒಂದಾದ ಫ್ಯಾನ್ಸ್

ರಿಯಲ್ ಸ್ಟಾರ್ ಗಾಗಿ ಒಂದಾದ ಫ್ಯಾನ್ಸ್

ರಿಯಲ್ ಸ್ಟಾರ್ ಉಪೇಂದ್ರಗಾಗಿ ಎಲ್ಲಾ ಸ್ಟಾರ್ ನಟರ ಫ್ಯಾನ್ಸ್ ಒಂದಾಗಿದ್ದಾರೆ. ಪ್ರಜಾಕೀಯಕ್ಕೆ ಎಲ್ಲಾ ಅಭಿಮಾನಿಗಳು ಸಹ ಬೆಂಬಲ ಸೂಚಿಸುತ್ತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್, ರಕ್ಷಿತ್ ಶೆಟ್ಟಿ ಅಭಿಮಾನಿಗಳು ಸಹ ಟ್ವಿಟ್ಟರ್ ಟ್ರೆಂಡ್ ನಲ್ಲಿ ಭಾಗಿಯಾಗುತ್ತಿದ್ದಾರೆ. ಜೊತೆಗೆ ಎಲ್ಲಾ ಟ್ರೋಲ್ ಪೇಜ್ ಗಳು ಉಪೇಂದ್ರ ಅವರಿಗೆ ಸಾಥ್ ನೀಡುತ್ತಿದ್ದಾರೆ.

More from Filmibeat

English summary
Sandalwood all stars fans are supporting for Upendra's #UPPforRKARNATAKA twitter trend Campaign.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X