ಚಿನ್ನದ ಹುಡುಗಿ ಹಿಮಾ ದಾಸ್ ಸಾಧನೆಗೆ ಹ್ಯಾಟ್ಸಾಫ್ ಎಂದ ಸಿನಿ ತಾರೆಯರು

Recommended Video

ಚಿನ್ನದ ಹುಡುಗಿ ಸಾಧನೆಗೆ ಹ್ಯಾಟ್ಸಾಫ್ ಎಂದ ಸಿನಿ ತಾರೆಯರು

ಭಾರತದ ಹೆಮ್ಮೆಯ ಆಟಗಾರ್ತಿ, ಬಂಗಾರದ ಹುಡುಗಿ ಹಿಮಾ ದಾಸ್ ಸಾಧನೆಗೆ ಇಡೀ ದೇಶವೆ ಸಂತಸ ಪಡುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಲು ಸಾಲು ಚಿನ್ನದ ಪದಕಗಳನ್ನು ಬೇಟೆಯಾಗುತ್ತಿರುವ ಹಿಮಾ ದಾಸ್ ಅವರ ಹಿಮಾಲಯದೆತ್ತರಕ್ಕು ಮಿಗಿಲಾದ ಸಾಧನೆ ನೋಡಿ ಸಿನಿತಾರೆಯರು ಕೊಂಡಾಡುತ್ತಿದ್ದಾರೆ.

ಕೇವಲ ಮೂರು ವಾರದಲ್ಲಿ ಬರೋಬ್ಬರಿ 5 ಬಂಗಾರದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ ಹಿಮಾ. ಝೆಕ್ ಗಣರಾಜ್ಯದಲ್ಲಿ ನಡೆದ ಅಥ್ಲೆಟ್ಸ್ ನಲ್ಲಿ ಹಿಮಾ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಮೊದಲ ಸ್ಥಾನ ಪಡೆದು ಚಿನ್ನಕ್ಕೆ ಮುತ್ತಿಡುವ ಮೂಲಕ 5ನೆ ಬಂಗಾರದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಸಾಲು ಸಾಲು ಚಿನ್ನ ಗೆಲ್ಲುತ್ತಿರುವ ಹಿಮಾಗೆ ಭಾರತೀಯರಿಂದ ಅಭಿನಂದನೆಗಳ ಮಹಾಪೂರವೆ ಹರಿದು ಬರುತ್ತಿದೆ. ಜೊತೆಗೆ ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ಸಿನಿ ತಾರೆಯರಾದ ಕಿಚ್ಚ ಸುದೀಪ್, ಪ್ರಣೀತಾ ಮತ್ತು ಬಾಲಿವುಡ್ ಸ್ಟಾರ್ ಬಿಗ್ ಬಿ ಅಮಿತಾಭ್ ಬಚ್ಚನ್, ಅನುಷ್ಕಾ ಶರ್ಮಾ, ಸೋನಂ ಕಪೂರ್, ಅನೀಲ್ ಕಪೂರ್ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

ಅದ್ಭುತ ಎಂದ ಕಿಚ್ಚ ಸುದೀಪ್

ಅದ್ಭುತ ಎಂದ ಕಿಚ್ಚ ಸುದೀಪ್

ಚಿನ್ನದ ಬೇಟೆಯನ್ನು ಮುಂದುವರೆಸಿರುವ ಹಿಮಾ ದಾಸ್ ಸಾಧನೆಗೆ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಕೂಡ ಅಭಿನಂದನೆ ತಿಳಿಸಿದ್ದಾರೆ. "ಅದ್ಭುತ...ಅದ್ಭುತ..ಅದ್ಭುತ..." ಎಂದು ಹೇಳಿದ್ದಾರೆ.

ಭಾರತೀಯ ಹೆಮ್ಮೆ ಹಿಮಾ ದಾಸ್

ಭಾರತೀಯ ಹೆಮ್ಮೆ ಹಿಮಾ ದಾಸ್

"ಭಾರತೀಯ ಹೆಮ್ಮೆ ಹಿಮಾ ದಾಸ್. ಚಂದಿರನಿಗಿಂತ ಮೀರಿ ಆಕೆಯ ಓಟ ಸಾಗಿದೆ. ಈಗ ಐದನೇ ಚಿನ್ನ ಗೆದ್ದಿದ್ದಾರೆ. ಆದ್ರೆ ನಾವೀಗ ಇನ್ನೊಂದು ಚಂದಿರನನ್ನು ಸೃಷ್ಠಿಸಬೇಕಾಗಿದೆ" ಎಂದು ಅಮಿತಾಭ್ ಹೇಳಿದ್ದಾರೆ. ಓಡುತ್ತಿರುವ ಹಿಮದಾಸ್ ಬ್ಯಾಗ್ರೌಂಡ್ ನಲ್ಲಿ ಚಿನ್ನದ ಪದಕಗಳನ್ನು ಚಂದ್ರನಿಗೆ ಹೋಲಿಸಿ ಅಮಿತಾಭ್ ವರ್ಣನೆ ಮಾಡಿದ್ದಾರೆ.

ಚಿನ್ನದ ಹೃದಯ ಹೊಂದಿರುವ ಶ್ರೇಷ್ಠ ಆಟಗಾರ್ತಿ

ಚಿನ್ನದ ಹೃದಯ ಹೊಂದಿರುವ ಶ್ರೇಷ್ಠ ಆಟಗಾರ್ತಿ

"5ನೇ ಚಿನ್ನದ ಪದಕ ಗೆದ್ದ ಹಿಮಾ ದಾಸ್ ಅವರಿಗೆ ಅಭಿನಂದನೆಗಳು. ಅಸ್ಸಾಂ ಬಗ್ಗೆ ನೀವು ತೋರಿದ ದಯೆ ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಚಿನ್ನದ ಹೃದಯ ಹೊಂದಿರುವ ಶ್ರೇಷ್ಠ ಆಟಗಾರ್ತಿ. ನಿಮಗೆ ಇನ್ನಷ್ಟು ಯಶಸ್ಸು ಸಿಗಲಿ. ನಿಮ್ಮ ಬಗ್ಗೆ ಭಾರತ ಹೆಮ್ಮೆ ಪಡುತ್ತಿದೆ"

ಭಾರತ ಹೆಮ್ಮೆ ಪಡುವಂತೆ ಮಾಡುತ್ತಿದ್ದೀರಿ

ಭಾರತ ಹೆಮ್ಮೆ ಪಡುವಂತೆ ಮಾಡುತ್ತಿದ್ದೀರಿ

ತಂದೆ ಅನಿಲ್ ಕಪೂರ್ ಹಿಮಾ ದಾಸ್ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಂತೆ ಮಗಳು ಸೋನಂ ಕಪೂರ್ ಕೂಡ ಭಾರತೀಯ ಹೆಮ್ಮೆಯ ಪುತ್ರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

"15 ದಿನಗಳಲ್ಲಿ, 4 ಚಿನ್ನದ ಪದಕ. ಹಿಮಾ ನೀವು ಭಾರತವನ್ನು ಹೆಮ್ಮೆ ಪಡುವಂತೆ ಮಾಡುತ್ತಿದ್ದೀರಿ" ಎಂದು ಹೇಳಿದ್ದಾರೆ.

19 ದಿನಗಳು, 5 ಚಿನ್ನದ ಪದಕ. 1 ಚಿನ್ನದ ಹುಡುಗಿ

19 ದಿನಗಳು, 5 ಚಿನ್ನದ ಪದಕ. 1 ಚಿನ್ನದ ಹುಡುಗಿ

ಬಾಲಿವುಡ್ ನಟಿ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಹಿಮಾ ದಾಸ್ ಸಾಧನೆಗೆ ಸಲಾಂ ಎಂದಿದ್ದಾರೆ." 19 ದಿನಗಳು, 5 ಚಿನ್ನದ ಪದಕ. 1 ಚಿನ್ನದ ಹುಡುಗಿ. ಅಭಿನಂದನೆಗಳು ಹಿಮಾ ದಾಸ್. ಯುವತಿಯರಿಗೆ ದೊಡ್ಡ ಸ್ಫೂರ್ತಿ ನೀವು" ಎಂದು ಹೇಳಿದ್ದಾರೆ.

More from Filmibeat

English summary
Kannda actor Sudeep, Bollywood stars Amitabh bachchan, Anushka Sharma, Sonam Kapoor and othres are congratulate to Hima dass for winning 5 gold medals.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X