ಲಿಲ್ಲಿಗೆ ಸ್ಯಾಂಡಲ್ ವುಡ್ ಮತ್ತು ಕಾಲಿವುಡ್ ಸ್ಟಾರ್ಸ್ ವಿಶ್
'ಕಿರಿಕ್ ಪಾರ್ಟಿ' ಸಾನ್ವಿಯಾಗಿ, 'ಅಂಜನೀಪುತ್ರ'ನ ಗೀತಾ ಆಗಿ, 'ಚಮಕ್' ನೀಡುವ ಖುಷಿಯಾಗಿ, 'ಯಜಮಾನ'ನ ಕಾವೇರಿಯಾಗಿ ರಶ್ಮಿಕಾ ಮಂದಣ್ಣಗೆ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಸ್ಯಾಂಡಲ್ ವುಡ್ ನ ಸಕ್ಕರೆಯಂತಹ ನಟಿ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ.
ರಶ್ಮಿಕಾ ಮಂದಣ್ಣ ಇಂದು ತಮ್ಮ 23ನೇ ವರ್ಷ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ರಶ್ಮಿಕಾಗೆ ಸೌತ್ ಚಿತ್ರರಂಗದಿಂದ ಶುಭಾಶಯಗಳು ತಲುಪಿದೆ. ಕನ್ನಡ ಹಾಗೂ ತೆಲುಗು ಇಂಡಸ್ಟ್ರಿಯ ಅಭಿಮಾನಿಗಳು ಹಾಗೂ ಸ್ಟಾರ್ ಗಳು ವಿಶ್ ಮಾಡಿದ್ದಾರೆ.
ನಟಿ ಆಶಿಕಾ ರಂಗನಾಥ್, ಮಾನ್ವಿತಾ ಕಾಮತ್, ಅನುಪಮ ಪರಮೇಶ್ವರನ್, ವಿಜಯ ದೇವರಕೊಂಡ, ನಿತಿನ್, ಧನಂಜಯ್ ಹೀಗೆ ಸಾಕಷ್ಟು ತಾರೆಯರು ರಶ್ಮಿಕಾಗೆ ಟ್ವಿಟ್ಟರ್ ಮೂಲಕ ಶುಭಾಶಯವನ್ನು ತಿಳಿಸಿದ್ದಾರೆ. ಮುಂದೆ ಓದಿ....
ಕಾಮನ್ ಡಿಪಿ ಬಿಡುಗಡೆ ಮಾಡಿದ ಆಶಿಕಾ
''ನೀನು ಚಿತ್ರರಂಗಕ್ಕೆ ಬಂದು ಎರಡು ವರ್ಷ ಆಗಿದೆ. ಆದರೆ, ನಾವು ಪರಸ್ಪರ ಪರಿಚಯ ಆಗಿ ನಾಲ್ಕು ವರ್ಷಗಳು ಕಳೆದಿವೆ. ನಿನಗೆ ನಾಳೆಗೆ 23 ವರ್ಷ ತುಂಬುತ್ತಿದೆ. ಹುಟ್ಟುಹಬ್ಬದ ಶುಭಾಶಯಗಳು. ನಿನ್ನ ಹುಟ್ಟುಹಬ್ಬದ ಕಾಮನ್ ಡಿಪಿಯನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ಖುಷಿ ಆಗುತ್ತಿದೆ.'' - ಆಶಿಕಾ ರಂಗನಾಥ್, ನಟಿ
This 8th at 11.11 AM, we dedicate the First Song to you, this is how you make us all feel. #HappyBirthdayDearLilly pic.twitter.com/zF13DJeQrT — Vijay Deverakonda (@TheDeverakonda) April 5, 2019 '>
ಪೋಸ್ಟರ್ ಮೂಲಕ ವಿಜಯ ದೇವರಕೊಂಡ ವಿಶ್
ನಟ ವಿಜಯ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ಈಗ ಮೂರನೇ ಬಾರಿ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. 'ಡಿಯರ್ ಕಾಮ್ರೆಡ್' ಚಿತ್ರದ ಲಲ್ಲಿಯ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ವಿಶ್ ಮಾಡಿದೆ. ನಟ ವಿಜಯ್ ದೇವರಕೊಂಡ ಪೋಸ್ಟರ್ ಅನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನಿತಿನ್ ಶುಭ ಹಾರೈಕೆ
''ರಶ್ಮಿಕಾ ಮಂದಣ್ಣ ಸರ್ ಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಮುಂದಿನ ವರ್ಷಗಳು ಸುಂದರವಾಗಿರಲಿ.'' ಎಂದು ಟಾಲಿವುಡ್ ನಟ ನಿತಿನ್ ಶುಭಾಶಯ ತಿಳಿಸಿದ್ದಾರೆ. ನಿತಿನ್ ಜೊತೆಗೆ ರಶ್ಮಿಕಾ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ 'ಬೀಷ್ಮ' ಎಂಬ ಟೈಟಲ್ ಫಿಕ್ಸ್ ಆಗಿದೆ.
ನಟ, ನಟಿಯರ ಶುಭಾಶಯ
ಉಳಿದಂತೆ, ಮಲೆಯಾಳಂ ನಟಿ ಅನುಪಮ ಪರಮೇಶ್ವರನ್, ಕನ್ನಡ ನಟಿ ಮಾನ್ವಿತಾ ಕಾಮತ್, ನಟ ಧನಂಜಯ್, ನಿರ್ದೇಶಕ ಅನೂಪ್ ಬಂಡಾರಿ ಹೀಗೆ ಸಾಕಷ್ಟು ತಾರೆಯರು ರಶ್ಮಿಕಾ ಮಂದಣ್ಣಗೆ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಶುಭಾಶಯವನ್ನು ತಿಳಿಸಿದ್ದಾರೆ.


Click it and Unblock the Notifications











