ವರಮಹಾಲಕ್ಷ್ಮಿಯನ್ನು ಮನೆಗೆ ಸ್ವಾಗತಿಸಿ ಸಂಭ್ರಮಿಸಿದ ಸ್ಯಾಂಡಲ್‌ವುಡ್ ನಟ ನಟಿಯರು

ಶ್ರಾವಣ ಮಾಸದ ಶುಭ ಶುಕ್ರವಾರ ದೇಶದ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತದೆ. ಸ್ಯಾಂಟಲ್‌ವುಡ್ ನಟ ನಟಿಯರು ಕೂಡ ಈ ದಿನ ವಿಶೇಷವಾಗಿ ವರಮಹಾಲಕ್ಷ್ಮೀ ವ್ರತ ಮಾಡಿದ್ದು, ನಾಡಿನ ಜನರಿಗೆ ಶುಭ ಕೋರಿದ್ದಾರೆ.

2023 ರ ವರಮಹಾಲಕ್ಷ್ಮಿ ಹಬ್ಬವನ್ನು ಆಗಸ್ಟ್‌ 25 ರ ಶುಕ್ರವಾರ ಆಚರಿಸಲಾಗುತ್ತಿದ್ದು, ಜನರು ತಮ್ಮ ಕುಟುಂಬದ ಯೋಗಕ್ಷೇಮಕ್ಕಾಗಿ, ಮನೆಯ ಸಂಪತ್ತು ಮತ್ತು ಸಮೃದ್ಧಿ ಬಯಸಿ ದೇವಿಗೆ ಪೂಜಿಸುತ್ತಾರೆ. ಈ ಪೂಜೆಯಿಂದ ಸಂಪತ್ತು, ಭೂಮಿ, ಕಲಿಕೆ, ಪ್ರೀತಿ, ಕೀರ್ತಿ, ಶಾಂತಿ, ಆನಂದ ಮತ್ತು ಶಕ್ತಿ ಸಿಗಲಿದೆ ಎಂಬ ನಂಬಿಕೆಯಿದೆ. ಹೀಗಾಗಿಯೇ ಚಂದನವನದ ನಟ ನಟಿಯರು ಕೂಡ ಹಬ್ಬದ ಸಂಭ್ರಮದಲ್ಲಿದ್ದಾರೆ.

celebrities-celebrate-varamahalakshmi-festival

ವರಮಹಾಲಕ್ಷ್ಮಿ ಹಬ್ಬವನ್ನು ನಟ ನಿಖಿಲ್ ಕುಮಾರ್ ಮನೆಯಲ್ಲಿ ಸಂಭ್ರಮದಿಂದ ಆಚರಿಸಲಾಗಿದೆ. ಪತ್ನಿ ರೇವತಿ, ಮಗ ಹಾಗೂ ಕುಟುಂದ ಜೊತೆ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ್ದಾರೆ. ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಪೀಜೆಯಲ್ಲಿ ಜೊತೆಯಾಗಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರು ಮಗ ಅವ್ಯಾನ್ ದೇವ್ ಕೂಡ ಪೂಜೆಯಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಅವರ ಹೊಸ ಸಿನಿಮಾ ಶುರುವಾಗುತ್ತಿದ್ದು, ಚಿತ್ರದ ಬ್ಯುಸಿಯಲ್ಲಿದ್ದರೂ ಮನೆಯವರ ಜೊತೆ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಪೂಜೆಯಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಅಪ್ಪ ಮಗ ಮಿಂಚಿದ್ದಾರೆ. ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ನಾಡಿನ ಜನರಿಗಾಗಿ ಪ್ರಾರ್ಥಿಸಿದ್ದಾರೆ.

ವರಮಹಾಲಕ್ಷ್ಮೀ ವ್ರತ ಮಾಡಿದ ಅಂಬಿ ಸೊಸೆ ಅವಿವಾ!

ರೆಬೆಲ್ ಸ್ಟಾರ್ ಅಂಬರೀಶ್ ಅವರ ಸೊಸೆ ಅವಿವಾ ಶುಕ್ರವಾರ ವರಮಹಾಲಕ್ಷ್ಮೀ ವ್ರತ ಆಚರಿಸಿದ್ದಾರೆ. "ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಷಯಗಳು" ಎಂದು ಶುಭಾಶಯ ಕೂಡ ಹಂಚಿಕೊಂಡಿದ್ದಾರೆ. ಪತಿ ಅಭಿಷೇಕ್ ಅಂಬರೀಶ್ ಹಾಗೂ ಅತ್ತೆ ಸುಮಲತಾ ಅಂಬರೀಶ್ ಅವರ ಜೊತೆಗೆ ವರಮಹಾಲಕ್ಷ್ಮಿ ವೃತವನ್ನು ಮಾಡಿ, ಅಭಿಮಾನಿಗಳಿಗಾಗಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಹಸಿರು ಬಣ್ಣದ ಸೀರೆ, ಸಿಂಪಲ್ ಆಭರಣಗಳು, ತಲೆ ತುಂಬಾ ಮಲ್ಲಿಗೆ ಮುಡಿದು ಸರಳವಾಗಿ ಹಬ್ಬ ಆಚರಿಸಿದ್ದಾರೆ. ತನ್ನ ಪತಿ ಅಭಿಷೇಕ್ ಅಂಬರೀಶ್ ಜೊತೆಗೆ ಕ್ಯೂಟ್ ಆದ ಸೆಲ್ಫಿ ತೆಗೆದುಕೊಂಡಿದ್ದಾರೆ.

celebrities-celebrate-varamahalakshmi-festival

ನಟಿ ರಾಗಿಣಿ ಕೂಡ ಹಬ್ಬದ ಮೂಡ್‌ನಲ್ಲಿದ್ದು, ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ. ಕೇಸರಿ ಮತ್ತು ನೀಲಿ ಬಣ್ಣದ ಲಂಗಾ ದಾವಣಿ ಹಾಕಿ, ಅದಕ್ಕೆ ಒಡವೆಗಳನ್ನು ಮ್ಯಾಚ್ ಮಾಡಿದ್ದಾರೆ. ದೇವರ ಮುಂದೆ ನಿಂತು ಫೋಟೋಗಳಿಗೆ ಫೋಸ್ ನೀಡಿದ್ದಾರೆ.

ಇನ್ನು, ರಾಷ್ಟ್ರ ಪ್ರಶಸ್ತಿ ಪಡೆದ ಸಂಭ್ರಮದಲ್ಲಿರುವ ನಟ ಅನಿರುದ್ಧ್ ಜಟ್ಕರ್ ತಮ್ಮ ಕುಟುಂಬದೊಂದಿಗೆ ವರಮಹಾಲಕ್ಷ್ಮೀ ಹಬ್ಬ ಆಚರಿಸಿದ್ದಾರೆ. ಪತ್ನಿಯ ಜೊತೆಗೆ ನಿಂತು ದೇವರ ಪೂಜೆ ಮುಗಿಸಿ ಸಮಸ್ತ ನಾಡಿನ ಜನತೆಗೆ ಹಬ್ಬದ ಶುಭಾಶಯಗಳು ಎಂದಿದ್ದಾರೆ. ಭಾರತಿ ವಿಷ್ಣುವರ್ಧನ್ ಅವರ ಜೀವನಾಧಾರಿತ 'ಬಾಳೆ ಬಂಗಾರ' ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ಘೋಷಣೆಯಾಗಿದೆ. ಸಿನಿಮಾವನ್ನು ಅನಿರುದ್ಧ್ ಜಟ್ಕರ್ ನಿರ್ದೇಶಿಸಿದ್ದಾರೆ.

ನಟಿ ಮಿಲನಾ ನಾಗರಾಜ್ ವಿಡಿಯೋ ಮೂಲಕ ಕರುನಾಡಿನ ಜನರಿಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯ ಕೋರಿದ್ದಾರೆ. "ನಿಮಗೂ ಹಾಗೂ ನಿಮ್ಮ ಕುಟುಂಬದ ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು" ಎಂದಿರುವ ಮಿಲನಾ ನಾಗರಾಜ್, ಕೌಸಲ್ಯ ಸುಪ್ರಜಾ ರಾಮಾ ಸಿನಿಮಾ ಐದನೇ ವಾರದಲ್ಲಿದೆ ಎಂದು ಸಂಭ್ರಮಿಸಿದ್ದಾರೆ.

ಪುಟ್ಟಗೌರಿ ಮದುವೆ ಮತ್ತು ನಾಗಿಣಿ 2 ಧಾರಾವಾಹಿಯಿಂದ ಗುರುತಿಸಿಕೊಂಡ ನಟಿ ನಮ್ರತಾ ಗೌಡ, "ನಮಸ್ತೇಸ್ತು ಮಹಾಮಾಯೆ ಶ್ರೀಪೀಠೆ ಸುರಪೂಜಿತೆ, ಶಂಖಚಕ್ರ ಗದಾಹಸ್ತೆ ಮಹಾಲಕ್ಷ್ಮಿ ನಮೋಸ್ತುತೆ, ನಿಮಗೆಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು" ಎಂದು ಶುಭಾಶಯ ಕೋರಿದ್ದಾರೆ.

More from Filmibeat

English summary
Sandalwood celebrities celebrate varamahalakshmi festival.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X