twitter
    For Quick Alerts
    ALLOW NOTIFICATIONS  
    For Daily Alerts

    ಸ್ವಾತಂತ್ರ್ಯೋತ್ಸವದ ದಿನ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸೆಲೆಬ್ರಿಟಿಗಳು

    By Suneetha
    |

    ದೇಶದೆಲ್ಲೆಡೆ ಇಂದು (ಆಗಸ್ಟ್ 15) ಸ್ವಾತಂತ್ರ್ಯೋತ್ಸವದ ಸಂಭ್ರಮ ಮುಗಿಲು ಮುಟ್ಟಿದೆ. 70ನೇ ಸ್ವಾತಂತ್ರ್ಯೋತ್ಸವವನ್ನು ದೇಶದೆಲ್ಲೆಡೆ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಈಗಾಗಲೇ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಬಗ್ಗೆ ಭಾಷಣ ಬಿಗಿದಿದ್ದಾರೆ.

    ಈ ಸಂಭ್ರಮದ ಸ್ವಾತಂತ್ರ ದಿನಾಚರಣೆಯನ್ನು ಕನ್ನಡ ಚಿತ್ರರಂಗದ ಸ್ಟಾರ್ ಸೆಲೆಬ್ರಿಟಿಗಳು ಆಚರಿಸುತ್ತಿದ್ದಾರೆ. ಅದರಲ್ಲೂ ಕೆಲವು ಸ್ಟಾರ್ ನಟ-ನಟಿ ಮತ್ತು ನಿರ್ದೇಶಕರೊಬ್ಬರಿಗೆ ಇಂದು ಡಬಲ್ ಸಂಭ್ರಮ.[70ನೇ ಸ್ವಾತಂತ್ರ್ಯೋತ್ಸವ : ಸಿದ್ದರಾಮಯ್ಯ ಭಾಷಣದ ಮುಖ್ಯಾಂಶಗಳು]

    ಅಂದಹಾಗೆ ಈ ಡಬಲ್ ಸಂಭ್ರಮ ಯಾಕೆಂದರೆ, ಒಂದೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ ಆದರೆ, ಇನ್ನೊಂದೆಡೆ ಹುಟ್ಟುಹಬ್ಬದ ಸಂಭ್ರಮ. ಈ ಸಂಭ್ರಮದ ಸ್ವಾತಂತ್ರ್ಯೋತ್ಸವದ ದಿನ ಹುಟ್ಟುಹಬ್ಬ ಆಚರಿಸುತ್ತಿರುವ ನಟ-ನಟಿ ಹಾಗೂ ನಿರ್ದೇಶಕರು ಯಾರು ಎಂಬುದನ್ನು ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ....

    ನಟ ಕಮ್ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್

    ನಟ ಕಮ್ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್

    ಕನ್ನಡ ಚಿತ್ರರಂಗದ ನಟ ಕಮ್ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಅವರಿಗಿಂದು (ಆಗಸ್ಟ್ 15) ಹುಟ್ಟುಹಬ್ಬದ ಸಂಭ್ರಮ. ದೇಶಕ್ಕೆ ಸ್ವಾತಂತ್ರ ಸಿಕ್ಕ ಈ ಪವಿತ್ರ ದಿನದಂದು ನಮ್ಮ-ನಿಮ್ಮೆಲ್ಲರ ಮೆಚ್ಚಿನ ರಾಘಣ್ಣ ಅವರು ಹುಟ್ಟಿದ್ದಾರೆ. ಆಗಸ್ಟ್ 15, 1965ರಲ್ಲಿ, ಚೆನ್ನೈನಲ್ಲಿ ಜನಿಸಿದ ನಟ ರಾಘಣ್ಣ ಅವರು 'ಚಿರಂಜೀವಿ ಸುಧಾಕರ' ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ತದನಂತರ 'ನಂಜುಡಿ ಕಲ್ಯಾಣ' ಚಿತ್ರದ ಮೂಲಕ ಖ್ಯಾತಿ ಗಳಿಸಿದರು.

    ನಟಿ ಭಾರತಿ ವಿ‍ಷ್ಣುವರ್ಧನ್

    ನಟಿ ಭಾರತಿ ವಿ‍ಷ್ಣುವರ್ಧನ್

    ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಅವರ ಧರ್ಮಪತ್ನಿ ನಟಿ-ಸಹ ನಿರ್ದೇಶಕಿ ಭಾರತಿ ವಿಷ್ಣುವರ್ಧನ್ ಅವರಿಗೂ ಇಂದು ಹುಟ್ಟುಹಬ್ಬದ ಸಂಭ್ರಮ. ಆಗಸ್ಟ್ 15, 1948ರಲ್ಲಿ ಹುಟ್ಟಿ, ಕನ್ನಡ, ಹಿಂದಿ ಮಲಯಾಳಂ, ತಮಿಳು, ತೆಲುಗು ಭಾಷೆಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಭಾರತಿ ವಿಷ್ಣುವರ್ಧನ್ ಅವರು ಮೊದಲ ಬಾರಿಗೆ 'ಲವ್ ಇನ್ ಬೆಂಗಳೂರು' ಎಂಬ ಕನ್ನಡ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ತದನಂತರ ಡಾ.ರಾಜ್ ಕುಮಾರ್, ರವಿಚಂದ್ರನ್, ವಿಷ್ಣುವರ್ಧನ್ ಅವರ ಜೊತೆ, ಸುಮಾರು 140ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಿಂಚಿ ಎಲ್ಲರ ಮೆಚ್ಚುಗೆ ಗಳಿಸಿದ್ದರು.[ವಿಷ್ಣು ಸ್ಮಾರಕದ ಕುರಿತು ಭಾರತಿ ವಿಷ್ಣುವರ್ಧನ್ ನೋವಿನ ನುಡಿ]

    ಅರ್ಜುನ್ ಸರ್ಜಾ

    ಅರ್ಜುನ್ ಸರ್ಜಾ

    ಕನ್ನಡ ಚಿತ್ರರಂಗ ಸೇರಿದಂತೆ ದಕ್ಷಿಣ ಭಾರತದಲ್ಲಿ ಖ್ಯಾತಿ ಗಳಿಸಿರುವ, ನಮ್ಮ ಕನ್ನಡದವರೇ ಆದ ಆಕ್ಷನ್-ಕಿಂಗ್ ಅರ್ಜುನ್ ಸರ್ಜಾ ಅವರಿಗೆ ಇಂದು ಸ್ವಾತಂತ್ರ್ಯೋತ್ಸವದ ಸಂಭ್ರಮದ ಜೊತೆಗೆ ಹುಟ್ಟುಹಬ್ಬದ ಸಂಭ್ರಮ. ಆಗಸ್ಟ್ 15, 1962ರಲ್ಲಿ, ಮಧುಗಿರಿ ಮೈಸೂರಿನಲ್ಲಿ ಜನಿಸಿದ ಅರ್ಜುನ್ ಸರ್ಜಾ ಕನ್ನಡ, ತಮಿಳು, ತೆಲುಗು ಸೇರಿದಂತೆ ಮಲಯಾಳಂ ಚಿತ್ರದಲ್ಲೂ ನಟಿಸಿದ್ದಾರೆ. 'ಸಿಂಹದ ಮರಿ ಸೈನ್ಯ'ಎಂಬ ಕನ್ನಡ ಚಿತ್ರದ ಮೂಲಕ ಸಿನಿಮಾ ವೃತ್ತಿ ಆರಂಭಿಸಿದ ಅರ್ಜುನ್ ಸರ್ಜಾ ಅವರೀಗ ಎಲ್ಲಾ ಚಿತ್ರರಂಗದಲ್ಲೂ ಬಹು ಬೇಡಿಕೆಯ ನಟ-ನಿರ್ದೇಶಕ ಕಮ್ ನಿರ್ಮಾಪಕ.[ಬಾಲಿವುಡ್ಡಿಗೆ ಹಾರಲಿದ್ದಾರೆ ಕನ್ನಡದ ಕುಡಿ ಅರ್ಜುನ್ ಸರ್ಜಾ]

    ಸಂತೋಷ್ ಆನಂದ್ ರಾಮ್

    ಸಂತೋಷ್ ಆನಂದ್ ರಾಮ್

    ಯಶ್ ಮತ್ತು ರಾಧಿಕಾ ಪಂಡಿತ್ ಅಭಿನಯದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಚೊಚ್ಚಲ ಚಿತ್ರದಲ್ಲೇ ಗಾಂಧಿನಗರದಲ್ಲಿ ಧೂಳೆಬ್ಬಿಸಿದ್ದರು. ಇದೀಗ ಎರಡನೇ ಚಿತ್ರ 'ರಾಜಕುಮಾರ' ಮೂಲಕ ಪುನೀತ್ ರಾಜ್ ಕುಮಾರ್ ಅವರಿಗೆ ಆಕ್ಷನ್-ಕಟ್ ಹೇಳುತ್ತಿದ್ದು, ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

    ನಾಗತಿಹಳ್ಳಿ ಚಂದ್ರಶೇಖರ್

    ನಾಗತಿಹಳ್ಳಿ ಚಂದ್ರಶೇಖರ್

    ಕನ್ನಡದ ಮೇಷ್ಟ್ರು ಅಂತಾನೇ ಖ್ಯಾತಿ ಗಳಿಸಿರುವ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೂ ಇಂದು ಹುಟ್ಟುಹಬ್ಬದ ಸಂಭ್ರಮ. 'ಅಮೆರಿಕ ಅಮೆರಿಕ', 'ಅಮೃತಧಾರೆ'ಯಂತಹ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ನಾಗತಿಹಳ್ಳಿ ಚಂದ್ರಶೇಖರ್ ಅವರು ನ್ಯಾಷನಲ್ ಅವಾರ್ಡ್ ಗಿಟ್ಟಿಸಿಕೊಂಡಿದ್ದಾರೆ.

    ಸುಹಾಸಿನಿ ಮಣಿರತ್ನಂ

    ಸುಹಾಸಿನಿ ಮಣಿರತ್ನಂ

    ನಟಿ ಸುಹಾಸಿನಿ ಮಣಿರತ್ನಂ ಅವರು ಚೆನ್ನೈ ತಮಿಳುನಾಡಿನಲ್ಲಿ ಹುಟ್ಟಿ, ತಮಿಳು ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರೂ, ಫೇಮಸ್ ಆಗಿದ್ದು, ಹೆಸರು ಮಾಡಿದ್ದು ಮಾತ್ರ, ಕನ್ನಡ ಚಿತ್ರರಂಗದಲ್ಲಿ. ವಿಷ್ಣುವರ್ಧನ್ ಅವರ ಜೊತೆ ಮಾಡಿದ 'ಬಂಧನ' ಹಾಗೂ 'ಅಮೃತವರ್ಷಿಣಿ' ಸಿನಿಮಾಗಳು ಈಗಲೂ ಎಲ್ಲರ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಇಂತಹ ಅಪರೂಪದ ಪ್ರತಿಭೆಗೆ ಇಂದು ಹುಟ್ಟುಹಬ್ಬದ ಸಂಭ್ರಮ.

    English summary
    Whole nation commemorated the 70th Independence Day on August 15. 4 Sandalwood celebrities-Bharathi Vishnuvardhan, Actor Arjun Sarja Raghavendra Rajkumar and Director Santhosh Ananddram share their birthdays with country's Independence Day.
    Monday, August 15, 2016, 16:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X