ಸ್ನೇಹಿತರ ದಿನಾಚರಣೆಗೆ ಸಿನಿಗಣ್ಯರ ಶುಭಾಶಯ; ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿ ಎಂದ ಜಗ್ಗೇಶ್

ಇಂದು ವಿಶ್ವ ಸ್ನೇಹಿತರ ದಿನಾಚರಣೆ. ಸ್ನೇಹಿತರು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಗೆಳೆಯರ ಜೊತೆಗಿನ ಸುಂದರ ಫೋಟೋಗಳನ್ನು ಶೇರ್ ಮಾಡಿ ಸ್ನೇಹ ಬಾಂಧವ್ಯ ಮೆರೆಯುತ್ತಿದ್ದಾರೆ.

ಪರಸ್ಪರ ಪ್ರೀತಿ, ವಿಶ್ವಾಸ ತೋರುತ್ತ ನಿಸ್ವಾರ್ಥ ಸಹಾಯ ಮಾಡುವ ಬಂಧ ಸ್ನೇಹ. ಇದು ರಕ್ತ ಸಂಬಂಧಕ್ಕೂ ಮೀರಿದ ಬಂಧ ಸ್ನೇಹ. ಅಪರಿಚಿತರು ಪರಿಚಿತರಾಗಿ ಪರಸ್ಪರ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವ ಒಂದು ಸುಂದರ ಬಂಧ. ಕಷ್ಟಕಾಲದಲ್ಲಿ ಯಾರೂ ಬರದೇ ಇದ್ದರೂ ಸ್ನೇಹಿತ ಎನಿಸಿಕೊಂಡವರು ಬಂದೇ ಬರುತ್ತಾರೆ. ಮನುಷ್ಯ ಸಂಘಜೀವಿ ಯಾವುದೇ ಜೀವರಾಶಿಗಳಲ್ಲಿ ಕಂಡುಬರದಂತಹ ಗೆಳೆತನ ಮನುಷ್ಯರಲ್ಲಿ ಕಂಡುಬರುತ್ತದೆ. ಕುಟುಂಬದವರ ಜೊತೆಗೆ ಗೆಳೆಯರಿಗೂ ಅಷ್ಟೆ ಮಹತ್ವದ ಸ್ಥಾನ ನೀಡಲಾಗಿದೆ.

ಗೆಳೆಯರಿಲ್ಲದ ಬದುಕನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಜೀವನದಲ್ಲಿ ಸ್ನೇಹಿತರೆ ಇಲ್ಲದೆ ಒಂಟಿಯಾಗಿ ಬದುಕು ಸಾಗಿಸುವ ವ್ಯಕ್ತಿಯನ್ನು ಕಾಣಲು ಸಾಧ್ಯವಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಬದುಕಿನಲ್ಲಿ ಸ್ನೇಹ, ಸ್ನೇಹಿತ ಎನ್ನುವ ಪದಕ್ಕೆ ವಿಶೇಷ ಸ್ಥಾನ ವಿದ್ದೇ ಇರುತ್ತದ್ದೆ. ಸ್ನೇಹಿತರ ದಿನಾಚರಣೆ ದಿನ ಸಿನಿ ಮಂದಿಯೂ ವಿಶೇಷವಾಗಿ ವಿಶ್ ಮಾಡುವ ಮೂಲಕ ಸ್ನೇಹಿತರ ದಿನಾಚರಣೆಯನ್ನು ಸಂಭ್ರಮಿಸುತ್ತಿದ್ದಾರೆ. ಮುಂದೆ ಓದಿ..

ನಟ ಜಗ್ಗೇಶ್

ನಟ ಜಗ್ಗೇಶ್

"ಗುಬ್ಬಚ್ಚಿಗೂಡಿನ ಆತ್ಮೀಯ ಸ್ನೇಹಿತರಿಗೆ ಹಾಗು ಬದುಕಿನ ಎಲ್ಲ ನನ್ನ ನಿಜ ಸ್ನೇಹಿತರಿಗೆ ಸ್ನೇಹದಿನದ ಶುಭಕಾಮನೆಗಳು. ಸುಮ್ಮನೆ ಚಟಕ್ಕೆಸಿಗುವ ಮಾತಾಡಿಸುವ ನಗುವವ timepass ಸ್ನೇಹಿತ. ನಮ್ಮ ಒಳಿತಿಗಾಗಿ ಯಾವ ಅಪೇಕ್ಷೆ ಇಲ್ಲದೆ ನಮಗಾಗಿ ಬಾಳುವವನೆ ನಿಜಸ್ನೇಹಿತ. Few are friends more than that is just crowd. Select good friends" ಎಂದು ಜಗ್ಗೇಶ್ ಟ್ವೀಟ್ ಮಾಡುವ ಮೂಲಕ ಸ್ನೇಹಿತರ ದಿನಾಚರಣೆ ದಿನ ಸಂದೇಶ ನೀಡಿದ್ದಾರೆ.

ನಿರ್ದೇಶಕ ಸುನಿ

ನಿರ್ದೇಶಕ ಸುನಿ

"ಅಪ್ಪಾತಂದೆ...ಮಗಾ..ಮಚ್ಛಾ..ಗುರು..ಶಿಷ್ಯ.. ಅಣ್ಣಾ...ತಮ್ಮಾ... ದೇವರು.. ಹೀಗೆ ಎಲ್ಲಾ ಹೆಸರಿಂದ ಕರೆಸಿಕೊಳ್ಳುವ "ಗೆಳೆಯ" ಎಂಬ ಅದ್ಭುತ ಪದದೊಡೆಯನಿಗೆ, ಸ್ನೇಹಿತರ ದಿನಾಚರಣೆಯ ಶುಭಾಶಯ" ಎಂದು ಹೇಳಿದ್ದಾರೆ ನಿರ್ದೇಶಕ ಸಿಂಪಲ್ ಸುನಿ. ತನ್ನದೆ ಶೈಲಿಯಲ್ಲಿ ಶುಭಾಶಯಗಳನ್ನು ತಿಳಿಸುವ ಮೂಲಕ ಅಭಿಮಾನಿಗಳ ಗಮನಸಳೆಯುವ ಸುನಿ ಸ್ನೇಹಿತರ ದಿನಾಚರಣೆ ದಿನವೂ ವಿಶೇಷವಾಗಿ ವಿಶ್ ಮಾಡಿದ್ದಾರೆ.

ನಟ ಶರಣ್

ನಟ ಶರಣ್

"ಇಡೀ ಜಗತ್ತಿನಲ್ಲಿ ಹಾಗೂ ನಮ್ಮ ಬದುಕಿನಲ್ಲಿ ಅತೀ ಸುಂದರವಾದ ಸಂಬಂಧ. ಸ್ನೇಹ ಸಂಬಂಧ. ನಿಮ್ಮೆಲ್ಲರಿಗೂ ಸ್ನೇಹಿತರ ದಿನದ ಪ್ರೀತಿಯ ಶುಭಾಶಯಗಳು" ಜೊತೆಗೆ ವಿಡಿಯೋ ಮೂಲಕವೂ ಶುಭಾಶಯ ತಿಳಿಸಿದ್ದಾರೆ. "ನನ್ನ ಸ್ನೇಹಿತರಿಗೆ ಹೃದಯ ಪೂರ್ವಕ ಶುಭಾಶಯಗಳು. ಜಗತ್ತಿನಲ್ಲಿ, ಬದುಕಿನಲ್ಲಿ ಸುಂದರವಾದ ಸಂಬಂಧವಿದೆ ಎಂದರೆ ಅದು ಸ್ನೇಹ ಸಂಬಂಧ. ಯಾರು ಅತೀ ಹೆಚ್ಚು ಸ್ನೇಹಿತರನ್ನು ಪಡೆದಿದ್ದಾರೋ ಅವರು ಅತೀ ಹೆಚ್ಚು ಅದೃಷ್ಟವಂತರು ಎನ್ನುವುದರಲ್ಲಿ ಎರಡು ಮಾತಿಲ್ಲ. ನನ್ನ ಬದುಕಿನಲ್ಲೂ ಹಲವಾರು ಸ್ನೇಹಿತರು ನನ್ನ ಜೊತೆಯಲ್ಲಿ ಇರುವುದು ನನ್ನ ಅದೃಷ್ಟ. ಸ್ನೇಹಿತರ ಜೊತೆಯಲ್ಲಿ ಮಾತ್ರ ನಾನು ನಾಗಿರಲು ಸಾಧ್ಯ. ಪವಿತ್ರವಾದ ಸಂಬಂಧ. ಎಲ್ಲರ ಸ್ನೇಹ ಸಂಬಂಧ ಮತ್ತಷ್ಟು ಗಟ್ಟೆಯಾಗಲಿ. ಎಲ್ಲರಿಗೂ ಸ್ನೇಹಿತರ ದಿನಾಚರಣೆಯ ಶುಭಾಶಯಗಳು.

ಸಂತೋಷ್ ಆನಂದ್ ರಾಮ್

ಸಂತೋಷ್ ಆನಂದ್ ರಾಮ್

ನಿರ್ದೇಶಕ ಸಂತೋಷ್ ಆನಂದ್ ರಾಮ್ ಟ್ವೀಟ್ ಮಾಡಿ, "ಸ್ನೇಹಿತರಂತೆ ಇರುವ ಅಭಿಮಾನಿಗಳಿಗೆ, ಅಭಿಮಾನ ಇಟ್ಟಿರುವ ಸ್ನೇಹಿತರಿಗೆ, ಸ್ನೇಹಿತರ ದಿನದ ಶುಭಾಶಯಗಳು" ಎಂದು ಹೇಳಿದ್ದಾರೆ. ಜೊತೆಗೆ ಅಭಿಮಾನಿಗಳ ಜೊತೆ ಇರುವ ಫೋಟೋವನ್ನು ಶೇರ್ ಮಾಡಿದ್ದಾರೆ.

ಸತೀಶ್ ನೀನಾಸಂ

ಸತೀಶ್ ನೀನಾಸಂ

ನಟ ಸತೀಶ್ ನೀನಾಸಂ ಕೂಡ ಸಾಮಾಜಿಕ ಜಾಲತಾಣದ ಮೂಲಕ ಸ್ನೇಹಿತರ ದಿನಾಚರಣೆ ದಿನ ಶುಭಾಶಯ ತಿಳಿಸಿದ್ದಾರೆ. ಬಾಲ್ಯದಿಂದ ಇಲ್ಲಿವರೆಗೂೂಜೊತೆ ನಿಂತ, ನನ್ನ ಎಲ್ಲಾ ಸ್ನೇಹಿತರಿಗೆ ಗೆಳೆಯರ ದಿನದ ಶುಭಾಶಯಗಳು" ಎಂದು ಹೇಳಿದ್ದಾರೆ.

ನಟಿ ಮೇಘನಾ ರಾಜ್

ನಟಿ ಮೇಘನಾ ರಾಜ್

ನಟಿ ಮೇಘನಾ ರಾಜ್ ಪತಿ ಚಿರಂಜೀವಿ ಸರ್ಜಾ ಜೊತೆಗಿನ ಸುಂದರ ಫೋಟೋ ಶೇರ್ ಮಾಡಿ ಸ್ನೇಹಿತರ ದಿನಾಚರಣೆ ದಿನದ ಶುಭಾಶಯ ತಿಳಿಸಿದ್ದಾರೆ. "ಯಾವಾಗಲು ನನ್ನ ಉತ್ತಮ ಸ್ನೇಹಿತ. ಸ್ನೇಹಿತರ ದಿನಾಚರಣೆಯ ಶುಭಾಶಯಗಳು" ಎಂದು ಹೇಳಿದ್ದಾರೆ.

ನಟಿ ಐಂದ್ರಿತಾ ರೇ

ನಟಿ ಐಂದ್ರಿತಾ ರೇ

ನಟಿ ಐಂದ್ರಿತಾ ರೈ ಕೂಡ ವಿಶೇಷವಾಗಿ ವಿಶ್ ಮಾಡಿದ್ದಾರೆ. ಐಂದ್ರಿತಾ ತನ್ನ ಪತಿ ದಿಗಂತ್ ತನ್ನ ಜೀವನದ ಉತ್ತಮ ಸ್ನೇಹಿತ ಎಂದು ಹೇಳಿದ್ದಾರೆ. ಜೊತೆಗೆ ಇಬ್ಬರ ಸುಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಪರಮಾತ್ಮ ಸಿನಿಮಾದ ಹಾಡನ್ನು ಶೇರ್ ಮಾಡಿ, 12 ವರ್ಷದಿಂದ ಜೊತೆಯಲ್ಲಿದ್ದೀವಿ" ಎಂದು ಹೇಳಿದ್ದಾರೆ.

More from Filmibeat

English summary
Sandalwood celebrities Friendship wishes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X