ಸ್ಯಾಂಡಲ್‌ವುಡ್‌ನಲ್ಲಿ ಗಣೇಶ ಹಬ್ಬದ ಸಂಭ್ರಮ: ಯಾರ್ಯಾರ ಮನೆಯಲ್ಲಿ ಹೇಗಿದೆ ಆಚರಣೆ

By ಫಿಲ್ಮಿಬೀಟ್ ಡೆಸ್ಕ್

ದೇಶದಾದ್ಯಂತ ಇಂದು (ಸೆಪ್ಟಂಬರ್ 10) ಗಣೇಶ ಚತುರ್ಥಿ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಕೊರೊನಾ ಹಾವಳಿಯಿಂದಾಗಿ ಗಣೇಶೋತ್ಸವದ ಸಂಭ್ರಮ, ಸಡಗರಕ್ಕೆ ಕೊಂಚ ಹಿನ್ನಡೆ ಆಗಿರಬಹುದು. ಆದರೆ ಜನರ ಉತ್ಸಾಹ ಕಮ್ಮಿ ಆಗಿಲ್ಲ. ಗಣೇಶನನ್ನು ಮನೆಗೆ ಕರೆತಂದು ಪೂಜೆ ಮಾಡಿ ಸಂಭ್ರಮಿಸುತ್ತಿದ್ದಾರೆ.

ಸೆಲೆಬ್ರಿಟಿಗಳ ಮನೆಯಲ್ಲೂ ಗಣೇಶ ಸಂಭ್ರಮ ಅದ್ದೂರಿಯಾಗಿದೆ. ಮನೆಯಲ್ಲೇ ಕುಟುಂಬದವರ ಜೊತೆ ಗಣೇಶ ಹಬ್ಬವನ್ನು ಆಚರಿಸುತ್ತಿದ್ದಾರೆ. ಸ್ಯಾಂಡಲ್‌ವುಡ್‌ನ ಅನೇಕ ಸೆಲೆಬ್ರಿಟಿಗಳ ಮನೆಯಲ್ಲಿ ಗಣೇಶ ಉತ್ಸವ ಜೋರಾಗಿದೆ. ನಟಿ ಪ್ರಿಯಾಂಕಾ ಉಪೇಂದ್ರ, ಜಯರಾಮ್ ಕಾರ್ತಿಕ್, ಆಶಿಕಾ ರಂಗನಾಥ್, ಅದಿತಿ ಪ್ರಭುದೇವ, ನಟ ಜಗ್ಗೇಶ್ ಸೇರಿದಂತೆ ಅನೇಕ ಸ್ಟಾರ್ ಕಲಾವಿದರ ಮನೆಯಲ್ಲಿ ಅದ್ದೂರಿಯಾಗಿ ಗಣೇಶ ಹಬ್ಬವನ್ನು ಆಚರಿಸಿದ್ದಾರೆ. ವಿಘ್ನ ನಿವಾರಕ ಗಣೇಶನನ್ನು ಆರಾಧಿಸಿ, ಪೂಜಿಸಿ ಕಷ್ಟಗಳನ್ನು ಬಗೆಹರಿಸು ಎಂದು ಕೇಳಿಕೊಳ್ಳುತ್ತಿದ್ದಾರೆ. ಕೊರೊನಾ ನಡುವಿಯು ಈ ಬಾರಿ ಗಣೇಶ ಉತ್ಸವವನ್ನು ಸಂತೋಷದಿಂದ ಆಚರಿಸಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಯಾರ್ಯಾರ ಮನೆಯಲ್ಲಿ ಹಬ್ಬವನ್ನು ಹೇಗೆ ಆಚರಣೆ ಮಾಡಿದ್ದಾರೆ? ಇಲ್ಲಿದೆ ಒಂದು ವಿವರ..

ನಟ ಜೆಕೆ

ನಟ ಜೆಕೆ

ನಟ ಜೆಕೆ ಕೂಡ ಗಣಪತಿ ಫೋಟೋವನ್ನು ಶೇರ್ ಮಾಡಿದ್ದಾರೆ. ಜೊತೆಗೆ ಎಲ್ಲರಿಗೂ ಗಣೇಶ ಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ. ಗಣಪತಿ ಪಕ್ಕದಲ್ಲಿ ನಿಂತು ಪೋಸ್ ಕೊಟ್ಟಿರುವ ಫೋಟೋವನ್ನು ಶೇರ್ ಮಾಡಿ, "ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು. ದೇವರು ಒಳ್ಳೆಯದು ಮಾಡಲಿ" ಎಂದು ಹೇಳಿದ್ದಾರೆ.

ಪ್ರಿಯಾಂಕಾ ಉಪೇಂದ್ರ

ಪ್ರಿಯಾಂಕಾ ಉಪೇಂದ್ರ

ನಟಿ ಪ್ರಿಯಾಂಕಾ ಉಪೇಂದ್ರ ಅವರು ಪ್ರತಿಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಹಾಗೆ ಗಣೇಶ ಹಬ್ಬವನ್ನು ಜೋರಾಗಿ ಆಚರಣೆ ಮಾಡಿದ್ದಾರೆ. ಗಣೇಶನನ್ನು ಮನೆಗೆ ಕರೆತಂದು ಕೂರಿಸಿ, ವಿಶೇಷ ಪೂಜೆ ಮಾಡಿದ್ದಾರೆ. ಪ್ರಿಯಾಂಕಾ ಉಪೇಂದ್ರ ಮನೆಯ ಅದ್ದೂರಿ ಗಣೇಶ ಹಬ್ಬದ ಸಂಭ್ರಮದಲ್ಲಿ ಇಡೀ ಕುಟುಂಬ ಭಾಗಿಯಾಗಿದೆ. ಹಬ್ಬದ ಸಂಭ್ರಮದ ಫೋಟೋಗಳನ್ನು ಪ್ರಿಯಾಂಕಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಅಭಿಮಾನಿಗಳಿಗೂ ವಿಶ್ ಮಾಡಿದ್ದಾರೆ.

ಅದಿತಿ ಪ್ರಭುದೇವ

ಅದಿತಿ ಪ್ರಭುದೇವ

ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ ಮನೆಯಲ್ಲೂ ಹಬ್ಬದ ಸಂಭ್ರಮ ಜೋರಾಗಿದೆ. ಗಣೇಶನನ್ನು ಹೊತ್ತು ಕ್ಯಾಮರಾಗೆ ಪೋಸ್ ನೀಡಿರುವ ಅದಿತಿ ಅಭಿಮಾನಿಗಳಿಗೂ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಹಬ್ಬದ ದಿನ ಮಸ್ತ್ ಫೋಟೋಶೂಟ್ ಮಾಡಿಸಿರುವ ಅದಿತಿ ಲಂಗ ದಾವಣಿಯಲ್ಲಿ ಮಿಂಚಿದ್ದಾರೆ.

ಆಶಿಕಾ ರಂಗನಾಥ್

ಆಶಿಕಾ ರಂಗನಾಥ್

ಸ್ಯಾಂಡಲ್‌ವುಡ್‌ ನಟಿ ಆಶಿಕಾ ರಂಗನಾಥ್ ಮನೆಯಲ್ಲೂ ಹಬ್ಬದ ಸಂಭ್ರಮ ಜೋರಾಗಿದೆ. ಪುಟ್ಟ ಗಣೇಶನನ್ನು ಕೂರಸಿ ಆರಾಧನೆ ಮಾಡಿರುವ ಆಶಿಕಾ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಗುಲಾಬಿ ಬಣ್ಣದ ಸೀರೆಯಲ್ಲಿ ಆಶಿಕಾ ಕಂಗೊಳಿಸಿದ್ದಾರೆ. ಫೋಟೋ ಶೇರ್ ಮಾಡಿ, "ಸರ್ವರಿಗೂ ಗಣೇಶ ಚತುರ್ಥಿಯ ಶುಭಾಶಯಗಳು" ಎಂದು ಹೇಳಿದ್ದಾರೆ.

ನಟ ಜಗ್ಗೇಶ್

ನಟ ಜಗ್ಗೇಶ್

ಸ್ಯಾಂಡಲ್‌ವುಡ್‌ನ ಹಿರಿಯ ನಟ ಜಗೇಶ್ ಮನೆಯಲ್ಲೂ ಗಣೇಶ ಸಂಭ್ರಮ ಜೋರಾಗಿದೆ. ದೇವರ ಅಪಾರ ಭಕ್ತರಾಗಿರುವ ನಟ ಜಗ್ಗೇಶ್ ಮನೆಯಲ್ಲೂ ಹಬ್ಬಗಳನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಜಗ್ಗೇಶ್ ತನ್ನ ಹಳೆಯ ಗಣೇಶನನ್ನೇ ಕೂರಿಸಿ ಪ್ರತಿವರ್ಷ ಪೂಜೆ ಮಾಡುತ್ತಾರೆ. ಈ ಬಾರಿ ಅದೇ ಕೂಡ ಅದೇ ವಿಶೇಷ ಗಣೇಶನನ್ನು ಕೂರಿಸಿ ಪೂಜೆ ಮಾಡಿರುವ ಜಗ್ಗೇಶ್ ಫೋಟೋವನ್ನು ಸಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ನಟಿ ಸಂಜನಾ ಗಲ್ರಾನಿ

ನಟಿ ಸಂಜನಾ ಗಲ್ರಾನಿ

ಸ್ಯಾಂಡಲ್‌ವುಡ್‌ ನಟಿ ಸಂಜನಾ ಗಲ್ರಾನಿ ಮನೆಯಲ್ಲೂ ಗಣೇಶ ಹಬ್ಬ ಜೋರಾಗಿದೆ. ಮನೆಗೆ ಗಣೇಶನನ್ನು ಕರೆತಂದಿರುವ ಸಂಜನಾ ಅದ್ದೂರಿಯಾಗಿ ಹಬ್ಬ ಆಚರಣೆ ಮಾಡಿದ್ದಾರೆ. ಕೆಂಪು ಬಣ್ಣದ ಡ್ರೆಸ್‌ನಲ್ಲಿ ಮಿಂಚಿರುವ ಸಂಜನಾ ಗಣೇಶನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

More from Filmibeat

English summary
Sandalwood Celebrities Ganesha Chaturthi Festival Celebrations.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X