ಸಂತೋಷಂ ಸೌತ್ ಇಂಡಿಯನ್ ಫಿಲ್ಮ್ ಅವಾರ್ಡ್ಸ್ ವೇದಿಕೆಯಲ್ಲಿ ಕನ್ನಡ ಸಿನಿಮಾ ತಾರೆಯರಿಗೆ ಅವಮಾನ
ಗೋವಾದಲ್ಲಿ ಕನ್ನಡ ಸಿನಿಮಾ ತಾರೆಯರಿಗೆ ಅವಮಾನ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. 'ಸಂತೋಷಂ ಅವಾರ್ಡ್ಸ್' ನೀಡುವುದಾಗಿ ಗೋವಾಗೆ ಆಹ್ವಾನಿಸಿ ಸರಿಯಾದ ವ್ಯವಸ್ಥೆ ಮಾಡದೇ ಕಸಿವಿಸಿ ಉಂಟು ಮಾಡಲಾಗಿದೆ. ಮೆಗಾಸ್ಟಾರ್ ಚಿರಂಜೀವಿ ಪಿಆರ್‌ಓ ಸುರೇಶ್ ಕೊಂಡೇಟಿಯಿಂದ ಅಚಾತುರ್ಯ ನಡೆದಿದೆ.
ಹಲವು ವರ್ಷಗಳಿಂದ ಸುರೇಶ್ ಕೊಂಡೇಟಿ 'ಸಂತೋಷಂ ಅವಾರ್ಡ್ಸ್' ಪ್ರಶಸ್ತಿ ನೀಡುತ್ತಾ ಬರುತ್ತಿದ್ದಾರೆ. ಈ ಬಾರಿ ಕನ್ನಡ ಸಿನಿಮಾಗಳಿಗೂ ಪ್ರಶಸ್ತಿ ನೀಡಲು ಗೋವಾದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು. ಗೋವಾಗೆ ಹೋಗಿದ್ದ ಕನ್ನಡ ಸಿನಿಮಾ ತಾರೆಯರಿಗೆ ಸರಿಯಾದ ಆತಿಥ್ಯ ನೀಡದೆ ಅಪಮಾನ ಮಾಡಿದ್ದಾರೆ.

ಎಲ್ಲಾ ಅವ್ಯವಸ್ಥೆ ನಡುವೆ 'ಸಂತೋಷಂ ಅವಾರ್ಡ್ ಸೌತ್ ಇಂಡಿಯಾ ಫಿಲ್ಮ್ ಅವಾರ್ಡ್ಸ್' ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದಿದೆ. 'ಕ್ರಾಂತಿ' ಚಿತ್ರಕ್ಕೆ ಪ್ರಶಸ್ತಿ ನೀಡುತ್ತಿದ್ದಂತೆ ವೇದಿಕೆಯಲ್ಲಿ ಕರೆಂಟ್ ಆಫ್ ಮಾಡಿ ಎಡವಟ್ಟು ಮಾಡಲಾಗಿದೆ. ಕನ್ನಡಿಗರಿಗೆ ತೆಲುಗು ಆಯೋಜಕರಿಂದ ಮೋಸವಾಗಿದೆ. ಕನ್ನಡ ತಾರೆಯರು ಕಾರ್ಯಕ್ರಮ ಬಾಯ್ಕಾಟ್ ಮಾಡಿ ಬೆಂಗಳೂರಿಗೆ ಹೊರಟಿದ್ದಾರೆ. ನಟ ರಮೇಶ್ ಅರವಿಂದ್, ಸಪ್ತಮಿ ಗೌಡ, ರಾಜವರ್ಧನ್, ಬಿ. ಸುರೇಶ್, ಶೈಲಜಾ ನಾಗ್ ಸೇರಿದಂತೆ ಹಲವರು ಗೋವಾಗೆ ತೆರಳಿದ್ದರು.
ಸುಮಾರು 30ರಿಂದ 35 ಮಂದಿ ಕನ್ನಡ ಸಿನಿಮಾ ತಾರೆಯರು ಕಾರ್ಯಕ್ರಮಕ್ಕೆ ತೆರಳಿದ್ದರು. ತಮಿಳು ತಾರೆಯರು ಕೂಡ ಸಂತೋಷಂ ಫಿಲ್ಮ್ ಅವಾರ್ಡ್ಸ್f ಕಾರ್ಯಕ್ರಮದಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದಾರೆ. ಕೆಲವರು ಟ್ವೀಟ್ ಮೂಲಕ ತಮಿಳು ಮಂದಿ ಅಸಹಕಾರ ವ್ಯಕ್ತಪಡಿಸಿದ್ದಾರೆ.


Click it and Unblock the Notifications











