ಕಲಾಂ ನೀವೇ ನಮ್ಮ ಹೀರೋ ಎಂದ ಕನ್ನಡದ ತಾರೆಯರು
ಇಂದು ದೇಶದೆಲ್ಲೆಡೆ ಶೋಕಾಚರಣೆಯಿಂದ ಕೂಡಿದೆ. ನಮ್ಮ ಪ್ರೀತಿಯ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರು ನಮ್ಮನ್ನು ಅಗಲಿದ್ದು, ಇಡೀ ದೇಶ ಒಬ್ಬ ನೇತಾರನ್ನು ಅಗಲಿದ ದುಃಖದಲ್ಲಿ ಮುಳುಗಿದೆ. [ಸ್ಫೂರ್ತಿ ತುಂಬುವ ಡಾ.ಕಲಾಂ ಸ್ಫೂರ್ತಿ ಹೇಳಿಕೆಗಳು]
ಡಾ.ಕಲಾಂ ಅವರು ಇಡೀ ದೇಶದ ಜನತೆಗೆ ಸ್ಪೂರ್ತಿಯ ಚಿಲುಮೆಯಾಗಿದ್ದರು ಅಂದರೂ ತಪ್ಪಾಗ್ಲಿಕ್ಕಿಲ್ಲಾ. ಅಂತಹ ಮಹಾನ್ ನೇತಾರ ಮಡಿದ ಸುದ್ದಿ ಕೇಳಿ ಇಡೀ ಸ್ಯಾಂಡಲ್ ವುಡ್ ರಂಗವೇ ಒಂದು ಕ್ಷಣ ಶೋಕಾಚರಣೆ ಮಾಡಿದೆ.['ಐ ಯಾಮ್ ಕಲಾಂ' ಎನ್ನುತ್ತಿದ್ದಂತೆ ರೋಮಾಂಚನ]
ಸ್ಯಾಂಡಲ್ ವುಡ್ ತಾರೆಯರಾದ ರಕ್ಷಿತ್ ಶೆಟ್ಟಿ, ಪ್ರೀಯಾಂಕ ಉಪೇಂದ್ರ, ಉಪೇಂದ್ರ, ರಾಗಿಣಿ ದ್ವಿವೇದಿ, ಶ್ರುತಿ ಹರಿಹರನ್, ಸಂತೋಷ್ ಆನಂದ್ ರಾಮ್, ಸಂಚಾರಿ ವಿಜಯ್, ಮುಂತಾದವರು ತಮ್ಮ ತಮ್ಮ ಟ್ವಿಟ್ಟರ್ ಹಾಗೂ ಫೇಸ್ ಬುಕ್ಕ್ ಅಕೌಂಟ್ ನಲ್ಲಿ ತೀವ್ರ ಸಂತಾಪ ಸೂಚಿಸಿದ್ದಾರೆ.[ಕೇರ್ ಆಫ್ ಫುಟ್ ಪಾತ್ ಚಿತ್ರಕ್ಕೆ ಸ್ಪೂರ್ತಿಯಾಗಿದ್ದ ಕಲಾಂ]
84 ವರ್ಷ ವಯಸ್ಸಾಗಿದ್ದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಸೋಮವಾರ ಸಂಜೆ ವಿಧಿವಶರಾಗಿದ್ದಾರೆ. ನಾಳೆ (ಜುಲೈ 29) ಕಲಾಂ ಅವರ ಹುಟ್ಟೂರು ರಾಮೇಶ್ವರದ ರಾಮನಾಥಪುರಂ ನಲ್ಲಿ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳು ನಡೆಯಲಿದೆ. ಮುಂದೆ ಓದಿ.....

ಸ್ಯಾಂಡಲ್ ವುಡ್ ಸ್ಟಾರ್ ರಕ್ಷಿತ್ ಶೆಟ್ಟಿ
ನೀವು ನಮ್ಮ ಹೀರೋ, ನೀವೆ ನಮ್ಮೆಲ್ಲರಿಗೂ ಸ್ಪೂರ್ತಿಯ ಚಿಲುಮೆಯಾಗಿದ್ದವರು. ನೀವು ನಮ್ಮ ದೇಶದ ಹೆಮ್ಮೆಯ ನೇತಾರನಾಗಿದ್ದವರು, ''ಮುಗಿಯಲಿ ನಿನ್ನ ಅಂತಿಮ ಸಮರ ನೀ ಚಿರಂಜೀವಿ",..ಅಂತ ಸ್ಯಾಂಡಲ್ ವುಡ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮ ಫೇಸ್ ಬುಕ್ಕಿನಲ್ಲಿ ಕಲಾಂ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರೀಯಾಂಕ ಉಪೇಂದ್ರ
ಚಿರ ನಿದ್ರೆಗೆ ಜಾರಿದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ, ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಅಂತ ಪ್ರೀಯಾಂಕ ಉಪೇಂದ್ರ ಟ್ವೀಟ್ ಮಾಡಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ
ನಾವೀಗ ಒಬ್ಬ ಸ್ಪೂರ್ತಿದಾಯಕ ನಾಯಕನನ್ನು ಕಳೆದುಕೊಂಡಿದ್ದೇವೆ, ಗೌರವಾನ್ವಿತ ವಿಜ್ಞಾನಿ, ಜನರ ನಾಯಕ, ರಾಷ್ಟ್ರಪತಿ ಹಾಗೂ ಶಾಂತಿಧೂತರು ನಮ್ಮನ್ನು ಅಗಲಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಉಪೇಂದ್ರ ಟ್ವೀಟ್ ಮಾಡಿದ್ದಾರೆ.
ರಾಗಿಣಿ ದ್ವಿವೇದಿ
"ನನ್ನ ಸಾವಿನ ದಿನ ರಜಾ ಸಾರಬೇಡಿ, ನೀವು ನನ್ನನ್ನು ನಿಜವಾಗಲೂ ಪ್ರೀತಿಸುವಿರಾದರೆ ಆ ದಿನ ಸ್ವಲ್ಪ ಹೆಚ್ಚು ಕೆಲಸ ಮಾಡಿ"-ಡಾ.ಎ.ಪಿ.ಜೆ. ಅಬ್ದುಲ್ ಕಲಾಂ,
ಡಾ.ಕಲಾಂ ಅವರ ಈ ಸಾಲುಗಳನ್ನು ಹಂಚಿಕೊಳ್ಳುವ ಮೂಲಕ ರಾಗಿಣಿ ದ್ವಿವೇದಿ ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ.

ಶ್ರುತಿ ಹರಿಹರನ್
"ಕನಸು ಎಂಬುದು ನೀವು ನಿದ್ರೆ ಮಾಡುತ್ತಿರುವಾಗ ಕಾಣುವುದಲ್ಲ, ನೀವು ಯಾವಾಗ ಪೂರ್ತಿ ಎಚ್ಚರ ಇರುವಾಗ ಕಾಣುತ್ತೀರೋ ಅದು ನಿಜವಾದ ಕನಸು",
"ನೀವು ಏನೇನು ಬರೆದಿದ್ದೀರಿ...ಅದನ್ನು ನಾನು ನಂಬುತ್ತೇನೆ, ನಿಮ್ಮ ಕನಸು, ನಿಮ್ಮ ಮಾತುಗಳು, ನಿಮ್ಮ ಆದರ್ಶಗಳು, ಆಲೋಚನೆಗಳು ನನಗೆ ಸ್ಪೂರ್ತಿದಾಯಕ ಅನ್ನೋದನ್ನ ನಾನು ನಂಬುತ್ತೇನೆ. ಅಂತ ಶ್ರುತಿ ಹರಿಹರನ್ ಅವರು ಫೇಸ್ ಬುಕ್ಕಿನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಂಚಾರಿ ವಿಜಯ್
ಶಾಂತಿಯುತ ಚಿರನಿದ್ರಗೆ ಜಾರಿರುವ ನಮ್ಮ ದೇಶದ ಹೆಮ್ಮೆಯ ನಾಯಕನಿಗೆ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ ಸಂತಾಪ ಸೂಚಿಸಿದ್ದಾರೆ.

ಸಂತೋಷ್ ಆನಂದ್ ರಾಮ್
"ಮತ್ತೆ ಹುಟ್ಟಿ ಬನ್ನಿ ಭಾರತಾಂಬೆಯ ಮಡಿಲಲ್ಲಿ ಕಲಾಂ ಸರ್, ..ನಿಮ್ಮ ಬದುಕು, ನಿಮ್ಮ ಸಾಧನೆಯಿಂದ ನೀವು ಸದಾ ಜೀವಂತ...ನಿಮಗೊಂದು ಸಲಾಂ ಸರ್ ...ಜೈ ಹಿಂದ್

ನಿರ್ದೇಶಕ ಆರ್ ಚಂದ್ರು
ಅಬ್ದುಲ್ ಕಲಾಂ ಅವರಿಗೆ ಭಾವಪೂರ್ಣ ಶ್ರಧ್ದಾಂಜಲಿ- ದೇಶದ ಅತ್ಯಂತ ದೊಡ್ಡ ವ್ಯಕ್ತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರು.
ಸಂಯುಕ್ತಾ ಹೊರನಾಡ್
ಡಾ.ಎ.ಪಿ.ಜೆ ಅಪೂರ್ವ ವ್ಯಕ್ತಿ, ಒಬ್ಬ ದೊಡ್ಡ ವಿಜ್ಞಾನಿ, ಕ್ಷಿಪಣಿ ಮಾನವ, ಹೆಮ್ಮೆಯ ರಾಷ್ಟ್ರಪತಿ ನೀವೇ ನಮಗೆ ಸ್ಪೂರ್ತಿ. ಧನ್ಯವಾದಗಳು ಸರ್ ಅಂತ ಸಂಯುಕ್ತಾ ಹೊರನಾಡ್ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.


Click it and Unblock the Notifications











