'ನಂಗೆ ಹಿಂದಿ ಗೊತ್ತಿಲ್ಲ ಹೋಗ್ರೋ': ಕನ್ನಡ ಸ್ವಾಭಿಮಾನ ಪ್ರದರ್ಶಿಸಿದ ನಟರು
ಹಿಂದಿ ದಿವಸ್‌ಗೆ ಕರ್ನಾಟಕದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಹಿಂದಿ ಹೇರಿಕೆ ಖಂಡಿಸಿ ಕನ್ನಡ ಪರ ಹೋರಾಟಗಾರರು, ಚಿಂತಕರು ಅನೇಕ ಹೋರಾಟಗಳನ್ನು ಮಾಡುತ್ತ ಬಂದಿದ್ದಾರೆ.
ಸೆಪ್ಟೆಂಬರ್ 14 ರಂದು ಹಿಂದಿ ದಿಸವ್ ಆಚರಣೆ ಮಾಡಲಾಗುತ್ತಿದೆ. ಹಿಂದಿ ದಿವಸ್ ಆಚರಣೆಯನ್ನು ಕನ್ನಡದ ಕೆಲವು ಸಿನಿಮಾ ನಟರು ಖಂಡಿಸಿದ್ದಾರೆ. ''ನಾವು ಕನ್ನಡಿಗರು, ನಮಗೆ ಹಿಂದಿ ಬರಲ್ಲ'' ಎಂದು ಎದೆತಟ್ಟಿ ಹೇಳಿದ್ದಾರೆ. ಹೀಗೆಂದು ಕನ್ನಡ ಅಕ್ಷರದಲ್ಲಿ ಬರೆದಿರುವ ಟ-ಶರ್ಟ್‌ಗಳನ್ನು ಹಾಕಿಕೊಂಡು ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿದ್ದಾರೆ. ಮುಂದೆ ಓದಿ...

ನನ್ನ ಹೆಮ್ಮೆ ನನ್ನ ಮಾತೃಭಾಷೆ ಕನ್ನಡ
''ಹಲವು ಭಾಷೆ ಬಲ್ಲೆ.. ಹಲವು ಭಾಷೆಗಳಲ್ಲಿ ಕೆಲಸ ಮಾಡಬಲ್ಲೆ..ಆದರೆ ನನ್ನ ಕಲಿಕೆ..ನನ್ನ ಗ್ರಹಿಕೆ..ನನ್ನ ಬೇರು..ನನ್ನ ಶಕ್ತಿ...ನನ್ನ ಹೆಮ್ಮೆ..ನನ್ನ ಮಾತೃಭಾಷೆ ಕನ್ನಡ #ಹಿಂದಿ_ಹೇರಿಕೆ_ಬೇಡ ..NO'' ಎಂದು ಟ್ವೀಟ್ ಮಾಡಿದ್ದಾರೆ.

ನನ್ನ ಬೇರು ಕನ್ನಡ
''ನನ್ನ ದೇಶ ಭಾರತ
ನನ್ನ ಬೇರು ಕನ್ನಡ
ಎಲ್ಲ ಭಾಷೆಯನ್ನು ಗೌರವಿಸುತ್ತೇನೆ
ನನ್ನ ಭಾಷೆಯನ್ನು ಹೆಚ್ಚು ಪ್ರೀತಿಸುತ್ತೇನೆ
ಯಾವುದೇ ಹೇರಿಕೆ ಸಲ್ಲದು'' ಎಂದು ನಟ ಧನಂಜಯ್ ಟ್ವೀಟ್ ಮಾಡಿದ್ದಾರೆ.

ಹಿಂದಿ ಗೊತ್ತಿಲ್ಲ ಹೋಗೋ
ಹಿಂದಿ ಹೇರಿಕೆ ಹಾಗೂ ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿರುವ ಆ ದಿನಗಳು ಖ್ಯಾತಿಯ ನಟ ಚೇತನ್ ಸಹ ಕನ್ನಡ ಅಕ್ಷರ ಬರೆದಿರುವ ಟಿ ಶರ್ಟ್ ಹಾಕಿ ಕನ್ನಡಾಭಿಮಾನ ಪ್ರದರ್ಶಿಸಿದ್ದಾರೆ.

ನಟರಿಗೆ ಮೆಚ್ಚುಗೆ
ಹಿಂದಿ ದಿವಸ್ ವಿರುದ್ಧ ಧ್ವನಿ ಎತ್ತಿದ ಪ್ರಕಾಶ್ ರೈ, ನಟ ಚೇತನ್ ಹಾಗೂ ಧನಂಜಯ್ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲ ಕನ್ನಡ ನಟ-ನಟಿಯರು ಹಿಂದಿ ದಿವಸ್ ವಿರುದ್ಧ ಧ್ವನಿ ಎತ್ತಬೇಕು ಎಂಬ ಕೂಗು ಸಹ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗ್ತಿದೆ.
Recommended Video

ನಮಗೆ ಮೊದಲು ಕನ್ನಡ, ಕನ್ನಡ, ಕನ್ನಡ...
''ಕನ್ನಡ ರಾಷ್ಟ್ರೀಯ ಸ್ಥಾನ ಪಡೆದಿರುವ ಭಾಷೆ, ಇದಕ್ಕಿಂತ ಮಿಗಿಲಾಗಿ ಕರ್ನಾಟಕದಲ್ಲಿ ನಮಗೆ ಕನ್ನಡವೇ ಮೊದಲು. ನಂತರ ಬೇರೆ ಭಾಷೆ ಕಲಿಯುವುದು ನಮ್ಮಿಚ್ಚೆ. ನಿಮ್ಮ ಹೇರಿಕೆ, ಹೆದರಿಕೆಗೆ ಬಗ್ಗುವವರು ನಾವಲ್ಲ. ಎಲ್ಲ ಭಾಷಿಕರಿಗು ಇಲ್ಲಿ ಜಾಗ ನೀಡಿದ್ದೇವೆ, ಗೌರವಿಸಿದ್ದೇವೆ. ನಮಗೆ ಮೊದಲು ಕನ್ನಡ, ಕನ್ನಡ, ಕನ್ನಡ...'' ಎಂದು ನಟ ಸತೀಶ್ ನೀನಾಸಂ ಟ್ವೀಟ್ ಮಾಡಿದ್ದಾರೆ.


Click it and Unblock the Notifications











