For Quick Alerts
  ALLOW NOTIFICATIONS  
  For Daily Alerts

  ಗೂಗಲ್‌ನಲ್ಲಿ ಕನ್ನಡಕ್ಕೆ ಅಪಮಾನ ಸಿಡೆದೆದ್ದ ಕನ್ನಡ ತಾರೆಯರು

  |

  ಭಾರತದ ಕೊಳಕು ಭಾಷೆ ಯಾವುದು ಎಂದು ಗೂಗಲ್‌ನಲ್ಲಿ ಟೈಪ್ ಮಾಡಿದರೆ ಉತ್ತರವಾಗಿ ಕನ್ನಡ ಎಂದು ತೋರಿಸುತ್ತಿದೆ. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಗೂಗಲ್‌ನ ವಿರುದ್ಧ ಅಭಿಯಾನ ಆರಂಭವಾಗಿದೆ.

  ಕನ್ನಡಕ್ಕೆ ಅಪಮಾನ ಮಾಡುವಂತೆ ಆರ್ಟಿಕಲ್ ಬರೆದಿರುವ ಪೇಜ್‌ ಅನ್ನು ರಿಪೋರ್ಟ್ ಮಾಡುವಂತೆ ಕರೆ ನೀಡಲಾಗಿದ್ದು, ಈ ಕುರಿತ ವಿಡಿಯೋಗಳು ಹರಿದಾಡುತ್ತಿವೆ. ಟ್ವಿಟ್ಟರ್‌ ಹಾಗೂ ಇತರೆ ಸಾಮಾಜಿಕ ಜಾಲತಾಣದಲ್ಲಿ ಗೂಗಲ್‌ ಅನ್ನು ಹಾಗೂ ಸಿಇಓ ಸುಂದರ್ ಪಿಚಾಯ್ ಅನ್ನು ಈ ಬಗ್ಗೆ ಪ್ರಶ್ನೆ ಮಾಡಲಾಗುತ್ತಿದೆ.

  ಕನ್ನಡಕ್ಕೆ ಹೀಗೆ ಅಪಮಾನವಾದ ಬಗ್ಗೆ ಸಾಮಾನ್ಯರ ಜೊತೆಗೆ ಸೆಲೆಬ್ರಿಟಿಗಳು ಸಹ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವಾರು ಮಂದಿ ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

  ನಿಧಿ ಸುಬ್ಬಯ್ಯ ಹೇಳಿದ್ದೇನು?

  ನಿಧಿ ಸುಬ್ಬಯ್ಯ ಹೇಳಿದ್ದೇನು?

  ನಟಿ ನಿಧಿ ಸುಬ್ಬಯ್ಯ ಈ ಬಗ್ಗೆ ಪೋಸ್ಟ್ ಹಾಕಿದ್ದು, 'ಕೆಟ್ಟ ಭಾಷೆ ಎಂದು ಗೂಗಲ್‌ನಲ್ಲಿ ಹುಡುಕಿದಾಗ​ ಕನ್ನಡ ಎಂದು ಏಕೆ ಬರುತ್ತಿದೆಯೋ ನನಗೆ ಗೊತ್ತಿಲ್ಲ. ಲಿಪಿಗಳ ರಾಣಿ​ ಎಂದು ಸರ್ಚ್​ ಮಾಡಿ. ಆಗಲೂ ಕನ್ನಡವೇ ಬರುತ್ತದೆ. ಇದನ್ನು ಹೆಚ್ಚು ಸರ್ಚ್​ ಮಾಡೋಣ. ಈ ಮೂಲಕ ಹೊರ ಜಗತ್ತಿಗೆ ನಾವು ಏನು ಎಂಬುದನ್ನು ತೋರಿಸೋಣ ಎಂದಿದ್ದಾರೆ.

  ಕನ್ನಡಿಗರ ಶಕ್ತಿ ತೋರಿಸೋಣ: ಪನ್ನಗಾಭರಣ

  ಕನ್ನಡಿಗರ ಶಕ್ತಿ ತೋರಿಸೋಣ: ಪನ್ನಗಾಭರಣ

  ನಿರ್ದೇಶಕ ಪನ್ನಾಗಭರಣ ಸಹ ಟ್ವೀಟ್ ಮಾಡಿದ್ದು, 'ಕ್ವೀನ್ ಆಫ್‌ ದಿ ಲಾಂಗ್ವೇಜಸ್ ಎಂದು ಸರ್ಚ್ ಮಾಡೋಣ ಆಗಲೂ ಕನ್ನಡವೇ ಬರುತ್ತದೆ. ಹೆಚ್ಚು ಹೆಚ್ಚು ಈ ಸರ್ಚ್‌ ಮಾಡುವ ಮೂಲಕ ಕನ್ನಡಿಗರ ಶಕ್ತಿ ಪ್ರದರ್ಶಿಸೋಣ ಎಂದಿದ್ದಾರೆ.

  ನೆಗೆಟಿವಿಟಿ ಬಿಟ್ಟು ಪಾಸಿಟಿವಿಟಿ ಹರಡೋಣ: ರಾಗಿಣಿ

  ನೆಗೆಟಿವಿಟಿ ಬಿಟ್ಟು ಪಾಸಿಟಿವಿಟಿ ಹರಡೋಣ: ರಾಗಿಣಿ

  ರಾಗಿಣಿ ಸಹ ಈ ಬಗ್ಗೆ ವಿಡಿಯೋ ಮಾಡಿ ಹಂಚಿಕೊಂಡಿದ್ದು, 'ಕೊಳಕು ಭಾಷೆ ಎಂದು ಟೈಪ್ ಮಾಡಿದರೆ ಕನ್ನಡ ಎಂಬ ಉತ್ತರ ಗೂಗಲ್‌ನಲ್ಲಿ ಸಿಗುತ್ತಿದೆ. ಇದನ್ನು ಯಾರು ಮತ್ತು ಏಕೆ ಮಾಡಿದ್ದಾರೆ ಗೊತ್ತಿಲ್ಲ. ಆದರೆ ಅದೇ ಗೂಗಲ್‌ನಲ್ಲಿ ಕ್ವೀನ್ ಆಫ್ ಲಾಂಗ್ವೇಜಸ್ ಎಂದು ಟೈಪ್ ಮಾಡಿದರೆ 'ಕನ್ನಡ' ಎಂಬ ಉತ್ತರವೇ ಬರುತ್ತಿದೆ. ಹಾಗಾಗಿ ನೆಗೆಟಿವಿಟಿ ಬಿಟ್ಟು ಪಾಸಿಟಿವಿಟಿ ಕಡೆಗೆ ಹೋಗೋಣ, ಹೆಚ್ಚು ಹೆಚ್ಚು ಜನ ಕ್ವೀನ್ ಆಫ್ ಲಾಂಗ್ವೇಜಸ್ ಎಂದು ಟೈಪ್ ಮಾಡಿ ಎಂದು ಮನವಿ ಮಾಡಿದ್ದಾರೆ ರಾಗಿಣಿ.

  ಲೀಲಾವತಿ ಕುಟುಂಬ ನನಿಗೆ ಸಹಾಯ ಮಾಡಿದಾರೆ! | Filmibeat Kannada
  ಬನ್ನಿ ಪ್ರಮಾದವನ್ನು ಸರಿ ಪಡಿಸೋಣ: ಉಪೇಂದ್ರ

  ಬನ್ನಿ ಪ್ರಮಾದವನ್ನು ಸರಿ ಪಡಿಸೋಣ: ಉಪೇಂದ್ರ

  ನಟ ಉಪೇಂದ್ರ ಸಹ ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ಗೂಗಲ್‌ನಲ್ಲಿ ಕನ್ನಡಕ್ಕೆ ಅಪಮಾನ ಮಾಡುತ್ತಿರುವ ವೆಬ್‌ಸೈಟ್‌ ಅನ್ನು ಹೇಗೆ ರಿಪೋರ್ಟ್ ಮಾಡಬೇಕು ಎಂಬ ಮಾಹಿತಿಯುಳ್ಳ ವಿಡಿಯೋ ಹಂಚಿಕೊಂಡಿದ್ದಾರೆ. ಜೊತೆಗೆ 'ಎಲ್ಲಾದರು ಇರು.. ಎಂತಾದರು ಇರು.. ಎಂದೆಂದಿಗು ನೀ ಕನ್ನಡವಾಗಿರು. ಕನ್ನಡ ಗೋವಿನ ಓ ಮುದ್ದಿನ ಕರು, ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು! ಬನ್ನಿ ಗೂಗಲ್ ನಲ್ಲಿ ರಿಪೋರ್ಟ್ ಮಾಡಿ ಈ ಪ್ರಮಾದವನ್ನು ಸರಿ ಪಡಿಸೋಣ'' ಎಂದು ಬರೆದಿದ್ದಾರೆ.

  English summary
  Sandalwood celebrities Reaction to Google's Ugliest Language in India search query; ask fans to report.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X