twitter
    For Quick Alerts
    ALLOW NOTIFICATIONS  
    For Daily Alerts

    ವರ್ಷಾಂತ್ಯದ ನೆನಪು: 2016ರಲ್ಲಿ ಕಣ್ಮೆರೆಯಾದ ಚಿತ್ರತಾರೆಯರು

    By Bharath Kumar
    |

    ಕನ್ನಡ ಚಿತ್ರರಂಗ ಈ ವರ್ಷ ಯಶಸ್ಸಿನ ಅಲೆಯ ಜೊತೆಗೆ ಕೆಲವು ಗಣ್ಯರನ್ನು ಕೂಡಾ ಕಳೆದುಕೊಳ್ಳಬೇಕಾಯಿತು. ಪ್ರಮುಖ ಕಲಾವಿದರು, ನಿರ್ದೇಶಕರು, ತಂತ್ರಜ್ಞರ ಸಾವಿನ ನೋವು ಚಿತ್ರರಂಗವನ್ನು ಕಾಡಿತು.

    ಜನವರಿ ತಿಂಗಳಿನಲ್ಲಿ 'ಬಿಸಿಲೆ' ಚಿತ್ರದ ನಿರ್ದೇಶಕ ಸಂದೀಪ್ ಗೌಡ, ಹಿರಿಯ ನಿರ್ದೇಶಕ ಗೀತಪ್ರಿಯ, ಮಾರ್ಚ್ ತಿಂಗಳಿನಲ್ಲಿ ಹಾಸ್ಯನಟ ಸಂಕೇತ್ ಕಾಶಿ, ಆಗಸ್ಟ್ ತಿಂಗಳಿನಲ್ಲಿ ನಟಿ ಜ್ಯೋತಿ ಲಕ್ಷ್ಮಿ, ನವೆಂಬರ್ ತಿಂಗಳಿನಲ್ಲಿ ಖಳನಟ ಅನಿಲ್ ಹಾಗೂ ಉದಯ್ ಮತ್ತು ಜಯಲಲಿತಾ ಸೇರಿದಂತೆ ಹಲವರನ್ನ ಚಿತ್ರರಂಗ ಕಳೆದುಕೊಂಡಿತು.[2016ರ ಅತ್ಯುತ್ತಮ ಕನ್ನಡ ನಟ ಯಾರು? ನಿಮ್ಮ ಆಯ್ಕೆ? ]

    ವರ್ಷಾಂತ್ಯದಲ್ಲಿ ನಿಂತು ಹಿಂತಿರುಗಿ ನೋಡಿದಾಗ ಎಂಟು ಹತ್ತು ಮಂದಿ ಕಲಾವಿದರನ್ನ ಚಿತ್ರರಂಗ ದೂರ ಮಾಡಿಕೊಂಡಿದೆ. ಈ ವರ್ಷದಲ್ಲಿ ಚಿತ್ರರಂಗ ಕಂಡ ಸಾವು ನೋವುಗಳ ಕಹಿ ನೆನಪು ನಿಮ್ಮ ಮುಂದಿದೆ.

    'ಸಂದೀಪ್ ಗೌಡ' ಆಕ್ಸಿಡೆಂಟ್

    'ಸಂದೀಪ್ ಗೌಡ' ಆಕ್ಸಿಡೆಂಟ್

    'ಬಿಸಿಲೆ' ಚಿತ್ರದ ಖ್ಯಾತಿಯ ನಿರ್ದೇಶಕ ಸಂದೀಪ್ ಗೌಡ ಜನವರಿ ತಿಂಗಳಲ್ಲಿ ಅಪಘಾತಕ್ಕೀಡಾಗಿ ನಿಧನರಾದರು. ಜನವರಿ 11 ರಂದು ಮುಂಜಾನೆ ಬೆಂಗಳೂರು ವಿವಿ ಆವರಣದಲ್ಲಿ ಚಿತ್ರೀಕರಣಕ್ಕೆಂದು ತೆರೆಳುವಾಗ ಆಯತಪ್ಪಿ ಬಿದ್ದು 38ವರ್ಷದ ಸಂದೀಪ್ ಮೃತಪಟ್ಟಿದ್ದರು. ಸಂದೀಪ್ ಅವರು ದಿಗಂತ್ ಮತ್ತು ಜೆನ್ನಿಫರ್ ಕೊತ್ವಾಲ್ ಅಭಿನಯದ 'ಬಿಸಿಲೆ' ಚಿತ್ರವನ್ನು ನಿರ್ದೇಶನ ಮಾಡಿದ್ದರು. ಚಿತ್ರ ಸಾಹಿತಿಯಾಗಿ, ಸಂಭಾಷಣೆಕಾರರಾಗಿ 10 ವರ್ಷಗಳಿಂದ ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.[2016: ಈ ವರ್ಷದ ಅತ್ಯುತ್ತಮ ನಾಯಕಿ ಯಾರು? ]

    ಸಾಹಿತಿ, ನಿರ್ದೇಶಕ 'ಗೀತಪ್ರಿಯ'

    ಸಾಹಿತಿ, ನಿರ್ದೇಶಕ 'ಗೀತಪ್ರಿಯ'

    ಕನ್ನಡ ಚಿತ್ರೋದ್ಯಮದಲ್ಲಿ ಗೀತಪ್ರಿಯ ಎಂದೇ ಹೆಸರುವಾಸಿಯಾಗಿರುವ ಖ್ಯಾತ ನಿರ್ದೇಶಕ ಲಕ್ಷ್ಮಣ್ ರಾವ್ ಮೊಹಿತೆ (84) ಅವರು, ಅನಾರೋಗ್ಯದಿಂದ ಜನವರಿ 17 ರಂದು ನಿಧನರಾದರು. ಹಿರಿಯ ನಿರ್ದೇಶಕ, ಚಿತ್ರಸಾಹಿತಿ, ಲೇಖಕ ಮತ್ತು ಚಿತ್ರ ಸಂಭಾಷಣೆಕಾರ ಗೀತಪ್ರಿಯ ಕನ್ನಡ, ತುಳು ಮತ್ತು ಹಿಂದಿ ಸೇರಿದಂತೆ 28 ಚಿತ್ರಗಳನ್ನು ನಿರ್ದೇಶಿಸಿದ್ದರು. 1968ರಲ್ಲಿ ಬಿಡುಗಡೆಯಾದ ಡಾ. ರಾಜ್ ಅಭಿನಯದ 'ಮಣ್ಣಿನಮಗ' ಚಿತ್ರದ ಮೂಲಕ ನಿರ್ದೇಶಕರಾದ ಗೀತಪ್ರಿಯ ಅವರು, 'ಬೆಟ್ಟದಹುಲಿ', 'ಒಂದೇ ಬಳ್ಳಿಯ ಹೂವುಗಳು', 'ಹೊಂಬಿಸಲು', 'ಪುಟಾಣಿ ಏಜೆಂಟ್ 123, ''ಭಾಗ್ಯಚಕ್ರ', 'ಬೆಟ್ಟದಹುಲಿ', 'ಬೆಸುಗೆ', 'ಶ್ರಾವಣ ಸಂಭ್ರಮ' ಸೇರಿದಂತೆ ಹಲವು ಚಿತ್ರಗಳನ್ನ ನಿರ್ದೇಶನ ಮಾಡಿದ್ದರು. ಪುಟ್ಟಣ್ಣ ಕಣಗಾಲ್, ರಾಜ್ಯ ಸರಕಾರದ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೀತಪ್ರಿಯ ಪಡೆದಿದ್ದಾರೆ. ಇವರ ಚೊಚ್ಚಲ ನಿರ್ದೇಶನದ 'ಮಣ್ಣಿನಮಗ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿತ್ತು.[2016ರ ಗಾಂಧಿನಗರದ ಗಲಾಟೆ ಗಲ್ಲಿಯಲ್ಲಿ ಒಂದು ಸುತ್ತು ]

    ಮಲಯಾಳಂ ನಟಿ ಕಲ್ಪನಾ

    ಮಲಯಾಳಂ ನಟಿ ಕಲ್ಪನಾ

    ದಕ್ಷಿಣ ಭಾರತದ ಖ್ಯಾತ ನಟಿ ಕಲ್ಪನಾ ಪ್ರಿಯದರ್ಶಿನಿ ಅವರು ಜನವರಿ 25 ರಂದು ಹೃದಯಘಾತದಿಂದ ಹೈದಾರಬಾದ್ ನಲ್ಲಿ ನಿಧನರಾದರು. ಕಲ್ಪನಾ ಅವರು ನಟಿ ಊರ್ವಶಿ ಅವರ ಸಹೋದರಿಯರಾಗಿದ್ದಾರೆ. 1983ರಲ್ಲಿ ಬಾಲಕಲಾವಿದೆಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಕಲ್ಪನಾ ಅವರು, ಮಲಯಾಳಂ, ಕನ್ನಡ, ತೆಲುಗು ಮತ್ತು ತಮಿಳು ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. 1990ರಲ್ಲಿ ತೆರೆಕಂಡಿದ್ದ ನಟ ಕಾಶಿನಾಥ್ ಅವರ 'ಚಪಲ ಚೆನ್ನಿಗರಾಯ' ಚಿತ್ರದಲ್ಲಿ ನಾಯಕನಟಿಯಾಗಿ ಗೃಹಿಣಿ ಪಾತ್ರದಲ್ಲಿ ಕಲ್ಪನಾ ಅಭಿನಯಿಸಿದ್ದರು.[ಈ ವರ್ಷ ಸಪ್ತಪದಿ ತುಳಿದ ಸ್ಯಾಂಡಲ್ ವುಡ್ ತಾರೆಯರು ]

    ಪಂಚಭಾಷಾ ನಟಿ ಜ್ಯೋತಿಲಕ್ಷ್ಮಿ

    ಪಂಚಭಾಷಾ ನಟಿ ಜ್ಯೋತಿಲಕ್ಷ್ಮಿ

    ಪಂಚಭಾಷಾ ನಟಿ ಜ್ಯೋತಿಲಕ್ಷ್ಮಿ ಅನಾರೋಗ್ಯದ ಕಾರಣ ಆಗಸ್ಟ್ 8 ರಂದು ಅವರು ವಿಧಿವಶರಾದರು. 63 ವರ್ಷದ ಜ್ಯೋತಿಲಕ್ಷ್ಮಿ ಅವರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಕನ್ನಡ, ತೆಲುಗು, ಹಿಂದಿ, ತಮಿಳು ಚಿತ್ರಗಳಲ್ಲಿ ನೂರಾರು ಐಟಂ ಹಾಡುಗಳಿಗೆ ಕುಣಿದಿದ್ದರು. ಕನ್ನಡದಲ್ಲಿ 'ಕುಳ್ಳ ಏಜೆಂಟ್ 000', 'ಬೆಂಗಳೂರು ಮೇಲೆ', 'ಪ್ರತಿಧ್ವನಿ', 'ಚೆಲ್ಲಿದ ರಕ್ತ', 'ರಕ್ತ ಕಣ್ಣೀರು', 'ವಿಜಯದಶಮಿ' ಚಿತ್ರಗಳಲ್ಲಿ ಜ್ಯೋತಿಲಕ್ಷ್ಮಿ ನಟಿಸಿದ್ದರು.[2016: ಗೂಗಲ್ ನಲ್ಲಿ ಅತಿ ಹೆಚ್ಚು ಸುದ್ದಿಯಾಗಿದ್ದ ಕನ್ನಡದ ನಟಿ ಯಾರು.? ]

    ಹಾಸ್ಯನಟ ಸಂಕೇತ್ ಕಾಶಿ

    ಹಾಸ್ಯನಟ ಸಂಕೇತ್ ಕಾಶಿ

    ಕನ್ನಡದ ಹಿರಿಯ ನಟ ಸಂಕೇತ್ ಕಾಶಿ ಅನಾರೋಗ್ಯದ ಹಿನ್ನಲೆಯಲ್ಲಿ ಆಗಸ್ಟ್ 6 ರಂದು ನಿಧನ ಹೊಂದಿದ್ದರು. 'ಉಲ್ಟಾಪಲ್ಟಾ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಖ್ಯಾತಿ ಗಳಿಸಿದ ನಟ ಸಂಕೇತ್ ಕಾಶಿ ಅವರು 'ನಮ್ಮೂರ ಮಂದಾರ ಹೂವೇ', 'ಜೋಗಿ', 'ಉಪ್ಪಿದಾದಾ ಎಂಬಿಬಿಎಸ್', 'ಜಂಗ್ಲಿ', 'ಕಿರಾತಕ' ಸೇರಿದಂತೆ ಸುಮಾರು 115ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಹೆಚ್ಚಾಗಿ ಕಾಲೇಜು ಪ್ರಿನ್ಸಿಪಾಲ್ ಹಾಗು ಹಾಸ್ಯ ನಟನ ಪಾತ್ರಗಳಲ್ಲಿ ಮಿಂಚಿದ್ದರು.[ಗೂಗಲ್ ನಲ್ಲಿ ವರ್ಷವಿಡೀ 'ಸೌಂಡ್' ಮಾಡಿದ ನಟ ಯಾರು.? ]

    ಅನಿಲ್ ಮತ್ತು ಉದಯ್

    ಅನಿಲ್ ಮತ್ತು ಉದಯ್

    ನವೆಂಬರ್ 7 ರಂದು 'ಮಾಸ್ತಿಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ದುರಂತದಲ್ಲಿ ಖಳನಟ ಅನಿಲ್ ಹಾಗೂ ಉದಯ್ ಸಾವಿಗೀಡಾದರು. ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಚಾಪರ್ ನಿಂದ ಹಾರಿ ನೀರಿನಲ್ಲಿ ಮುಳಗಿದ್ದರು. 'ಜಯಮ್ಮನ ಮಗ' ಚಿತ್ರದಲ್ಲಿ ಉದಯ್ ಅದ್ಬುತವಾಗಿ ಅಭಿನಯಿಸಿದ್ದರು. ಅದಾದ ನಂತರ 'ರಾಟೇ', 'ಡಾರ್ಲಿಂಗ್', 'ಅಂಬರೀಶ್', 'ಐರಾವತ', 'ವಿಜಯಾಧಿತ್ಯ', 'ಡೇಂಜರ್ ಝೂನ್', 'ದೊಡ್ಮನೆ ಹುಡ್ಗ' ದಂತಹ ಚಿತ್ರಗಳಲ್ಲಿ ಉದಯ್ ತಮ್ಮ ಖದರ್ ತೋರಿಸಿದ್ರು. ಇನ್ನೂ ದುನಿಯಾ ವಿಜಯ್ ಬಹುತೇಕ ಎಲ್ಲಾ ಸಿನಿಮಾಗಳಲ್ಲೂ ಅನಿಲ್ ಕಾಣಿಸಿಕೊಂಡಿದ್ದರು. 'ದುನಿಯಾ, 'ಜಂಗ್ಲಿ', 'ವೀರಬಾಹು', 'ಜಾಕ್ಸನ್', ಹಾಗೂ ಯಶ್ ಅಭಿನಯದ 'ಮಾಸ್ಟರ್ ಪೀಸ್', 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' 'ಸಂತು ಸ್ಟ್ರೈಟ್ ಫಾರ್ವಾರ್ಡ್' ಚಿತ್ರಗಳಲ್ಲೂ ಬಣ್ಣ ಹಚ್ಚಿದ್ದರು.['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ ]

    ರಮೇಶ್ ಅರವಿಂದ್ ಅವರ ಅಪ್ಪ

    ರಮೇಶ್ ಅರವಿಂದ್ ಅವರ ಅಪ್ಪ

    ನಟ, ನಿರ್ದೇಶಕ ರಮೇಶ್ ಅರವಿಂದ್ ಅವರ ತಂದೆ ಪಿ.ಎ.ಗೋವಿಂದಾಚಾರಿ ಕಿಡ್ನಿ ವೈಫಲ್ಯದಿಂದ ನವೆಂಬರ್ 9 ರಂದು (80) ನಿಧನರಾದರು. ಅಂತಿಮ ಸಂಸ್ಕಾರದ ಬದಲು ತಂದೆಯ ಆಶಯದಂತೆ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ತಂದೆಯ ಕಣ್ಣುಗಳು ಹಾಗೂ ದೇಹವನ್ನು ನಟ ರಮೇಶ್ ಅರವಿಂದ್ ದಾನ ಮಾಡಿದರು. ತಂದೆಯವರ ಸಾವಿನಿಂದ ರಮೇಶ್ ಅರವಿಂದ್ ಅವರಿಗೆ ಈ ವರ್ಷ ಪಿತೃವಿಯೋಗ ಎದುರಿಸಬೇಕಾಯಿತು.[ನಟ, ನಿರ್ದೇಶಕ ರಮೇಶ್ ಅರವಿಂದ್ ಅವರಿಗೆ ಪಿತೃವಿಯೋಗ ]

    ಅಶೋಕ್ ಬಾದರದಿನ್ನಿ

    ಅಶೋಕ್ ಬಾದರದಿನ್ನಿ

    ಕನ್ನಡದ ಖ್ಯಾತ ರಂಗಕರ್ಮಿ ಹಾಗೂ ಚಲನಚಿತ್ರ ನಟ ಅಶೋಕ್ ಬಾದರದಿನ್ನಿ ಅನಾರೋಗ್ಯದಿಂದ ನವೆಂಬರ್ 14ರಂದು ವಿಧಿವಶರಾದರು. ಅಶೋಕ್ ಬಾದರದಿನ್ನಿ 200ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದು, ಹಲವು ನಾಟಕ ತರಬೇತಿ ಶಿಬಿರಗಳನ್ನು ಆಯೋಜಿಸಿದ್ದರು. ರವಿಚಂದ್ರನ್ ಅಭಿನಯದ 'ಅಂಜದ ಗಂಡು' ಸಿನಿಮಾದಲ್ಲಿ ನಾಯಕನ ಸ್ನೇಹಿತನ ಪಾತ್ರ ಮಾಡಿದ್ದರು. ಇದಲ್ಲದೆ 'ಮನ ಮೆಚ್ಚಿದ ಹುಡುಗಿ' 'ನವತಾರೆ', 'ಏಕಲವ್ಯ', 'ಆಸ್ಫೋಟ', 'ಧರ್ಮಪತ್ಮಿ', 'ಭೂತಯ್ಯನ ಮಕ್ಕಳು' ಸೇರಿದಂತೆ 80 ಸಿನಿಮಾಗಳಲ್ಲಿ ಅಭಿನಯಿಸಿದ್ದಲ್ಲದೆ, 300 ಕ್ಕೂ ಹೆಚ್ಚು ಧಾರವಾಹಿಗಳಲ್ಲಿ ಅಭಿನಯಿಸಿದ್ದರು.[ಖ್ಯಾತ ರಂಗಕರ್ಮಿ ಅಶೋಕ್ ಬಾದರದಿನ್ನಿ ಇನ್ನಿಲ್ಲ]

    ಚೇತನ್ ರಾಮರಾವ್

    ಚೇತನ್ ರಾಮರಾವ್

    ಕನ್ನಡ ಚಿತ್ರರಂಗದ ಖ್ಯಾತ, ಹಿರಿಯ ನಟ ಚೇತನ್ ರಾಮರಾವ್ ಅನಾರೋಗ್ಯದ ಹಿನ್ನೆಲೆ ಡಿಸೆಂಬರ್ 24ರಂದು ನಿಧನರಾದರು. ಪೋಷಕ ಪಾತ್ರಗಳಿಗೆ ಹೆಚ್ಚು ಹೊಂದಿಕೊಂಡಿದ್ದ ರಾಮರಾವ್ ಅವರು ಸುಮಾರು 350ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದರು. 1968ರಲ್ಲಿ ಡಾ.ರಾಜ್ ಕುಮಾರ್ ಜತೆ 'ಮಾರ್ಗದರ್ಶಿ' ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದ ರಾಮರಾವ್, ಆಪರೇಷನ್ ಡೈಮಂಡ್ ರಾಕೆಟ್', 'ಬಾಳು ಬೆಳಗಿತು', 'ರಾಜ ನನ್ನ ರಾಜ', 'ಲಗ್ನ ಪತ್ರಿಕೆ', 'ಹುಲಿಯ ಹಾಲಿನ ಮೇವು', 'ಒಲವೇ ಗೆಲುವು' 'ಆಪ್ತರಕ್ಷಕ' ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿ ಮೆಚ್ಚುಗೆ ಗಳಿಸಿಕೊಂಡಿದ್ದರು.[ಕನ್ನಡದ ಹಿರಿಯ ನಟ ಚೇತನ್ ರಾಮರಾವ್ ನಿಧನ]

    ನಿಧಿ ಸುಬ್ಬಯ್ಯ ಅವರ ಅಪ್ಪ

    ನಿಧಿ ಸುಬ್ಬಯ್ಯ ಅವರ ಅಪ್ಪ

    ಸ್ಯಾಂಡಲ್ ವುಡ್ ನಟಿ ನಿಧಿ ಸುಬ್ಬಯ್ಯ ಅವರು, ಈ ವರ್ಷ ತಮ್ಮ ತಂದೆ ಬೊಳ್ಳಚಂಡ ಸುಭಾಷ್ ಸುಬ್ಬಯ್ಯ ರವರನ್ನು ಕಳೆದುಕೊಂಡ ನೋವಿನ ಮಡುವಿನಲ್ಲಿ ಮುಳುಗಿದ್ದರು. ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಬೊಳ್ಳಚಂಡ ಸುಭಾಷ್ ಸುಬ್ಬಯ್ಯ ಆಗಸ್ಟ್ 2ರಂದು ನಿಧನರಾಗಿದ್ದರು.[ಪ್ರೀತಿಯ ತಂದೆ ಕಳೆದುಕೊಂಡ ನಟಿ ನಿಧಿ ಸುಬ್ಬಯ್ಯ]

    ಶಿಲ್ಪಾ ಶೆಟ್ಟಿ ಅಪ್ಪ

    ಶಿಲ್ಪಾ ಶೆಟ್ಟಿ ಅಪ್ಪ

    ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ತಂದೆ ಸುರೇಂದ್ರ ಎಸ್. ಶೆಟ್ಟಿ(75) ಅವರು ಅಕ್ಟೋಬರ್ 11ರಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಸುರೇಂದ್ರ ಎಸ್. ಶೆಟ್ಟಿ ದಕ್ಷಿಣ ಕನ್ನಡ ಜಿಲ್ಲೆಯ ಕೌಡೂರಿನವರು.

    ಜಯಲಲಿತಾ ನಿಧನ

    ಜಯಲಲಿತಾ ನಿಧನ

    ಸುಮಾರು 74 ದಿನಗಳಿಂದ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಖ್ಯಾತ ಚಲನಚಿತ್ರ ಜೆ.ಜಯಲಲಿತಾ ಡಿಸೆಂಬರ್ 5 ರಂದು ಹೃದಯ ಸ್ಥಂಭನ ಸಂಭವಿಸಿ ಸಾವನ್ನಪ್ಪಿದ್ದರು. ಜಯಲಲಿತಾ ಅವರು ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಸೇರಿದಂತೆ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು.['ಅಮ್ಮ' ಜಯಲಲಿತಾ, ಕರ್ನಾಟಕ ಮತ್ತು ಕನ್ನಡ ಚಿತ್ರರಂಗ ]

    English summary
    Notable Deaths in 2016: Here is the list of Sandalwood aka Kannada Film Industry celebrities who passed away in 2016. Here are the Obituaries.
    Sunday, December 25, 2016, 11:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X