ವರಮಹಾಲಕ್ಷ್ಮಿ ಹಬ್ಬಕ್ಕೆ ಶುಭಕೋರಿದ ಚಂದನವನದ ತಾರೆಯರು
ಇಂದು ಲಕ್ಷ್ಮೀ ದೇವಿಯನ್ನು ಪೂಜಿಸುವ, ಆರಾಧಿಸುವ ದಿನ. ಅದರಲ್ಲಿಯೂ ವರಮಹಾಲಕ್ಷ್ಮಿ ಹಬ್ಬ ಗೃಹಿಣಿಯರಿಗೆ ತುಂಬಾ ವಿಶೇಷ. ಲಕ್ಷ್ಮಿ ಎಂದರೆ ಹಣ, ಸಂಪತ್ತು, ಐಶ್ವರ್ಯ ಯಾವ ಹೆಸರಿಂದ ಬೇಕಾದರು ಕರೆಯಬಹುದು. ಶ್ರಾವಣ ಮಾಸದಲ್ಲಿ ಭಕ್ತಿಯಿಂದ ಪೂಜೆ ಮಾಡಿ ವ್ರತ ಆಚರಣೆ ಮಾಡಿದರೆ ಲಕ್ಷ್ಮಿಯು ಸಂತೃಪ್ತಳಾಗಿ ಭಕ್ತರ ಬಯಕೆಗಳನ್ನು ಈಡೇರಿಸುತ್ತಾಳೆ ಎಂಬ ನಂಬಿಕೆ.
ಕೊರೊನಾ ಆತಂಕದ ನಡುವೆಯೂ ನಾಡಿನ ಜನತೆ ವರಮಹಾಲಕ್ಷ್ಮಿ ಹಬ್ಬವನ್ನು ಶ್ರದ್ದೆ ಭಕ್ತಿಯಿಂದ ಆಚರಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ಮಂದಿಯೂ ವರಮಹಾಲಕ್ಷ್ಮಿಯನ್ನು ಪೂಜಿಸಿ ಆರಾಧಿಸುತ್ತಿದ್ದಾರೆ. ಅಲ್ಲದೆ ಅಭಿಮಾನಿಗಳಿಗೆ ಮತ್ತು ನಾಡಿನ ಜನತೆಗೆ ಹಬ್ಬದ ಶುಭಾಶಯತಿಳಿಸುತ್ತಿದ್ದಾರೆ. ಸುದೀಪ್, ದರ್ಶನ್ ಸೇರಿದ್ದಂತೆ ಅನೇಕ ಸ್ಟಾರ್ಸ್ ವರಮಹಾಲಕ್ಷ್ಮಿ ಹಬ್ಬಕ್ಕೆ ಶುಭಕೋರಿದ್ದಾರೆ. ಮುಂದೆ ಓದಿ...

ಸುಖ,ಶಾಂತಿ,ನೆಮ್ಮದಿಯನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ- ದರ್ಶನ್
ವರಮಹಾಲಕ್ಷ್ಮಿ ಹಬ್ಬಕ್ಕೆ ನಟ ದರ್ಶನ್ ಶುಭಹಾರೈಸಿದ್ದಾರೆ. "ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ಧಿಕ ಶುಭಾಶಯಗಳು. ಸರ್ವರಿಗೂ ತಾಯಿಯು ಸುಖ, ಶಾಂತಿ, ನೆಮ್ಮದಿಯನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ. ಇನ್ನೂ ಪತ್ನಿ ವಿಜಯಲಕ್ಷ್ಮಿ ಸಹ ವರಮಹಾಲಕ್ಷ್ಮಿ ಹಬ್ಬಕ್ಕೆ ವಿಶ್ ಮಾಡಿದ್ದಾರೆ.

ಎಲ್ಲರ ಜೀವನವನ್ನು ಮೊದಲಿನಂತಾಗಿಸಲಿ- ಸುದೀಪ್
"2020 ಸತ್ವಪರೀಕ್ಷೆಯ ವರ್ಷ. ಸ್ವಲ್ಪ ಖುಷಿ, ಜಾಸ್ತಿ ಕಷ್ಟಗಳನ್ನು ಕಂಡಿದ್ದೇವೆ. ದುಃಖದಲ್ಲಿ ಒಬ್ಬರಿಗೊಬ್ಬರು ಆಸರೆಯಾಗಿ ನಿಂತಿದ್ದೇವೆ. ಇದೇ ಪ್ರೀತಿ, ನಂಬಿಕೆ ಮತ್ತು ಒಗ್ಗಟ್ಟಿನಿಂದ ಈ ವರ್ಷ ಕಳೆಯಬೇಕು ಮತ್ತು ಉಳಿಯಬೇಕು. ಈ ಶುಭದಿನ ಎಲ್ಲರ ಜೀವನವನ್ನು ಮೊದಲಿನಂತಾಗಿಸಲಿ. ಕನ್ನಡಿಗರೆಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು" ಎಂದು ಹೇಳಿದ್ದಾರೆ.

ನಟಿ ರಚಿತಾ ರಾಮ್ ಮತ್ತು ಪುನೀತ್ ರಾಜ್ ಕುಮಾರ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ನಟಿ ರಚಿತಾ ರಾಮ್ ಸಹ ಶುಭಹಾರೈಸಿದ್ದಾರೆ. "ಸಮಸ್ತ ನಾಡಿನ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು" ಎಂದು ರಚಿತಾ ರಾಮ್ ಹೇಳಿದ್ದಾರೆ. ಇನ್ನೂ ಪವರ್ ಸ್ಟಾರ್ "ಎಲ್ಲರಿಗೂ ಶ್ರೀ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು" ಎಂದಿದ್ದಾರೆ.

ನಿರ್ದೇಶಕ ಸಿಂಪಲ್ ಸುನಿ
ನಿರ್ದೇಶಕ ಸಿಂಪಲ್ ಸುನಿ "ಕಳಶ ಪೂಜಿಸಿ, ಸೀರೆ ಉಡಿಸಿ, ಒಡವೆ ತೊಡಿಸಿ ಲಕ್ಷ್ಮಿಯನ್ನು ಅಂದವಾಗಿಸುವ ವರಮಹಾಲಕ್ಷ್ಮಿ ಹಬ್ಬಕ್ಕೆ, ಲಕ್ಷ್ಮಿ ಖುಷಿಯಾಗಿ ನಿಮ್ಮೆಲ್ಲರ ಕಷ್ಟ ನೀಗಿಸಿ ಜಗದ ಕಂಟಕ ಕೊರೊನಾ ತೊಲಗಿಸಿ ಅಷ್ಟ ಐಶ್ವರ್ಯಗಳನ್ನು ದಯಪಾಲಿಸಲಿ. ಸರ್ವರಿಗೂ ವರಲಕ್ಷ್ಮಿಹಬ್ಬದ ಶುಭಾಶಯಗಳು" ಎಂದಿದ್ದಾರೆ.

ವಿಜಯ್ ಕಿರಗಂದೂರ್
ನಿರ್ಮಾಪಕ "ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. ಶ್ರೀಲಕ್ಷ್ಮೀಯು ಎಲ್ಲರ ಬಾಳಲ್ಲಿ ಸುಖ-ಸಮೃದ್ಧಿಯನ್ನು ತರಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಹೇಳಿದ್ದಾರೆ.


Click it and Unblock the Notifications











