'ದುರ್ಯೋಧನ' ದರ್ಶನ್ ಬರ್ತಡೇಗೆ ಶುಭಕೋರಿದ ಸ್ಟಾರ್ ಕಲಾವಿದರು

By Bharath Kumar

Recommended Video

ದರ್ಶನ್ ಬರ್ತ್ ಡೇ ಸ್ಪೆಷಲ್ : ಸ್ಯಾಂಡಲ್ ವುಡ್ ಸ್ಟಾರ್ಸ್ ಶುಭಾಶಯಗಳ ಮಹಾಪೂರ | FIlmibeat Kannada

ಕರುನಾಡ ಕಲಾದೀಪ, ಕರುನಾಡ ಕಲಾಸಾರ್ವಭೌಮ, ಕರುನಾಡ ಕರ್ಣ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇಂದು (ಫೆಬ್ರವರಿ 16) ಹುಟ್ಟುಹಬ್ಬದ ಸಂಭ್ರಮ. ಸ್ಯಾಂಡಲ್ ವುಡ್ ಚಕ್ರವರ್ತಿ ಅಭಿಮಾನಿಗಳು, ಸ್ನೇಹಿತರು, ಸಿನಿಮಾರಂಗದವರು ಹೀಗೆ ಎಲ್ಲರಿಂದಲೂ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.

ಅಭಿಮಾನಿಗಳ ಆರಾಧ್ಯ ದೈವ ದಾಸ ದರ್ಶನ್ ಮನೆ ಮುಂದೆ ಅಭಿಮಾನಿಗಳ ಜನಸಾಗರ ಸೇರಿದ್ದು, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.

ಮತ್ತೊಂದೆಡೆ ಸೋಶಿಯಲ್ ಮೀಡಿಯಾದಲ್ಲಿ ಡಿ-ಬಾಸ್ ಬರ್ತಡೇಯ ಸಂಭ್ರಮ ಹೆಚ್ಚಾಗಿದೆ. ಅದರಲ್ಲೂ ಸ್ಯಾಂಡಲ್ ವುಡ್ ಸಿನಿಮಾ ಮಂದಿ, ನೆಚ್ಚಿನ ನಟನಿಗೆ ಭಿನ್ನ ವಿಭಿನ್ನವಾಗಿ ವಿಶ್ ಮಾಡುತ್ತಿದ್ದಾರೆ. ಹಾಗಿದ್ರೆ, ದುರ್ಯೋಧನ ದರ್ಶನ್ ಜನುಮದಿನಕ್ಕೆ ಯಾವೆಲ್ಲ ಸ್ಟಾರ್ ಗಳು ಶುಭಾ ಕೋರಿದ್ದಾರೆ ಎಂದು ತಿಳಿಯಲು ಮುಂದೆ ಓದಿ......

ಡಾಲಿ ಧನಂಜಯ್

ಡಾಲಿ ಧನಂಜಯ್

ಕನ್ನಡದ ಸ್ಪೆಷಲ್ ಸ್ಟಾರ್ ಧನಂಜಯ್ ದಾಸನಿಗೆ ಬರ್ತಡೇ ವಿಶ್ ಮಾಡಿದ್ದಾರೆ. ಸದ್ಯ, 'ಟಗರು' ಚಿತ್ರದಲ್ಲಿ ಖಳನಾಯಕನಾಗಿ ನಟಿಸಿರುವ ಧನಂಜಯ್, ದರ್ಶನ್ ಅವರ 51ನೇ ಚಿತ್ರದಲ್ಲೂ ವಿಲನ್ ಆಗಿ ಅಭಿನಯಿಸಲಿದ್ದಾರೆ.

ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ

ಚಾಲೆಂಜಿಂಗ್ ಸ್ಟಾರ್ ಅಭಿನಯಿಸಲಿರುವ 51ನೇ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವ ರಶ್ಮಿಕಾ ಮಂದಣ್ಣ ಚಕ್ರವರ್ತಿಗೆ ಶುಭಕೋರಿದ್ದಾರೆ. ಹಾಗೆ, ಅವರ ಜೊತೆ ಅಭಿನಯಿಸಲು ಕಾತುರರಾಗಿದ್ದಾರೆ.

ಪ್ರಜ್ವಲ್ ದೇವರಾಜ್

ಪ್ರಜ್ವಲ್ ದೇವರಾಜ್

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಪಾಲಿಗೆ ದರ್ಶನ್ ಅಣ್ಣ ಇದ್ದ ಹಾಗೆ. ಇದು ಸ್ವತಃ ಪ್ರಜ್ವಲ್ ಹೇಳಿರುವುದು. ತಮ್ಮ ಅಣ್ಣನಿಗೆ ದೇವರಾಜ್ ಪುತ್ರ ವಿಶ್ ಮಾಡಿದ್ದಾರೆ.

ದುರ್ಯೋಧನಿಗೆ ವಿಶ್ ಮಾಡಿದ ಭಾನುಮತಿ

ದುರ್ಯೋಧನಿಗೆ ವಿಶ್ ಮಾಡಿದ ಭಾನುಮತಿ

'ಕುರುಕ್ಷೇತ್ರ' ಚಿತ್ರದ ದುರ್ಯೋಧನ ದರ್ಶನ್ ಗೆ ಜೋಡಿಯಾಗಿ ನಟಿಸುತ್ತಿರುವ ಭಾನುಮತಿ ಮೇಘನಾ ರಾಜ್ ಜನುಮದಿನದ ಶುಭಾಶಯ ತಿಳಿಸಿದ್ದಾರೆ.

ತರುಣ್ ಸುದೀರ್

ತರುಣ್ ಸುದೀರ್

ದರ್ಶನ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಳ್ಳುವ ನಟರಲ್ಲಿ ತರುಣ್ ಸುದೀರ್ ಕೂಡ ಒಬ್ಬರು. ಒಬ್ಬ ಸಹೋದರನಾಗಿ, ಒಬ್ಬ ಅಭಿಮಾನಿಯಾಗಿ ದರ್ಶನ್ ಗೆ ತರುಣ್ ಸುದೀರ್ ವಿಶ್ ಮಾಡಿದ್ದಾರೆ.

ಆಪ್ತ ಸ್ನೇಹಿತ ಆದಿತ್ಯ

ಆಪ್ತ ಸ್ನೇಹಿತ ಆದಿತ್ಯ

ದರ್ಶನ್ ಅವರ ಆಪ್ತ ಸ್ನೇಹಿತ ಆದಿತ್ಯ ಅವರ ಕೂಡ ಚಾಲೆಂಜಿಂಗ್ ಸ್ಟಾರ್ ಗೆ ವಿಶ್ ಮಾಡಿದ್ದಾರೆ.

ಧ್ರುವ ಸರ್ಜಾ

ಧ್ರುವ ಸರ್ಜಾ

ಡಿ-ಬಾಸ್ ದರ್ಶನ್ ಬರ್ತಡೇಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಶುಭಾ ಕೋರಿದ್ದಾರೆ. ದರ್ಶನ್ ಅವರ 51ನೇ ಚಿತ್ರದ ಟೈಟಲ್ ಟೀಸರ್ ಗೆ ಧ್ವನಿ ನೀಡಿರುವ ಧ್ರುವ, ಬಾಸ್ ಗೆ ವಿಭಿನ್ನವಾಗಿ ವಿಶ್ ಮಾಡಿದ್ದಾರೆ.

ಚಿರು ಸರ್ಜಾ

ಚಿರು ಸರ್ಜಾ

ದರ್ಶನ್ ಅವರ ಮತ್ತೋರ್ವ ಸ್ನೇಹಿತ ಚಿರಂಜೀವಿ ಸರ್ಜಾ ಕೂಡ ತನ್ನ ಆತ್ಮೀಯ ಗೆಳೆಯನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಜಗ್ಗೇಶ್ ಹಾರೈಕೆ

ಜಗ್ಗೇಶ್ ಹಾರೈಕೆ

ನವರಸ ನಾಯಕ ಜಗ್ಗೇಶ್ ಅವರು, ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಗೆ ವಿಶ್ ಮಾಡಿ, ಒಳ್ಳೆಯ ನುಡಿಯನ್ನ ವ್ಯಕ್ತಪಡಿಸಿದ್ದಾರೆ.

More from Filmibeat

English summary
Sandalwood celebrities are wish to Challenging Star Darshan for the birthday. kannada actor darshan celebrates his 42nd birthday today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X