ಸಂಚಾರಿ ವಿಜಯ್ ನಿಧನಕ್ಕೆ ಕಣ್ಣೀರು ಹಾಕಿದ ಚಿತ್ರರಂಗ
ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಇನ್ನಿಲ್ಲ ಎಂಬ ಸುದ್ದಿಯನ್ನು ಅಪೋಲೋ ಆಸ್ಪತ್ರೆಯ ವೈದ್ಯರು ಖಚಿತಪಡಿಸಿದ್ದಾರೆ. ಸುಮಾರು 48 ಗಂಟೆಗಳಿಗೂ ಅಧಿಕ ಸಮಯ ಕೋಮಾದಲ್ಲಿದ್ದ ಸಂಚಾರಿ ವಿಜಯ್ ಕೊನೆಗೂ ಬದುಕಿ ಬರಲಿಲ್ಲ. ಬೈಕ್ ಅಪಘಾತದಿಂದ ಮೆದುಳು ಸಂಪೂರ್ಣವಾಗಿ ನಿಷ್ಕ್ರಿಯವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
38 ವರ್ಷದ ಪ್ರತಿಭಾನ್ವಿತ ನಟನನ್ನು ಕಳೆದುಕೊಂಡ ಚಿತ್ರರಂಗ ಕಣ್ಣೀರು ಹಾಕಿದೆ. ಸಿನಿಮಾ ಇಂಡಸ್ಟ್ರಿಯಿಂದ ಬಹಳಷ್ಟು ಜನ ನೋವು ಹಂಚಿಕೊಂಡಿದ್ದಾರೆ. ಸಂಚಾರಿ ವಿಜಯ್ ಸಾವಿಗೆ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ. ಮುಂದೆ ಓದಿ...

ಸಂಚಾರಿ ಇಲ್ಲ ಎಂದು ಒಪ್ಪಿಕೊಳ್ಳುವುದು ಕಷ್ಟ ಆಗ್ತಿದೆ
''ಸಂಚಾರಿ ವಿಜಯ್ ಕೊನೆಯುಸಿರೆಳೆದರು ಎನ್ನುವುದನ್ನು ಒಪ್ಪಿಕೊಳ್ಳಲು ಬಹಳ ಕಷ್ಟವಾಗ್ತಿದೆ. ಲಾಕ್‌ಡೌನ್‌ಗೂ ಮುಂಚೆ ಎರಡ್ಮೂರು ಸಲ ಭೇಟಿ ಮಾಡಿದ್ದೆ. ಎಲ್ಲರೂ ಅವರ ಕೊನೆಯ ಚಿತ್ರದ ಬಗ್ಗೆ ಉತ್ಸುಕರಾಗಿದ್ದರು. ಬಿಡುಗಡೆ ವಿಳಂಬವಾಗಿತ್ತು. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಈ ದುಃಖ ಭರಿಸುವ ಶಕ್ತಿ ಸಿಗಲಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ಅಮೂಲ್ಯ ಸಂತಾಪ ಸೂಚನೆ
''ಅನಿರೀಕ್ಷಿತ ಅಪಘಾತದಿಂದ ಅಗಲಿದ ಪ್ರತಿಭಾವಂತ ನಟ ,ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರು ನಿಧನರಾಗಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ನಟಿ ಅಮೂಲ್ಯ ಸಂತಾಪ ಸೂಚಿಸಿದ್ದಾರೆ.

ಮತ್ತೆ ಹುಟ್ಟಿ ಬಾ ಗೆಳೆಯ
ಸಂಚಾರಿ ವಿಜಯ್ ನಿಧನಕ್ಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದಾರೆ. ''ಮತ್ತೆ ಹುಟ್ಟಿ ಬಾ ಗೆಳೆಯ'' ಎಂದು ಟ್ವೀಟ್ ಮಾಡಿ ಸಂತಾಪ ಹೇಳಿದ್ದಾರೆ.

ರಮೇಶ್ ಬಾಲ ಸಂತಾಪ
ದಕ್ಷಿಣ ಭಾರತದ ಖ್ಯಾತ ವಿಶ್ಲೇಷಕ ರಮೇಶ್ ಬಾಲ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ಪಡೆಯುತ್ತಿರುವ ಫೋಟೋ ಶೇರ್ ಮಾಡಿಕೊಂಡಿರುವ ರಮೇಶ್ ಬಾಲ ವಿಜಯ್ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ಟ್ವೀಟ್ ಮಾಡಿದರು.

ನಿಖಿಲ್ ಕುಮಾರ್ ಸಂತಾಪ
'ಅಪಘಾತವಾಗಿ ಗಾಯಗೊಂಡಿದ್ದ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ, ರಾಷ್ಟ್ರ ಪ್ರಶಸ್ತಿ ವಿಜೇತ, ಸಂಚಾರಿ ವಿಜಯ್ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಅಭಿಮಾನಿಗಳಿಗೆ ಹಾಗೂ ಬಂಧು ಮಿತ್ರರಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ನಿಖಿಲ್ ಕುಮಾರ್ ಸಂತಾಪ ಸೂಚಿಸಿದ್ದಾರೆ.

ಪುನೀತ್ ರಾಜ್ ಕುಮಾರ್ ಸಂತಾಪ
ಪವರ್ ಸ್ಟಾರ್ ಪುನೀತ್ ಪುನೀತ್ ರಾಜ್ ಕುಮಾರ್ ಅವರು ಸಂಚಾರಿ ವಿಜಯ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ರಕ್ಷಿತ್ ಶೆಟ್ಟಿ ಭಾವುಕ
''ನಿಮ್ಮ ಹಠಾತ್ ನಿಧನ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಇದು ಬಹಳ ನಿರಾಸೆ ತಂದಿದೆ. ನಿಮ್ಮ ಕುಟುಂಬಕ್ಕೆ ಮತ್ತು ಸ್ನೇಹಿತರಿಗೆ ಈ ದುಃಖ ಭರಿಸುವ ಶಕ್ತಿ ಸಿಗಲಿ'' ಎಂದು ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

ಉಪೇಂದ್ರ ಭಾವುಕ
''ಅದ್ಭುತ ಕಲಾವಿದ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ರವರು ಬೈಕ್ ಅಪಘಾತದಿಂದ ಅಸುನೀಗಿದ್ದಾರೆ ಎಂಬ ಆಘಾತಕಾರಿ ಸುದ್ದಿಯು ಇಡೀ ಚಿತ್ರರಂಗವನ್ನೇ ಶೋಕದಲ್ಲಿ ಮುಳುಗಿಸಿದೆ. ಅವರ ಕುಟುಂಬದವರಿಗೆ ಈ ನೋವನ್ನು ಬರಿಸುವ ಶಕ್ತಿಯನ್ನು ಭಗವಂತ ನೀಡಲಿ.. ಓಂ ಶಾಂತಿ '' ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ.

ಒಬ್ಬ ಅದ್ಭುತ ಕಲಾವಿದ
''ಸಂಚಾರಿ ವಿಜಯ್ ಸರ್ ನಿಧನರಾದ ವಿಷಯ ತಿಳಿದು ತುಂಬಾ ಬೆಸರಗೊಂಡಿದ್ದೇನೆ! ಒಬ್ಬ ಅದ್ಭುತ ಕಲಾವಿದ ಹಾಗೂ ಸ್ನೇಹಜೀವಿ'' ಎಂದು ಶರಣ್ ಸಂತಾಪ ಸೂಚಿಸಿದ್ದಾರೆ.

ಸಂಸದೆ ಸುಮಲತಾ ಸಂತಾಪ
''ನಟ ಸಂಚಾರಿ ವಿಜಯ್ ಅಸುನೀಗಿದ ಸುದ್ದಿ ನಿಜಕ್ಕೂ ನಂಬಲಾಗದು. ಚಿಕ್ಕ ವಯಸ್ಸಿನಲ್ಲೇ ತಮ್ಮ ನಟನೆಗೆ ರಾಷ್ಟ್ರ ಪ್ರಶಸ್ತಿ ಗಳಿಸಿ ಇಡೀ ಕನ್ನಡ ಚಿತ್ರರಂಗಕ್ಕೆ ಗೌರವ ತಂದಕೊಟ್ಟರು. ಈ ಆಘಾತ ಅವರ ಕುಟುಂಬ ಹಾಗೂ ಪ್ರೀತಿ ಪಾತ್ರರಿಗೆ ಭರಿಸುವ ಶಕ್ತಿ ನೀಡಲಿ. ಅವರ ಸಾಧನೆ ಎಂದೆಂದೂ ಅಮರ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ'' ಎಂದು ಸುಮಲತಾ ಸಂತಾಪ ಸೂಚಿಸಿದ್ದಾರೆ.
Recommended Video

ಅದ್ಭುತ ನಟ ಮತ್ತು ವ್ಯಕ್ತಿ
'ನನಗೆ ತಿಳಿದಂತೆ ಒಬ್ಬ ಅದ್ಭುತ ನಟ ಮತ್ತು ವ್ಯಕ್ತಿ, ಸುದ್ದಿ ಕೇಳಿ ನಿಜಕ್ಕೂ ನೋವಾಯಿತು. ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ಕೊಡಲಿ' ಎಂದು ಶಿವರಾಜ್ ಕುಮಾರ್ ಸಂತಾಪ ಸೂಚಿಸಿದರು.


Click it and Unblock the Notifications











