ವಿಷ್ಣುದಾದಾ ಹುಟ್ಟುಹಬ್ಬಕ್ಕೆ ಸಿಎಂ ಸೇರಿ ಸ್ಯಾಂಡಲ್‌ವುಡ್ ಸ್ಟಾರ್ಸ್ ಶುಭಾಶಯ
ಸಾಹಸ ಸಿಂಹ, ಅಭಿನಯ ಭಾರ್ಗವ ದಿವಂಗತ ನಟ ಡಾ ವಿಷ್ಣುವರ್ಧನ್ ಅವರ 70ನೇ ವರ್ಷದ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಕೇವಲ ಅಭಿಮಾನಿಗಳು ಮಾತ್ರವಲ್ಲ, ಸಿನಿ ಇಂಡಸ್ಟ್ರಿ ಸ್ಟಾರ್ ಕಲಾವಿದರು, ಸಿಎಂ ಯಡಿಯೂರಪ್ಪ ಸಹ 'ಹೃದಯವಂತ'ನನ್ನು ಸ್ಮರಿಸಿಕೊಂಡಿದ್ದಾರೆ.
ವಿಷ್ಣುದಾದಾರ ಹುಟ್ಟುಹಬ್ಬದ ಪ್ರಯುಕ್ತ ಕಿಚ್ಚ ಸುದೀಪ್ ಕಾಮನ್ ಡಿಪಿ ಸಹ ಬಿಡುಗಡೆ ಮಾಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್, ಜಗ್ಗೇಶ್, ಧನಂಜಯ್, ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ಸಿಂಪಲ್ ಸುನಿ, ಸಂತೋಷ್ ಆನಂದ್ ರಾಮ್ ಸೇರಿದಂತೆ ಹಲವು ಕಲಾವಿದರು ಕೋಟಿಗೊಬ್ಬನನ್ನು ಸ್ಮರಿಸಿದ್ದಾರೆ. ಮುಂದೆ ಓದಿ...

ಚಿತ್ರರಂಗ ಕಂಡ ಮೇರು ನಟ
'ಕನ್ನಡ ಚಿತ್ರರಂಗ ಕಂಡ ಮೇರು ನಟರಲ್ಲೊಬ್ಬರಾದ ಡಾ. ವಿಷ್ಣುವರ್ಧನ್ ಅವರ ಜನ್ಮದಿನವಾದ ಇಂದು ಅವರನ್ನು ವಿಶೇಷವಾಗಿ ಸ್ಮರಿಸೋಣ. ತಮ್ಮ ಕಲಾವಂತಿಕೆ ಮತ್ತು ವ್ಯಕ್ತಿತ್ವಗಳಿಂದ ಡಾ.ವಿಷ್ಣುವರ್ಧನ್ ಜನಮಾನಸದಲ್ಲಿ ಶಾಶ್ವತ ಸ್ಥಾನವನ್ನು ಪಡೆದುಕೊಂಡಿದ್ದಾರೆ'' ಎಂದು ಸಿಎಂ ಯಡಿಯೂರಪ್ಪ ಸಿಎಂ ಕಚೇರಿಯ ಟ್ವಿಟ್ಟರ್ ಖಾತೆಯಲ್ಲಿ ಶುಭಕೋರಿದ್ದಾರೆ.

ಎಂದಿಗೂ ಅವರ ಅಭಿಮಾನಿ
''ಅವರನ್ನು ಭೇಟಿ ಮಾಡಲು ಸಮಯದ ಆಶೀರ್ವಾದವಿತ್ತು. ಅವರೊಂದಿಗೆ ಕೆಲಸ ಮಾಡಲು ಸಿನಿಮಾದ ಆಶೀರ್ವಾದವಿತ್ತು. ಎಲ್ಲಕ್ಕಿಂತ ದೊಡ್ಡ ಆಶೀರ್ವಾದ ಅವರು ನನ್ನನ್ನು ನನ್ನ ಹೆಸರಿಂದ ಗುರುತಿಸುತ್ತಿದ್ದರು. ನನ್ನ IDOನ CDP ಬಿಡುಗಡೆ ನನಗೆ ಸಿಕ್ಕ ಭಾಗ್ಯ. ಎಂದಿಗೂ ಅವರ ಅಭಿಮಾನಿ'' ಎಂದು ಸುದೀಪ್ ವಿಶ್ ಮಾಡಿದ್ದಾರೆ.

ಕನ್ನಡ ಚಿತ್ರರಂಗದ ದಂತಕಥೆ
''ಕರುನಾಡಿಗೆ ಕೀರ್ತಿಯಾಗಿ, ನನ್ನ ಬಾಲ್ಯದ ಸ್ಫೂರ್ತಿಯಾಗಿ, ಸಿನಿ ಪ್ರೇಮಿಗಳಿಗೆ ಅವಿಸ್ಮರಣೀಯ ಚಿತ್ರಗಳನ್ನು ನೀಡಿದ ಕನ್ನಡ ಚಿತ್ರರಂಗದ ದಂತಕಥೆ ಶ್ರೀ ವಿಷ್ಣು ದಾದಾ ಹುಟ್ಟಿದ ಈ ಶುಭದಿನದ ಸವಿನೆನಪಿನಲ್ಲಿ ಶುಭಾಶಯಗಳನ್ನು ಕೋರುತ್ತಾ'' ಎಂದು ಗೋಲ್ಡನ್ ಸ್ಟಾರ್ ಗಣೇಶ್ ಶುಭಕೋರಿದ್ದಾರೆ.

ಪುನೀತ್ ರಾಜ್ ಕುಮಾರ್
ಡಾ ವಿಷ್ಣುವರ್ಧನ್ ಅವರ ಜೊತೆಗಿನ ಬಾಲ್ಯದ ಫೋಟೋ ಹಂಚಿಕೊಂಡಿರುವ ಪುನೀತ್ ರಾಜ್ ಕುಮಾರ್, ''70ನೇ ವರ್ಷದ ಹುಟ್ಟುಹಬ್ಬದಲ್ಲಿ ವಿಷ್ಣುವರ್ಧನ್ ಅವರನ್ನು ಸ್ಮರಿಸೋಣ'' ಎಂದು ಬರೆದುಕೊಂಡಿದ್ದಾರೆ.

ಇದ್ದರು ಗೆದ್ದರು, ಸಂತೋಷ ಹಂಚಿದರು
ಇದ್ದರು ಗೆದ್ದರು ಸಂತೋಷ ಹಂಚಿದರು ನೆನಪಲ್ಲಿ ಉಳಿದು ಹೋದರು... ಎಲ್ಲರಿಗು ಸಾವುಂಟು ಮರೆವುಂಟು ಸಾವಿನ ನಂತರ ಮರೆಯಲಾಗದ ನಿತ್ಯನು ಒಬ್ಬನೆ ಕಲೆಗಾರ...!! ಹುಟ್ಟುಹಬ್ಬದ ಶುಭಾಶಯಗಳು ಕನ್ನಡದ ಮರೆಯದ ಮಾಣಿಕ್ಯನಿಗೆ..

ನಿಮ್ಮ ಘರ್ಜನೆ ಎಂದೆಂದಿಗೂ ಅಜರಾಮರ
''ಕನ್ನಡ ಚಿತ್ರರಂಗದ ಸಾಹಸಸಿಂಹ.. ನಿಮ್ಮ ಘರ್ಜನೆ ಎಂದೆಂದಿಗೂ ಅಜರಾಮರ' ಎಂದು ನಿರ್ದೇಶಕ ಸಿಂಪಲ್ ಸುನಿ ಶುಭಾಶಯ ತಿಳಿಸಿದ್ದಾರೆ.

ನಮ್ಮಲ್ಲಿ ಎಂದಿಗೂ ನೀವು ಶಾಶ್ವತ
ಸಾಹಸ ಸಿಂಹನ 70ನೇ ವರ್ಷದ ಜನುಮದಿನಕ್ಕೆ ಶುಭಕೋರಿರುವ ಧನಂಜಯ್ ''ನಮ್ಮಲ್ಲಿ ಎಂದಿಗೂ ನೀವು ಶಾಶ್ವತ'' ಎಂದು ಸ್ಮರಿಸಿಕೊಂಡಿದ್ದಾರೆ.

ರಕ್ಷಿತ್ ಶೆಟ್ಟಿ
''ಕನ್ನಡ ಚಲನಚಿತ್ರೋದ್ಯಮವು ನೀವೊಬ್ಬ ಶ್ರೇಷ್ಠ ಕಲಾವಿದರಾಗಿ ಸದಾ ಯಾವಾಗಲೂ ಉಳಿಯುತ್ತೀರಿ. ನಿಮ್ಮ ವರ್ಚಸ್ಸು ನಮ್ಮ ಹೃದಯದಲ್ಲಿ ಸದಾ ಮುಂದುವರಿಯಲಿ ವಿಷ್ಣುವರ್ಧನ್ ಸರ್. ಭಿನಯ ಭಾರ್ಗವ, ಸಾಹಸಸಿಂಹ, ಪ್ರೀತಿಯ ವಿಷ್ಣುದಾದರವರಿಗೆ ಹುಟ್ಟು ಹಬ್ಬದ ಶುಭಾಶಯಗಳು'' ಎಂದು ರಕ್ಷಿತ್ ಶೆಟ್ಟಿ ವಿಶ್ ಮಾಡಿದ್ದಾರೆ.

ಸಂತೋಷ್ ಆನಂದ್ ರಾಮ್
"ಸಾಹಸ ನಿಮ್ಮ ಬದುಕು-ಅಭಿನಯ ನಿಮ್ಮ ಉಸಿರು-ಅಭಿಮಾನಿಗಳು ನಿಮ್ಮ ಕುಟುಂಬ-ಸಮಾಜ ನಿಮ್ಮ ಮನೆ-ಕನ್ನಡ ನಿಮ್ಮ ತಾಯಿ--ಸಾಧನೆ ನಿಮ್ಮ ಹೆಜ್ಜೆ-ಶಾಶ್ವತ ನಿಮ್ಮ ನೆನಪು-ಸ್ಮರಣೆ ನಿಮ್ಮ ಸ್ಮಾರಕ" ನೀವು ಹುಟ್ಟುವಾಗ ಒಬ್ಬ, ಬಿಟ್ಟು ಹೋಗವುವಾಗ ಕೋಟಿಗೊಬ್ಬ" ಮತ್ತೆ ಹುಟ್ಟಿ ಬನ್ನಿ ಭುವನೇಶ್ವರಿಯ ಮಗನಾಗಿ, ನಮ್ಮೆಲ್ಲರ ಅಣ್ಣನಾಗಿ'' ಎಂದು ವಿಶ್ ಮಾಡಿದ್ದಾರೆ.
Recommended Video

ಡಾ ಶಿವರಾಜ್ ಕುಮಾರ್
ಕನ್ನಡದ ಚಿತ್ರರಂಗದ ಲೆಜೆಂಡ್ ವಿಷ್ಣುವರ್ಧನ್ ಅವರ ಹುಟ್ಟುಹಬ್ಬಕ್ಕೆ ಶಿವರಾಜ್ ಕುಮಾರ್ ಸಹ ಶುಭಾಶಯ ಕೋರಿದ್ದಾರೆ. ವಿಷ್ಣು ಜೊತೆಗಿನ ತಮ್ಮ ಹಳೆಯ ಫೋಟೋ ಹಂಚಿಕೊಂಡು ದಾದಾ ಅವರನ್ನು ಸ್ಮರಿಸಿದ್ದಾರೆ.


Click it and Unblock the Notifications











