ಹ್ಯಾಪಿ ಬರ್ತಡೇ ಶಿವಣ್ಣ: ಹ್ಯಾಟ್ರಿಕ್ ಹೀರೋಗೆ ವಿಶ್ ಮಾಡಿದ ಸಿನಿ ಗಣ್ಯರು

ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರಿಗೆ ಇಂದು 'ಜುಲೈ 12' 59ನೇ ವರ್ಷದ ಹುಟ್ಟುಹಬ್ಬ. ಪ್ರತಿವರ್ಷ ಶಿವಣ್ಣ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು. ತಿಂಗಳ ಮುಂಚೆಯೇ ಅಭಿಮಾನಿಗಳು ಸಂಭ್ರಮಕ್ಕೆ ಸಜ್ಜಾಗುತ್ತಿದ್ದರು. ಮನೆಯ ಮುಂದೆ ಅಭಿಮಾನಿಗಳ ದಂಡೇ ಸೇರಿರುತ್ತಿತ್ತು. ಆದರೆ ಕೊರೊನಾ ಹಾವಳಿಯಿಂದ ಕಳೆದ ವರ್ಷದಿಂದ ಅದ್ದೂರಿ ಹುಟ್ಟುಹಬ್ಬಕ್ಕೆ ಬ್ರೇಕ್ ಬಿದ್ದಿದೆ.

ಇಂದು ಶಿವಣ್ಣ ಕುಟುಂಬದ ಜೊತೆ ತುಂಬಾ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ರಾತ್ರಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಸಂಭ್ರಮಿಸಿದ್ದಾರೆ. ಕೇಕ್ ಕತ್ತರಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹುಟ್ಟುಹಬ್ಬ ಆಚರಣೆ ಇಲ್ಲದಿದ್ದರೂ ಅಭಿಮಾನಿಗಳು ಮತ್ತು ಗಣ್ಯರ ಪ್ರೀತಿಯ ಶುಭಾಶಯಗಳು ಹರಿದುಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವಿಶ್ ಮೂಲಕ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಇನ್ನು ಚಿತ್ರರಂಗದ ಗಣ್ಯರಾದ ಸುದೀಪ್, ರಕ್ಷಿತ್ ಶೆಟ್ಟಿ, ಸಿಂಪಲ್ ಸುನಿ, ಧನಂಜಯ್ ಸೇರಿದಂತೆ ಅನೇಕರು ಪ್ರೀತಿಯ ವಿಶ್ ಕಳುಹಿಸಿದ್ದಾರೆ. ಯಾರ್ಯಾರ ವಿಶ್ ಹೇಗಿದೆ ನೀವೆ ನೋಡಿ...

ಕಿಚ್ಚ ಸುದೀಪ್

ಕಿಚ್ಚ ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಟ್ವೀಟ್ ಮಾಡಿ, "ಯಾವಾಗಲು ಸಂತೋಷ ಮತ್ತು ಆರೋಗ್ಯದಿಂದ ಇರಿ ಎಂದು ಬಯಸುತ್ತೇನೆ. ಅದ್ಭುತ ವರ್ಷ ನಿಮ್ಮದಲ್ಲಾಗಿ ಅಣ್ಣ. ಹುಟ್ಟುಹಬ್ಬದ ಶುಭಾಶಯಗಳು" ಎಂದು ವಿಶ್ ಮಾಡಿದ್ದಾರೆ.

ನಿರ್ದೇಶಕ ಸಿಂಪಲ್ ಸುನಿ

ನಿರ್ದೇಶಕ ಸಿಂಪಲ್ ಸುನಿ

ಸದ 'ಆನಂದ'ವಾಗಿ ಕಾಣಸಿಗುವ Energyಗೆ ಸಮನಾರ್ಥಕ ಪದದಂತಿರುವ. ಮುತ್ತಣ್ಣ, ಓಂ ಸತ್ಯ, ಜೋಗಿ. ಅಣ್ಣತಂಗಿ, ಮಾದೇಶ, ಭಜರಂಗಿ ಹೀಗೆ ವಿವಿಧ ವೇಷಭೂಷ ತೊಟ್ಟು 125 ಚಿತ್ರಗಳಿದ್ದರೂ ಇನ್ನೂ ಚಿರಯುವಕರಂತೆ ಮಿನುಗುವ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು" ಎಂದ ತನ್ನದೆ ಶೈಲಿಯಲ್ಲಿ ವಿಭಿನ್ನವಾಗಿ ನಿರ್ದೇಶಕ ಸಿಂಪಲ್ ಸುನಿ ಶುಭಾಶಯ ತಿಳಿದ್ದಾರೆ.

ನಟ ಧನಂಜಯ್

ನಟ ಧನಂಜಯ್

ನಟ ಧನಂಜಯ್ ಮತ್ತು ಶಿವಣ್ಣ ಜೋಡಿ ಟಗರು ಸಿನಿಮಾದ ಬಳಿಕ ಹಿಟ್ ಆಯಿತು. ಈ ಸಿನಿಮಾ ನಂತರ ಇಬ್ಬರ ಸ್ನೇಹ ಕೂಡ ಹೆಚ್ಚಾಯಿತು. ಶಿವಣ್ಣರನ್ನು ಅಣ್ಣನಂತೆ ಪ್ರೀತಿಸುವ ಧನಂಜಯ್ ಪ್ರೀತಿಯ ಅಣ್ಣನಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ. ವಿಡಿಯೋ ಹಂಚಿಕೊಳ್ಳುವ ಮೂಲಕ, "ಪ್ರೀತಿಯ ಅಣ್ಣನಿಗೆ ಹುಟ್ಟು ಹಬ್ಬದ ಶುಭಾಶಯ Love you foreve" ಎಂದು ಬರೆದುಕೊಂಡಿದ್ದಾರೆ.

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

"ಬಹುಮುಖ ಪ್ರತಿಭೆ ಅದ್ಭುತ ವ್ಯಕ್ತಿ. ನಿಮಗೆ ಜನ್ಮದಿನದ ಶುಭಾಶಯಗಳು ಶಿವಣ್ಣ. ಆರೋಗ್ಯ ಮತ್ತು ಸಂತೋಷದಿಂದ ಇರಿ" ಎಂದ ರಕ್ಷಿತ್ ಶೆಟ್ಟಿ ಟ್ವೀಟ್ ಮಡಿದ್ದಾರೆ.

ನಟ, ನಿರ್ದೇಶಕ ರಘುರಾಮ್

ನಟ, ನಿರ್ದೇಶಕ ರಘುರಾಮ್

"ಅಪ್ಪಾಜಿ ಅಮ್ಮನಿಗೆ 9 ವರ್ಷದ ಪೂಜಾ ಫಲ. ರಾಜ ವಂಶದ ಕೀರ್ತಿ, ಸಾವಿರಾರು ಜನಕ್ಕೆ ಸ್ಪೂರ್ತಿ, ಯಾರಿಂದ ಏನನ್ನು ಅಪೇಕ್ಷಿಸದ ನಿಸ್ವಾರ್ಥಿ. ನೀವು ಕರ್ನಾಟಕ ಹಾಗು ಅಭಿಮಾನಿಗಳ ಆಸ್ತಿ ,ಹ್ಯಾಪಿ ಬರ್ತ್ಡೇ ಟು ನಮ್ಮ ಕರುನಾಡ ಚಕ್ರವರ್ತಿ" ಎಂದು ರಘುರಾಮ್ ವಿಶ್ ಮಾಡಿದ್ದಾರೆ.

Recommended Video

ಕೊರೋನ ಕಾರಣದಿಂದ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ ಶಿವಣ್ಣ! | Filmibeat Kannada
ನಟ ರಮೇಶ್ ಅರವಿಂದ್

ನಟ ರಮೇಶ್ ಅರವಿಂದ್

ನಟ ರಮೇಶ್ ಆರವಿಂದ್ ಸುಂದರ ಫೋಟೋ ಮೂಲಕ ಹ್ಯಾಟ್ರಿಕ್ ಹೀರೋಗೆ ವಿಶ್ ಮಾಡಿದ್ದಾರೆ. ನಮ್ಮೂರ ಮಂದಾರ ಹೂವೆ ಸಿನಿಮಾದ ಫೋಟೋವನ್ನು ರಮೇಶ್ ಅರವಿಂದ್ ಹಂಚಿಕೊಂಡಿದ್ದಾರೆ. ನಟಿ ಪ್ರೇಮ, ಶಿವರಾಜ್ ಕುಮಾರ್ ಸೇರಿದಂತೆ ಇಡೀ ತಂಡ ಜೊತೆಗಿರುವ ಫೋಟೋವನ್ನು ಶೇರ್ ಮಾಡಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. "ನಮ್ಮೂರ ಮಂದಾರ ಹೂವೆ ಸಿನಿಮಾದಿಂದ ಇಲ್ಲಿಯ ವರೆಗೂ ಒಂದು ಸುದೀರ್ಘ ಪಯಣ ನಮ್ಮದು" ಎಂದು ಬರೆದುಕೊಂಡಿದ್ದಾರೆ.

More from Filmibeat

English summary
Sandalwood Celebs Wish Actor Shiva Rajkumar on his 59th Birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X