For Quick Alerts
  ALLOW NOTIFICATIONS  
  For Daily Alerts

  ಕಿಚ್ಚ ಸುದೀಪ್ ಗೆ ಟ್ವಿಟ್ಟರ್ ನಲ್ಲಿ ಹರಿದುಬಂದ ಶುಭಾಶಯಗಳ ಮಹಾಪೂರ

  By Harshitha
  |

  'ಅಭಿನಯ ಚಕ್ರವರ್ತಿ', 'ನಲ್ಲ', 'ಕಿಚ್ಚ'ನ ಅಭಿಮಾನಿಗಳಿಗೆ ಇಂದು ಸಂಭ್ರಮದ ಹಬ್ಬ. ಯಾಕಂದ್ರೆ, ಇವತ್ತು ಸುದೀಪ್ ಹುಟ್ಟುಹಬ್ಬ. ನೆಚ್ಚಿನ ನಟನ ಜನ್ಮದಿನವನ್ನ ಅಭಿಮಾನಿಗಳು 'ಕಿಚ್ಚೋತ್ಸವ' ಹೆಸರಿನಲ್ಲಿ ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ.

  ಕಿಚ್ಚ ಸುದೀಪ್ ಗೆ ಶುಭ ಕೋರಲು ನಿನ್ನೆ ಮಧ್ಯರಾತ್ರಿಯಿಂದಲೂ ಅವರ ಮನೆ ಮುಂದೆ ಅಭಿಮಾನಿಗಳು ಮುಗಿಬೀಳ್ತಿದ್ದಾರೆ. ಈಗಲೂ ಕೂಡ ಸಾಕಷ್ಟು ಅಭಿಮಾನಿಗಳು ಜೆ.ಪಿ.ನಗರದಲ್ಲಿ ಇರುವ ಸುದೀಪ್ ಮನೆ ಮುಂದೆ ಜಮಾಯಿಸಿದ್ದಾರೆ.

  ಹುಟ್ಟುಹಬ್ಬದಂದು ಸುದೀಪ್ ಗೆ ವಿಶ್ ಮಾಡಲು, ರಾಜ್ಯದ ಮೂಲೆ ಮೂಲೆಯಿಂದಲೂ ಅಭಿಮಾನಿಗಳು ಆಗಮಿಸಿದ್ದಾರೆ. ಇನ್ನೂ ಸ್ಯಾಂಡಲ್ ವುಡ್ ನ ತಾರೆಯರು ಕೂಡ ಸುದೀಪ್ ಗೆ ಶುಭಾಶಯ ಕೋರುವಲ್ಲಿ ಹಿಂದೆ ಬಿದ್ದಿಲ್ಲ. ಟ್ವಿಟ್ಟರ್ ನಲ್ಲಂತೂ ಸುದೀಪ್ ಗೆ ಶುಭಾಶಯಗಳ ಮಹಾಪೂರವೇ ಹರಿದುಬರ್ತಿದೆ. ಬೇಕಾದ್ರೆ, ನೀವೇ ನೋಡಿ...

  ಶುಭಾಶಯ ಕೋರಿದ ಉಪೇಂದ್ರ

  ''ನನ್ನ ನಲ್ಮೆಯ ಕಿಚ್ಚ ಸುದೀಪ್ ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಆ ದೇವರು ನಿಮಗೆ ಆರೋಗ್ಯ, ಯಶಸ್ಸು, ಸಂತಸ ಕೊಡಲಿ ಎಂದು ಪ್ರಾರ್ಥಿಸುವೆ. ಎಂದೆಂದೂ ಬೆಳಗುತಿರಲಿ ಈ ಸು..ದೀಪ'' ಎಂದು ಉಪೇಂದ್ರ ಶುಭಾಶಯ ಕೋರಿದ್ದಾರೆ.

  ಹುಟ್ಟುಹಬ್ಬದ ಸಂಭ್ರಮದಲ್ಲಿ ಸುದೀಪ್: ಕಿಚ್ಚನ ಮನೆ ಮುಂದೆ ಜನಸಾಗರಹುಟ್ಟುಹಬ್ಬದ ಸಂಭ್ರಮದಲ್ಲಿ ಸುದೀಪ್: ಕಿಚ್ಚನ ಮನೆ ಮುಂದೆ ಜನಸಾಗರ

  ಹೆಮ್ಮೆ ಪಡುವ ವ್ಯಕ್ತಿ

  ''ಬಹುಮುಖ ಸೃಜನಶೀಲ ಪ್ರತಿಭೆ, ಅದ್ಭುತ ಮಾನವ, ಉತ್ತಮ ಸ್ನೇಹಿತನಾಗಿ ಬೆಳೆದಿರುವ ಕಿಚ್ಚ ಸುದೀಪ್ ಕಂಡ್ರೆ ನಾವು ಹೆಮ್ಮೆ ಪಡುತ್ತೇವೆ. ನಿಮ್ಮ ಹೃದಯದ ಬಯಕೆಯೆಲ್ಲಾ ಈಡೇರಲಿ ಎಂದು ನಾನು, ಅಂಬಿ ಹಾಗೂ ಅಭಿ ಹಾರೈಸುತ್ತೇವೆ'' ಎಂದು ಸುಮಲತಾ ಅಂಬರೀಶ್ ಟ್ವೀಟ್ ಮಾಡಿದ್ದಾರೆ.

  ಬರ್ತಡೆ ಬಾಯ್ ಕಿಚ್ಚ ಸುದೀಪ್ ಗೆ ಹೊಸ ಬಿರುದುಬರ್ತಡೆ ಬಾಯ್ ಕಿಚ್ಚ ಸುದೀಪ್ ಗೆ ಹೊಸ ಬಿರುದು

  ಸುದೀಪ್ ಗೆ ವಿಶ್ ಮಾಡಿದ ರಮೇಶ್

  ಕಿಚ್ಚ ಸುದೀಪ್ ಗೆ ನಟ ರಮೇಶ್ ಅರವಿಂದ್ ಶುಭಾಶಯ ತಿಳಿಸಿರುವುದು ಹೀಗೆ...

  ಅಂದು ಬೇಡವೆಂದಿದ್ದ ಹುಟ್ಟುಹಬ್ಬವನ್ನ ಮತ್ತೆ ಆಚರಿಸಲು ಸುದೀಪ್ ನಿರ್ಧಾರ: ಕಾರಣ ಇಲ್ಲಿದೆಅಂದು ಬೇಡವೆಂದಿದ್ದ ಹುಟ್ಟುಹಬ್ಬವನ್ನ ಮತ್ತೆ ಆಚರಿಸಲು ಸುದೀಪ್ ನಿರ್ಧಾರ: ಕಾರಣ ಇಲ್ಲಿದೆ

  ಜಗ್ಗೇಶ್ ಶುಭ ಹಾರೈಕೆ

  ''ನಲ್ಮೆಯ ಸಹೋದರ ಸುದೀಪ್ ಗೆ ಹುಟ್ಟುಹಬ್ಬದ ಶುಭಾಶಯಗಳು. ನೂರ್ಕಾಲ ಸುಖವಾಗಿ ಬಾಳಿ.. 'ದಿ ವಿಲನ್' ಚಿತ್ರ ಈ ವರ್ಷ ಕನ್ನಡಿಗರ ಪ್ರೀತಿಗೆ ಪಾತ್ರವಾಗಿ ಯಶಸ್ಸಿನ ಸಾಲು ಸೇರಲಿ.. ಶುಭ ಹಾರೈಕೆ'' ಎಂದು ಟ್ವೀಟಿಸಿದ್ದಾರೆ ನಟ ಜಗ್ಗೇಶ್.

  ಜೈ ಹೋ ಸುದೀಪ್

  ''ಜನಪ್ರಿಯ, ಸ್ನೇಹಜೀವಿ, ಕರ್ನಾಟಕದ ಹೆಮ್ಮೆ, ವಿಶ್ವದ ಮೂಲೆ ಮೂಲೆಯಲ್ಲೂ ತಮ್ಮ ಪ್ರತಿಭೆಯನ್ನ ಹೊರ ಹಾಕುತ್ತಿರುವ ಕಿಚ್ಚ ಸುದೀಪ್ ಗೆ ಜೈ ಹೋ.. ಕಿಚ್ಚ ಸುದೀಪ್ ವಿ ಲವ್ ಯು..'' ಎಂದು ಪವನ್ ಒಡೆಯರ್ ಟ್ವೀಟ್ ಮಾಡಿದ್ದಾರೆ.

  ಸಂತೋಷ್ ಆನಂದ್ ರಾಮ್ ಶುಭಾಶಯ

  ''ಕನ್ನಡದ ಕಿಚ್ಚನ್ನ ಎಲ್ಲ ವುಡ್ ಗಳಲ್ಲೂ ಹಚ್ಚಿದ ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿಗೆ ಹುಟ್ಟುಹಬ್ಬದ ಶುಭಾಶಯಗಳು'' - ನಿರ್ದೇಶಕ ಸಂತೋಷ್ ಆನಂದ್ ರಾಮ್.

  ವಿಶ್ ಮಾಡಿದ ಶ್ರೀಮುರಳಿ

  ''ನನ್ನ ಸ್ನೇಹಿತ ಸುದೀಪ್ ಗೆ ಹುಟ್ಟುಹಬ್ಬದ ಶುಭಾಶಯಗಳು. ಯಶಸ್ಸು, ಖುಷಿ ಸದಾ ನಿಮ್ಮದಾಗಿರಲಿ'' ಎಂದಿದ್ದಾರೆ ನಟ ಶ್ರೀಮುರಳಿ.

  ಧ್ವನಿಯಲ್ಲೇ ಎದೆ ನಡುಗಿಸುವ 'ಪೈಲ್ವಾನ್'

  ''ಮಾತಾಡುತ್ತಿದ್ದರೆ ಪ್ರತಿಯೊಬ್ಬರಲ್ಲೂ ಸ್ಫೂರ್ತಿಯ ಕಿಚ್ಚು ಹಚ್ಚುವ 'ಕಿಚ್ಚ'. ತೋಳಿನಲ್ಲಷ್ಟೇ ಅಲ್ಲ, ಧ್ವನಿಯಲ್ಲೇ ಎದೆ ನಡುಗಿಸುವ 'ಪೈಲ್ವಾನ್'. ಕೆ.ಸಿ.ಸಿ ಸರದಾರ.. ಬಹುಭಾಷಾ ಚತುರ ಕಿಚ್ಚ ಸುದೀಪ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು'' - ನಿರ್ದೇಶಕ ಸುನಿ.

  ಚಿರಂಜೀವಿ ಸರ್ಜಾ ಟ್ವೀಟ್

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಚಿರಂಜೀವಿ ಸರ್ಜಾ ಕೂಡ ಟ್ವಿಟ್ಟರ್ ಮೂಲಕ ಶುಭಾಶಯ ತಿಳಿಸಿದ್ದಾರೆ.

  ಮಾರ್ಡನ್ ಕೃಷ್ಣ

  ''ಕೃಷ್ಣ ಜನ್ಮಾಷ್ಟಮಿಯ ದಿನ ನಮ್ಮ ಮಾರ್ಡನ್ ಕೃಷ್ಣನಿಗೆ ಹುಟ್ಟುಹಬ್ಬದ ಶುಭಾಶಯಗಳು'' - ನಟಿ ಅಪೇಕ್ಷಾ ಪುರೋಹಿತ್

  English summary
  Sandalwood celebs have taken their Twitter account to wish Kiccha Sudeep on his 45th Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X