Don't Miss!
- Sports
CWG 2022: ಶ್ರೀಲಂಕಾದ 10 ಕ್ರೀಡಾಪಟುಗಳು ನಾಪತ್ತೆ!: ಲಂಕಾ ಕ್ರೀಡಾಪಟುಗಳ ಈ ಚಾಳಿಯ ಇತಿಹಾಸವೇ ವಿಚಿತ್ರ!
- Finance
ಮುಕೇಶ್ ಅಂಬಾನಿ ಮಾಸಿಕ ವೇತನ ಕೇಳಿದ್ರೆ ಅಚ್ಚರಿ ಮೂಡುತ್ತೆ!
- News
ಬಿಎಂಟಿಸಿ: ನಗರದಲ್ಲಿ ಅರ್ಧದಷ್ಟು ಎಸಿ ಬಸ್ಗಳ ಸೇವೆ ಅಲಭ್ಯ
- Automobiles
ಫೋರ್ಡ್ ಇಂಡಿಯಾದ ಸನಂದ್ ಕಾರ್ಖಾನೆ ಟಾಟಾ ಮೋಟಾರ್ಸ್ ತೆಕ್ಕೆಗೆ: 726 ಕೋಟಿ ರೂ.ಗೆ ಖರೀದಿ
- Technology
ಇಯರ್ಫೋನ್ ಖರೀದಿಸುವವರಿಗೆ ಅಮೆಜಾನ್ನಲ್ಲಿ ಸಿಗಲಿದೆ ಬಿಗ್ ಡಿಸ್ಕೌಂಟ್!
- Lifestyle
ಉಪರಾಷ್ಟ್ರಪತಿಯಾಗಿ ಜಗದೀಪ್ ಧನಕರ್: ಇವರಿಗೆ ಸಿಗುವ ಸಂಬಳ, ಭತ್ಯೆ ಸೌಲಭ್ಯಗಳೇನು?
- Travel
ಭಾರತದಲ್ಲಿರುವ ಕೆಲವು ಸ್ಥಳಗಳು ಅಸ್ತಮಾ ರೋಗಿಗಳಿಗೆ ಸಲ್ಪ ಮಟ್ಟದಲ್ಲಿ ಅಪಾಯಕಾರಿಯಾಗಬಹುದು!
- Education
CSB Recruitment 2022 : 66 ಸೈಂಟಿಸ್ಟ್-ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ರವಿಚಂದ್ರನ್ 2ನೇ ಪುತ್ರನಿಗಾಗಿ ಒಂದಾಗಲಿದೆ ಕನ್ನಡ ಚಿತ್ರರಂಗ: ತ್ರಿವಿಕ್ರಮ್ ಹೈಲೈಟ್ ಏನು?
ಕ್ರೇಜಿಸ್ಟಾರ್ ರವಿಚಂದ್ರನ್ ಮಕ್ಕಳಿಬ್ಬರೂ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾಗಿದೆ. ಈಗಾಗಲೇ ಮೊದಲ ಪುತ್ರ ಮನೋರಂಜನ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದ್ರೀಗ ಎರಡನೇ ಪುತ್ರ ವಿಕ್ರಮ್ ಮೊದಲ ಬಾರಿ ನಾಯಕನಾಗಿ ಸ್ಯಾಂಡಲ್ವುಡ್ಗೆ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ. ಅದುವೇ 'ತ್ರಿವಿಕ್ರಮ್'.
'ತ್ರಿವಿಕ್ರಮ್' ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಜೂನ್ 24ಕ್ಕೆ ರಾಜ್ಯಾದ್ಯಂತ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಮೊದಲ ಸಿನಿಮಾ ಜನರ ಮನಗೆಲ್ಲಲೇ ಬೇಕು ಎಂದು ಪಣತೊಟ್ಟರುವ ಚಿತ್ರರಂಗ ಇನ್ನಿಲ್ಲದ ಕಸರತ್ತು ಮಾಡಿದೆ. ಕೊನೆಯ ಹಂತವಾಗಿ ಗ್ರ್ಯಾಂಡ್ ಆಗಿ ಪ್ರೀ-ರಿಲೀಸ್ ಇವೆಂಟ್ ಅನ್ನು ಹಮ್ಮಿಕೊಂಡಿದೆ.
ಸಿನಿಮಾ
ಬಿಡುಗಡೆಗೆ
20
ದಿನ
ಮುನ್ನ
ಕೊನೆಯ
ಸಾಂಗ್
ಶೂಟ್
ಮುಗಿಸಿದ
'ತ್ರಿವಿಕ್ರಮ್'!
ವಿಕ್ರಮ್ ರವಿಚಂದ್ರನ್ ಅಭಿನಯದ ಮೊದಲ ಸಿನಿಮಾದ ಬಗ್ಗೆ ಎಲ್ಲರಿಗೂ ಕುತೂಹಲವಿದೆ. ಕ್ರೇಜಿ ಸ್ಟಾರ್ ಮತ್ತೊಬ್ಬ ಪುತ್ರನಸ ಎಂಟ್ರಿ ಹೇಗಿರುತ್ತೆ? ಅಂತ ನೋಡಲು ಇಡೀ ಕನ್ನಡ ಚಿತ್ರರಂಗ ಕಾದು ಕೂತಿದೆ. ಈ ಮಧ್ಯೆ ಸಿನಿಪ್ರಿಯರಿಗಾಗಿಯೇ ಅದ್ಧೂರಿಯಾಗಿ ಪ್ರೀ-ರಿಲೀಸ್ ಇವೆಂಟ್ ಅನ್ನು ಮಾಡುತ್ತಿದೆ. ಈ ಇವೆಂಟ್ ಬಹುತೇಕ ಕನ್ನಡದ ದಿಗ್ಗಜರು ಭಾಗವಹಿಸಲಿದ್ದಾರೆ.

ಕ್ರೇಜಿಪುತ್ರನಿಗಾಗಿ ಗ್ರ್ಯಾಂಡ್ ಇವೆಂಟ್
ವಿಕ್ರಮ್ ಸ್ಯಾಂಡಲ್ವುಡ್ ಎಂಟ್ರಿ ಚಿತ್ರರಂಗದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಸಾಕಷ್ಟು ತಯಾರಿ ಮಾಡಿಕೊಂಡು ಚಿತ್ರರಂಗಕ್ಕೆ ಕಾಲಿಟ್ಟಿರುವ ವಿಕ್ರಮ್ ಮೊದಲ ಯತ್ನದಲ್ಲಿಯೇ ತ್ರಿವಿಕ್ರಮನಾಗಿ ಹೊರಬರುತ್ತಾರಾ? ಅನ್ನುವ ಕುತೂಹಲವಿದೆ. ಈಗಾಗಲೇ ಸಿನಿಮಾ ಹಾಡುಗಳು ಯುವ ಮನಸ್ಸುಗಳವರೆಗೂ ಮುಟ್ಟಿದೆ. ಈ ಕಾರಣಕ್ಕೆ ಸಿನಿಮಾ ಬಿಡುಗಡೆಗೂ ಮುನ್ನ ಅದ್ಧೂರಿಯಾಗಿ ಕಾರ್ಯಕ್ರಮ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆ. ಈ ಕಾರ್ಯಕ್ರಮದಲ್ಲಿ ಇಡೀ ಕನ್ನಡದ ದಿಗ್ಗಜರು ಒಂದೇ ವೇದಿಕೆ ಮೇಲೆ ಸೇರಲಿದ್ದಾರೆ.
ರವಿಚಂದ್ರನ್
ಬರ್ತ್ಡೇಗೆ
ಪುತ್ರ
'ತ್ರಿ'ವಿಕ್ರಮನ
ಸಾಂಗ್
ರಿಲೀಸ್
:
ಶಿವಣ್ಣ
ಸಾಥ್

ಒಂದೇ ವೇದಿಕೆ ಮೇಲೆ ದಿಗ್ಗಜರ ಎಂಟ್ರಿ
ಜೂನ್ 19ರಂದು 'ತ್ರಿವಿಕ್ರಮ್' ಸಿನಿಮಾ ಪ್ರೀ-ರಿಲೀಸ್ ಇವೆಂಟ್ ಗ್ರ್ಯಾಂಡ್ ಆಗಿ ಬೆಂಗಳೂರಿನಲ್ಲಿ ನಡೆಯಲಿದೆ. ನಂದಿ ಹಿಲ್ಟ್ ಗ್ರೌಂಡ್ನಲ್ಲಿ ಈ ಸಿನಿಮಾದ ಇವೆಂಟ್ ನಡೆಯಲಿದೆ. ರವಿಚಂದ್ರನ್ ಎರಡನೇ ಪುತ್ರನ ಎಂಟ್ರಿಗಾಗಿ ಇಡೀ ಕನ್ನಡ ಚಿತ್ರರಂಗ ಒಂದಾಗಲಿದೆ. ಈ ವೇದಿಕೆ ಮೇಲೆ ರವಿಚಂದ್ರನ್, ಶಿವರಾಜ್ಕುಮಾರ್, ಸಾಧುಕೋಕಿಲಾ, ಶರಣ್, ಡಾಲಿ ಧನಂಜಯ್, ವಸಿಷ್ಠ, ಲೂಸ್ ಮಾದ ಯೋಗಿ, ನೀನಾಸಂ ಸತೀಶ್, ಮನೋರಂಜನ್ ರವಿಚಂದ್ರನ್ ಸೇರಿದಂತೆ ಕನ್ನಡ ಸ್ಟಾರ್ ನಟರೆಲ್ಲರೂ ಒಂದೇ ವೇದಿಕೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಅರ್ಜುನ್ ಜನ್ಯ ಮ್ಯೂಸಿಕಲ್ ನೈಟ್
ತ್ರಿವಿಕ್ರಮ್ ಸಿನಿಮಾದ ಗ್ರ್ಯಾಂಡ್ ಇವೆಂಟ್ನಲ್ಲಿ ಕೇವಲ ಮಾತುಕತೆ ಅಷ್ಟೇ ಇರುವುದಿಲ್ಲ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಮ್ಯೂಸಿಕಲ್ ನೈಟ್ ಕೂಡ ಇರುತ್ತೆ. ಸಂಚಿತ್ ಹೆಗ್ಡೆ, ಅಂಕಿತ ಕುಂಡು, ಸೇರಿದಂತೆ ಕನ್ನಡದ ಖ್ಯಾತ ಗಣ್ಯರು ತ್ರಿವಿಕ್ರಮ್ ಪ್ರೀ-ರಿಲೀಸ್ ಇವೆಂಟ್ನಲ್ಲಿ ಹಾಡಿ, ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಹೀಗಾಗಿ ಈ ಕಾರ್ಯಕ್ರಮ ಅದ್ಧೂರಿಯಾಗಿರುತ್ತೆ. ಸಂಗೀತದ ಜೊತೆಗೆ ಮನೋರಂಜನಾ ಕಾರ್ಯಕ್ರಮಗಳೂ ಕೂಡ ಇರುತ್ತೆ. ಅನುಶ್ರೀ ನಿರೂಪಣೆ ಮಾಡಲಿದ್ದಾರೆ.
ಕ್ರೇಜಿಸ್ಟಾರ್
ದ್ವಿತೀಯ
ಪುತ್ರ
ವಿಕ್ರಮನ
'ತ್ರಿವಿಕ್ರಮ'
ಬಿಡುಗಡೆಗೆ
ಮುಹೂರ್ತ

'ಪ್ಲೀಸ್' ಸಾಂಗ್ ರಿಲೀಸ್
'ತ್ರಿವಿಕ್ರಮ್' ಸಿನಿಮಾ ಬಿಡುಗಡೆ ಸಮೀಸುತ್ತಿದ್ದಂತೆ ಸಿನಿಮಾದ ಮತ್ತೊಂದು ಹಾಡನ್ನು ಬಿಡುಗಡೆ ಮಾಡಲಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡಿಗೆ ಯೋಗ್ರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ನಕಾಶ್ ಅಜೀಜ್ ಹಾಗೂ ಐಶ್ವರ್ಯಾ ರಂಗರಾಜನ್ ಈ ಡ್ಯಾನ್ಸ್ ನಂಬರ್ಗೆ ಧ್ವನಿ ನೀಡಿದ್ದಾರೆ. ವಿಕ್ರಮ್ ರವಿಚಂದ್ರನ್ ಹಾಗೂ ಆಕಾಂಕ್ಷಾ ಈ ಕ್ಯಾಚಿ ಟ್ಯೂನ್ಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ.