For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್‌ವುಡ್ ಉಪಾಧ್ಯಕ್ಷ ಚಿಕ್ಕಣ್ಣ ಆರೋಗ್ಯದಲ್ಲಿ ಏರು-ಪೇರು: ಹಾಸ್ಯ ನಟ ಹೇಳಿದ್ದೇನು?

  |

  ಸ್ಯಾಂಡಲ್‌ವುಡ್‌ನಲ್ಲಿ ಹಾಸ್ಯ ನಟ ಚಿಕ್ಕಣ್ಣ ಫುಲ್ ಬ್ಯುಸಿ ಸಿಕ್ಕಾಪಟ್ಟೆ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಈಗ 'ಉಪಾಧ್ಯಕ್ಷ'ರಾಗಿ ಸ್ಯಾಂಡಲ್‌ವುಡ್‌ಗೆ ನಾಯಕನಾಗಿಯೂ ಎಂಟ್ರಿ ಕೊಟ್ಟಿದ್ದಾರೆ. ಇದೇ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ.

  ಚಿತ್ರರಂಗದಲ್ಲಿದ್ದವರ ಮೇಲೆ ಪ್ರತಿ ದಿನ ಏನಾದರೂ ಒಂದು ಸುದ್ದಿ ಹಬ್ಬುತ್ತಲೇ ಇರುತ್ತೆ. ಈ ಬಾರಿ ಚಿಕ್ಕಣ್ಣ ಆರೋಗ್ಯದ ಬಗ್ಗೆ ಬೆಳಗ್ಗೆಯಿಂದಲೂ ಸುದ್ದಿಯೊಂದು ಹರಿದಾಡುತ್ತಲೇ ಇತ್ತು. ಇದು ಅವರ ಅಭಿಮಾನಿಗಳಲ್ಲಿ ಆತಂಕವನ್ನು ಸೃಷ್ಟಿಸಿತ್ತು.

  ಗೋವಾದಲ್ಲಿ ಸಿದ್ದರಾಮಯ್ಯ ಚಿಕ್ಕಣ್ಣ ಭೇಟಿ: ಏನು ವಿಶೇಷ?ಗೋವಾದಲ್ಲಿ ಸಿದ್ದರಾಮಯ್ಯ ಚಿಕ್ಕಣ್ಣ ಭೇಟಿ: ಏನು ವಿಶೇಷ?

  ತಮ್ಮ ಬಗ್ಗೆ ಹಬ್ಬಿದ ಸುದ್ದಿಯ ಬಗ್ಗೆ ಸ್ಯಾಂಡಲ್‌ವುಡ್ ಉಪಾಧ್ಯಕ್ಷ ಚಿಕ್ಕಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಹಬ್ಬಿದ ವದಂತಿಗಳ ಬಗ್ಗೆ ಚಿಕ್ಕಣ್ಣ ಹೇಳಿದ್ದೇನು? ಚಿಕ್ಕಣ್ಣ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಅಂತಹದ್ದೇನಿದೆ? ಎಂದು ತಿಳಿಯಲು ಮುಂದೆ ಓದಿ.

  ಚಿಕ್ಕಣ್ಣ ಆರೋಗ್ಯ ಗಂಭೀರ

  ಚಿಕ್ಕಣ್ಣ ಆರೋಗ್ಯ ಗಂಭೀರ

  ಬೆಳಗ್ಗೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ಹರಿದಾಡಿತ್ತು. ಕನ್ನಡದ ಹಾಸ್ಯ ನಟ, ಸ್ಯಾಂಡಲ್‌ವುಡ್ 'ಉಪಾಧ್ಯಕ್ಷ' ಚಿಕ್ಕಣ್ಣ ಆರೋಗ್ಯದಲ್ಲಿ ಏರು-ಪೇರು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸುದ್ದಿ ಹರಡಿತ್ತು. ಇದರಿಂದ ಒಂದು ಕ್ಷಣ ಕನ್ನಡ ಚಿತ್ರರಂಗ ಸೇರಿದಂತೆ, ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಕಿಡಿಗೇಡಿಗಳು ಹಬ್ಬಿಸಿದ ಈ ಸುದ್ದಿ ಬಗ್ಗೆ ಸ್ವತ: ಚಿಕ್ಕಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

  ಚಿಕ್ಕಣ್ಣ ಪ್ರತಿಕ್ರಿಯೆ ಏನು?

  ಚಿಕ್ಕಣ್ಣ ಪ್ರತಿಕ್ರಿಯೆ ಏನು?

  ಸೋಶಿಯಲ್ ಮೀಡಿಯಾದಲ್ಲಿ ಅವರ ಆರೋಗ್ಯದ ಬಗ್ಗೆ ಸುದ್ದಿ ಹಬ್ಬುತ್ತಿದ್ದಂತೆ, ಸ್ವತ: ಚಿಕ್ಕಣ್ಣ ಪ್ರತಿಕ್ರಿಯೆ ನೀಡಿರುವ ವಿಡಿಯೋ ಒಂದನ್ನು ರಿಲೀಸ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಚಿಕ್ಕಣ್ಣ ಹೇಳಿದ್ದು ಇಷ್ಟು. " ಈಗತಾನೇ ಎಲ್ಲರೂ ಫೋನ್ ಮಾಡುತ್ತಿದ್ದಾರೆ. ಚಿಕ್ಕಣ್ಣನಿಗೆ ಸೀರಿಯಸ್ ಆಗಿದೆ. ಆಸ್ಪತ್ರೆಯಲ್ಲಿದ್ದಾರೆ ಅಂತ ಹೇಳುತ್ತಿದ್ದಾರೆ. ಆಸ್ಪತ್ರೆಯಲ್ಲಿ ಇಲ್ಲ. ಬಸ್ರಾಳು ಹತ್ತಿರ ತಾರೆಕಟ್ಟೆ ಅಂತ. ಎಲ್ಲರೂ ಆರಾಮಾಗಿ ಶೂಟಿಂಗ್ ಮಾಡುತ್ತಿದ್ದೇವೆ. ಉಪಾಧ್ಯಕ್ಷ ಶೂಟಿಂಗ್‌ನಲ್ಲಿಇದ್ದೀನಿ." ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

  ನಗು ನಗುತ್ತಾ ಶೂಟಿಂಗ್ ಮಾಡುತ್ತಿದ್ದೇವೆ

  ನಗು ನಗುತ್ತಾ ಶೂಟಿಂಗ್ ಮಾಡುತ್ತಿದ್ದೇವೆ

  ಚಿಕ್ಕಣ್ಣ 'ಉಪಾಧ್ಯಕ್ಷ' ಸಿನಿಮಾದ ಶೂಟಿಂಗ್‌ನಲ್ಲಿದ್ದಾರೆ. ಇವರೊಂದಿಗೆ ಖಳನಟ ಕಮ್ ಹಾಸ್ಯ ನಟ ರವಿಶಂಕರ್ ಕೂಡ ಇದ್ದಾರೆ. ಅಲ್ಲದೆ ಚಿತ್ರದ ಹಲವು ಕಲಾವಿದರಿದ್ದಾರೆ. ಇವರೊಂದಿಗೆ ಕೂತು ಚಿಕ್ಕಣ್ಣ ವಿಡಿಯೋ ಮಾಡಿದ್ದಾರೆ. ಇದೇ ವೇಳೆ " ಎಲ್ಲಾ ನಗು ನಗುತ್ತಾ ಶೂಟಿಂಗ್ ಮಾಡುತ್ತಿದ್ದೇವೆ. ಯಾರೋ ಸುಳ್ಳು ಸುದ್ದಿ ಹಬ್ಬಿಸಿದವರಿಗೆಲ್ಲಾ ಥ್ಯಾಂಕ್ಸ್ ಕಣ್ರಪ್ಪ." ಎಂದು ಚಿಕ್ಕಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

  'ಉಪಾಧ್ಯಕ್ಷ' ಚಿಕ್ಕಣ್ಣನಿಗೆ ಹಿಟ್ಲರ್ ಬೆಡಗಿ ನಾಯಕಿ'ಉಪಾಧ್ಯಕ್ಷ' ಚಿಕ್ಕಣ್ಣನಿಗೆ ಹಿಟ್ಲರ್ ಬೆಡಗಿ ನಾಯಕಿ

  ಚಿಕ್ಕಣ್ಣ ಫ್ಯಾನ್ಸ್ ನಿರಾಳ

  ಚಿಕ್ಕಣ್ಣ ಫ್ಯಾನ್ಸ್ ನಿರಾಳ

  ಚಿತ್ರರಂಗದಲ್ಲಿ ಇದ್ದವರಿಗೆ ಗಾಳಿ ಸುದ್ದಿಗಳು ಹೊಸತೇನಲ್ಲ. ಚಿಕ್ಕಣ್ಣ ವಿಚಾರದಲ್ಲೂ ಹಲವು ಬಾರಿ ಸುಳ್ಳು ಸುದ್ದಿಗಳು ಹರಿದಾಡಿವೆ. ಅದರಲ್ಲಿ ಇದೂ ಒಂದು. ಈಗ ಚಿಕ್ಕಣ್ಣ ಆರೋಗ್ಯವಾಗಿದ್ದೀನಿ ಅಂತ ನೀಡಿದ ಹೇಳಿಕೆಯಿಂದ ಅವರ ಅಭಿಮಾನಿಗಳು ಫುಲ್ ನಿರಾಳರಾಗಿದ್ದಾರೆ. ಸಾಕಷ್ಟು ಸಮಯ ತೆಗೆದುಕೊಂಡು ನಾಯಕನಾಗಿ ನಟಿಸುತ್ತಿರುವ ಸಿನಿಮಾ ನೋಡಲು ಅವರ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ.

  English summary
  Sandalwood Comedy Actor Chikkanna Reaction On His Health Rumours, Know More.
  Saturday, July 2, 2022, 19:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X