ಕನ್ನಡ ಚಿತ್ರಸಾಹಿತಿ, ನಿರ್ದೇಶಕ ಕೆ. ವಿ ರಾಜು ವಿಧಿವಶ

ಕನ್ನಡ ಚಿತ್ರಸಾಹಿತಿ ಹಾಗೂ ನಿರ್ದೇಶಕ ಕೆ. ವಿ ರಾಜು ವಿಧಿವಶರಾಗಿದ್ದಾರೆ. ಕೆ.ವಿ.ರಾಜು ಮೈಸೂರು ಪ್ರೀಮಿಯರ್ ಸ್ಟುಡಿಯೋದಲ್ಲಿ ಸಂಕಲನ ಕಲಿಯುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಸಹ ನಿರ್ದೇಶನ ಹಾಗೂ ಚಿತ್ರ ಸಾಹಿತ್ಯ ರಚನೆಯಲ್ಲಿ ತಮ್ಮ ಛಾಪನ್ನು ಮೂಡಿಸಿದವರು.

1979 ರಲ್ಲಿ ತಮ್ಮ ಅಣ್ಣ ಕೆ.ವಿ. ಜಯರಾಂ ರವರ ನಿರ್ದೇಶನದ ಮೊದಲ ಚಿತ್ರ "ಮರಳು ಸರಪಳಿ" ಚಿತ್ರದಲ್ಲಿ ಸಹಾಯಕ ನಿರ್ದೇಶಕರಾದರು. ಸುಮಾರು 38 ಚಲನಚಿತ್ರಗಳನ್ನು ನಿರ್ದೇಶನ ಮಾಡಿರುವ ಇವರು ಚಲನಚಿತ್ರದಲ್ಲಿ ತಾಂತ್ರಿಕತೆ ಮತ್ತು ಪದವೈಭವಕ್ಕೆ ಒತ್ತು ನೀಡಿ ಗಮನ ಸೆಳೆದಿದ್ದಾರೆ.

Sandalwood Director KV Raju Passes Away

50ಕ್ಕೂ ಹೆಚ್ಚು ಚಿತ್ರಗಳಿಗೆ ಸಂಭಾಷಣೆ, ಚಿತ್ರಕಥೆ ರಚಿಸಿದ್ದಾರೆ. ಕೆ.ವಿ.ಜಯರಾಂ ನಿರ್ದೇಶನದ 'ಮರಳುಸರಪಳಿ', 'ಬಾಡದ ಹೂವು', 'ಇಬ್ಬನಿ ಕರಗಿತು','ಒಲವೇಬದುಕು', 'ಶ್ವೇತ ಗುಲಾಬಿ', 'ಹೊಸನೀರು' ಈ ಎಲ್ಲ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ, ಸಂಭಾಷಣ ಕಾರರಾಗಿ ಕೆಲಸ ನಿರ್ವಹಿಸಿದ್ದಾರೆ.

ಹುಲಿಯಾ, ಯುದ್ಧಕಾಂಡ ಮುಂತಾದ ಯಶಸ್ವಿ ಚಿತ್ರಗಳನ್ನು ಕನ್ನಡ ತೆರೆಗೆ ನೀಡಿದ ಕೆವಿ ರಾಜು ಅವರ ಸಿನಿಮಾ ಮೇಕಿಂಗ್ ಬಗ್ಗೆ ಕನ್ನಡ ಚಿತ್ರರಂಗದ ಹಿರಿಯ ನಟರುಗಳೇ ತಲೆದೂಗುತ್ತಿದ್ದರು. ನಿರ್ದೇಶಕ ಕೆ.ವಿ.ರಾಜು ಅವರು 'ಪುಟ್ಟಣ್ಣ ಕಣಗಾಲ್ ಪ್ರಶಸ್ತಿ' ನೀಡಿ ಗೌರವಿಸಲಾಗಿದೆ.

More from Filmibeat

English summary
Sandalwood Director KV Raju Passes Away
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X