twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡದ ಖ್ಯಾತ ನಿರ್ದೇಶಕ ರೇಣುಕಾ ಶರ್ಮಾ ಕೊರೊನಾದಿಂದ ನಿಧನ

    |

    ಕನ್ನಡದ ಹಲವು ಸಿನಿಮಾ ಸೆಲೆಬ್ರಿಟಿಗಳು ಇತ್ತೀಚಿನ ದಿನಗಳಲ್ಲಿ ಕೊರೊನಾ ಕಾರಣಕ್ಕೆ ನಿಧನ ಹೊಂದಿದ್ದಾರೆ. ಆ ಸಾಲಿಗೆ ಇಂದು ಮತ್ತೊಂದು ಸೇರ್ಪಡೆಯಾಗಿದೆ.

    Recommended Video

    ಸ್ಯಾಂಡಲ್ ವುಡ್ ಹೆಸರಾಂತ ನಿರ್ದೇಶಕ ರೇಣುಕಾ ಶರ್ಮಾ ವಿಧಿವಶ! | Filmibeat Kannada

    ಕನ್ನಡಕ್ಕೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ಖ್ಯಾತ ನಿರ್ದೇಶಕ ರೇಣುಕಾ ಶರ್ಮಾ ಅವರು ಕೊರೊನಾದಿಂದಾಗಿ ನಿನ್ನೆ ತಡರಾತ್ರಿ ನಿಧನರಾಗಿದ್ದಾರೆ.

    'ಕವಿರತ್ನ ಕಾಳಿದಾಸ', 'ಅಂಜದ ಗಂಡು', 'ಕಿಂದರ ಜೋಗಿ' ಸೇರಿದಂತೆ ಹಲವು ಸಿನಿಮಾಗಳನ್ನು ರೇಣುಕಾ ಶರ್ಮಾ ನಿರ್ದೇಶನ ಮಾಡಿದ್ದರು.

     Sandalwood Director Renuka Sharma Passed Away Due To COVID 19

    ಎರಡು ದಿನಗಳ ಹಿಂದಷ್ಟೆ ರೇಣುಕಾ ಶರ್ಮಾ ಅವರನ್ನು ಕೊರೊನಾ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ರೇಣುಕಾ ಶರ್ಮಾ ನಿಧನ ಹೊಂದಿದ್ದಾರೆ.

    ಮೈಸೂರಿನ ಟಿ.ನರಸೀಪುರದವರಾದ ರೇಣುಕಾ ಶರ್ಮಾ ಅವರು 1960 ರಲ್ಲಿ ಚಿತ್ರರಂಗ ಪ್ರವೇಶಿಸಿದವರು. ಸಿನಿಮಾ ನಟ ಆಗಲೇಬೇಕೆಂಬ ಕನಸು ಹೊತ್ತು ಮದ್ರಾಸಿಗೆ ಹೋಗಿ ಮೊದಲ ಬಾರಿಗೆ 'ಸರ್ವಜ್ಞ ಮೂರ್ತಿ' ಸಿನಿಮಾಕ್ಕೆ ಸಹಾಯಕನಾಗಿ ಕೆಲಸ ಮಾಡಿ ಅಲ್ಲಿಂದ ಸಿನಿಮಾ ಪಯಣ ಆರಂಭಿಸಿದರು.

    20 ವರ್ಷಗಳ ಬಳಿಕ 1980 ರಲ್ಲಿ ಮೊದಲ ಬಾರಿಗೆ ಸ್ವಂತವಾಗಿ ನಿರ್ದೇಶನ ಮಾಡಿದರು. ರೇಣುಕಾ ಶರ್ಮಾ ಮೊದಲ ಸಿನಿಮಾ 'ಅನುಪಮಾ'. ತೆಲುಗು, ತಮಿಳಿನಲ್ಲಿಯೂ ಕೆಲಸ ಮಾಡಿರುವ ರೇಣುಕಾ ಶರ್ಮಾ ಜಯಲಲಿತಾ, ಎಎನ್‌ಆರ್ ಅವರ ಸಿನಿಮಾಗಳಿಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

    ಚಂದನವನದ ಹಲವು ಮಂದಿ ಸೆಲೆಬ್ರಿಟಿಗಳು ಕೆಲವೇ ದಿನಗಳಲ್ಲಿ ಕೊರೊನಾದಿಂದ ಜೀವ ಕಳೆದುಕೊಂಡಿದ್ದಾರೆ. ಚಂದನವನದ ಯುವ ನಿರ್ಮಾಪಕ ರಾಜಶೇಖರ್, ಖ್ಯಾತ ನಿರ್ಮಾಪಕ ರಾಮು, ನಿರ್ಮಾಪಕ ಚಂದ್ರಶೇಖರ್, ಮೇಕಪ್‌ಮ್ಯಾನ್ ಸೀನ, ಪುಟ್ಟಣ ಕಣಗಾಲ್ ಪುತ್ರ, ಡಿಸೈನರ್ ಮಸ್ತಾನ್ ಇವರೆಲ್ಲರುಗಳು ಕೆಲವೇ ದಿನಗಳ ಅಂತರದಲ್ಲಿ ಕೊರೊನಾಕ್ಕೆ ಬಲಿ ಆಗಿದ್ದಾರೆ. ನಿನ್ನೆಯಷ್ಟೆ ಯುವ ನಿರ್ದೇಶಕ ಸಂತೋಶ್ ಕೋವಿಡ್‌ನಿಂದ ಸಾವನ್ನಪ್ಪಿದ್ದರು.

    English summary
    Sandalwood director Renuka Sharma passed away due to COVID 19. He directed Kavirathna Kalidasa, Kindara Jogi, Anjaa Gandu and many Kannada movie.
    Thursday, May 6, 2021, 11:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X