ಡ್ರಗ್ಸ್ ಪ್ರಕರಣ: ಸಿಸಿಬಿ ನೋಟಿಸ್‌ಗೆ ದಿಗಂತ್-ಐಂದ್ರಿತಾ ಟ್ವೀಟ್ ಪ್ರತಿಕ್ರಿಯೆ
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಪೊಲೀಸರು ನಟ ದಿಗಂತ್ ಮತ್ತು ಅವರ ಪತ್ನಿ ಐಂದ್ರಿತಾ ರೇ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.
Recommended Video
ಡ್ರಗ್ ಪೆಡ್ಲರ್‌ಗಳ ಜೊತೆ ಫೋಟೋದಲ್ಲಿ ನಟಿ ಐಂದ್ರಿತಾ ರೇ ಮತ್ತು ದಿಗಂತ್ ಸಹ ಕಾಣಿಸಿಕೊಂಡಿದ್ದು, ಅನುಮಾನದ ಮೇಲೆ ಸ್ಪಷ್ಟನೆ ಕೇಳಲು ಸಿಸಿಬಿ ಪೊಲೀಸರು ಸಮನ್ಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ದಿಗಂತ್ ದಂಪತಿ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ....

ಐಂದ್ರಿತಾ ರೇ ಹೇಳಿದ್ದೇನು?
''ನಾಳೆ (ಬುಧವಾರ) ಬೆಳಗ್ಗೆ 11 ಗಂಟೆಗೆ ವಿಚಾರಣೆ ಹಿನ್ನೆಲೆ ಸಿಸಿಬಿ ಕಚೇರಿಗೆ ಬರುವಂತೆ ಪೊಲೀಸರು ಫೋನ್ ಮೂಲಕ ನೋಟಿಸ್ ನೀಡಿದ್ದಾರೆ. ನಾವು ವಿಚಾರಣೆಗೆ ಹಾಜರಾಗುತ್ತೇವೆ ಮತ್ತು ಸಂಪೂರ್ಣ ಸಹಕಾರ ನೀಡುತ್ತೇವೆ'' ಎಂದು ನಟಿ ಐಂದ್ರಿತಾ ರೇ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ದಿಗಂತ್ ಏನಂದ್ರು?
''ನಾಳೆ (ಬುಧವಾರ) ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಬರುವಂತೆ ಸಿಸಿಬಿ ಪೊಲೀಸರು ಫೋನ್ ಮೂಲಕ ತಿಳಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ವಿಚಾರಣೆಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ'' ದಿಗಂತ್ ಸಹ ಟ್ವೀಟ್ ಮಾಡಿದ್ದಾರೆ.

ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದ ಜೋಡಿ
ಡ್ರಗ್ ಪೆಡ್ಲರ್ ಶೇಖ್ ಫಾಜಿಲ್, ವೈಭವ್ ಜೈನ್, ವೀರೇನ್ ಖನ್ನಾ ಇತರೆ ಪೆಡ್ಲರ್‌ಗಳು ಭಾಗಿಯಾಗಿದ್ದ ಪಾರ್ಟಿಗಳಲ್ಲಿ ನಟ ದಿಗಂತ್ ಮತ್ತು ಐಂದ್ರಿತಾ ರೇ ಸಹ ಕಾಣಿಸಿಕೊಂಡಿದ್ದಾರೆ. ಅವರ ಜೊತೆ ಫೋಟೋ ಸಹ ಕ್ಲಿಕ್ಕಿಸಿಕೊಂಡಿದ್ದಾರೆ. ಹಾಗೂ ಸಿಸಿಬಿ ವಶದಲ್ಲಿರುವ ನಟಿ ಸಂಜನಾ ಸಹ ಈ ಕುರಿತು ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ಸಿಸಿಬಿ ಪೊಲೀಸರು ದಿಗಂತ್ ದಂಪತಿಯನ್ನು ವಿಚಾರಣೆಗೆ ಕರೆದಿದ್ದಾರೆ.

ಆಕ್ಸಿಡೆಂಟ್‌ನಲ್ಲಿ ದಿಗಂತ್ ಹೆಸರು!
2017ರಲ್ಲಿ ಸೌತ್ ಎಂಡ್ ವೃತ್ತದಲ್ಲಿ ನಡೆದಿದ್ದ ಕಾರು ಅಪಘಾತ ಪ್ರಕರಣದಲ್ಲಿ ನಟ ದಿಗಂತ್ ಹೆಸರು ಸಹ ಕೇಳಿ ಬಂತು. ದಿಗಂತ್ ಅದನ್ನು ನಿರಾಕರಿಸಿದ್ದರು. ಕಾರಿನಲ್ಲಿ ನಾನು ಇರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಇದೇ ಅಪಘಾತವನ್ನು ಉಲ್ಲೇಖಿಸಿ ಇಂದ್ರಜಿತ್ ಲಂಕೇಶ್ ಪರೋಕ್ಷ ಆರೋಪ ಮಾಡಿದ್ದರು. ಬಹುಶಃ ದಿಗಂತ್ ಅವರನ್ನು ಈ ಕುರಿತು ಸಹ ಪ್ರಶ್ನಿಸುವ ಸಾಧ್ಯತೆ ಇದೆ.


Click it and Unblock the Notifications











