twitter
    For Quick Alerts
    ALLOW NOTIFICATIONS  
    For Daily Alerts

    ನಟಿ ರಾಗಿಣಿ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ನಶೆ ಲೋಕದ ಚಿತ್ರಣ ಬಯಲು

    |

    ಬೆಂಗಳೂರು, ಸೆ. 13: ವರ್ಷವಿಡೀ ಬರ್ತಡೇ ಪಾರ್ಟಿಗಳು. ಬರ್ತಡೇ ಪಾರ್ಟಿಯ ನೆಪದಲ್ಲಿಯೇ ನಶೆಯೇರಿಸಿಕೊಳ್ಳುವ ದೊಡ್ಡ ಕಾರ್ಯಕ್ರಮಗಳು ಆಯೋಜನೆ. ಬರ್ತಡೇ ಪಾರ್ಟಿಗಳ ಹೆಸರಿನಲ್ಲಿ ನಶೆಯೇರಿಸಿಕೊಳ್ಳುವ ಪಾರ್ಟಿಗಳು ನಡೆಯುವುದು ಐಷಾರಾಮಿ ಹೋಟೆಲ್‌ಗಳಲ್ಲಿ! ರೌಡಿಸಂ ಲೋಕ ಮೈಗೂಡಿಸಿಕೊಂಡಿರುವ "ವರ್ಷವಿಡೀ ಹುಟ್ಟುಹಬ್ಬ ಪಾರ್ಟಿ" ಮಾದರಿಯಲ್ಲೇ ಸ್ಯಾಂಡಲ್‌ವುಡ್ ಮಾದಕ ಲೋಕ ಕೂಡ ಹುಟ್ಟುಹಬ್ಬದ ಆಚರಣೆ ಹೆಸರಿನಲ್ಲಿ ನಶೆಯಲ್ಲಿ ತೇಲಾಡುತ್ತಿದ್ದರು!

    ಸ್ಯಾಂಡಲ್‌ವುಡ್ ನಶೆಲೋಕದ ಚಿತ್ರಣವಿದು. ಸ್ಯಾಂಡಲ್‌ವುಡ್ ಡ್ರಗ್ ಡೀಲ್ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ತನಿಖೆ ನಡೆಸಿ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಇಂತಹ ಮಹತ್ವದ ಅಂಶ ಉಲ್ಲೇಖವಾಗಿದೆ. ಅದರಲ್ಲೂ ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ ಐ‍ಷಾರಾಮಿ ಹೋಟೆಲ್ ಗಳಲ್ಲಿ ಬರ್ತಡೇ ಪಾರ್ಟಿಗಳ ನೆಪದಲ್ಲಿ ನಶೆ ಪಾರ್ಟಿಗಳನ್ನು ಆಯೋಜಿಸಿರುವ ಆಘಾತಕಾರಿ ಸಂಗತಿ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ. ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿಗಳು ಕೂಡ ಸ್ವ ಇಚ್ಛಾ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಸ್ಯಾಂಡಲ್‌ವುಡ್ ನಟಿ ರಾಗಿಣಿ ಕೂಡ ತನ್ನ ಹೇಳಿಕೆಯಲ್ಲಿ ಡ್ರಗ್ ಪಾರ್ಟಿಗಳ ಚಿತ್ರಣವನ್ನು ವಿವರಿಸಿದ್ದಾಳೆ.

    ಬಾಯ್ ಫ್ರೆಂಡ್ ಮೂಲಕ ನಶೆ ಲೋಕಕ್ಕೆ ಎಂಟ್ರಿ

    ಬಾಯ್ ಫ್ರೆಂಡ್ ಮೂಲಕ ನಶೆ ಲೋಕಕ್ಕೆ ಎಂಟ್ರಿ

    ನಟಿ ರಾಗಿಣಿ ಉಲ್ಲೇಖಿಸಿರುವಂತೆ ಶಾಂಗ್ರಿಲಾ, ಹೋಟೆಲ್ ಅಶೋಕ, ಜೆ ಡಬ್ಲೂ ಮಾರಿಯೆಟ್, ತಾಜ್ ವೆಸ್ಟೆಂಟ್, ವಿಂಡ್ಸರ್ ಮ್ಯಾನರ್ ನಂತಹ ಐಷಾರಾಮಿ ಹೋಟೆಲ್‌ಗಳಲ್ಲಿಯೇ ಡ್ರಗ್ ಪಾರ್ಟಿಗಳು ಆಯೋಜನೆಗೊಳ್ಳುತ್ತಿದ್ದವು. ಹುಟ್ಟುಹಬ್ಬದ ನೆಪದಲ್ಲಿ ಆಯೋಜನೆಗೊಳ್ಳುತ್ತಿದ್ದ ಮ್ಯೂಸಿಕ್ ಪಾರ್ಟಿಗಳಲ್ಲಿ ಡ್ರಗ್ ಸಮಾರಾಧನೆ ನಡೆಯುತ್ತಿತ್ತು. ಇದನ್ನು ರಾಗಿಣಿ ಕೂಡ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾಳೆ. ನಟಿಯ ನಶೆ ಲೋಕದ ಎಂಟ್ರಿ ಪಾರ್ಟಿ ಮೂಲಕವೇ ಆಗಿದೆ.

    ಮಾಜಿ ಬಾಯ್ ಫ್ರೆಂಡ್ ಶಿವಪ್ರಕಾಶ್ ರಾಗಿಣಿಯನ್ನು ಪಾರ್ಟಿಗೆ ಕರೆದುಕೊಂಡು ಹೋಗಿ ಹಾಲಿ ಬಾಯ್ ಫ್ರೆಂಡ್ ರವಿಶಂಕರ್ ನನ್ನು ಪರಿಚಯಿಸಿದ್ದ. ನಾನು ಶಿವಪ್ರಕಾಶ್ ಜತೆ ಎಂ.ಜಿ. ರಸ್ತೆ ಹೋಟಲ್ ರೆಸ್ಟೋರೆಂಟ್, ಕ್ಲಬ್‌ಗಳಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ಹೋಗುತ್ತಿದ್ದೆ. ಮೊದಲಿನಿಂದಲೂ ನನಗೆ ಸಿಗರೇಟ್ ಮತ್ತು ಮದ್ಯಪಾನದ ಅಭ್ಯಾಸವಿತ್ತು. ಹೋಟೆಲ್ ಲಲಿತ್ ಅಶೋಕಗೆ ಹೋದಾಗ ಅಲ್ಲಿ ವೈಭವ್ ಜೈನ್, ಪ್ರತೀಕ್ ಶೆಟ್ಟಿ ಇರುತ್ತಿದ್ದರು. ಅವರು ನಮಗೆ ಡ್ರಗ್ ಕೊಡುತ್ತಿದ್ದರು. ನಾವು ಡ್ರಗ್ ಸೇವಿಸುತ್ತಿದ್ದೆವು. ಕೆಲವೊಮ್ಮೆ ಶಿವಪ್ರಕಾಶ್ ಆಫ್ರಿಕನ್ ಪ್ರಜೆಗಳಿಂದಲೇ ಡ್ರಗ್ ತರಿಸಿಕೊಡುತ್ತಿದ್ದ ಎಂದು ಹೇಳಿಕೆ ನೀಡಿದ್ದಾಳೆ.

    ಆದಿತ್ಯಾ ಆಳ್ವಾ ಫಾರಂ ಹೌಸ್‌ನಲ್ಲಿ ಕೊಕೈನ್ ಮಾರಾಟ

    ಆದಿತ್ಯಾ ಆಳ್ವಾ ಫಾರಂ ಹೌಸ್‌ನಲ್ಲಿ ಕೊಕೈನ್ ಮಾರಾಟ

    ಆರಂಭದಲ್ಲಿ ಮಾದಕ ವಸ್ತು ಸೇವನೆ ಶುರು ಮಾಡಿದ ನಟಿ ರಾಗಿಣಿ ನಂತರ ಪರ್ಟಿಗಳಲ್ಲಿ ಕೊಕೈನ್ ತರಿಸಿ ಹಣಕ್ಕಾಗಿ ಮಾರಾಟ ಮಾಡುತ್ತಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. 2018 ರಲ್ಲಿ ಆದಿತ್ಯ ಆಳ್ವಾ ಅವರ ಫಾರಂ ಹೌಸ್ ನಲ್ಲಿ ಆಯೋಜಿಸಿದ್ದ ಪಾರ್ಟಿಯಲ್ಲಿ 70 ಜನ ಸೇರಿದ್ದರು. ಆಳ್ವಾ ವ್ಯವಹಾರಿಕ ಪಾಲುದಾರ ಕಿರಣ ಅಲಿಯಾಸ್ ಕೆ.ಡಿ. ಎಲ್ಲರಿಗೂ ಎಕ್ಸೆಟಿಸಿ ಪಿಲ್ಸ್ ಮಾದಕ ವಸ್ತುವನ್ನು ತಂದುಕೊಟ್ಟಿದ್ದ. ನಾನು ಸೆಲಬ್ರಿಟಿಯಾಗಿದ್ದರಿಂದ ನನಗೆ ಉಚಿತವಾಗಿ ನೀಡಿದ್ದರು. ನಾನು ಮತ್ತು ಶಿವಪ್ರಕಾಶ್ ಸೇವನೆ ಮಾಡಿದೆವು. ನಾನು ಕೊಟ್ಟಿದ್ದ ಮಾತ್ರೆಗಳನ್ನು ಶಿವಪ್ರಕಾಶ್ ಕೆಲವರಿಗೆ ಹಣಕ್ಕಾಗಿ ಮಾರಾಟ ಮಾಡಿಸಿರುತ್ತೇನೆ. ನನ್ನ ಹುಟ್ಟುಹಬ್ಬ ನೆಪದಲ್ಲಿ ಶಿವಪ್ರಕಾಶ್ ಮತ್ತು ನಾನು ಬೇರೆ ಬೇರೆ ಹೋಟೆಲ್ ಗಳಲ್ಲಿ ಪಾರ್ಟಿಗಳನ್ನು ಆಯೋಜಿಸುತ್ತಿದ್ದೆವು. ನಾನು ಮತ್ತು ಚಿಪ್ಪಿ ಸಾಮಾಜಿಕ ಜಾಲ ತಾಣಗಳ ಮೂಲಕ ಪಾರ್ಟಿ ಬಗ್ಗೆ ಪ್ರಮೋಟ್ ಮಾಡುತ್ತಿದ್ದೆವು. ಪಾರ್ಟಿಗೆ ಬರುವರಿಗೆ ಇಂತಿಷ್ಟು ಹಣ ಎಂಟ್ರಿ ಫೀ ನಿಗದಿ ಮಾಡಿ ಹೋಟೆಲ್ ನವರಿಂದಲೂ ಶೇ. 30 ರಷ್ಟು ಕಮೀಷನ್ ಪಡೆಯುತ್ತಿದ್ದೆವು ಎಂದು ರಾಗಿಣಿ ತಪ್ಪೊಪ್ಪಿಕೊಂಡಿದ್ದಾಳೆ.

    ಪಾರ್ಟಿ ಮೊದಲೇ ಡ್ರಗ್ ಲೂಮ್ ಪೆಪ್ಪೆಯಿಂದ ಡ್ರಗ್ ಖರೀದಿ

    ಪಾರ್ಟಿ ಮೊದಲೇ ಡ್ರಗ್ ಲೂಮ್ ಪೆಪ್ಪೆಯಿಂದ ಡ್ರಗ್ ಖರೀದಿ

    ಹುಟ್ಟುಹಬ್ಬಗಳ ನೆಪದಲ್ಲಿ ಆಯೋಜಿಸುವ ಪಾರ್ಟಿಗೂ ಮೊದಲೇ ಲೂಮ್ ಪೆಪ್ಪೇ ಮತ್ತು ರವಿಶಂಕರ್, ಪ್ರತೀಕ್ ಶೆಟ್ಟಿ ಮೂಲಕ ಎಕ್ಸೆಟಿಸಿ ಪಿಲ್ಸ್, ಕೊಕೇನ್ ತರಿಸುತ್ತಿದ್ದೆ. ಪರ್ಟಿಯಲ್ಲಿ ಭಾಗವಹಿಸುತ್ತಿದ್ದ ನಮಗೆ ಪರಿಚಯಿತರಿಗೆ ಡ್ರಗ್‌ನ್ನು ಮಾರಾಟ ಮಾಡುತ್ತಿದ್ದೆವು. ಒಂದು ಎಕ್ಸೆಟೆಸಿ ಮಾತ್ರೆಯನ್ನು 1 ರಿಂದ 3 ಸಾವಿರ ವರೆಗೆ ಮಾರಾಟ ಮಾಡುತ್ತಿದ್ದೆವು. ಒಂದು ಗ್ರಾಂ ಕೊಕೇನ್ ನ್ನು 3 ರಿಂದ 5 ಸಾವಿರಕ್ಕೆ ಮಾರಾಟ ಮಾಡುತ್ತಿದ್ದೆವು. ಅಶೋಕ್ ಹೋಟಲ್‌ನ ಕಿಟ್ಟಿಕೋ ರೆಸ್ಟೋರೆಂಟ್ ಹಾಗೂ ಶೂಲೆ ವೃತ್ತದಲ್ಲಿರುವ ಓಲಿವಾ ರೆಸ್ಟೋರೆಂಟ್ ಗಳಲ್ಲಿ ಪಾರ್ಟಿ ಆಯೋಜನೆ ಮಾಡುತ್ತಿದ್ದೆವು ಎಂದು ಡ್ರಗ್ ಖರೀದಿ ಹಾಗೂ ಮಾರಾಟದ ಸಂಗತಿಯನ್ನು ರಾಗಿಣಿ ಒಪ್ಪಿಕೊಂಡಿದ್ದಾರೆ.

    ಆರ್‌ಟಿಓ ಅಧಿಕಾರಿ ತೆಕ್ಕೆಯಲ್ಲೂ ಅದೇ ಕಥೆ

    ಆರ್‌ಟಿಓ ಅಧಿಕಾರಿ ತೆಕ್ಕೆಯಲ್ಲೂ ಅದೇ ಕಥೆ

    ಶಿವಪ್ರಕಾಶ್ ಮತ್ತು ರಾಗಿಣಿ ಗೆಳೆತನ ಪ್ರೀತಿಗೆ ತಿರುಗಿ ಮದುವೆಯಾಗಲು ಶಿವಪ್ರಕಾಶ್ ಮುಂದಾಗಿದ್ದ. ರಾಗಿಣಿ ಸಿನಿಮಾ ತೆಗೆಯಲು ಶಿವಪ್ರಕಾಶ್ ಸ್ವಂತ ಪ್ರೊಡಕ್ಷನ್ ತೆರೆಯಲು ತಯಾರಿ ಮಾಡಿದ್ದ. ರಾಗಿಣಿ ಮನೆಗೆ ಹೋಗಿ ಅವರ ಪೋಷಕರ ಬಳಿಯೂ ಮದುವೆ ಪ್ರಸ್ತಾಪ ಮಾಡಿದ್ದ. ಮದುವೆಯಾಗುವಂತೆ ಶಿವಪ್ರಕಾಶ್ ಒತ್ತಡ ಹಾಕಿದ ಹಿನ್ನೆಲೆಯಲ್ಲಿ ಆತನಿಂದ ದೂರವಾಗಿ ನಾನು ಮತ್ತು ರವಿಶಂಕರ್ ಆತ್ಮೀಯರಾದೆವು. ಶಿವಪ್ರಕಾಶ್ ಗೆ ಗೊತ್ತಿಲ್ಲದಂತೆ ರವಿಶಂಕರ್ ನನ್ನನ್ನು ಪಾರ್ಟಿಗಳಿಗೆ ಕರೆದುಕೊಂಡು ಹೋಗುತ್ತಿದ್ದ.

    ರವಿಶಂಕರ್ ಮತ್ತು ನಾನು ಹುಟ್ಟುಹಬ್ಬದ ನೆಪದಲ್ಲಿಬೇರೆ ಬೇರೆ ಹೋಟೆಲ್ ಗಳಲ್ಲಿ ಪಾರ್ಟಿ ಆಯೋಜಿಸಿ ಡ್ರಗ್ ಸೇವನೆ ಮಾಡಿರುತ್ತೇವೆ. ಇತರರಿಂದ ಹಣ ಪಡೆದು ಮಾರಾಟ ಮಾಡುತ್ತಿದ್ದೆವು. ಸೆಲಿಬ್ರಿಟಿಯಾಗಿದ್ದರಿಂದ ನಾನು ಡ್ರಗ್ ಸೇವನೆ ಮಾಡುವುದು ಯುವಕರನ್ನು ಆಕರ್ಷಿಸಲು ಕಾರಣವಾಗುತ್ತಿತ್ತು ಎಂದಿದ್ದಾಳೆ ರಾಗಿಣಿ. 2019 ರ ವೇಳೆಗೆ ಚಿಪ್ಪಿಯಿಂದ ಸಂಪೂರ್ಣ ದೂರ ಸರಿದ ರಾಗಿಣಿ ರವಿಶಂಕರ್ ಜತೆ ಗುರುತಿಸಿಕೊಂಡಿದ್ದಳು. ಇದರಿಂದ ಕುಪಿತಗೊಂಡಿದ್ದ ಶಿವಪ್ರಕಾಶ್ ರವಿಶಂಕರ್ ಮೇಲೆ ಹಲ್ಲೆ ಮಾಡಿದ್ದ ಎಂದು ಹೇಳಿಕೆಯಲ್ಲಿ ವಿವರಿಸಿದ್ದಾಳೆ.

    ಹೀಗೆ ಹಾಲಿ ಮತ್ತು ಮಾಜಿ ಬಾಯ್ ಫ್ರೆಂಡ್‌ಗಳ ಮೂಲಕ ನಶೆ ವಹಿವಾಟಿನ ಚಿತ್ರಣವನ್ನು ರಾಗಿಣಿ ವಿವರಿಸಿದ್ದಾಳೆ. ಇನ್ನು 2019 ಜೂನ್ ನಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಕಟ್ಟಡದ ಕ್ಯೂ1 ನೈಟ್ ಕ್ಲಬ್, ಏಪ್ರಿಲ್‌ನಲ್ಲಿ ಹೊಸೂರು ರಸ್ತೆಯಲ್ಲಿರುವ ಧವನಮ್ ಸರೋವರ್ ಪಾರ್ಟಿಕೋ ನಲ್ಲಿ ಫ್ಯಾಷನ್ ಶೋ ಆಯೋಜಿಸಿದ್ದರು. ಮಾಡಲ್ ರಮೇಶ್ ಡೆಮ್ಲಾ ಜತೆ ಹೆಜ್ಜೆ ಹಾಕಿದ್ದ ನಟಿ ರಾಗಿಣಿ ಅಲ್ಲಿಯೂ ಡ್ರಗ್ ಸೇವನೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಹೀಗೆ ವರ್ಷದಲ್ಲಿ ಅನೇಕ ಹುಟ್ಟುಹಬ್ಬಗಳ ಆಚರಣೆ ಹೆಸರಿನಲ್ಲಿ ಡ್ರಗ್ ಪಾರ್ಟಿ ಆಯೋಜಿಸಿ ವಹಿವಾಟು ನಡೆಸುತ್ತಿದ್ದ ಸಂಗತಿಯನ್ನು ರಾಗಿಣಿ ಬಾಯಿ ಬಿಟ್ಟಿದ್ದಾಳೆ.

    ರೌಡಿ ಲೋಕದ ಬರ್ತಡೇ ಪಾರ್ಟಿಗಳು

    ರೌಡಿ ಲೋಕದ ಬರ್ತಡೇ ಪಾರ್ಟಿಗಳು

    ರಾಜಧಾನಿ ಬೆಂಗಳೂರಿನಲ್ಲಿ ರೌಡಿಸಂ ಆರಂಭ ಆಗುವುದೇ ಹುಟ್ಟುಹಬ್ಬದ ಆಚರಣೆಗಳಿಂದ. ರೌಡಿಯಾಗಿ ಗುರುತಿಸಿಕೊಳ್ಳಲು ತನ್ನ ಆಪ್ತ ಬಳಗಕ್ಕೆ ವರ್ಷದಲ್ಲಿ ಮೂರ್ನಾಲ್ಕು ಸಲ ಹುಟ್ಟು ಹಬ್ಬ ಆಚರಣೆ ಮಾಡುವುದು. ಈ ಮೂಲಕ ಇಮೇಜ್ ಬೆಳೆಸಿಕೊಳ್ಳುವುದು ವಾಡಿಕೆ. ರೌಡಿಸಂಗೆ ಎಂಟ್ರಿ ಕೊಡುವ ಬಹುತೇಕ ಹುಡುಗರು ವರ್ಷದಲ್ಲಿ 250 ದಿನ ಹುಟ್ಟುಹಬ್ಬದ ಪಾರ್ಟಿಗಳ್ಲೇ ಕಳೆಯುತ್ತಾರೆ. ಅದೇ ರೀತಿ ಸ್ಯಾಂಡಲ್ ವುಡ್ ಮಾದಕ ಲೋಕವೂ ಹುಟ್ಟುಹಬ್ಬಗಳ ಹೆಸರಿನಲ್ಲಿಯೇ ನಶೆ ಏರಿಸಿಕೊಳ್ಳುತ್ತಿದ್ದ ಸಂಗತಿ ತನಿಖೆಯಲ್ಲಿ ಹೊರ ಬಿದ್ದಿದೆ.

    English summary
    Sandalwood Drug case explained: Ragini Dwivedi reportedly confessed to having consumed MDMA pills on two occasions, according to a police officer who's questioning her in a drugs case. Know more.
    Monday, September 13, 2021, 11:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X