twitter
    For Quick Alerts
    ALLOW NOTIFICATIONS  
    For Daily Alerts

    14 ದಿನ ನ್ಯಾಯಾಂಗ ಬಂಧನ: ಪರಪ್ಪನ ಅಗ್ರಹಾರ ಜೈಲಿಗೆ ನಟಿ ರಾಗಿಣಿ

    |

    ಮಾದಕ ವಸ್ತು ಜಾಲದೊಂದಿಗೆ ನಂಟು, ಮಾದಕ ವಸ್ತು ಸೇವನೆಗೆ ಉತ್ತೇಜನ ಆರೋಪದ ಮೇಲೆ ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಪಟ್ಟಿರುವ ನಟಿ ರಾಗಿಣಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಸಂಜನಾ ಗಲ್ರಾನಿ ಇನ್ನೂ ಕೆಲವು ದಿನ ಸಿಸಿಬಿ ವಶದಲ್ಲೇ ಇರಲಿದ್ದಾರೆ.

    ರಾಗಿಣಿ ದ್ವಿವೇದಿ ಸೇರಿದಂತೆ ಒಟ್ಟು ಏಳು ಮಂದಿಗೆ ಈಗ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಇಷ್ಟೂ ಮಂದಿ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರ ಮಾಡಲಾಗುತ್ತದೆ. ನಗರದ ಒಂದನೇ ಎಸಿಎಂಎಂ ನ್ಯಾಯಾಲಯವು ಈ ಆದೇಶ ಹೊರಡಿಸಿದೆ.

    ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿಯನ್ನು ಸಿಸಿಬಿ ಪೊಲೀಸರು ಸೆಪ್ಟೆಂಬರ್ ನಾಲ್ಕರಂದು ಬಂಧಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾನಿಯನ್ನು ಸೆಪ್ಟೆಂಬರ್ 9 ರಂದು ಬಂಧಿಸಲಾಗಿತ್ತು.

    ರಾಗಿಣಿಗೆ ಮಾತ್ರ ನ್ಯಾಯಾಂಗ ಬಂಧನ

    ರಾಗಿಣಿಗೆ ಮಾತ್ರ ನ್ಯಾಯಾಂಗ ಬಂಧನ

    ಇಬ್ಬರೂ ನಟಿಯರು ಬಂಧನಕ್ಕೆ ಒಳಗಾದ ದಿನದಿಂದಲೂ ಸಿಸಿಬಿ ವಶದಲ್ಲಿಯೇ ಇದ್ದರು. ಇದೀಗ ಸಿಸಿಬಿ ವಿಚಾರಣೆ ಮುಗಿದ ಕಾರಣ, ರಾಗಿಣಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲು ತಕರಾರಿಲ್ಲವೆಂದು ಸಿಸಿಬಿಯು ಕೋರ್ಟ್‌ಗೆ ಹೇಳಿತ್ತು. ಅಂತೆಯೇ ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

    ಸಂಜನಾರನ್ನು ವಶಕ್ಕೆ ನೀಡಲು ಸಿಸಿಬಿ ಮನವಿ

    ಸಂಜನಾರನ್ನು ವಶಕ್ಕೆ ನೀಡಲು ಸಿಸಿಬಿ ಮನವಿ

    ಆದರೆ ಸಂಜನಾ ಗಲ್ರಾನಿಯನ್ನು ಸಿಸಿಬಿ ವಶದಲ್ಲಿ ಮುಂದುವರೆಸುವಂತೆ ಮನವಿ ಮಾಡಲಾಗಿದೆ. ಇನ್ನೂ ಐದು ದಿನಗಳ ಕಾಲ ಸಂಜನಾ ರನ್ನು ಸಿಸಿಬಿ ವಶಕ್ಕೆ ನೀಡಬೇಕೆಂದು ಸಿಸಿಬಿ ಮನವಿ ಸಲ್ಲಿಸಿದೆ. ಈವರೆಗೆ ಆರು ದಿನವನ್ನು ಸಂಜನಾ ಸಿಸಿಬಿ ವಶದಲ್ಲಿ ಕಳೆದಿದ್ದಾರೆ. ನ್ಯಾಯಾಲಯವು ಈ ಬಗ್ಗೆ ಆದೇಶವನ್ನು ಇನ್ನಷ್ಟೇ ಹೊರಡಿಸಬೇಕಿದೆ.

    ಐದು ಮಂದಿಗೆ ನ್ಯಾಯಾಂಗ ಬಂಧನ

    ಐದು ಮಂದಿಗೆ ನ್ಯಾಯಾಂಗ ಬಂಧನ

    ಪ್ರಸ್ತುತ, ನಟಿ ರಾಗಿಣಿ ದ್ವಿವೇದಿ, ಪ್ರಶಾಂತ್ ರಾಂಕ, ರಾಹುಲ್, ರಿಯಾಜ್, ರವಿಶಂಕರ್ ಅವರುಗಳಿಗಷ್ಟೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇವರೆಲ್ಲರೂ 12 ಕ್ಕಿಂತಲೂ ಹೆಚ್ಚು ದಿನವನ್ನು ಸಿಸಿಬಿ ವಶದಲ್ಲಿ ಕಳೆದಿದ್ದಾರೆ. ಈ ಐವರು ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿಗೆ ಹೋಗಲಿದ್ದಾರೆ.

    Recommended Video

    Sanjjanaa & Ragini to jail,ಕೊನೆಗೂ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯಲಿದ್ದಾರೆ ಸಂಜನಾ, ರಾಗಿಣಿ
    ಆರೋಗ್ಯ ಸಮಸ್ಯೆಯ ಬಗ್ಗೆ ಹೇಳಿಕೊಂಡ ನಟಿ ರಾಗಿಣಿ

    ಆರೋಗ್ಯ ಸಮಸ್ಯೆಯ ಬಗ್ಗೆ ಹೇಳಿಕೊಂಡ ನಟಿ ರಾಗಿಣಿ

    ಆರೋಗ್ಯ ಸಮಸ್ಯೆ ಇದೆ. ಬೆನ್ನು ನೋವು ಹಾಗೂ ಅಸ್ತಮಾ ಇದ್ದು, ನನಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಳ್ಳಲು ಅವಕಾಶ ನೀಡಬೇಕು ಎಂದು ರಾಗಿಣಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ನ್ಯಾಯಾಧೀಶರು ಒಪ್ಪಲಿಲ್ಲ ಎನ್ನಲಾಗಿದೆ.

    English summary
    Actress Ragini Dwivedi sent to judicial custody in Drugs case.
    Monday, September 14, 2020, 16:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X