ಡ್ರಗ್ಸ್ ಪ್ರಕರಣ: ಸಿಸಿಬಿ ವಿಚಾರಣೆಗೆ ಹಾಜರಾದ ದಿಗಂತ್-ಐಂದ್ರಿತಾ ರೇ

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ನೀಡಿದ್ದ ನೋಟಿಸ್ ಹಿನ್ನೆಲೆ ನಟ ದಿಗಂತ್ ಮತ್ತು ಐಂದ್ರಿತಾ ರೇ ಇಂದು (ಸೆಪ್ಟೆಂಬರ್ 16) ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ.

ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಸ್ಟಾರ್ ದಂಪತಿ ಒಟ್ಟಿಗೆ ಆಗಮಿಸಿದ್ದು, ವಿಚಾರಣೆಗೆ ಒಳಪಟ್ಟಿದ್ದಾರೆ. ಕಳೆದ ಒಂದು ವಾರದಿಂದ ಕೇರಳದಲ್ಲಿದ್ದ ದಿಗಂತ್-ಐಂದ್ರಿತಾ ಅವರಿಗೆ ನಿನ್ನೆ (ಮಂಗಳವಾರ) ಸಿಸಿಬಿ ಪೊಲೀಸರು ಫೋನ್ ಮೂಲಕ ನೋಟಿಸ್ ನೀಡಿದ್ದರು.

ಬುಧವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಬೇಕು ಎಂದು ಖಡಕ್ ಆಗಿ ಸೂಚಿಸಿದ್ದರು. ಹೀಗಾಗಿ, ತಡರಾತ್ರಿಯೇ ಕೇರಳದಿಂದ ಬೆಂಗಳೂರಿಗೆ ಹೊರಟು ಬಂದ ದಿಗಂತ್ ದಂಪತಿ, ಮಧ್ಯರಾತ್ರಿಯೇ ತಮ್ಮ ಪರ ವಕೀಲರ ಬಳಿ ಚರ್ಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಕೀಲರಿಂದ ಸಾಕಷ್ಟು ಮಾಹಿತಿ ಪಡೆದು ಸಿಸಿಬಿ ಪೊಲೀಸರ ಮುಂಚೆ ಹಾಜರಾಗಿದ್ದಾರೆ.

Sandalwood Drug Case: Diganth And Aindrita Ray Appeared Before Ccb For Enquiry

ಸಂಜನಾ ಮತ್ತು ರಾಗಿಣಿ ದ್ವಿವೇದಿ ಅವರ ಕೇಸ್‌ ಗಮನಿಸಿದರೆ ವಿಚಾರಣೆ ವೇಳೆ ಇಬ್ಬರನ್ನು ಬಂಧಿಸಿದ್ದರು. ಹಾಗಾಗಿ, ದಿಗಂತ್ ಮತ್ತು ಐಂದ್ರಿತಾ ರೇ ಅವರಿಗೂ ಸಹ ಬಂಧನದ ಭೀತಿ ಎದುರಾಗಿದೆ. ಇದು ಸಾಮಾನ್ಯ ವಿಚಾರಣೆ ಆಗುತ್ತಾ ಅಥವಾ ವಿಚಾರಣೆಯ ಜೊತೆ ಬಂಧನ ಆಗುತ್ತಾ ಪ್ರಶ್ನೆಯಾಗಿದೆ.

ಅಂದ್ಹಾಗೆ, ಡ್ರಗ್ಸ್ ಪೆಡ್ಲರ್‌ಗಳು ಆಯೋಜಿಸಿದ್ದ ಪಾರ್ಟಿಗಳಲ್ಲಿ ನಟ ದಿಗಂತ್ ಮತ್ತು ಐಂದ್ರಿತಾ ರೇ ಭಾಗವಹಿಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಪೆಡ್ಲರ್‌ಗಳ ಜೊತೆಗಿನ ಫೋಟೋ ಸಹ ವೈರಲ್ ಆಗಿತ್ತು. ಇನ್ನು ಐಂದ್ರಿತಾ ರೇಗೆ ಸ್ನೇಹಿತೆಯಾಗಿರುವ ಸಂಜನಾ ಗಲ್ರಾನಿ ಸಹ ನಟಿಯ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ.

Recommended Video

ಎಸಿಪಿ Gautam Kumar ಮುಂದೆ ಹಾಜರಾದ ನಟ Diganth, ಹಾಗೂ Aindrita Ray | Oneindia Kannada

More from Filmibeat

English summary
Sandalwood Drug Case: Actor Diganth and Aindrita ray Appeared Before CCB for enquiry at bengaluru today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X