twitter
    For Quick Alerts
    ALLOW NOTIFICATIONS  
    For Daily Alerts

    ಎನ್‌ಸಿಬಿ ತನಿಖೆಯಿಂದ ಹಿಡಿದು ಸಿಸಿಬಿವರೆಗೆ ಸ್ಯಾಂಡಲ್‌ವುಡ್ ಡ್ರಗ್ ಕೇಸ್ ಮಿಸ್ಟರಿ!

    |

    ಬೆಂಗಳೂರು: ರಾಜಧಾನಿಯಲ್ಲಿ ಊಹೆಗೂ ನಿಲುಕದ ರೀತಿಯಲ್ಲಿ ಮಾದಕ ಜಾಲ ಹಬ್ಬಿದೆ ಎಂಬುದನ್ನು ಬಯಲು ಮಾಡಿದ್ದೇ ಸ್ಯಾಂಡಲ್ ವುಡ್ ಡ್ರಗ್ ಪ್ರಕರಣ. ಕೇವಲ ವಿದೇಶಿ ಡ್ರಗ್ ಪೆಡ್ಲರ್‌ಗಳ ಬಂಧನಕ್ಕೆ ಸೀಮಿತವಾಗಿದ್ದ ಬೆಂಗಳೂರು ಪೊಲೀಸರು ಡ್ರಗ್ ಕಾರ್ಯಾಚರಣೆ ಪೊಲೀಸರ ಇತಿಹಾಸದಲ್ಲಿ ಇದೇ ಪ್ರಪ್ರಥಮ ಬಾರಿಗೆ ಸ್ಯಾಂಡಲ್ ವುಡ್ ನಟ- ನಟಿಯರು, ಉದ್ಯಮಿಗಳು, ರಾಜಕಾರಣಿಗಳ ಪುತ್ರರ ಕದ ತಟ್ಟಿತು. ಹಲವು ವರ್ಷಗಳಿಂದ ನಡೆದಕೊಂಡು ಬರುತ್ತಿದ್ದ ಮಾದಕ ಸಂಪರ್ಕ ಜಾಲ ಬಯಲಿಗೆ ಬರಲು ಮೂಲ ಕಾರಣವಾಗಿದ್ದು ಎನ್ ಸಿಬಿ ಅಧಿಕಾರಿಗಳು ಬೆಂಗಳೂರಿನಲ್ಲಿ ದಾಖಲಿಸಿದ ಒಂದು ಪ್ರಕರಣದಿಂದ!

    ಎನ್‌ಸಿಬಿ ದಾಖಲಿಸಿದ ಪ್ರಕರಣದಿಂದ ಆರಂಭಗೊಂಡು ಸಿಸಿಬಿ ಪೊಲೀಸರು ದಾಖಲಿಸಿದ ಸ್ಯಾಂಡಲ್‌ವುಡ್ ಡ್ರಗ್ ಪ್ರಕರಣ ರೋಚಕ ಸತ್ಯಗಳು "ಸ್ಯಾಂಡಲ್‌ವುಡ್ ಡ್ರಗ್ ಫೈಲ್ಸ್ " ಸರಣಿ ಕಂತಿನಲ್ಲಿ ನೀಡಲಾಗುತ್ತಿದೆ. NCB ದಾಖಲಿಸಿದ ಆ ಪ್ರಕರಣದಿಂದ ಮೊದಲಗೊಂಡು ಸಿಸಿಬಿ ಪೊಲೀಸರು ದೋಷಾರೋಪ ಹೊರಿಸಿದ ಸ್ಯಾಂಡಲ್‌ವುಡ್ ಪ್ರಕರಣದ ಚಿತ್ರಣ ಇಲ್ಲಿದೆ.

    ಎನ್‌ಸಿಬಿ ಅಧಿಕಾರಿಗಳ ದಾಳಿ

    ಎನ್‌ಸಿಬಿ ಅಧಿಕಾರಿಗಳ ದಾಳಿ

    ಅದು. ಆ. 26. 2020. ಸೆಲಿಬ್ರಿಟಿಗಳು, ಸಿನಿ ನಟಿಯರಿಗೆ ಹಾಗೂ ಉದ್ಯಮಿಗಳ ಮಕ್ಕಳು ಮಾದಕ ಪಾರ್ಟಿ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಎನ್ ಸಿಬಿ ಅಧಿಕಾರಿಗಳು ಬೆಂಗಳೂರಿನ ಕಲ್ಯಾಣ ನಗರದಲ್ಲಿರುವ ರಾಯಲ್ ಸೂಟ್ಸ್ ಹೋಟೆಲ್ ಮೇಲೆ ದಾಳಿ ಮಾಡಿದ್ದರು. ಹೋಟೆಲ್ ನಲ್ಲಿ ರೆಡ್ ಹ್ಯಾಂಡ್ ಆಗಿ ಎಂಎಡಿಎ, ಎಲ್ಎಸ್‌ಡಿ ಎಕ್ಸೆಟೆಸಿ ಫಿಲ್ಸ್ ವಶಪಡಿಸಿಕೊಂಡಿದ್ದ ಎನ್ ಸಿಬಿ ಅಧಿಕಾರಿಗಳು ಅನೂಪ್, ರವೀಂದ್ರನ್ ಹಾಗೂ ಡಿ. ಅಂಕಿತ ಎಂಬ ಮೂರು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದರು. ಡ್ರಗ್ ಪೆಡ್ಲರ್ ಅಂಕಿತಾ ಅವರ ದೊಡ್ಡ ಗುಬ್ಬಿ ಮನೆ ಮೇಲೆ ದಾಳಿ ಮಾಡಿದಾಗ ಅಪಾರ ಪ್ರಮಾಣದ ಮಾದಕ ವಸ್ತುಗಳು ಸಿಕ್ಕಿದ್ದವು.

     ಪ್ರಕರಣದ ಪ್ರಾಥಮಿಕ ತನಿಖೆ ವೇಳೆ

    ಪ್ರಕರಣದ ಪ್ರಾಥಮಿಕ ತನಿಖೆ ವೇಳೆ

    ಪ್ರಕರಣದ ಪ್ರಾಥಮಿಕ ತನಿಖೆ ವೇಳೆ ಸ್ಯಾಂಡಲ್‌ವುಡ್ ನಟ ನಟಿಯರಿಗೆ ಹಾಗೂ ಸೆಲಿಬ್ರಿಟಿಗಳಿಗೆ ಹಾಗೂ ಯುವ ಜನಾಂಗಕ್ಕೆ ಮಾದಕ ವಸ್ತು ಪೂರೈಕೆ ಮಾಡಲಾಗುತ್ತಿದೆ ಎಂಬ ಸ್ಫೋಟಕ ಸಂಗತಿಗಳು ಹೊರ ಬಿದ್ದಿದ್ದವು. ಬೆಂಗಳೂರು ಘಟಕದ ಎನ್‌ಸಿಬಿ ಅಧಿಕಾರಿಗಳು ಈ ಅಂಶವನ್ನು ಬಹಿರಂಗ ಪಡಿಸಿದ್ದರು. ಇದಕ್ಕೂ ಮೊದಲು ರೆಹಮಾನ್ ಎಂಬ ಡ್ರಗ್ ಪೆಡ್ಲರ್‌ನನ್ನು ಬಂಧಿಸಿದ್ದು, ಈತ ನೀಡಿದ ಮಾಹಿತಿ ಮೇರೆಗೆ ಬೆಂಗಳೂರಿನ ಕಲ್ಯಾಣನಗರ ಹೋಟೆಲ್ ಮೇಲೆ ದಾಳಿ ನಡೆಸಲಾಗಿತ್ತು.

    ಸಿಸಿಬಿ ಪೊಲೀಸರು ಡ್ರಗ್ ಪ್ರಕರಣಕ್ಕೆ ಎಂಟ್ರಿ

    ಸಿಸಿಬಿ ಪೊಲೀಸರು ಡ್ರಗ್ ಪ್ರಕರಣಕ್ಕೆ ಎಂಟ್ರಿ

    ಯಾವಾಗ ಸ್ಯಾಂಡಲ್‌ವುಡ್ ನಟ ನಟಿಯರ ಹೆಸರು ಡ್ರಗ್ ಜಾಲದಲ್ಲಿ ಕೇಳಿ ಬಂತೋ ಸಿಸಿಬಿ ಪೊಲೀಸರು ಡ್ರಗ್ ಜಾಲಕ್ಕೆ ಕೈ ಹಾಕಿದರು. ಎರಡು ವರ್ಷದ ಹಿಂದೆ ಇದೇ ಸಿಸಿಬಿ ಪೊಲೀಸರು ಎಸಿಪಿ ಮೋಹನ್ ಕುಮಾರ್ ಮತ್ತು ಸಿಬ್ಬಂದಿ ಡ್ರಗ್ ಪೆಡ್ಲರ್‌ನನ್ನು ಬಂಧಿಸಿ ಒಂದೂವರೆ ಕೆ.ಜಿ. ಕೊಕೈನ್ ವಶಪಡಿಸಿಕೊಂಡಿದ್ದರು. ಡ್ರಗ್ ಪೆಡ್ಲರ್ ನೀಡಿದ ಸುಳಿವಿನ ಮೇರೆಗೆ ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಪ್ರತೀಕ್ ಶೆಟ್ಟಿಯನ್ನು ಬಂಧಸಿದ್ದರು. ( ಬಾಣಸವಾಡಿ ಪ್ರಕರಣ 588 /18 ) ಈ ವೇಳೆ ನಟಿ ರಾಗಿಣಿ, ವೀರೇನ್ ಖನ್ನಾ ಸೇರಿದಂತೆ ಅನೇಕ ಸೆಲಿಬ್ರಿಟಿಗಳ ಹೆಸರು ಕೇಳಿ ಬಂದಿತ್ತು. ಆದರೆ ಅಲ್ಲಿಗೆ ಈ ಪ್ರಕರಣ ನಿಂತು ಹೋಗಿತ್ತು.

    ಯಾವಾಗ ಎನ್‌ಸಿಬಿ ಡ್ರಗ್ ಪ್ರಕರಣಲ್ಲಿ ಸೆಲಿಬ್ರಿಟಿಗಳ ಹೆಸರು ಪ್ರಸ್ತಾಪಿಸಿತೋ ಸಿಸಿಬಿ ಡ್ರಗ್ ಪ್ರಕರಣದ ಹಿಂದೆ ಬಿತ್ತು. ಖಚಿತ ಮಾಹಿತಿ ಮೇರೆಗೆ ಡ್ರಗ್ ಪೆಡ್ಲರ್‌ಗಳ ಬೆನ್ನು ಬಿದ್ದಿದ್ದ ಸಿಸಿಬಿ ಎಸಿಪಿ ಗೌತಮ್ ಗಾಳ ಹಾಕಿದ್ದೇ ಪ್ರತೀಕ್ ಶೆಟ್ಟಿ ಜತೆ ಸಂಪರ್ಕದಲ್ಲಿದ್ದ ಅರ್‌ಟಿಓ ಅಧಿಕಾರಿ ರವಿ ಶಂಕರ್‌ಗೆ. ಸ್ಯಾಂಡಲ್‌ವುಡ್ ಡ್ರಗ್ ಸಂಪರ್ಕ ಜಾಲದೊಂದಿಗೆ ಸಂಪರ್ಕ ಹೊಂದಿದ್ದ ರವಿಶಂಕರ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಸ್ಫೋಟಕ ಮಾಹಿತಿಗಳನ್ನು ಹೊರ ಹಾಕಿದ್ದ.

     ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು

    ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು

    ಆತನ ಹೇಳಿಕೆ ಆಧರಿಸಿ ಸಿಸಿಬಿ ಎಸಿಪಿ ಗೌತಮ್ ಕಾಟನ್ ಪೇಟೆ ಪೊಲೀಸ್ ಠಾಣೆಗೆ ಸೆ. 04, 2020 ರಂದು ದೂರು ನೀಡಿದ್ದರು. ಎಸಿಪಿ ಗೌತಮ್ ನೀಡಿದ ದೂರಿನ ಮೇರೆಗೆ ಸಿಸಿಬಿ ಪೊಲೀಸರು 109/2020 ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡರು. ಐಷಾರಾಮಿ ಹೋಟೆಲ್‌ಗಳಲ್ಲಿ ಡ್ರಗ್ ಪಾರ್ಟಿ, ಸೆಲಿಬ್ರಿಟಿಗಳ ಮಾದಕ ವಸ್ತು ಸೇವನೆ ಮಾಡುತ್ತಿರುವ ಬಗ್ಗೆ ದೂರುದಾರ ಎಸಿಪಿ ಗೌತಮ್ ಹನ್ನೆರಡು ಆರೋಪಿಗಳ ವಿರುದ್ಧ ದೂರು ನೀಡಿದ್ದರು. ಅದರಂತೆ ದಾಖಲಾದ ಪ್ರಕರಣವನ್ನು ತನಿಖೆ ನಡೆಸಿದ ಸಿಸಿಬಿ ಪೊಲೀಸರು ಬರೋಬ್ಬರಿ 25 ಮಂದಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

    ಇನ್ನು ಈ ಸ್ಯಾಂಡಲ್‌ವುಡ್ ಡ್ರಗ್ ಪ್ರಕರಣದ ತನಿಖೆ ಆರಂಭ, ಸೆಲಿಬ್ರಿಟಿಗಳ ಬಂಧನ, ಇದರ ಐ ವಿಟ್ನೆಸ್‌ಗಳ ದಾಖಲಿಸಿರುವ ಹೇಳಿಕೆಗಳು, ಬೆಂಗಳೂರಿನ ಯಾವ ಯಾವ ಐಷಾರಾಮಿ ಹೋಟೆಲ್ ಗಳು ಮಾದಕ ಮತ್ತಿನ ಕೇಂದ್ರಗಳಾಗಿವೆ. ಹೇಗೆಲ್ಲಾ ಪಾರ್ಟಿಗಳು ನಡೆದವು ಡ್ರಗ್ ಸಪ್ಲೇ, ಅರ್ಥಿಕ ವಹಿವಾಟು ಎಲ್ಲದರ ವಿವರಗಳನ್ನು ಸಿಸಿಬಿ ಪೊಲೀಸರು 2500 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

     ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಂತೆ ದೂರು

    ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಂತೆ ದೂರು

    ಸ್ಯಾಂಡಲ್‌ವುಡ್ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಆಕ್ಟ್ ಸೆಕ್ಷನ್ 21, 21(c) 27(b), 27 (a), 29, ಭಾರತೀಯ ದಂಡ ಸಂಹಿತೆ 120 b, 201 ಫಾರಿನರ್ಸ್ ಕಾಯ್ದೆ ಅಡಿ ಕೇಸು ದಾಖಲಿಸಲಾಗಿದೆ. ಮಾದಕ ವಸ್ತು ಸೇವೆ, ದುಷ್ಪ್ರೇರಣೆ, ಆರ್ಥಿಕ ವಹಿವಾಟು, ಡ್ರಗ್ ಸೇವನೆಗೆ ಪ್ರಚೋದನೆ, ಡ್ರಗ್ ಮಾರಾಟ ಮಾಡಿದ ಆರೋಪ ಹೊರಿಸಲಾಗಿದೆ. ಹನ್ನೆರಡು ಮಂದಿಯ ವಿರುದ್ಧ ದಾಖಲಾದ ಪ್ರಕರಣದಲ್ಲಿ 25 ಮಂದಿಯ ವಿರುದ್ಧ ದೋಷಾರೋಪ ಹೊರಿಸಲಾಗಿದೆ. ಅವರ ವಿವರ ಇಲ್ಲಿದೆ.

     ಆರೋಪಿಗಳ ವಿವರ

    ಆರೋಪಿಗಳ ವಿವರ

    ಆರೋಪಿ ನಂ 1 : ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ, ರಿಯಲ್ ಎಸ್ಟೇಟ್ ಉದ್ಯಮಿ ಕಂ ನಿರ್ಮಾಪಕ, ನೆಲಮಂಗಲ

    ಆರೋಪಿ ನಂ 2 : ರಾಗಿಣಿ, ಅಲಿಯಾಸ್ ಗಿಣಿ, ರಾಗ್ಸ್, ಚಿತ್ರನಟಿ, ಜುಡಿಷಿಯಲ್ ಲೇಔಟ್ ಅಲ್ಲಾಳಸಂದ್ರ, ಬೆಂಗಳೂರು

    ಆರೋಪಿ ನಂ 3 : ವೀರೇನ್ ಖನ್ನಾ, ಪಾರ್ಟಿ ಆರ್ಗನೈಸರ್, ಪಿಯರ್ಸನ್ ಅಪಾರ್ಟ್ಮೆಂಟ್ , ಶಾಂತಿನಗರ, ಬೆಂಗಳೂರು

    ಆರೋಪಿ ನಂ 04: ಪ್ರಶಾಂತ್ ರಂಕಾ, ಫೈನಾನ್ಷಿಯರ್, ವಿಜ್ಞಾನ ನಗರ ಬೆಂಗಳೂರು.

    ಆರೋಪಿ ನಂ 05: ವೈಭವ್ ಕುಮಾರ್ ಜೈನ್ ಅಲಿಯಾಸ್ ವೈಭವ್ ಜೈನ್, ಫೈನಾನ್ಷಿಯರ್, 11 ನೇ ಕ್ರಾಸ್, ಮಲ್ಲೇಶ್ವರ ಬೆಂಗಳೂರು,

    ಆರೋಪಿ ನಂ 06: ಆದಿತ್ಯಾ ಆಳ್ವಾ , ಉದ್ಯಮಿ, ಹೌಸ್ ಆಫ್ ಲೈಫ್ ರೆಸಾರ್ಟ್ ಮಾಲೀಕ, (ರಾಜಕಾರಣಿಯ ಪುತ್ರ) ಆರ್‌ಎಂವಿ ಬಡಾವಣೆ, ಸದಾಶಿವನಗರ

    ಆರೋಪಿ ನಂ 07: ಲೂಮ್ ಪೆಪ್ಪೆ ಸಾಂಬಾ , ಡ್ರಗ್ ಪೆಡ್ಲರ್, ಸೆಲೆನಗರ ದೇಶದವ, ಕೋಗಿಲು ಗ್ರಾಮ, ಬೆಂಗಳೂರು.

    ಆರೋಪಿ ನಂ 08: ಪ್ರಶಾಂತ ರಾಜು, ಬಿ. ರಿಯಲ್ ಎಸ್ಟೇಟ್ ಉದ್ಯಮಿ, ಬಿಳೇಕಹಳ್ಳಿ ಡಾಲರ್ಸ್ ಲೇಔಟ್, ಬೆಂಗಳೂರು,

    ಆರೋಪಿ ನಂ. 09: ಬಿ.ಎಸ್. ಅಶ್ವಿನ್ ಕುಮಾರ್ ಬೋಗಿ, ಬ್ಯುಜಿನೆಸ್ ಮ್ಯಾನ್, ಬಸವೇಶ್ವರನಗರ ಬೆಂಗಳೂರು,

    ಆರೋಪಿ ನಂ 10: ಅಭಿಜಿತ್ ರಂಗಸ್ವಾಮಿ, ಅಲಿಯಾಸ್ ಅಭಿಸ್ವಾಮಿ, ಪೆಟ್ರೋಲ್ ಬಂಕ್ ಮಾಲೀಕ, ಮಾದನಾಯಕನಹಳ್ಳಿ, ಬೆಂಗಳೂರು.

    ಆರೋಪಿ 11: ರಾಹುಲ್ ತೋಣ್ಸೆ, ಬ್ಯುಸಿನೆಸ್ ಮ್ಯಾನ್, ಬನಶಂಕರಿ 2 ನೇ ಹಂತ, ಬೆಂಗಳೂರು.

    ಆರೋಪಿ ನಂ. 12: ವಿನಯ್ ಕುಮಾರ್, ಬ್ರಿಗೇಡ್ ಗೇಟ್ ವೇ, ಮಲ್ಲೇಶ್ವರಂ, ಬೆಂಗಳೂರು

    ಆರೋಪಿ ನಂ. 13: ನಿಯಾಸ್ ಅಹಮದ್, ಬ್ಯುಸಿನೆಸ್ ಮ್ಯಾನ್, ಎಚ್ಎಸ್ಆರ್ ಲೇಔಟ್ , ಬೆಂಗಳೂರು.

    ಆರೋಪಿ ನಂ. 14: ಸಂಜನಾ ಗಲ್ರಾಣಿ, ಚಲನಚಿತ್ರ ನಟಿ, ದೊಮ್ಮಲೂರು, ಬೆಂಗಳೂರು.

    ಆರೋಪಿ ನಂ. 15: ಪ್ರತೀಕ್ ಶೆಟ್ಟಿ ಅಲಿಯಾಸ್ ಪ್ರತೀಕ್, ವ್ಯಾಪಾರ, ಎಚ್ಎಎಲ್, ತಿಪ್ಪಸಂದ್ರ ಬೆಂಗಳೂರು,

    ಆರೋಪಿ ನಂ. 16: ಬಿ.ಕೆ. ರವಿಶಂಕರ್, ಆರ್‌ಟಿಓ ಅಧಿಕಾರಿ, ವಿಜಯನಗರ, ಬೆಂಗಳೂರು.

    ಆರೋಪಿ ನಂ. 17: ಬೆನಾಲ್ಡ್ ಉಡೇನಾ, ಡ್ರಗ್ ಪೆಡ್ಲರ್, ನೈಜೀರಿಯಾ ಮೂಲದವ, ಯಲಹಂಕದ ಪಾಲನಹಳ್ಳಿಯಲ್ಲಿ ವಾಸ.

    ಆರೋಪಿ. ನಂ 18: ಶ್ರೀನಿವಾಸ್. , ಉದ್ಯಮಿ, ಸಹಕಾರ ನಗರ ಬೆಂಗಳೂರು.

    ಆರೋಪಿ ನಂ. 19: ಮ್ಯಾಶಿ, ಪಾರ್ಟಿ ಆಯೋಜಕ ( ತಲೆ ಮರೆಸಿಕೊಂಡಿದ್ದಾನೆ)

    ಆರೋಪಿ. 20: ಒಸಿಟ, ಒನೋ ಫಿಲಿಪ್, ಡ್ರಗ್ ಪೆಡ್ಲರ್, ನೈಜೀರಿಯಾ, ಯಲಹಂಕದ ಬಾಲಾಜಿ ಲೇಔಟ್ ನಲ್ಲಿ ವಾಸ,

    ಆರೋಪಿ ನಂ. 21: ಚಿಡೇಬರೇ ಅಂಬ್ರೂಸ್, ಡ್ರಗ್ ಪೆಡ್ಲರ್, ನೈಜೀರಿಯಾ, ಬಾಬುಸಾಬ್ ಪಾಳ್ಯ, ಕಲ್ಯಾಣ ನಗರ,

    ಆರೋಪಿ ನಂ. 22 : ಆದಿತ್ಯ ಮೋಹನ್ ಅಗರ್ ವಾಲ್, ಸಾಫ್ಟ್ ವೇರ್ ಎಂಜಿನಿಯರ್, ರಿಚ್ ಮಂಡ್ ಟೌಟ್, ಬೆಂಗಳೂರು.

    ಆರೋಪಿ ನಂ. 23 : ಕಿರಣ್ ಕಾರ್ತೀಕ್ ಅಲಿಯಾಸ್ ಕೆ.ಡಿ. ಹೌಸ್ ಆಫ್ ಲೈಪ್ ರೆಸಾರ್ಟ್ ಉಸ್ತುವಾರಿ, ಕಾಕ್ಸ ಟೌನ್, ಬೆಂಗಳೂರು.

    ಆರೋಪಿ ನಂ. 24 : ಸುಮಿತ್ ಸಾಗರ್, ವಿಕೆಪಿ ಮ್ಯಾನೇಜರ್, ಬಿಟಿಎಂ ಬಡಾವಣೆ, ಬೆಂಗಳೂರು.

    ಆರೋಪ ನಂ. 25: ಆಪೇಕ್ಷಾ ನಾಯಕ್, ಹೋಟೆಲ್ ಉದ್ಯಮ, ಡಾಲರ್ಸ್ ಕಾಲೋನಿ ಬೆಂಗಳೂರು.

    English summary
    Sandalwood drug case files: The CCB intensified\ investigations after the Narcotics Control Bureau (NCB) arrested three persons allegedly supplying drugs to singers and actors in the kannada film industry on August 28. Know more.
    Tuesday, September 7, 2021, 16:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X