twitter
    For Quick Alerts
    ALLOW NOTIFICATIONS  
    For Daily Alerts

    ಸ್ಯಾಂಡಲ್‌ವುಡ್ ಡ್ರಗ್ ಜಾಲದ ಬಗ್ಗೆ ಸಿಸಿಬಿ ಅಧಿಕಾರಿಗಳಿಗೆ ಮೊದಲೇ ಗೊತ್ತಿತ್ತಾ?

    |

    ಬೆಂಗಳೂರು: ಎನ್‌ಸಿಬಿ ಅಧಿಕಾರಿಗಳು ಕಲ್ಯಾಣ ನಗರದಲ್ಲಿ ಹೋಟೆಲ್ ಮೇಲೆ ದಾಳಿ ನಡೆಸಿದ ಬಳಿಕ ಸ್ಯಾಂಡಲ್‌ವುಡ್ ಡ್ರಗ್ ಪ್ರಕರಣ ಹೊರಗೆ ಬಂತು ಎಂದು ಎಲ್ಲರೂ ಈಗಲು ಭಾವಿಸಿದ್ದಾರೆ. ಸ್ಯಾಂಡಲ್‌ವುಡ್ ಡ್ರಗ್ ಜಾಲದಲ್ಲಿರುವರ ಬಗ್ಗೆ ಸಿಸಿಬಿ ಹಿರಿಯ ಪೊಲೀಸ್ ಅಧಿಕಾರಿಗೆ ಮೊದಲೇ ಗೊತ್ತಿತ್ತು. ವಿಪರ್ಯಾಸವೆಂದರೆ ಸಿಸಿಬಿ ಪೊಲೀಸರು ಡ್ರಗ್ ಜಾಲದ ಮೇಲೆ ನಿಗಾ ಇಟ್ಟಿದ್ದ ರಹಸ್ಯ ಮಾಹಿತಿ ಆರೋಪಿಗಳ ಕಿವಿಗೆ ಬಿದ್ದಿತ್ತು. ಇಂತಹ ಕುತೂಹಲಕಾರಿ ಸಂಗತಿ ಸ್ಯಾಂಡಲ್‌ವುಡ್ ಡ್ರಗ್ ಫೈಲ್ಸ್ ಸರಣಿಯ ವಿಶೇಷ ವರದಿ ಇಲ್ಲಿದೆ ನೋಡಿ.

    ಎನ್ ಸಿಬಿ ದಾಳಿ ಕೊಟ್ಟ ಸುಳಿವು ಅಲ್ಲ: ಸೆಲಿಬ್ರಿಟಿಗಳು, ಸಿನಿಮಾ ನಟ- ನಟಿಯರು ಮತ್ತು ಉದ್ಯಮಿಗಳು ಮಾದಕ ಪಾರ್ಟಿ ಮಾಡುವ ಬಗ್ಗೆ ಎನ್ ಸಿಬಿ ಅಧಿಕಾರಿಗಳು ಬೆಂಗಳೂರಿನ ಕಲ್ಯಾಣ ನಗರದ ರಾಯಲ್ ಸೂಟ್ಸ್ ಹೋಟೆಲ್ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಎಂಡಿಎಂಎ, ಎಲ್ಎಸ್ ಡಿ ಎಕ್ಸೆಟೆಸಿ ಪಿಲ್ಸ್ ಮಾದಕ ವಸ್ತು ಸಿಕ್ಕಿತ್ತು. ಈ ವೇಳೆ ಅನೂಪ್, ರವೀಂದ್ರನ್, ಅಂಕಿತಾ ಎಂಬ ಡ್ರಗ್ ಪೆಡ್ಲರ್‌ಗಳು ಸಿಕ್ಕಿಬಿದ್ದರು. ಇವರು ನೀಡಿದ ಮಾಹಿತಿ ಆಧರಿಸಿ ಬೆಂಗಳೂರಿನಲ್ಲಿ ಸ್ಯಾಂಡಲ್‌ವುಡ್ ನಟ ನಟಿಯರು ಮಾದಕ ಪಾರ್ಟಿಗಳ ಬಗ್ಗೆ ಸುಳಿವು ನೀಡಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಎನ್‌ಸಿಬಿ ದಾಳಿ ನಿಜ, ಎನ್‌ಸಿಬಿ ಅಧಿಕಾರಿಗಳು ಹೇಳಿದ್ದೂ ಸತ್ಯ. ಆದರೆ ಅದನ್ನೂ ಮೀರಿ ಸಿಸಿಬಿ ಪೊಲೀಸರು ಸ್ಯಾಂಡಲ್‌ವುಡ್ ಮಾದಕ ನಶೆ ಲೋಕಕ್ಕೆ ಕಾಲಿಟ್ಟು ತಿಂಗಳುಗಳೇ ಕಳೆದು ಹೋಗಿದ್ದವು.

    ಸಿಸಿಬಿ ದಾಳಿ ಬಗ್ಗೆ ನಾಲ್ಕು ತಿಂಗಳ ಮೊದಲೇ ಆರೋಪಿಗಳಿಗೆ ಸುಳಿವು

    ಸಿಸಿಬಿ ದಾಳಿ ಬಗ್ಗೆ ನಾಲ್ಕು ತಿಂಗಳ ಮೊದಲೇ ಆರೋಪಿಗಳಿಗೆ ಸುಳಿವು

    ಸ್ಯಾಂಡಲ್‌ವುಡ್ ಡ್ರಗ್ ಜಾಲದ ವಿರುದ್ಧ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿದ್ದು ಸೆ. 04 ರಂದು. ಎಸಿಪಿ ಗೌತಮ್ ಅವರು ನೀಡಿರುವ ದೂರಿನ ಮೇಲೆ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ 109/2020 ಕೇಸು ದಾಖಲಾಗುತ್ತದೆ. ಆ ಬಳಿಕ ನಟಿ, ರಾಗಿಣಿ, ಸಂಜನಾ ಗಲ್ರಾಣಿ ಸೇರಿದಂತೆ ಅನೇಕರ ಮನೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು ಗೊತ್ತಿರುವ ಸಂಗತಿ. ಆದರೆ, ಸಿಸಿಬಿ ಪೊಲೀಸರ ದಾಳಿಗೂ ನಾಲ್ಕು ತಿಂಗಳ ಮೊದಲೇ ಡ್ರಗ್ ಜಾಲದ ಮೇಲೆ ನಿಗಾ ಇಟ್ಟಿರುವ ಬಗ್ಗೆ ಡ್ರಗ್ ಪ್ರಕರಣದ ಆರೋಪಿಗಳು ಮಾತನಾಡಿಕೊಂಡಿದ್ದರು. ವಾಟ್ಸಪ್ ಮೂಲಕ ಮಾದಕ ವ್ಯಸನಿ ಪಾರ್ಟರ್ ಜತೆ ಆರ್‌ಟಿಒ ದ್ವಿತೀಯ ದರ್ಜೆ ಸಹಾಯಕ ರವಿಶಂಕರ್ ವಾಟ್ಸಪ್‌ನಲ್ಲಿ ಚಾಟ್ ಮಾಡಿದ್ದಾರೆ. ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಡ್ರಗ್ ಜಾಲದ ಬಗ್ಗೆ ನಿಗಾ ಇಟ್ಟಿರುವ ವಿಚಾರದ ಬಗ್ಗೆ ಪ್ರಸ್ತಾಪಿಸಿ ಚಾಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಡ್ರಗ್ ಪೆಡ್ಲರ್‌ಗಳಿಗೆ ಕರೆ ಮಾಡದಂತೆ ರವಿಶಂಕರ್ ತನ್ನ ಆಪ್ತ ವ್ಯಸನಿಗೆ ಸೂಚಿಸಿದ್ದಾರೆ.

    ಸಿಸಿಬಿ ದಾಳಿ ಬಗ್ಗೆ ವಾಟ್ಸಪ್ ಚಾಟ್ ನಲ್ಲಿ ಪತ್ತೆ

    ಸಿಸಿಬಿ ದಾಳಿ ಬಗ್ಗೆ ವಾಟ್ಸಪ್ ಚಾಟ್ ನಲ್ಲಿ ಪತ್ತೆ

    ಸ್ಯಾಂಡಲ್‌ವುಡ್ ಡ್ರಗ್ ಪ್ರಕರಣದ ನಾಲ್ಕನೇ ಆರೋಪಿ ಪ್ರಶಾಂತ್ ರಂಕಾ ಮತ್ತು 16 ನೇ ಆರೋಪಿ ರವಿಶಂಕರ್ ನಡುವೆ ಜೂ. 16 ರಂದು ಮಾದಕ ವಸ್ತು ಬಗ್ಗೆ ವಾಟ್ಸಪ್ ನಲ್ಲಿ ಸಂವಹನ ನಡೆದಿದೆ. ಪ್ರಶಾಂತ್ ರಂಕಾ " which Drug u trip on all nite ಎಂದು ಕೇಳಿದಾಗ ರವಿಶಂಕರ್ Balls ಎಂದು ಉತ್ತರ ನೀಡಿದ್ದಾನೆ. ಇದಾಗಿ ಒಂದು ವಾರದ ನಂತರ ಜೂ. 23 ರಂದು ರವಿಶಂಕರ್ ಪ್ರಶಾಂತ್ ರಂಕಾಗೆ ವಾಟ್ಸಪ್ ಸಂದೇಶದಲ್ಲಿ " ha..ha.ha.. Bugger, Dont call to the peddlers ಎಂದು ಎಚ್ಚರಿಕೆ ನೀಡಿದ್ದಾನೆ. ಇದರಿಂದ ಗಾಯರಿಯಾಗುವ ಪ್ರಶಾಂತ್ ರಂಕಾ "nope, not having it from a long time " ಎಂದಾಗ, ಆರ್‌ಟಿಓ ನೌಕರ ರವಿಶಂಕರ್ " Big Time tracking is going on" ಎಂದು ಉತ್ತರಿಸಿದ್ದಾನೆ. ಮಾತ್ರವಲ್ಲ, ಸಂದೀಪ್ ಪಾಟೀಲ್ ಸರ್ ಅವರು ಡ್ರಗ್ ಪ್ರಕರಣದ ಹಿಂದೆ ಬಿದ್ದಿದ್ದಾರೆ ಎಂದು ಚಾಟ್ ಮಾಡಿದ್ದಾನೆ. ಸಿಸಿಬಿ ಪೊಲೀಸರು ರವಿಶಂಕರ್ ಮೊಬೈಲ್ ವಶಕ್ಕೆ ಪಡೆದು ಶೋಧನೆ ಮಾಡಿದಾಗ "ಸಿಸಿಬಿ ದಾಳಿ" ಬಗ್ಗೆ ಮತನಾಡಿಕೊಂರುವ ಸಂದೇಶಗಳು ಪತ್ತೆಯಾಗಿವೆ. ಜತೆಗೆ ಡ್ರಗ್ ಪೆಡ್ಲರ್‌ಗಳಿಗೆ ಕರೆ ಮಾಡದಂತೆಯೂ ಎಚ್ಚರಿಸಿರುವ ಸಂದೇಶಗಳು ಆರೋಪಿಗಳ ಮೊಬೈಲ್ ಡಾಟಾ ರೀಟ್ರೈವ್ ಮಾಡಿದಾಗ ಸಿಸಿಬಿ ಪೊಲೀಸರಿಗೆ ಗೊತ್ತಾಗಿದೆ.

    2019 ಡಿಸೆಂಬರ್ ವೇಳೆಗೆ ಡ್ರಗ್ ಜಾಲದ ಮೇಲೆ ನಿಗಾ

    2019 ಡಿಸೆಂಬರ್ ವೇಳೆಗೆ ಡ್ರಗ್ ಜಾಲದ ಮೇಲೆ ನಿಗಾ

    NCB ಅಧಿಕಾರಿಗಳು ಆ. 26 ರಂದು ಡ್ರಗ್ ಜಾಲದ ಮೇಲೆ ದಾಳಿ ಮಾಡಿದ ಬಳಿಕವೇ ಸಿಸಿಬಿ ಪೊಲೀಸರು ಡ್ರಗ್ ಪ್ರಕರಣ ಪತ್ತೆ ಮಾಡಿದರು ಎಂಬುದು ವಾಸ್ತವಕ್ಕೆ ದೂರ. ಇಡೀ ಪ್ರಕರಣದ ದೋಷಾರೋಪ ಪಟ್ಟಿ ನೋಡಿದಾಗ, 2019 ಡಿಸೆಂಬರ್ ವೇಳೆಗಾಗಲೇ ಸಿಸಿಬಿ ಪೊಲೀಸರು ಡ್ರಗ್ ಜಾಲದ ಬೆನ್ನು ಬಿದ್ದಿದ್ದರು. ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾರ್ಗಶದರ್ಶನದಲ್ಲಿ ಸಿಸಿಬಿ ಪೊಲೀಸರು ಬಾಣಸವಾಡಿಯಲ್ಲಿ 2018 ರಲ್ಲಿ ದಾಖಲಾಗಿದ್ದ ಡ್ರಗ್ ಪ್ರಕರಣದ ಜಾಡು ಹಿಡಿದು ಕೆಲವರಿಗೆ ಗಾಳ ಹಾಕಿದ್ದರು.

     ಮೊದಲೇ ಸಿಸಿಬಿ ಪೊಲೀಸರು ಲೆಗ್ ವರ್ಕ್ ಶುರು

    ಮೊದಲೇ ಸಿಸಿಬಿ ಪೊಲೀಸರು ಲೆಗ್ ವರ್ಕ್ ಶುರು

    ಅಂತೂ ಸ್ಯಾಂಡಲ್‌ ವುಡ್ ಡ್ರಗ್ ಪ್ರಕರಣ ಬೆಳಕಿಗೆ ಬರುವ ಆರು ತಿಂಗಳು ಮೊದಲೇ ಸಿಸಿಬಿ ಪೊಲೀಸರು ಲೆಗ್ ವರ್ಕ್ ಶುರು ಮಾಡಿರುವುದು ದೋಷಾರೋಪ ಪಟ್ಟಿಯಲ್ಲಿ ಕಾಣುತ್ತದೆ. ಇನ್ನು ನಟಿ ರಾಗಿಣಿ ಗಾಗಿ ಪತ್ನಿಗೆ ಡೈವೋರ್ಸ್ ನೀಡಿದ್ದ ರವಿಶಂಕರ್‌ಗೆ ಸಿಸಿಬಿ ದಾಳಿ ಬಗ್ಗೆ ನಾಲ್ಕು ತಿಂಗಳ ಮೊದಲೇ ಗೊತ್ತಾಗಿತ್ತು. ಅದಾಗಿಯೂ ಸ್ಯಾಂಡಲ್ ವುಡ್ ಡ್ರಗ್ ಜಾಲದ ಮಿಕಗಳು ತಮ್ಮ ಮಾದಕ ಜಾಲ ವಿಸ್ತಾರಗೊಂಡಿತ್ತು. ಆರ್‌ಟಿಓ ನೌಕರ ರವಿಶಂಕರ್ ಗೆ ಗಾಳ ಹಾಕಿ ಇಡೀ ಸ್ಯಾಂಡಲ್‌ವುಡ್ ಡ್ರಗ್ ಜಾಲವನ್ನು ಸಿಸಿಬಿ ಪೊಲೀಸರು ಬಯಲಿಗೆ ಎಳೆದಿದ್ದಾರೆ. ಆತನ ವಿಚಾರಣೆ ಮೂಲಕ ಆರಂಭಿಸಿ ನಟಿಯರು ಸೇರಿದಂತೆ 25 ಮಂದಿಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿರುವುದು ಗಮನಾರ್ಹ.

    English summary
    Sandalwood drug case explained: IS CCB knows about drug scandal before NCB raid. Know more.
    Thursday, September 9, 2021, 13:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X