Don't Miss!
- Sports
IND vs NZ: ಭಾರತ ತಂಡದ ಡ್ರೆಸ್ಸಿಂಗ್ ರೂಂಗೆ ದಿಢೀರ್ ಭೇಟಿ ನೀಡಿದ ಎಂಎಸ್ ಧೋನಿ; ವಿಡಿಯೋ
- News
ಬೆಂಗಳೂರು: ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಆರ್ಥಿಕ ಬಲ ತುಂಬಲಿದ್ದೇವೆ: ಸಿಎಂ ಬೊಮ್ಮಾಯಿ
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Technology
Samsung Galaxy: ಕೇವಲ 44 ರೂ. ಗಳ ಇಎಮ್ಐನಲ್ಲಿ ಖರೀದಿಸಿ ಗ್ಯಾಲಕ್ಸಿ A14 5G ಫೋನ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ನನ್ನ ವಿರುದ್ಧ ಸಾಕ್ಷ್ಯವೇ ಇಲ್ಲ, ನನ್ನ ಬಕ್ರಾ ಮಾಡಿದ್ದೀರಾ'- ಸಂಜನಾ ಗಲ್ರಾನಿ
ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಅವರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೋರ್ಟ್ ಮುಂದೆ ಹಾಜರು ಪಡಿಸಿ ಹೆಚ್ಚಿನ ತನಿಖೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.
ತನಿಖೆ ವೇಳೆ ನಟಿ ಸಂಜನಾ ಮತ್ತು ರಾಗಿಣಿ ಇಬ್ಬರು 'ಡ್ರಗ್ಸ್ ಸೇವಿಸಿರುವ' ಬಗ್ಗೆ ತಪ್ಪು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿಗಳು ಬಿತ್ತರವಾಗಿದ್ದವು. ಆದರೆ, ಇದಕ್ಕೆಲ್ಲ ವಿರುದ್ಧವಾದ ಘಟನೆ ನಿನ್ನೆ ನಡೆದಿದೆ. ಸಂಜನಾ ಮತ್ತು ರಾಗಿಣಿ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಈ ವೇಳೆ ವೈದ್ಯರಿಗೆ ಸಹಕರಿಸದ ಸಂಜನಾ ''ನನ್ನ ವಿರುದ್ಧ ಸಾಕ್ಷ್ಯವೇ ಇಲ್ಲ, ಬಕ್ರಾ ಮಾಡಿದ್ದೀರಾ'' ಎಂದು ಹೇಳಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅರೆಸ್ಟ್ ಏಕೆ ಮಾಡಿದ್ದೀರಾ?
ಆಸ್ಪತ್ರೆಯಲ್ಲಿ ಸಂಜನಾ ಅವರ ರಕ್ತ ಪರೀಕ್ಷೆಗಾಗಿ ವೈದ್ಯರು ಮುಂದಾಗ್ತಾರೆ. ಈ ವೇಳೆ ಸಂಜನಾ ಅವರು ರಕ್ತ ಪರೀಕ್ಷೆಗೆ ಒಪ್ಪುವುದಿಲ್ಲ. ''ಮೊದಲು ನನ್ನನ್ನು ಏಕೆ ಅರೆಸ್ಟ್ ಮಾಡಿದ್ದೀರಾ, ನನಗೆ ಕಾರಣವೇ ಕೊಟ್ಟಿಲ್ಲ. ಸುಮ್ಮನೆ ಮೀಡಿಯಾಗಳಲ್ಲಿ ನನ್ನ ಬಕ್ರಾ ಮಾಡ್ಕೊಂಡು ಕರೆದುಕೊಂಡು ಬಂದಿದ್ದೀರಾ'' ಎಂದು ನಟಿ ಸಂಜನಾ ನಿರಾಕರಿಸಿದ್ದಾರೆ.
'ಡ್ರಗ್ಸ್
ಪ್ರಕರಣದಲ್ಲಿ
ಮೂವರು
ನಟಿಯರು
ಮಾತ್ರನಾ'?
ಪಾರೂಲ್
ಯಾದವ್
ಪ್ರಶ್ನೆ

ನನ್ನದೇ ರಕ್ತ ಎಂಬ ಭರವಸೆ ಇಲ್ಲ
''ಒಂದು ವೇಳೆ ನಾನು ರಕ್ತ ಪರೀಕ್ಷಗೆ ಒಳಗಾದರೂ, ಅದು ನನ್ನ ರಕ್ತದ ಫಲಿತಾಂಶ ಎನ್ನುವ ಭರವಸೆ ನನಗೆ ಇಲ್ಲ. ನನಗೆ ನಂಬಿಕೆ ಇಲ್ಲ'' ಎಂದು ವೈದ್ಯರ ಮುಂದೆ ಸಂಜನಾ ಪ್ರಶ್ನಿಸಿದ್ದಾರೆ. 'ನನ್ನನ್ನು ಒತ್ತಾಯ ಮಾಡಿ ರಕ್ತ ಪರೀಕ್ಷೆ ಮಾಡುವಂತಿಲ್ಲ, ಇದು ಕಾನೂನು ಬಾಹಿರ ಎಂದು ಸಹ' ಪರೀಕ್ಷೆಗೆ ನಿರಾಕರಿಸಿದರು.

ನನ್ನ ವಿರುದ್ಧ ಸಾಕ್ಷ್ಯವೇ ಇಲ್ಲ
''ಇಲ್ಲಿಯವರೆಗೂ ನನ್ನ ಬಕ್ರಾ ಮಾಡ್ಕೊಂಡು ಕರೆದುಕೊಂಡು ಬಂದಿದ್ದೀರಾ. ಇದುವರೆಗೂ ನನ್ನ ವಿರುದ್ಧ ಒಂದು ಸಾಕ್ಷ್ಯವೂ ಇಲ್ಲ. ನಾನು ಏನೂ ತಪ್ಪು ಮಾಡಿಲ್ಲ. ನಾನು ಯಾರಿಗೋ ಫೋನ್ ಮಾಡಿದ್ರೆ, ಅವರು ಯಾರೊಗೋ ಫೋನ್ ಮಾಡಿದ್ರೆ ಅದಕ್ಕೆ ನಾನು ಜವಾಬ್ದಾರಿಯಲ್ಲ'' ಎಂದು ಸಂಜನಾ ಪ್ರಶ್ನಿಸಿದ್ದಾರೆ.
ಸಂಜನಾ
ಅರೆಸ್ಟ್:
ಬೆಳಗ್ಗೆಯಿಂದ
ಇಲ್ಲಿವರೆಗೂ
ನಡೆದ
ಬೆಳವಣಿಗೆಯ
ವಿವರ
Recommended Video

ತನಿಖೆಗೆ ಸಹಕರಿಸುತ್ತಿಲ್ಲ!
ಐದು ದಿನಗಳ ಕಾಲ ಸಿಸಿಬಿ ವಶದಲ್ಲಿರುವ ನಟಿ ಸಂಜನಾ ಅವರನ್ನು ಮತ್ತೆ ಕೋರ್ಟ್ ಮುಂದೆ ಹಾಜರು ಪಡಿಸಲಾಗುವುದು. ಈ ವೇಳೆ ಹೆಚ್ಚಿನ ತನಿಖೆಗಾಗಿ ಮತ್ತೆ ಸಿಸಿಬಿ ವಶಕ್ಕೆ ಪೊಲೀಸರು ಕೇಳುವ ಸಾಧ್ಯತೆ ಇದೆ. ತನಿಖೆಗೆ ಸೂಕ್ತ ರೀತಿಯಲ್ಲಿ ಸಹಕರಿಸುತ್ತಿಲ್ಲ ಎಂದು ಪೊಲೀಸರು ಕಾರಣ ನೀಡಬಹುದು.