For Quick Alerts
  ALLOW NOTIFICATIONS  
  For Daily Alerts

  ಜೈಲಲ್ಲೇ ಸಂಜನಾ ಹುಟ್ಟುಹಬ್ಬ: ಈ ವರ್ಷ ಇಲ್ಲ ಸಂಭ್ರಮದ ಆಚರಣೆ

  |

  ನಟಿ ಸಂಜನಾ ಗಲ್ರಾನಿ ಇಂದು ಹುಟ್ಟಿದ ದಿನ. ಪ್ರತೀ ವರ್ಷ ಸಂಜನಾ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಸಂಭ್ರಮ, ಸಡಗರ, ಸಂತೋಷ, ಪಾರ್ಟಿ ಯಾವುದೂ ಇಲ್ಲದೆ ಜೈಲಿನಲ್ಲಿ ಕಾಲಕಳೆಯುತ್ತಿದ್ದಾರೆ. ನಟಿ ಸಂಜನಾಗೆ ಈ ವರ್ಷದ ಹುಟ್ಟುಹಬ್ಬ ಜೀವನದಲ್ಲೇ ಮರೆಯಲಾದ ಹುಟ್ಟುಹಬ್ಬವಾಗಿದೆ.

  ಡ್ರಗ್ಸ ದಂಧೆ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ಸಂಜನಾಗೆ ಇನ್ನೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಹಾಗಾಗಿ ಇಂದು ಜೈಲಲ್ಲೇ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಬೇಕಾಗಿದೆ. 31ನೇ ವಸಂತಕ್ಕೆ ಕಾಲಿಟ್ಟಿರುವ ಸಂಜನಾ ಈ ವಿಶೇಷ ದಿನದಿಂದು ಜೈಲಲ್ಲೇ ಕಾಲಕಳೆಯುವಂತಾಗಿದೆ. ಮನೆಯವರು, ಸ್ನೇಹಿತರು ಯಾರು ಇಲ್ಲದೆ ಏಕಾಂಗಿಯಾಗಿರುವ ಸಂಜನಾ ಹಳೆಯ ದಿನಗಳನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ.

  ಇಸ್ಲಾಂ ಧರ್ಮಕ್ಕೆ ಗೆ ಮತಾಂತರ ಆಗಿದ್ದಾರೆಯೇ ಸಂಜನಾ ಗಲ್ರಾನಿ?ಇಸ್ಲಾಂ ಧರ್ಮಕ್ಕೆ ಗೆ ಮತಾಂತರ ಆಗಿದ್ದಾರೆಯೇ ಸಂಜನಾ ಗಲ್ರಾನಿ?

  ಸಂಜನಾ ತನ್ನ ಹುಟ್ಟುಹಬ್ಬಕ್ಕೆ ವಾರದ ಮುಂಚೆಯೇ ತಯಾರಿ ಮಾಡಿಕೊಳ್ಳುತ್ತಿದ್ದರು. ಪ್ರತೀ ವರ್ಷ ಸಂಜನಾ ಆಪ್ತ ರಾಹುಲ್ ಅದ್ದೂರಿಯಾಗಿ ಪಾರ್ಟಿ ಏರ್ಪಡಿಸುತ್ತಿದ್ದರು. ಸ್ನೇಹಿತರು, ಕುಟುಂಬದವರು ಎಲ್ಲರೂ ಪಾರ್ಟಿಯಲ್ಲಿ ಭಾಗಿಯಾಗಿ ಎಂಜಾಯ್ ಮಾಡುತ್ತಿದ್ದರು. ಆದರೆ ಈ ಬಾರಿ ಇದ್ಯಾವುದು ಇಲ್ಲ. ಆಚರಣೆ ಇರಲಿ ಶುಭಾಶಯ ತಿಳಿಸಲು ಸಾಧ್ಯವಾಗುತ್ತಿಲ್ಲ.

  ಬೆಂಗಳೂರು ಸೇರಿದಂತೆ ಬೇರೆ ಬೇರೆ ಕಡೆ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದ ಸಂಜನಾ ಈ ಬಾರಿ ಜೈಲಿನಲ್ಲೇ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವಂತಾಗಿದೆ. ಸಂಜನಾ ಮತ್ತು ನಟಿ ರಾಗಿಣಿ ಇಬ್ಬರು ಜೈಲಿನಲ್ಲಿದ್ದಾರೆ. ಇಬ್ಬರ ನ್ಯಾಯಾಂಗ ಬಂಧನ ವಿಸ್ತರಣೆ ಆಗಿದೆ. ಅಕ್ಟೋಬರ್ 23ರ ವರೆಗೆ ಇಬ್ಬರು ನಟಿಯರ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದ್ದು, ಇಬ್ಬರು ಜೈಲಿನಲ್ಲೇ ಕಾಲಕಳೆಯುವಂತಾಗಿದೆ.

  English summary
  Sandalwood Actress Sanjjana Galrani to Celebrate her birthday at Parappana Agrahara Jail.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X