twitter
    For Quick Alerts
    ALLOW NOTIFICATIONS  
    For Daily Alerts

    ತುಪ್ಪದ ಹುಡುಗಿ ರಾಗಿಣಿ RTO ರವಿಶಂಕರ್, ಶಿವಪ್ರಕಾಶ್ 'ಮಾದಕ'ತ್ರಿಕೋನಾ ಪ್ರೇಮ ಕಥೆ

    |

    ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ ಪ್ರಕರಣದ ಮಾದಕ ಲೋಕದಲ್ಲಿ ನಡೆದಿರುವ ಕಥೆಗಳು ಯಾವ ಸಿನಿಮಾಗೂ ಕಡಿಮೆಯಿಲ್ಲ. ಸ್ಯಾಂಡಲ್‌ವುಡ್ ಡ್ರಗ್ ಪ್ರಕರಣದ ಮೊದಲ ಆರೋಪಿ ಶಿವಪ್ರಕಾಶ್. ತುಪ್ಪದ ಹುಡುಗಿಯನ್ನು ಆರ್‌ಟಿಒ ಅಧಿಕಾರಿ ರವಿಶಂಕರ್‌ಗೆ ಪರಿಚಯಿಸಿದ್ದ. ಗಿಣಿ ತೆಕ್ಕೆಗೆ ಬಿದ್ದ ರವಿಶಂಕರ್ ಹೆಂಡತಿಗೆ ಡೈವೋರ್ಸ್ ನೀಡಿದ. ಲವ್ವರ್‌ನ್ನು ಬಿಟ್ಟುಕೊಟ್ಟರೂ ರೌಡಿಗಳನ್ನು ಬಿಟ್ಟು ದಾದಾಗಿರಿ ತೋರಿದ್ದ ರವಿಶಂಕರ್ ಕಪಾಳಕ್ಕೆ ಬಾರಿಸಿದ್ದ ಶಿವ ಪ್ರಕಾಶ್. ಈ ಹಂತದಲ್ಲಿ ಎಂಟ್ರಿ ಕೊಟ್ಟಿದ್ದ ರವಿಶಂಕರ್ ಪತ್ನಿ ಅರ್ಚನಾ ಎಲ್ಲರ ಡ್ರಗ್ ವಹಿವಾಟನ್ನು ಮಾಧ್ಯಮವೊಂದಕ್ಕೆ ಹಿಡಿದುಕೊಡುವ ಸಾಹಸಕ್ಕೆ ಕೈ ಹಾಕಿದ್ದಳು. ತುಪ್ಪದ ಹುಡುಗಿಯ ನಶೆಗೆ ಬಿದ್ದ ಆರ್‌ಟಿಓ ಕ್ಲರ್ಕ್ ರವಿಶಂಕರ್ ತನ್ನ ಹೆಂಡತಿಗೆ ಡೈವೋರ್ಸ್ ಕೊಟ್ಟು ಹೊರ ಹಾಕಿದ. ಅಮೇಲೆ ನಡೆದಿದ್ದೆಲ್ಲಾ ಮಾದಕ ನಶೆಯ ರೋಚಕ ಘಟನೆಗಳು..!

    ಸ್ಯಾಂಡಲ್‌ವುಡ್ ಡ್ರಗ್ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ನಡೆಸಿರುವ ತನಿಖೆಯಲ್ಲಿ ಕೇವಲ ಮಾದಕ ಲೋಕದ ನಶೆಯಲ್ಲ. ತುಪ್ಪದ ಹುಡುಗಿಯ ಎರಡು ಲವ್ ಸ್ಟೋರಿಗಳಿವೆ. ಇದಕ್ಕಿಂತಲೂ ಭಯಾನಕ ನಶೆ ಲೋಕದ ಸತ್ಯಾಂಶಗಳು ಹೊರ ಬಿದ್ದಿವೆ. ಆರ್‌ಟಿಒ ಅಧಿಕಾರಿ ರವಿಶಂಕರ್ ಪತ್ನಿ ಅರ್ಚನಾ ನಾಯಕ್ ಮನಸು ಮಾಡಿದ್ದೇ ಆದಲ್ಲಿ ಈ ಸ್ಯಾಂಡಲ್‌ವುಡ್ ಡ್ರಗ್ ಜಾಲವೆಲ್ಲಾ 2018 ರಲ್ಲಿಯೇ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿ ಬೀಳುತ್ತಿತ್ತು. ರವಿಶಂಕರ್ ಪತ್ನಿ ಈ ಕರಿತು ನೇರವಾಗಿಯೇ ಸಂದೇಶ ರವಾನಿಸಿದ್ದಳು!

    ರಾಗಿಣಿ ಕೈ ಬಿಟ್ಟು ಹೋದ ನಂತರ

    ರಾಗಿಣಿ ಕೈ ಬಿಟ್ಟು ಹೋದ ನಂತರ

    ದಾಬಸ್ ಪೇಟೆಯ ನೆಲಮಂಗಲದ ಕೆಂಗಲ್ ನಿವಾಸಿ. ಕಲ್ಲು ಕ್ವಾರಿಯಿಂದ ಕೈ ತುಂಬಾ ಹಣ ಗಳಿಸಿದ್ದ ಶಿವಪ್ರಕಾಶ್, 2010 ರಲ್ಲಿ ಹುಲಿ, 2015 ರಲ್ಲಿ ಕಿಲ್ಲಿಂಗ್ ವೀರಪ್ಪನ್ ಚಿತ್ರ ನಿರ್ಮಾಣ ಮಾಡಿದ್ದ. ಸಿನಿಮಾ ನಂಟಿಯಿಂದ ಬೆಂಗಳೂರಿನ ಯುಬಿ ಸಿಟಿ, ಸ್ಕೈಬಾರ್, ಅಶೋಕ ಹೋಟೆಲ್ ಕಿಟ್ಟಿಕೋ, ಹೌಸ್ ಆಫ್ ಲೈಫ್ ರೆಸ್ಟೋರೆಂಟ್ ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದ ಶಿವಪ್ರಕಾಶ್‌ಗೆ 2014 ರಲ್ಲಿ ಚಿತ್ರನಟಿ ರಾಗಿಣಿ ಪರಿಚಯವಾಗಿದ್ದಾಳೆ.

    'ಸ್ಯಾಂಡಲ್‌ವುಡ್ ಡ್ರಗ್ಸ್‌ ಫೈಲ್ಸ್': ರಾಜ್ಯ ಕಂಡ ರೋಚಕ ಪ್ರಕರಣದ ಬೆನ್ನತ್ತಿದಾಗ...'ಸ್ಯಾಂಡಲ್‌ವುಡ್ ಡ್ರಗ್ಸ್‌ ಫೈಲ್ಸ್': ರಾಜ್ಯ ಕಂಡ ರೋಚಕ ಪ್ರಕರಣದ ಬೆನ್ನತ್ತಿದಾಗ...

    "ನನಗೆ ರಾಗಿಣಿ ಪರಿಚಯವಾಗಿ ಇಬ್ಬರೂ ಸ್ನೇಹಿತರಾಗಿ ಡೀಪ್ ಸ್ಕೈ ಡೈವಿಂಗ್ ಮಾಡಲು ಶ್ರೀಲಂಕಾ, ಆಸ್ಟ್ರೇಲಿಯಾ, ಮಾಲ್ಡೀವ್ಸ್‌, ದುಬೈ ಬೆಲ್ಜಿಯಂ ನೆದರ್ ಲ್ಯಾಂಡ್ ರಾಷ್ಟ್ರಗಳಿಗೆ ಹೋಗಿದ್ದೆವು. ಬೆಂಗಳೂರು ನಗರದಲ್ಲಿ ನಾನು ರಾಗಿಣಿ ಪಾರ್ಟಿ ಮಾಡುತ್ತಿದ್ದೆವು. ಕಿಟ್ಟಿಕೋ, ಸಾಂಚೋಸ್, ಸ್ಕೈ ಬಾರ್‌ನಲ್ಲಿ ಪಾರ್ಟಿ ಮಾಡುತ್ತಿದ್ದೆವು. ನಾನು ರಾಗಿಣಿಯನ್ನು ಮದುವೆ ಮಾಡಿಕೊಳ್ಳುವುದಾಗಿ ಮನೆಯಲ್ಲಿ ತಿಳಿಸಿದೆ. ಆಕೆಗೆ ತಿಳಿಸಿದಾಗ ವೃತ್ತಿಯ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿ ಮದುವೆ ತಿರಸ್ಕಿರಿಸಿದಳು. 2017 ರಲ್ಲಿ ಮದುವೆ ಮಾತಕತೆ ವಿಚಾರವಾಗಿ ನನಗೂ ರಾಗಿಣಿಗೂ ಮಾತುಕತೆ ಮುರಿದು ಬಿತ್ತು. ಇಬ್ಬರೂ ಬೇರೆಯಾಗುವುದಾಗಿ ತೀರ್ಮಾನಿಸಿದೆವು.

    ಆರ್‌ಟಿಓ ಗುಮಾಸ್ತನ ತಟ್ಟೆಗೆ ಬಿತ್ತು ತುಪ್ಪ

    ಆರ್‌ಟಿಓ ಗುಮಾಸ್ತನ ತಟ್ಟೆಗೆ ಬಿತ್ತು ತುಪ್ಪ

    ಶಿವಪ್ರಕಾಶ್ ಮತ್ತು ರಾಗಿಣಿ ಪಾರ್ಟಿಗೆ ಹೋಗುವಾಗ ಪರಿಚಯವಾದ ರವಿಶಂಕರ್‌ಗೆ ಪರಿಚಯಿಸಿದ್ದ. ಚಿಪ್ಪಿಯ ಚಿಪ್ಪು ಖಾಲಿಯಾದ ಬಳಿಕ ಆರ್‌ಟಿಒ ಗುಮಾಸ್ತನೊಂದಿಗೆ ರಾಗಿಣಿ ಓಡಾಡುತ್ತಿದ್ದಳು. ಈ ವಿಚಾರ ಶಿವಪ್ರಕಾಶ್‌ಗೆ ತಿಳಿಯುತ್ತದೆ. 2019 ಫೆಬ್ರವರಿಯಲ್ಲಿ ಅನಾಮಧೇಯ ಕರೆ ಮಾಡಿದ ರವಿ ಶಂಕರ್, ರಾಗಿಣಿ ವಿಚಾರವಾಗಿ ಕರೆ ಮಾಡಿ ಮನಸೋ ಇಚ್ಛೆ ಬೈದಿದ್ದಾನೆ. ಇದಾಗಿ ಒಂದು ತಿಂಗಳ ನಂತರ ಅಶೋಕನಗರದ ಬ್ಯಾಂಗ್ ಹೋಟೆಲ್‌ನಲ್ಲಿ ಪಾರ್ಟಿ ಮಾಡುತ್ತಿದ್ದ ಶಿವಪ್ರಕಾಶ್ ಮುಂದೆ ಆತನ ಮಾಜಿ ಪ್ರೇಯಸಿ ರಾಗಿಣಿ ಜತೆಗೆ ರವಿಶಂಕರ್ ಬಂದಿದ್ದ. ಇಬ್ಬರ ನಡುವೆ ಜಗಳ ನಡೆದು ರವಿಶಂಕರನ ಕಪಾಳಕ್ಕೆ ಬಾರಿಸಿದ್ದ ಚಿಪ್ಪಿ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿ, ಅಂತಿಮವಾಗಿ ಇಬ್ಬರು ರಾಜಿ ಮಾಡಿಕೊಂಡಿದ್ದಾರೆ.

    ರವಿಶಂಕರ್ ಪತ್ನಿಯ ವಿಚ್ಛೇದನ ವೃತ್ತಾಂತ

    ರವಿಶಂಕರ್ ಪತ್ನಿಯ ವಿಚ್ಛೇದನ ವೃತ್ತಾಂತ

    ಆರ್‌ಟಿಒ ಅಧಿಕಾರಿ ಪುತ್ರನಾಗಿದ್ದ ರವಿಶಂಕರ್ ಅನುಕಂಪ ಆಧಾರದ ಮೇಲೆ ಕ್ಲರ್ಕ್ ಕೆಲಸಕ್ಕೆ ಸೇರಿದ್ದ. 2010ರಲ್ಲಿ ಬಸವೇಶ್ವರ ನಿವಾಸಿ ಅರ್ಚನಾ ನಾಯಕ್‌ರನ್ನು ಪ್ರೀತಿಸಿ ಮದುವೆಯಾಗಿದ್ದ. ಈತನಿಗೆ ಎಂಟು ವರ್ಷದ ಮಗಳಿದ್ದಾಳೆ. ಮೊದಲಿನಿಂದಲೂ ಸ್ನೇಹಿತನಾಗಿದ್ದ ಶಿವಪ್ರಕಾಶ್ ರಾಗಿಣಿಯನ್ನು 2013 ರಲ್ಲಿ ಪರಿಚಯಿಸಿದ್ದನಂತೆ. ಪತ್ನಿ ಜತೆ ಎಂ.ಜಿ. ರಸ್ತೆ ಪಾರ್ಟಿಗೆ ಹೋಗುವಾಗ ಶಿವಪ್ರಕಾಶ್ ಮತ್ತು ರಾಗಿಣಿ ಬರುತ್ತಿದ್ದಂತೆ. ಶಿವಪ್ರಕಾಶ್ ಮದುವೆ ಪ್ರಸ್ತಾಪ ದೂರ ತಳ್ಳಿದ್ದ ಬಳಿಕ ನನಗೆ ರಾಗಿಣಿ ಆಪ್ತಳಾದಳು. ಇಬ್ಬರೂ ಪರಮಾಪ್ತರಾಗಿ ಡ್ರಗ್ ಪಾರ್ಟಿಗಳಿಗೆ ಹೋಗಿ ಡ್ರಗ್ ಸೇವಿಸುತ್ತಿದ್ದೆವು ಎಂದು ತುಪ್ಪದ ಹುಡುಗಿ ಕೈ ಹಿಡಿದಿದ್ದನ್ನೂ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾಳೆ.

    ಎನ್‌ಸಿಬಿ ತನಿಖೆಯಿಂದ ಹಿಡಿದು ಸಿಸಿಬಿವರೆಗೆ ಸ್ಯಾಂಡಲ್‌ವುಡ್ ಡ್ರಗ್ ಕೇಸ್ ಮಿಸ್ಟರಿ!ಎನ್‌ಸಿಬಿ ತನಿಖೆಯಿಂದ ಹಿಡಿದು ಸಿಸಿಬಿವರೆಗೆ ಸ್ಯಾಂಡಲ್‌ವುಡ್ ಡ್ರಗ್ ಕೇಸ್ ಮಿಸ್ಟರಿ!

    ಯಾವಾಗ ರಾಗಿಣಿಯ ತೆಕ್ಕೆಗೆ ಬಿದ್ದು ಮನೆಗೆ ಬರುವುದನ್ನು ಬಿಟ್ಟಿದ್ದ ರವಿಶಂಕರ್ ಬಗ್ಗೆ ಪತ್ನಿ ಅರ್ಚನಾ ಅನುಮಾನಗೊಂಡಿದ್ದಳು. ಇಬ್ಬರ ಮೊಬೈಲ್ ಪರಿಶೀಲಿಸಿದಾಗ ಡ್ರಗ್ ಸೇವನೆ ಮತ್ತು ವಹಿವಾಟಿನ ವಾಟ್ಸಪ್ ಸಂದೇಶಗಳು ಸಿಕ್ಕಿದ್ದವು. ರಾಗಿಣಿಯಿಂದ ರವಿಶಂಕರ್‌ನನ್ನು ದೂರ ಮಾಡಲು ಪ್ರಯತ್ನಿಸಿದ ಅರ್ಚನಾ ನಾಯಕ್ ಕೊನೆಗೂ ವಿಚ್ಛೇದನ ಪಡೆದು 2018 ರಲ್ಲಿ ನಡೆದಿದ್ದಾಳೆ. ಆದರೆ ಅರ್ಚನಾ ನಾಯಕ್ ನಡೆಸಿದ ಪ್ರಯತ್ನ ಸಫಲಗೊಂಡಿದ್ದಲ್ಲಿ 2018 ರಲ್ಲಿ ಈ ಡ್ರಗ್ ಗ್ಯಾಂಗ್ ಪೊಲೀಸರ ಬಲೆಗೆ ಬೀಳುತ್ತಿತ್ತು.

    ಅರ್ಚನಾ ನಾಯಕ್ ಪ್ಲಾನ್ ಪ್ಲಾಫ್

    ಅರ್ಚನಾ ನಾಯಕ್ ಪ್ಲಾನ್ ಪ್ಲಾಫ್

    ರಾಗಿಣಿ ಬಲೆಗೆ ಬಿದ್ದು ಮಾದಕ ನಶೆಯಲ್ಲಿ ತೇಲಾಡುತ್ತಿದ್ದ ರವಿಶಂಕರ್ ನಿಂದ ಆತನ ಹೆಂಡತಿ ಹೊರ ಬಿದ್ದಳು. ಗಂಡನಿಂದ ದೂರ ಮಾಡಿದ ದ್ವೇಷಕ್ಕೆ ರಾಗಿಣಿ ವಿರುದ್ಧ ಕಿಡಿ ಕಾರಿದ್ದ ಅರ್ಚನಾ ನಾಯಕ್ 2018 ರಲ್ಲಿ ವಾಟ್ಸಪ್‌ನಲ್ಲಿ ರಾಗಿಣಿಗೆ ಮೆಸೇಜ್ ಮಾಡಿದ್ದಳು. ಅದರ ವಿವರ ಇಲ್ಲಿದೆ. Miss Ragini Game has just begun..you fucked up. in my life and u wer one the main reasons for my breakup i am alling for a press conference and I have all the proofs against you.. By today evining See for head lines. ,

    ನಿಮ್ಮಿಬ್ಬರ ಅಸಲಿ ಬಂಡವಾಳನ್ನು ಕೇವಲ ಒಂದು ಬ್ಲಡ್ ಟೆಸ್ಟ್ ಮೂಲಕ ಬಯಲು ಮಾಡ್ತಾನೆ. ನೀನು ರವಿ ಎಲ್ಲರ ಬದುಕಲ್ಲೂ ಆಟ ಆಡುತ್ತಿದ್ದೀರಾ. ನನಗೆ ಯಾವ ಯೋಗತ್ಯೆ ಇದೆ ನನ್ನ ಫ್ಲಾಟ್‌ನಲ್ಲಿ ಬಂದು ಇರೊಕೆ ಇಂದು ಅರ್ಚನಾ ನಾಯಕ್ ಮೊಬೈಲ್ ಸಂದೇಶದಲ್ಲಿ ರಾಗಿಣಿಗೆ ಜಾಡಿಸಿದ್ದಳು. ಆದರೆ, ಅರ್ಚನಾ ನಾಯಕ್ ಖಾಸಗಿ ವಾಹಿನಿಯೊಂದರ ಮೊಬೈಲ್ ನಂಬರ್ ಪಡೆದು ಮಾಹಿತಿ ನೀಡಿದ್ದಾಗಿಯೂ ಸಾಕ್ಷಿ ನುಡಿದಿದ್ದಾರೆ. ಇಬ್ಬರ ಜತೆ ಸಂಬಂಧ ಬೆಳೆಸಿದ್ದು, ಇಬ್ಬರ ಜತೆ ಓಡಾಡಿದ್ದು, ಚಿಪ್ಪಿಯ ಮದುವೆ ಪ್ರಸ್ತಾಪ, ರವಿಶಂಕರ್ ಜತೆ ಮೋಜು ಜೀವನ ಎಲ್ಲವನ್ನು ರಾಗಿಣಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ.

    ರೌಡಿಗಳ ಬರ್ತಡೇ ಪಾರ್ಟಿ ಮಾದರಿ ಡ್ರಗ್ ಪಾರ್ಟಿ

    ರೌಡಿಗಳ ಬರ್ತಡೇ ಪಾರ್ಟಿ ಮಾದರಿ ಡ್ರಗ್ ಪಾರ್ಟಿ

    ಬೆಂಗಳೂರಿನಲ್ಲಿ ರೌಡಿಸಂ ನಲ್ಲಿರುವರು, ಅದಕ್ಕೆ ಎಂಟ್ರಿ ಕೊಡುವರು ವರ್ಷಕ್ಕೆ ಕನಿಷ್ಠ 200 ಬರ್ತಡೇ ಪರ್ಟಿ ಮಾಡ್ತಾರೆ. ಆ ಸಂಸ್ಕೃತಿ ಮಾದಕ ಲೋಕಕ್ಕೂ ಕಾಲಿಟ್ಟಿದೆ. ರಾಗಿಣಿ ಹುಟ್ಟು ಹಬ್ಬದ ಅಚರಣೆ ಹೆಸರಿನಲ್ಲಿ ಪಾರ್ಟಿ ಆಯೋಜನೆ ಮಾಡಿದ್ದಾನೆ. ರಾಗಿಣಿಯನ್ನು ಮಾದಕ ವ್ಯಸನಿಗಳ ಆಕರ್ಷಣೀಯ ಡಾಲ್ ತರ ಬಿಂಬಿಸಲಾಗಿದೆ. ರಾಗಿಣಿ ಗಾಂಜಾ ಎಕ್ಸೆಟೆಸಿ ಫಿಲ್ಸ್ ಕೊಕೇನ್ ಮತ್ತಿತರ ಮಾದಕ ವಸ್ತುಗಳನ್ನು ಸೇವನೆ ಮಾಡಿದ್ದಾಳೆ. ಅವನ್ನು ಮಾರಾಟವೂ ಮಾಡಿದ್ದಾಳೆ. ನೇರವಾಗಿ ಡ್ರಗ್ ಪೆಡ್ಲರ್ ಜತೆ ಸಂಪರ್ಕ ಬೆಳೆಸಿದ್ದ ರಾಗಿಣಿ ಡ್ರಗ್ ಮಾರಾಟ ಮಾಡಿ ಹಣವನ್ನು ಗಳಿಸಿದ್ದಾಳೆ. ಇದಕ್ಕಾಗಿ ರೌಡಿಗಳ ಮದರಿಯಲ್ಲಿ ಆಪ್ತರ, ಪ್ರಮುಖರ ಹೆಸರಿನಲ್ಲಿ ಪಾರ್ಟಿ ಆಯೋಜಿಸಿ ಡ್ರಗ್ ಸಮಾರಾಧನೆ ಮಾಡುತ್ತಿರುವುದು ಆರೋಪಿಗಳಾದ ಶಿವಪ್ರಕಾಶ್, ರಾಗಿಣಿ, ರವಿಶಂಕರ್ ಅವರ ಸ್ವ ಇಚ್ಛಾ ಹೇಳಿಕೆಯಲ್ಲಿ ಬಹಿರಂಗವಾಗಿದೆ.

    English summary
    Sandalwood drug case : Accused no 1 shiva prakash and his ex lover Ragini diwedi Breakup love story: Ragini new love Starts Begun with drugs know more
    Wednesday, September 8, 2021, 15:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X