ನಾಳೆಯೇ ವಿಚಾರಣೆಗೆ ಹಾಜರಾಗಿ: ಸಿಸಿಬಿಯಿಂದ ರಾಗಿಣಿಗೆ ಮತ್ತೊಂದು ನೋಟಿಸ್
ಸ್ಯಾಂಡಲ್ ವುಡ್ ನಶೆಯ ಜಾಲದ ಬೆನ್ನತ್ತಿರುವ ಸಿಸಿಬಿ ತಂಡ ನಟಿ ರಾಗಿಣಿಗೆ ಮತ್ತೊಂದು ನೋಟಿಸ್ ನೀಡಿದೆ. ಇಂದು (ಸೆಪ್ಟಂಬರ್ 3) ವಿಚಾರಣೆಗೆ ಗೈರಾಗಿದ್ದ ರಾಗಿಣಿ, ಸೋಮವಾರ ವಿಚಾರಣೆಗೆ ಹಾಜರಾಗುವುದಾಗಿ ಟ್ವೀಟ್ ಮಾಡಿ ತಿಳಿಸಿದ್ದರು. ಆದರೀಗ ಸಿಸಿಬಿ ನಾಳೆ 10ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಎಚ್ಚರಿಕೆ ನೀಡಿ ಮತ್ತೊಂದು ನೋಟಿಸ್ ನೀಡಿದೆ ಎನ್ನುವ ಮಾಹಿತಿ ಕೇಳಿ ಬರುತ್ತಿದೆ.
Recommended Video
ಇಂದು (ಸೆಪ್ಟಂಬರ್ 3) 10ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನಟಿ ರಾಗಿಣಿಗೆ ಸಿಸಿಬಿ ನೋಟಿಸ್ ನೀಡಿತ್ತು. ಆದರೆ ಕಡಿಮೆ ಅವಧಿಯಲ್ಲಿ ನೋಟಿಸ್ ನೀಡಿದ ಹಿನ್ನಲೆ ವಿಚಾರಣೆಗೆ ಹಾಜರಾಗಿಲ್ಲ ಎಂದು ರಾಗಿಣಿ ಹೇಳಿದ್ದರು. ಅಲ್ಲದೆ 'ನನ್ನ ವಕೀಲರು ಪೊಲೀಸರ ಮುಂದೆ ಹಾಜರಾಗಿ ನನ್ನ ಪರಿಸ್ಥಿತಿ ಬಗ್ಗೆ ವಿವರಿಸಿ, ಸಮಯ ಕೇಳಿದ್ದಾರೆ. ಸೋಮವಾರ ಬೆಳಿಗ್ಗೆ ಸಿಸಿಬಿ ಮುಂದೆ ಹಾಜರಾಗುತ್ತೇನೆ.' ಎಂದು ಟ್ವೀಟ್ ಮಾಡಿದ್ದರು.
ಆದರೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಿಸಿಬಿ ನಾಳೆಯೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಒಂದು ವೇಳೆ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇಂದು ವಿಚಾರಣೆಗೆ ಗೈರಾಗಿರುವ ರಾಗಿಣಿ ಸರಣಿ ಟ್ವೀಟ್ ಮಾಡುವ ಮೂಲಕ ಮೊದಲ ಬಾರಿಗೆ ನೋಟಿಸ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದರು. "ನಿನ್ನೆ ನನಗೆ ನೋಟಿಸ್ ಕೈ ಸೇರಿದೆ. ನೋಟಿಸ್ ಬಗ್ಗೆ ಸಾರ್ವಜನಿಕರು ವ್ಯಕ್ತಪಡಿಸಿದ ಕಾಳಜಿಗೆ ನಾನು ಆಭಾರಿ. ತುಂಬಾ ಕಡಿಮೆ ಅವಧಿ ಇರುವುದರಿಂದ ನಾನು ಸಿಸಿಬಿ ಪೊಲೀಸರ ಮುಂದೆ ಹಾಜರಾಗಲು ಸಾಧ್ಯವಾಗಲಿಲ್ಲ." ಎಂದು ಹೇಳಿದ್ದಾರೆ.
ಬುಧವಾರ ರಾಗಿಣಿ ಆಪ್ತ ರವಿಶಂಕರ್ ಸಿಸಿಬಿ ಬಲೆಗೆ ಸಿಕ್ಕಿಬಿದ್ದು ರವಿಶಂಕರ್ ವಿಚಾರಣೆ ಮಾಡಿದ ಅಧಿಕಾರಿಗಳಿಗೆ ಮಹತ್ವದ ಮಾಹಿತಿ ಸಿಕ್ಕಿದೆ. ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ರವಿಶಂಕರ್ ಅನ್ನು ವಿಚಾರಣೆ ಒಳಪಡಿಸಿದ್ದು, ಆತನ ಹೇಳಿಕೆ ಮೇರೆಗೆ ನಟಿ ರಾಗಿಣಿಗೆ ನೊಟೀಸ್ ನೀಡಲಾಗಿದೆ ಎನ್ನಲಾಗಿದೆ.


Click it and Unblock the Notifications











