ನೋಟಿಸ್ ಬಂದಿದೆ, ವಿಚಾರಣೆಗೆ ಹಾಜರಾಗುತ್ತೇನೆ: ನಟಿ ರಾಗಿಣಿ
ಸ್ಯಾಂಡಲ್ ವುಡ್ ನಶೆಯ ಜಾಲದ ಬೆನ್ನತ್ತಿರುವ ಸಿಸಿಬಿ ತಂಡ ನಟಿ ರಾಗಿಣಿಗೆ ನೋಟಿಸ್ ನೀಡಿತ್ತು. ಈ ಸಂಬಂಧ ರಾಗಿಣಿ ದ್ವಿವೇದಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸರಣಿ ಟ್ವೀಟ್ ಮಾಡುವ ಮೂಲಕ ಸಿಸಿಬಿ ನೋಟಿಸ್ ನೀಡಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ.
Recommended Video
ಇಂದು (ಸೆಪ್ಟಂಬರ್ 3) ನಟಿ ರಾಗಿಣಿ ಸಿಸಿಬಿ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ರಾಗಿಣಿ ಇಂದು ವಿಚಾರಣೆಗೆ ಗೈರಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಗಿಣಿ ಕಡಿಮೆ ಅವಧಿಯಲ್ಲಿ ನೋಟಿಸ್ ನೀಡಿದ ಹಿನ್ನಲೆ ವಿಚಾರಣೆಗೆ ಹಾಜರಾಗಿಲ್ಲ ಎಂದಿದ್ದಾರೆ.
"ನಿನ್ನೆ ನನಗೆ ನೋಟಿಸ್ ಕೈ ಸೇರಿದೆ. ನೋಟಿಸ್ ಬಗ್ಗೆ ಸಾರ್ವಜನಿಕರು ವ್ಯಕ್ತಪಡಿಸಿದ ಕಾಳಜಿಗೆ ನಾನು ಆಭಾರಿ. ತುಂಬಾ ಕಡಿಮೆ ಅವಧಿ ಇರುವುದರಿಂದ ನಾನು ಸಿಸಿಬಿ ಪೊಲೀಸರ ಮುಂದೆ ಹಾಜರಾಗಲು ಸಾಧ್ಯವಾಗಲಿಲ್ಲ." ಎಂದು ಸ್ಪಷ್ಟನೆ ನೀಡಿದ್ದಾರೆ.

"ನನ್ನ ವಕೀಲರು ಪೊಲೀಸರ ಮುಂದೆ ಹಾಜರಾಗಿ ನನ್ನ ಪರಿಸ್ಥಿತಿ ಬಗ್ಗೆ ವಿವರಿಸಿದ್ದಾರೆ ಮತ್ತು ಸಮಯ ಕೇಳಿದ್ದಾರೆ. ಸೋಮವಾರ ಬೆಳಿಗ್ಗೆ ಸಿಸಿಬಿ ಮುಂದೆ ಹಾಜರಾಗುತ್ತೇನೆ" ಎಂದು ರಾಗಿಣಿ ಟ್ವೀಟ್ ಮಾಡಿದ್ದಾರೆ.
"ವಿಚಾರಣೆಯಲ್ಲಿ ಭಾಗಿಯಾಗುವುದು ಒಬ್ಬ ಪ್ರಜೆಯಾಗಿ ನನ್ನ ಕರ್ತವ್ಯವೆಂದು ನಾನು ಭಾವಿಸಿದ್ದೇನೆ. ಸಿಸಿಬಿ ಮುಂದೆ ಮರೆಮಾಚಲು ಏನೂ ಇಲ್ಲ. ಕಾನೂನು ಬಾಹಿರ ಚಟುವಟಿಕೆಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ" ಎಂದು ಡ್ರಗ್ಸ ಆರೋಪವನ್ನು ನಿರಾಕರಿಸಿದ್ದಾರೆ.
ಬುಧವಾರ ರಾಗಿಣಿ ಆಪ್ತ ರವಿಶಂಕರ್ ಸಿಸಿಬಿ ಬಲೆಗೆ ಸಿಕ್ಕಿಬಿದ್ದರು. ರವಿಶಂಕರ್ ವಿಚಾರಣೆ ಮಾಡಿದ ಅಧಿಕಾರಿಗಳಿಗೆ ಮಹತ್ವದ ಮಾಹಿತಿ ಸಿಕ್ಕಿದೆ. ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ರವಿಶಂಕರ್ ಅನ್ನು ವಿಚಾರಣೆ ಒಳಪಡಿಸಿದ್ದು, ಆತನ ಹೇಳಿಕೆ ಮೇರೆಗೆ ನಟಿ ರಾಗಿಣಿಗೆ ನೊಟೀಸ್ ನೀಡಲಾಗಿದೆ ಎನ್ನಲಾಗಿದೆ.


Click it and Unblock the Notifications











