For Quick Alerts
  ALLOW NOTIFICATIONS  
  For Daily Alerts

  'ಡ್ರಗ್ಸ್ ಪ್ರಕರಣದಲ್ಲಿ ಮೂವರು ನಟಿಯರು ಮಾತ್ರನಾ'? ಪಾರೂಲ್ ಯಾದವ್ ಪ್ರಶ್ನೆ

  |

  ಡ್ರಗ್ಸ್ ಪ್ರಕರಣದಲ್ಲಿ ಕನ್ನಡ ಇಬ್ಬರು ನಟಿಯರು ಹಾಗೂ ಬಾಲಿವುಡ್‌ನ ಓರ್ವ ನಟಿಯ ಬಂಧನವಾಗಿದೆ. ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ತನಿಖೆ ವೇಳೆ ಡ್ರಗ್ಸ್ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದ್ದ ಎನ್‌ಸಿಬಿ ರಿಯಾ ಚಕ್ರವರ್ತಿಯನ್ನು ಮಂಗಳವಾರ ಬಂಧಿಸಿದ್ದಾರೆ.

  Congress ನಾಯಕರ ಜೊತೆ Ragini ಹಾಗು Sanjjanaa - BJP tweet | Oneindia Kannada

  ಈ ಕಡೆ ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಪೆಡ್ಲರ್‌ಗಳ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಆರೋಪದಲ್ಲಿ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಅವರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ನಡುವೆ ಡ್ರಗ್ಸ್ ದಂಧೆಯಲ್ಲಿ ಬರಿ ನಟಿಯರು ಮಾತ್ರನಾ? ಎಂದು ನಟಿ ಪಾರೂಲ್ ಯಾದವ್ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ. ಮುಂದೆ ಓದಿ...

  ಕೇವಲ ಮೂವರು ನಟಿಯರು ಮಾತ್ರನಾ?

  ಕೇವಲ ಮೂವರು ನಟಿಯರು ಮಾತ್ರನಾ?

  ''ಕೊನೆಗೂ ಲಿಂಗ ಸಮಾನತೆ ಹೋರಾಟಕ್ಕೆ ಜಯ ಸಿಕ್ಕಿದೆ. ಡ್ರಗ್ಸ್ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಡಬೇಕು. ಆದರೆ, ಭಾರತದಲ್ಲಿ ಡ್ರಗ್ಸ್ ಮಾರಾಟಗಾರರು ಅಥವಾ ಬಳಕೆದಾರರು ಕೇವಲ ಮೂವರು ನಟಿಯರು ಮಾತ್ರನಾ? ಸ್ಯಾಂಡಲ್‌ವುಡ್ ಡ್ರಗ್ಸ್ ದಂಧೆಯಲ್ಲಿ ಬೇರೆ ಯಾರೂ ಭಾಗಿಯಾಗಿಲ್ಲವೇ?'' ಎಂದು ನಟಿ ಪಾರೂಲ್ ಪ್ರಶ್ನಿಸಿದ್ದಾರೆ.

  ಡ್ರಗ್ಸ್ ಪ್ರಕರಣದಲ್ಲಿ ಬರಿ ಹೆಣ್ಮಕ್ಳ ಹೆಸರು ಮಾತ್ರ ಯಾಕೆ ಬರ್ತಿದೆ?ಡ್ರಗ್ಸ್ ಪ್ರಕರಣದಲ್ಲಿ ಬರಿ ಹೆಣ್ಮಕ್ಳ ಹೆಸರು ಮಾತ್ರ ಯಾಕೆ ಬರ್ತಿದೆ?

  ನಟರು ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿಲ್ಲವೇ?

  ನಟರು ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿಲ್ಲವೇ?

  ''ಕಾರ್ಪೋರೆಟ್ ವ್ಯಕ್ತಿಗಳು, ಉದ್ಯಮಿಗಳು, ಕ್ರೀಡಾಪಟುಗಳು ಅಥವಾ ಸಿನಿಮಾ ನಟರು ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿಲ್ಲವೇ? ಲಿಂಗ ಸಮಾನತೆಯ ಹೋರಾಟವನ್ನು ನಾವು ಗೆದ್ದಿದ್ದೇವೆ ಎಂದು ಸಂತೋಷ ಪಡಬೇಕೆ ಅಥವಾ ಕೆಲವರನ್ನು ಮಾತ್ರ ಟಾರ್ಗೆಟ್ ಮಾಡುವುದು ಸುಲಭ ಎಂದು ನಾವು ವ್ಯಥೆ ಪಡಬೇಕೆ?'' ಎಂದು ಪಾರೂಲ್ ಕಿಡಿಕಾರಿದ್ದಾರೆ.

  ರಿಯಾ ಚಕ್ರವರ್ತಿಗೆ ಬೆಂಬಲ

  ರಿಯಾ ಚಕ್ರವರ್ತಿಗೆ ಬೆಂಬಲ

  ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಬಂಧನ್ ಬಳಿಕ ಬಿಟೌನ್‌ನಲ್ಲಿಯೂ ಲಿಂಗಸಮಾನತೆಯ ಚರ್ಚೆ ಕೇಳಿ ಬರುತ್ತಿದೆ. #JusticeForRhea ಎಂದು ವಿದ್ಯಾ ಬಾಲನ್, ಕರಿನಾ ಕಪೂರ್, ಸೋನಂ ಕಪೂರ್, ಅತಿಯಾ ಶೆಟ್ಟಿ, ಶ್ವೇತಾ ಬಚ್ಚನ್, ದಿಯಾ ಮಿರ್ಜಾ, ಫರಾನ್ ಅಖ್ತಾರ್, ಅಭಯ್ ಡಿಯೋಲ್, ಮಲೈಕಾ ಅರೋರಾ, ಅನುರಾಗ್ ಕಶ್ಯಪ್ ಸೇರಿದಂತೆ ಬಾಲಿವುಡ್ ನ ಬಹುತೇಕ ಮಂದಿ ರಿಯಾ ಬೆಂಬಲಕ್ಕೆ ನಿಂತಿದ್ದಾರೆ.

  #JusticeForRhea ಟ್ರೆಂಡ್: ಸುಶಾಂತ್ ಪ್ರೇಯಸಿಯ ಪರ ನಿಂತ ಬಾಲಿವುಡ್ ಸ್ಟಾರ್ಸ್#JusticeForRhea ಟ್ರೆಂಡ್: ಸುಶಾಂತ್ ಪ್ರೇಯಸಿಯ ಪರ ನಿಂತ ಬಾಲಿವುಡ್ ಸ್ಟಾರ್ಸ್

  ಪಾರೂಲ್ ಟ್ವೀಟ್‌ಗೆ ಪರ-ವಿರೋಧ

  ಪಾರೂಲ್ ಟ್ವೀಟ್‌ಗೆ ಪರ-ವಿರೋಧ

  ಪಾರೂಲ್ ಯಾದವ್ ಟ್ವೀಟ್ ಈಗ ಭಾರಿ ಚರ್ಚೆಗೆ ಬಂದಿದೆ. ಹಲವರು ಪಾರೂಲ್ ಪರ ಬೆಂಬಲಕ್ಕೆ ನಿಂತಿದ್ದಾರೆ, ಇನ್ನು ಹಲವರು ಪಾರೂಲ್ ವಾದವನ್ನು ಖಂಡಿಸಿದ್ದಾರೆ. ಇನ್ನು ಪ್ರಕರಣ ತನಿಖೆಯಲ್ಲಿದೆ, ಯಾರೆಲ್ಲ ಇದ್ದಾರೆ ಅವರ ಹೆಸರು ಬರಲಿದೆ, ಕಾಯಿರಿ ಎಂದು ಸಲಹೆ ನೀಡುತ್ತಿದ್ದಾರೆ.

  English summary
  Sandalwood Drug Mafia: Why only Actresses Names in the case: actress Parul Yadav questioned?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X