For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣ: ದಿಗಂತ್-ಐಂದ್ರಿತಾ ರೇಗೆ ಮೊದಲ ದಿನದ ವಿಚಾರಣೆಯಲ್ಲಿ ರಿಲೀಫ್

  |

  ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದ ನಟ ದಿಗಂತ್ ಮತ್ತು ಐಂದ್ರಿತಾ ರೇಗೆ ಮೊದಲ ದಿನ ರಿಲೀಫ್ ಸಿಕ್ಕಿದೆ. ರಾಗಿಣಿ ಮತ್ತು ಸಂಜನಾ ಗಲ್ರಾನಿ ಅವರಂತೆ ವಿಚಾರಣೆ ವೇಳೆಯೇ ದಿಗಂತ್ ದಂಪತಿಯನ್ನು ವಶಕ್ಕೆ ಪಡೆಯುವ ಸಾಧ್ಯತೆ ಎಂದು ಹೇಳಲಾಗಿತ್ತು.

  ಎಸಿಪಿ Gautam Kumar ಮುಂದೆ ಹಾಜರಾದ ನಟ Diganth, ಹಾಗೂ Aindrita Ray | Oneindia Kannada

  ಆದರೆ, ವಿಚಾರಣೆಗೆ ಸಂಪೂರ್ಣವಾಗಿ ಸಹಕರಿಸಿದ ಹಿನ್ನೆಲೆ ಸ್ಟಾರ್ ದಂಪತಿಯನ್ನು ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಹಾಗಂತ, ದಿಗಂತ್ ಮತ್ತು ಐಂದ್ರಿತಾ ರೇಗೆ ಬಂದಿದ್ದ ಕಂಟಕ ಹೋಯ್ತು ಎನ್ನುವಂತಿಲ್ಲ. ಮೊದಲ ದಿನ ವಿಚಾರಣೆಯಿಂದ ಮಾತ್ರ ರಿಲೀಫ್ ಸಿಕ್ಕಿದೆ.

  ಡ್ರಗ್ಸ್ ಪ್ರಕರಣ: ಸಿಸಿಬಿ ವಿಚಾರಣೆಗೆ ಹಾಜರಾದ ದಿಗಂತ್-ಐಂದ್ರಿತಾ ರೇಡ್ರಗ್ಸ್ ಪ್ರಕರಣ: ಸಿಸಿಬಿ ವಿಚಾರಣೆಗೆ ಹಾಜರಾದ ದಿಗಂತ್-ಐಂದ್ರಿತಾ ರೇ

  ದಿಗಂತ್ ಮತ್ತು ಐಂದ್ರಿತಾ ರೇ ಅವರ ವಿಚಾರಣೆಗೆ ಸಂಬಂಧಿಸಿದಂತೆ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಸಹ ಪ್ರತಿಕ್ರಿಯಿಸಿದ್ದರು. ಏನಂದ್ರು? ಮುಂದೆ ಓದಿ...

  ಮತ್ತೊಮ್ಮೆ ಕರೆಯುತ್ತೇವೆ

  ಮತ್ತೊಮ್ಮೆ ಕರೆಯುತ್ತೇವೆ

  ''ದಿಗಂತ್ ಮತ್ತು ಐಂದ್ರಿತಾ ರೇ ಅವರ ಮೊದಲ ಹಂತದ ವಿಚಾರಣೆ ನಡೆದಿದೆ. ಈ ಹಂತದಲ್ಲಿ ಮಾಹಿತಿ ಪಡೆದಿದ್ದೇವೆ. ಎರಡನೇ ಹಂತದಲ್ಲಿ ಮತ್ತೊಮ್ಮೆ ವಿಚಾರಣೆ ಅಗತ್ಯವಿದೆ. ಹಾಗಾಗಿ, ಮತ್ತೊಮ್ಮೆ ವಿಚಾರಣೆಗೆ ಹಾಜರಾಗುತ್ತೇವೆ ಎಂದು ಸೂಚಿಸಲಿದ್ದೇವೆ'' ಎಂದು ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.

  ವಿಚಾರಣೆಗೆ ಸಹಕರಿಸುತ್ತಿದ್ದೇವೆ

  ವಿಚಾರಣೆಗೆ ಸಹಕರಿಸುತ್ತಿದ್ದೇವೆ

  ಮೊದಲ ದಿನದ ವಿಚಾರಣೆ ಮುಗಿಸಿ ಹೊರಬಂದ ದಿಗಂತ್ ಮತ್ತು ಐಂದ್ರಿತಾ ರೇ ದಂಪತಿ ''ತನಿಖೆ ನಡೆಯುತ್ತಿದೆ, ನಾವು ಸಂಪೂರ್ಣವಾಗಿ ಸಹಕಾರ ನೀಡುತ್ತೇವೆ. ಮತ್ತೊಮ್ಮೆ ವಿಚಾರಣೆಗೆ ಕರೆದರೆ ನಾವು ಹಾಜರಾಗುತ್ತೇವೆ. ಬೇರೆ ಹೇಳಬಾರದು ಅಂತ ಸಿಸಿಬಿ ಪೊಲೀಸರು ಹೇಳಿದ್ದಾರೆ'' ಎಂದಿದ್ದಾರೆ.

  ಹಾದಿ ತಪ್ಪಿದ ಮಾಧ್ಯಮಗಳಿಗೆ ನಟ-ನಟಿಯರ ಬಹಿರಂಗ ಪತ್ರಹಾದಿ ತಪ್ಪಿದ ಮಾಧ್ಯಮಗಳಿಗೆ ನಟ-ನಟಿಯರ ಬಹಿರಂಗ ಪತ್ರ

  ಕಂಟಕ ಮುಗಿದಿಲ್ಲ!

  ಕಂಟಕ ಮುಗಿದಿಲ್ಲ!

  ಮೊದಲ ದಿನದ ವಿಚಾರಣೆಯನ್ನು ಮುಗಿಸಿರುವ ದಿಗಂತ್ ಮತ್ತು ಐಂದ್ರಿತಾ ರೇ ಅವರಿಗೆ ಡ್ರಗ್ಸ್ ಪ್ರಕರಣದಲ್ಲಿ ಎದುರಾಗಿರುವ ಕಂಟಕ ಇನ್ನೂ ಮುಗಿದಿಲ್ಲ. ಮೂಲಗಳ ಪ್ರಕಾರ, ದಿಗಂತ್ ಮತ್ತು ಐಂದ್ರಿತಾ ಅವರ ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು ಸಂಪೂರ್ಣವಾಗಿ ಪರಿಶೀಲಿಸಿದ್ದಾರೆ. ಈ ಆಧಾರದಲ್ಲಿ ಮತ್ತೆ ವಿಚಾರಣೆಗೆ ಹಾಜರಾಗಬೇಕಾಗಿದೆ.

  ರಾಗಿಣಿ-ಸಂಜನಾ ಬಂಧನ ಆಗಿತ್ತು

  ರಾಗಿಣಿ-ಸಂಜನಾ ಬಂಧನ ಆಗಿತ್ತು

  ನಟಿ ರಾಗಿಣಿ ಮತ್ತು ಸಂಜನಾ ಗಲ್ರಾನಿ ಅವರನ್ನು ವಿಚಾರಣೆ ಹಂತದಲ್ಲಿ ಅರೆಸ್ಟ್ ಮಾಡಲಾಗಿತ್ತು. ಆ ಕಡೆ ಬಾಲಿವುಡ್‌ನಲ್ಲೂ ರಿಯಾ ಚಕ್ರವರ್ತಿಯನ್ನು ವಿಚಾರಣೆ ಹಂತದಲ್ಲಿ ಬಂಧಿಸಲಾಗಿತ್ತು. ಈ ನಿಟ್ಟಿನಲ್ಲಿ ಗಮನಿಸಿದರೆ ದಿಗಂತ್ ಮತ್ತು ಐಂದ್ರಿತಾಗೂ ಈ ಆತಂಕ ಇತ್ತು. ಆದರೆ, ಮೊದಲ ದಿನದಲ್ಲಿ ಇಬ್ಬರು ತನಿಖೆಗೆ ಸಹರಿಕರಿಸಿದ ಹಿನ್ನೆಲೆ ರಿಲೀಫ್ ಸಿಕ್ಕಿದೆ.

  English summary
  Sandalwood Drug Scandal: CCB officer Sandeep Patil Reaction after Diganth and Aindrita Ray Enquiry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X