For Quick Alerts
  ALLOW NOTIFICATIONS  
  For Daily Alerts

  ನಟಿ ರಾಗಿಣಿ ಪ್ರೀತಿಯ ಮನೆಯನ್ನು ಮಾರಾಟಕ್ಕಿಟ್ಟ ಪೋಷಕರು

  |

  ನಶೆ ನಂಟಿನ ಆರೋಪದ ಮೇಲೆ ಜೈಲು ಸೇರಿರುವ ನಟಿ ರಾಗಿಣಿಗೆ ಮತ್ತೊಂದು ಶಾಕ್ ಎದುರಾಗಿದೆ. ರಾಗಿಣಿ ವಾಸವಿದ್ದ ಯಲಹಂಕದ ಫ್ಲಾಟ್ ಅನ್ನು ಪೋಷಕರು ಮಾರಾಟಕ್ಕಿಟ್ಟಿದ್ದಾರೆ. ಹಣಕಾಸಿನ ಸಮಸ್ಯೆ ಎದುರಿಸುತ್ತಿರುವ ರಾಗಿಣಿ ಕುಟುಂಬ ಮನೆಯನ್ನು ಸೇಲ್ ಮಾಡಲು ಮುಂದಾಗಿದ್ದಾರೆ.

  ರಾಗಿಣಿ ಪೋಷಕರು ಆರ್ಥಿಕವಾಗಿ ತುಂಬಾ ಕಷ್ಟಪಡುತ್ತಿದ್ದಾರಂತೆ. ರಾಗಿಣಿ ಕೇಸ್ ವಿರುದ್ಧ ಹೋರಾಡಲು, ವಕೀಲರ ಫೀಸ್ ಸೇರಿದಂತೆ ಎಲ್ಲಾ ಖರ್ಚಿಗೆ ಹಣದ ಅವಶ್ಯಕತೆ ಇರುವ ಕಾರಣಕ್ಕೆ ಫ್ಲಾಟ್ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಅನನ್ಯ ಅಪಾರ್ಟ್ ಮೆಂಟ್ ನಲ್ಲಿರುವ ಫ್ಲಾಟ್ ಅನ್ನು ಮಾರಾಟಕ್ಕಿಟ್ಟಿದ್ದಾರೆ. ಈಗಾಗಲೇ ಆನ್ ಲೈನ್ ನಲ್ಲಿ ಮನೆ ಮಾರಾಟಕ್ಕಿದೆ ಎಂದು ಜಾಹಿರಾತು ನೀಡಿದ್ದಾರೆ.

  ಪರಪ್ಪನ ಅಗ್ರಹಾರ ಜೈಲಿಗೆ ರಾಗಿಣಿ ಶಿಫ್ಟ್‌: ಹೊರಗಿನ ಊಟಕ್ಕೆ ಇಲ್ಲ ಅವಕಾಶಪರಪ್ಪನ ಅಗ್ರಹಾರ ಜೈಲಿಗೆ ರಾಗಿಣಿ ಶಿಫ್ಟ್‌: ಹೊರಗಿನ ಊಟಕ್ಕೆ ಇಲ್ಲ ಅವಕಾಶ

  ಅಂದ್ಹಾಗೆ ಇದು ರಾಗಿಣಿಗೆ ತುಂಬಾ ಇಷ್ಟವಾದ ಮನೆಯಂತೆ. ತುಂಬಾ ಪ್ರೀತಿಯಿಂದ ಖರೀದಿಸಿದ ಮನೆಯಂತೆ. ಆದರೀಗ ಹಣವಿಲ್ಲ ಎನ್ನುವ ಕಾರಣಕ್ಕೆ ಮಾರಾಟ ಮಾಡುತ್ತಿದ್ದಾರೆ. ರಾಗಿಣಿ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. 14 ದಿನಗಳ ಕಾಲ ರಾಗಿಣಿ ಜೈಲಿನಲ್ಲಿಯೇ ಇರಬೇಕಾಗಿದೆ.

  ನಮಗೆ ತುಳಸಿಗಿಡ ಬರೀ ತುಳಸಿಗಿಡ ಮಾತ್ರ | Filmibeat Kannada

  ಇದೇ ಪ್ರಕರಣಕ್ಕೆ ಬಂಧಿಸಲ್ಪಟ್ಟಿರುವ ಸಂಜನಾ ಗಲ್ರಾನಿ ಇನ್ನೂ ಮೂರು ದಿನಗಳ ಕಾಲ ಸಿಸಿಬಿ ವಶದಲ್ಲಿಯೇ ಮುಂದುವರೆಯಲಿದ್ದಾರೆ. ರಾಗಿಣಿ ಆಪ್ತ ರವಿಶಂಕರ್, ಪ್ರಕರಣದ ಮುಖ್ಯ ಆರೋಪಿ ವೀರೇನ್ ಖನ್ನಾ ಸಹ ಸಿಸಿಬಿ ವಶದಲ್ಲಿಯೇ ಮುಂದುವರೆಯಲಿದ್ದಾರೆ.

  English summary
  Actress Ragini Dwivedi's parents puts her flat for sale. Ragini shifted to Parappana Agrahara Jail.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X