ನಟಿ ಸಂಜನಾ ಗಲ್ರಾನಿ ಮನೆ ಮೇಲೆ ಸಿಸಿಬಿ ದಾಳಿ
ನಟಿ ಸಂಜನಾ ಗಲ್ರಾನಿಗೆ ಇಂದು ಬೆಳ್ಳಂಬೆಳಗ್ಗೆ ಸಿಸಿಬಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಇಂದು (ಸೆಪ್ಟಂಬರ್ 8) ಬೆಳಗ್ಗೆ ಇಂದಿರಾನಗರದಲ್ಲಿರುವ ನಟಿ ಸಂಜನಾ ಗಲ್ರಾನಿ ಫ್ಲ್ಯಾಟ್ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಶೋಧಕಾರ್ಯ ನಡೆಸುತ್ತಿದ್ದಾರೆ.
Recommended Video
ಬೆಳಗ್ಗೆ 3 ವಾಹನದಲ್ಲಿ ಬಂದ 8 ಸಿಸಿಬಿ ಅಧಿಕಾರಿಗಳ ತಂಡ, ಸಂಜನಾ ಮನೆ ಮೇಲೆ ದಾಳಿ ನಡೆಸಿ, ಹುಡುಕಾಟ ನಡೆಸುತ್ತಿದ್ದಾರೆ. ಇನ್ಸ್ ಪೆಕ್ಟರ್ ಪುನೀತ್ ಮತ್ತು ಇನ್ಸ್ ಪೆಕ್ಟರ್ ಅಂಜುಮಾಲಾ ನೇತೃತ್ವದ ತಂಡ ದಾಳಿ ನಡೆಸಿದ್ದು, ಸಂಜನಾ ಮೊಬೈಲ್ ಮತ್ತು ಲ್ಯಾಪ್ ಟಾಪ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ಸ್ ಪೆಕ್ಟರ್ ಅಂಜುಮಾಲಾ ನಟಿ ಸಂಜನಾ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಆರೋಪದಡಿ ಈಗಾಗಲೆ ನಟಿ ರಾಗಿಣಿಯನ್ನು ಸಿಸಿಬಿ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಈಗ ಸಂಜನಾ ಗಲ್ರಾನಿಗೂ ಶಾಕ್ ನೀಡಿದೆ. ತನಗೂ ಡ್ರಗ್ಸ್ ಜಾಲಕ್ಕು ಯಾವುದೇ ಸಂಬಂಧವಿಲ್ಲ, ಏನು ಗೊತ್ತಿಲ್ಲ ಎನ್ನುತ್ತಿದ್ದ ಸಂಜನಾಗೆ ಈಗ ಸಂಕಷ್ಟ ಎದುರಾಗಿದೆ.

ಈಗಾಗಲೇ ಸಂಜನಾ ಆಪ್ತ ರಾಹುಲ್ ಶೆಟ್ಟಿ ಮತ್ತು ಪೃಥ್ವಿ ಶೆಟ್ಟಿ ಇಬ್ಬರನ್ನು ಸಿಸಿಬಿ ಬಂಧಿಸಿದೆ. ಇವರಿಬ್ಬರ ಹೇಳಿಕೆ ಆಧಾರದ ಮೇಲೆ ಸಂಜನಾ ಗಲ್ರಾನಿ ಮನೆ ಮೇಲೆ ದಾಳಿ ನಡೆದಿದೆ. ಸದ್ಯ ಶೋಧಕಾರ್ಯನಡೆಯುತ್ತಿದ್ದು, ಮನೆಯಲ್ಲಿ ಏನೆಲ್ಲ ಸಿಗಲಿಗೆ, ಸಂಜನಾ ಅವರನ್ನು ಸಿಸಿಬಿ ವಶಕ್ಕೆ ಪಡೆಯಲಿದೆಯಾ ಎನ್ನುವುದು ಕಾದುನೋಡಬೇಕು.


Click it and Unblock the Notifications