For Quick Alerts
  ALLOW NOTIFICATIONS  
  For Daily Alerts

  ಪುನೀತ್, ಶ್ರೀಮುರಳಿ ಸಿನಿಮಾಗಳ ಮೇಕಪ್ ಮ್ಯಾನ್ ಸೀನಣ್ಣ ನಿಧನ

  |

  ಕನ್ನಡ ಚಿತ್ರರಂಗದಲ್ಲಿ ಮೇಕಪ್ ಸೀನಣ್ಣ ಎಂದೇ ಖ್ಯಾತಿಗಳಿಸಿದ್ದ ಮೇಕಪ್ ಕಲಾವಿದ ಶ್ರೀನಿವಾಸ್ ಇಂದು (ಏಪ್ರಿಲ್ 28) ಕೊನೆಯುಸಿರೆಳೆದಿದ್ದಾರೆ. ಉಸಿರಾಟ ಸಮಸ್ಯೆಯಿಂದ ಬಳುತ್ತಿದ್ದ ಶ್ರೀನಿವಾಸ್ ಅವರನ್ನು ಕೆಲವು ದಿನಗಳ ಹಿಂದೆ ಆಸ್ಪತ್ರೆೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

  ಕನ್ನಡ ಚಿತ್ರರಂಗದಲ್ಲಿ ಅನೇಕ ವರ್ಷಗಳಿಂದ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಅವರು ಅನೇಕ ಖ್ಯಾತ ಕಲಾವಿದರಿಗೆ ಬಣ್ಣ ಹಚ್ಚಿದ್ದಾರೆ. ಸದ್ಯ ಶ್ರೀನಿವಾಸ್ ಅವರು ವರ್ಣಾಲಂಕಾರ ಮತ್ತು ಕೇಶಲಂಕಾರ ಕಲಾವಿದರ ಸಂಘದ ಉಪಾಧ್ಯಕ್ಷರಾಗಿದ್ದರು.

  ಪುಟ್ಟಣ್ಣ ಕಣಗಾಲ್ ಪುತ್ರನ ಸಾವಿಗೆ ಟಿಎನ್ ಸೀತಾರಾಮ್ ಸಂತಾಪಪುಟ್ಟಣ್ಣ ಕಣಗಾಲ್ ಪುತ್ರನ ಸಾವಿಗೆ ಟಿಎನ್ ಸೀತಾರಾಮ್ ಸಂತಾಪ

  ಸೀನಣ್ಣ ನಿರ್ದೇಶಕ ಚೇತನ್ ಕುಮಾರ್ ಸಾರಥ್ಯ ಬಹದ್ದೂರ್, ಭರ್ಜರಿ, ಭರಾಟೆ ಮತ್ತು ಇನ್ನು ಅನೇಕ ಸಿನಿಮಾಗಳಿಗೆ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿದ್ದಾರೆ. ಸದ್ಯ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾಗೂ ಮೇಕಪ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅನೇಕ ಯುವ ನಿರ್ದೇಶಕರ ಸಿನಿಮಾಗಳಿಗೆ ಸೀನಣ್ಣ ಕೆಲಸ ಮಾಡಿದ್ದಾರೆ.

  ಸೀನಣ್ಣ ನಿಧನಕ್ಕೆ ನಿರ್ದೇಶಕ ಚೇತನ್ ಸಂತಾಪ ಸೂಚಿಸಿದ್ದಾರೆ. 'ನಮ್ಮ ಬಹದ್ದೂರ್, ಭರ್ಜರಿ, ಭರಾಟೆ ಹಾಗೂ ಜೇಮ್ಸ್ ಚಿತ್ರಗಳಿಗೆ ಹಾಗೂ ಕನ್ನಡದ ಬಹಳಷ್ಟು ಚಿತ್ರಗಳಿಗೆ ಕಂಪೆನಿ ಮೇಕಪ್ ಮ್ಯಾನ್ ಆಗಿ (ವರ್ಣಾಲಂಕಾರ) ಕಾರ್ಯನಿರ್ವಹಿಸಿದ "ಮೇಕಪ್ ಸೀನಣ್ಣ" (ಶ್ರೀನಿವಾಸ್) ರವರು ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ನಿಮಗೆ ಭಾವಪೂರ್ಣ ಶ್ರದ್ಧಾಂಜಲಿ ಅಣ್ಣ' ಎಂದು ಟ್ವೀಟ್ ಮಾಡಿದ್ದಾರೆ.

  ಆರೋಗ್ಯದ ಬಗ್ಗೆ ಮಾಹಿತಿ ಶೇರ್ ಮಾಡಿದ ಕಿಚ್ಚ ಸುದೀಪ್ | Filmibeat Kannada

  ಇನ್ನು ನಿರ್ದೇಶಕ ಎಪಿ ಅರ್ಜುನ್ ಟ್ವೀಟ್ ಮಾಡಿ. 'ನನ್ನ ಎಲ್ಲಾ ಸಿನಿಮಾಗಳಿಗೂ makeup ಕಲಾವಿದರಾಗಿ ಕೆಲಸ ನಿರ್ವಹಿಸುತ್ತಿದ್ದ ಸೀನಣ್ಣ ಇಂದು ಬೆಳಿಗ್ಗೆ ದೈವಾಧೀನರಾಗಿದ್ದಾರೆ. ಒಂದು ವಾರದ ಹಿಂದೆ ನಗುನಗುತ್ತಾ ಬಂದು ಭೇಟಿಯಾಗಿದ್ದ ವ್ಯಕ್ತಿ ಇಂದು ಇಲ್ಲ ಎಂದರೆ ನಿಜವಾಗಿಯೂ ನಂಬಲಾಗುತ್ತಿಲ್ಲ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸೀನಣ್ಣ' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  English summary
  Sandalwood famous Makeup Artist Srinivas Passes Away.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X