ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿದ ಕನ್ನಡ ಚಿತ್ರ ನಿರ್ಮಾಪಕ ಕೆ. ಪ್ರಭಾಕರ್ ನಿಧನ

ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ, ನಿರ್ದೇಶಕ ಕೆ. ಪ್ರಭಾಕರ್ ಹೃದಯಾಘಾತದಿಂದ ನಿನ್ನೆ(ಆಗಸ್ಟ್ 27) ನಿಧನರಾಗಿದ್ದಾರೆ. 'ಅವಳೇ ನನ್ನ ಹೆಂಡ್ತಿ', 'ಅವನೇ ನನ್ನ ಗಂಡ', 'ಸೋಲಿಲ್ಲದ ಸರದಾರ', 'ಅಣ್ಣ- ತಂಗಿ' ರೀತಿಯ ಹಿಟ್ ಸಿನಿಮಾಳನ್ನು ಅವರು ನಿರ್ಮಿಸಿದ್ದರು. ಕನ್ನಡ ಚಿತ್ರರಂಗದ ಸಿನಿಮಾಗಳ ವ್ಯವಹಾರದ ಬಗ್ಗೆ ಆಳವಾದ ಜ್ಞಾನ ಅವರು ಹೊಂದಿದ್ದರು.

ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ನಿರ್ಮಾಪಕ ಕೆ. ಪ್ರಭಾಕರ್ ಅವರನ್ನು ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು. ಕೆಲ ದಿನಗಳ ಹಿಂದಷ್ಟೇ ಅವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಯಿತು. ವಿಷ್ಣುವರ್ಧನ್​, ಉಪೇಂದ್ರ, ಅಂಬರೀಶ್,​ ಶಶಿಕುಮಾರ್ ನಟನೆಯ​ ಚಿತ್ರಗಳನ್ನು ನಿರ್ಮಿಸಿದ್ದರು.

Sandalwood film Producer K Prabhakar passes away due to heart attack

ಬೆಂಗಳೂರಿನ ಎನ್‌. ಆರ್‌ ಕಾಲೋನಿಯಲ್ಲಿ ಕೆ. ಪ್ರಭಾಕರ್ ವಾಸವಿದ್ದರು. ಅವರ ನಿಧನಕ್ಕೆ ಆಪ್ತರು ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಸರಳ ಸಜ್ಜನ ವ್ಯಕ್ತಿತ್ವದಿಂದಲೇ ಕೆ. ಪ್ರಭಾಕರ್ ಚಿತ್ರರಂಗದಲ್ಲಿ ಹೆಸರಾಗಿದ್ದರು. ಶಿವರಾಜ್‌ಕುಮಾರ್ ಹಾಗೂ ರಾಧಿಕಾ ಕುಮಾರಸ್ವಾಮಿ ನಟನೆಯ 'ಅಣ್ಣ-ತಂಗಿ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಆ ಚಿತ್ರಕ್ಕೆ ಕೆ. ಪ್ರಭಾಕರ್ ಬಂಡವಾಳ ಹೂಡಿದ್ದರು.

ಶಿವಣ್ಣ-ಉಪ್ಪಿ ನಟಿಸಿದ 'ಲವ-ಕುಶ', ವಿಷ್ಣುವರ್ಧನ್- ಪ್ರೇಮಾ ಜೋಡಿಯ 'ಎಲ್ಲರಂಥಲ್ಲ ನನ್ನ ಗಂಡ', ಕಾಶೀನಾಥ್ ಹಾಗೂ ಭವ್ಯ ಅಭಿನಯದ 'ಅವಳೇ ನನ್ನ ಹೆಂಡ್ತಿ' ರೀತಿಯ ಜನಪ್ರಿಯ ಸಿನಿಮಾಗಳನ್ನು ಕನ್ನಡ ಪ್ರೇಕ್ಷಕರಿಗೆ ಕೊಟ್ಟಿದ್ದರು. ಬರೀ ಫ್ಯಾಮಿಲಿ ಎಂಟರ್‌ಟ್ರೈನರ್ ಸಿನಿಮಾಗಳನ್ನೇ ನಿರ್ಮಿಸಿ ಕೆ. ಪ್ರಭಾಕರ್ ಯಶಸ್ಸು ಪಡೆದಿದ್ದರು. ಕನ್ನಡ ಮಾತ್ರವಲ್ಲದೇ ತೆಲುಗು ಚಿತ್ರಗಳಿಗೂ ಬಂಡವಾಳ ಹೂಡಿದ್ದರು.

ಅಂಬರೀಶ್- ಭವ್ಯ ನಟನೆಯ 'ಸೋಲಿಲ್ಲದ ಸರದಾರ' ಹಾಗೂ ವಿಷ್ಣುವರ್ಧನ್, ವಿನಯಪ್ರಸಾದ್, ಶ್ರುತಿ ನಟನೆಯ 'ತುಂಬಿದ ಮನೆ' ಕೆ. ಪ್ರಭಾಕರ್ ನಿರ್ಮಿಸಿದ ಮತ್ತಷ್ಟು ಜನಪ್ರಿಯ ಸಿನಿಮಾಗಳು.

More from Filmibeat

English summary
Producer K Prabhakar Dies Of Heart Attack in bengaluru;
Read more about: producer sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X