For Quick Alerts
  ALLOW NOTIFICATIONS  
  For Daily Alerts

  2018 'ಫಸ್ಟ್ ಹಾಫ್'ನಲ್ಲಿ ವಿವಾದಗಳಿಗೇನೂ ಕಮ್ಮಿ ಇಲ್ಲ ಸ್ವಾಮಿ.!

  By Harshitha
  |

  2018 ವರ್ಷಾರಂಭದಿಂದಲೂ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಕಾವು ಎಲ್ಲೆಡೆ ಇತ್ತು. ಹೀಗಿದ್ದರೂ, ಗಾಂಧಿನಗರದ ಗಲ್ಲಿಗಳಲ್ಲಿ ವಿವಾದಗಳಿಗೇನೂ ಕಮ್ಮಿ ಇರಲಿಲ್ಲ.

  ಇರಲಾರದೆ ಇರುವೆ ಬಿಟ್ಟುಕೊಂಡು, ಕ್ಷಮೆ ಕೇಳುವಂಥ ಪರಿಸ್ಥಿತಿ ಭಂಡಾರಿ ಬ್ರದರ್ಸ್ ಗೆ ಬಂತು. ವರ್ಷಗಳ ಹಿಂದಿನ ಯಶ್ ಬಾಡಿಗೆ ಮನೆ ಗಲಾಟೆ ಈ ವರ್ಷ ಮತ್ತೆ ಸುದ್ದಿ ಮಾಡ್ತು. ಸದಾ ಯೂಟ್ಯೂಬ್ ನಲ್ಲಿ 'ನನ್ ಮಗಂದ್' ಎನ್ನುವ ಹುಚ್ಚ ವೆಂಕಟ್ ಏನೇನೋ ಮಾತನಾಡಿ ಶಿವಣ್ಣ ಫ್ಯಾನ್ಸ್ ನಿಂದ ಮಹಾ ಮಂಗಳಾರತಿ ಮಾಡಿಸಿಕೊಂಡರು. ಇವೆಲ್ಲದರ ಮಧ್ಯೆ 'ಕಾಲಾ' ಬಿಡುಗಡೆ ಗಲಾಟೆ ಬೇರೆ.

  ಹಾಗಾದ್ರೆ ಬನ್ನಿ 2018 ಫಸ್ಟ್ ಹಾಫ್ ನಲ್ಲಿ ಸ್ಯಾಂಡಲ್ ವುಡ್ ನಲ್ಲಿ ಆದ ಗದ್ದಲ-ಗಲಾಟೆಗಳ ಸುತ್ತ ಒಂದು ರೌಂಡ್ ಹೋಗ್ಬಿಟ್ಟು ಬರೋಣ...

  'ರಾಜರಥ' ವಿವಾದ

  'ರಾಜರಥ' ವಿವಾದ

  RJ Rapid ರಶ್ಮಿ ನಿರೂಪಣೆಯಲ್ಲಿ ಮೂಡಿಬಂದ ಫಿಲ್ಟರ್ ಇಲ್ಲದ ಶೋನಲ್ಲಿ ಮನಸ್ಸು ಹಾಗೂ ನಾಲಿಗೆ ಮಧ್ಯೆ ಫಿಲ್ಟರ್ ಇಲ್ಲದೆ ಮಾತನಾಡಿ ನಿರ್ದೇಶಕ ಅನೂಪ್ ಭಂಡಾರಿ ಹಾಗೂ ನಟ ನಿರೂಪ್ ಭಂಡಾರಿ ವಿವಾದಕ್ಕೆ ಗ್ರಾಸವಾದರು. ''ರಾಜರಥ ಸಿನಿಮಾ ನೋಡದ ಪ್ರೇಕ್ಷಕರು ....' ಎಂದು ಬಿಟ್ಟ ಸ್ಥಳವನ್ನು ತುಂಬಿಸುವಂತೆ RJ Rapid ರಶ್ಮಿ ಕೇಳಿದ ಪ್ರಶ್ನೆಗೆ ಉಪಾಯವಾಗಿ ಉತ್ತರ ಕೊಡುವುದು ಬಿಟ್ಟು ''ರಾಜರಥ ಸಿನಿಮಾ ನೋಡದ ಪ್ರೇಕ್ಷಕರು ಕಚಡ ನನ್ ಮಕ್ಳು'' ಎಂದು ಅನೂಪ್ ಭಂಡಾರಿ, ''ರಾಜರಥ ಸಿನಿಮಾ ನೋಡದ ಪ್ರೇಕ್ಷಕರು ಕಚಡ ಮಾತ್ರವಲ್ಲ ಲೋಫರ್ ನನ್ ಮಕ್ಳು'' ಅಂತ ನಿರೂಪ್ ಭಂಡಾರಿ ಕೊಟ್ಟ ಹೇಳಿಕೆ ಕನ್ನಡಿಗರನ್ನು ಕೆರಳಿಸಿತು. ಈ ವಿವಾದ ಫಿಲ್ಮ್ ಚೇಂಬರ್ ಮೆಟ್ಟಿಲೇರಿ, ಕಡೆಗೆ ಅನೂಪ್ ಹಾಗೂ ನಿರೂಪ್ ಕ್ಷಮೆ ಕೇಳಿದರು. ಇನ್ನೂ ಅಂತಹ ಪ್ರಶ್ನೆ ಕೇಳಿದ Rapid ರಶ್ಮಿ ಕೂಡ ಕ್ಷಮೆಯಾಚಿಸಿದರು.

  ಕನ್ನಡಿಗರನ್ನು ವಿನಮ್ರವಾಗಿ ಕ್ಷಮೆ ಕೇಳಿದ ಭಂಡಾರಿ ಸಹೋದರರುಕನ್ನಡಿಗರನ್ನು ವಿನಮ್ರವಾಗಿ ಕ್ಷಮೆ ಕೇಳಿದ ಭಂಡಾರಿ ಸಹೋದರರು

  'ಕೆ.ಪಿ.ಜೆ.ಪಿ' ಪಕ್ಷಕ್ಕೆ ಉಪೇಂದ್ರ ಗುಡ್ ಬೈ

  'ಕೆ.ಪಿ.ಜೆ.ಪಿ' ಪಕ್ಷಕ್ಕೆ ಉಪೇಂದ್ರ ಗುಡ್ ಬೈ

  'ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ'ಗೆ ರಿಯಲ್ ಸ್ಟಾರ್ ಉಪೇಂದ್ರ 'ದೊಡ್ಡ ನಮಸ್ಕಾರ' ಹಾಕಿದ್ದು ಇದೇ ವರ್ಷ. ಕೆ.ಪಿ.ಜೆ.ಪಿ ಪಕ್ಷದಿಂದ ಮುಂಬರುವ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನ ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತಿರುವಾಗಲೇ, ಕೆ.ಪಿ.ಜೆ.ಪಿ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿತ್ತು. ಅಭ್ಯರ್ಥಿಗಳಿಗೆ ಬಿ-ಫಾರ್ಮ್ ಹಂಚಿಕೆ ಮಾಡಲು ಸೈನಿಂಗ್ ಅಥಾರಿಟಿಗಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಉಪೇಂದ್ರ ಹಾ

  ಗೂ ಪಕ್ಷದ ಸಂಸ್ಥಾಪಕ ಮಹೇಶ್ ಗೌಡ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿತ್ತು. ಹೀಗಾಗಿ, ಕೆ.ಪಿ.ಜೆ.ಪಿ ಪಕ್ಷಕ್ಕೆ ರಾಜೀನಾಮೆ ನೀಡಲು ಉಪೇಂದ್ರ ತೀರ್ಮಾನ ಮಾಡಿದರು.

  ಕೆ.ಪಿ.ಜೆ.ಪಿಗೆ ಉಪೇಂದ್ರ ಗುಡ್ ಬೈ: ಹೊಸ 'ಪ್ರಜಾಕೀಯ' ಪಕ್ಷ ಕಟ್ಟಲು ನಿರ್ಧಾರ!ಕೆ.ಪಿ.ಜೆ.ಪಿಗೆ ಉಪೇಂದ್ರ ಗುಡ್ ಬೈ: ಹೊಸ 'ಪ್ರಜಾಕೀಯ' ಪಕ್ಷ ಕಟ್ಟಲು ನಿರ್ಧಾರ!

  ಹುಚ್ಚ ವೆಂಕಟ್ ವರ್ಸಸ್ ಶಿವಣ್ಣ ಫ್ಯಾನ್ಸ್

  ಹುಚ್ಚ ವೆಂಕಟ್ ವರ್ಸಸ್ ಶಿವಣ್ಣ ಫ್ಯಾನ್ಸ್

  ಶಿವರಾಜ್ ಕುಮಾರ್ ಅವರನ್ನ ಭೇಟಿ ಮಾಡಲು, ಅವರ ಮನೆ ಬಳಿ ಹುಚ್ಚ ವೆಂಕಟ್ ಹೋಗಿದ್ದಾಗ, ಮನೆಯಲ್ಲಿ ಶಿವಣ್ಣ ಇರಲಿಲ್ಲ. ಶಿವಣ್ಣನ ಡ್ರೈವರ್ ಹಾಗೂ ಸೆಕ್ಯೂರಿಟಿ ಗಾರ್ಡ್ ಕೂಡ ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ. ಅಷ್ಟಕ್ಕೆ, ಶಿವಣ್ಣನ ಬಗ್ಗೆ ಹುಚ್ಚ ವೆಂಕಟ್ ಬಾಯಿಗೆ ಬಂದ ಹಾಗೆ ಮಾತನಾಡಿದ್ದರು. ಶಿವಣ್ಣನ ಬಗ್ಗೆ ನಾಲಿಗೆ ಬಿಗಿ ಹಿಡಿಯದೆ ಹುಚ್ಚ ವೆಂಕಟ್ ಮಾತನಾಡಿರುವ ವಿಡಿಯೋ ಬಗ್ಗೆ ಎಲ್ಲೆಡೆ ಅಸಮಾಧಾನ ಭುಗಿಲೆದ್ದಿತ್ತು. ಮನಬಂದಂತೆ ಮಾತನಾಡುವ ಹುಚ್ಚ ವೆಂಕಟ್ ಗೆ ಶಿವಣ್ಣನ ಅಭಿಮಾನಿಗಳು ಉಗಿದು ಉಪ್ಪಿನಕಾಯಿ ಹಾಕಿದ್ದರು.

  ಹುಚ್ಚ ವೆಂಕಟ್ ಗೆ ಉಗಿದು ಉಪ್ಪಿನಕಾಯಿ ಹಾಕಿದ ಶಿವಣ್ಣನ ಅಭಿಮಾನಿಗಳು!ಹುಚ್ಚ ವೆಂಕಟ್ ಗೆ ಉಗಿದು ಉಪ್ಪಿನಕಾಯಿ ಹಾಕಿದ ಶಿವಣ್ಣನ ಅಭಿಮಾನಿಗಳು!

  ಜಗ್ಗೇಶ್ ಮೇಲೆ ಹಲ್ಲೆ ಆರೋಪ

  ಜಗ್ಗೇಶ್ ಮೇಲೆ ಹಲ್ಲೆ ಆರೋಪ

  ಕನ್ನಡ ನಟ, ನವರಸ ನಾಯಕ ಜಗ್ಗೇಶ್ ಮಲ್ಲೇಶ್ವರಂನಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂತು. ಇದಕ್ಕೆ ಸಂಬಂಧಪಟ್ಟಂತೆ ಜಗ್ಗೇಶ್ ಮತ್ತು ಮಾದೇಗೌಡ ಎಂಬ ವ್ಯಕ್ತಿಯ ನಡುವೆ ತಳ್ಳಾಟ ನಡೆದಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು. ಈ ಬಗ್ಗೆ ನಟ ಜಗ್ಗೇಶ್, ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ಕೊಟ್ಟು ವಿವಾದಕ್ಕೆ ಶುಭಂ ಹಾಡಿದರು.

  ವ್ಯಕ್ತಿ ಮೇಲೆ ಜಗ್ಗೇಶ್ ಹಲ್ಲೆ ಆರೋಪ: ಘಟನೆ ತಿರುಚಲಾಗಿದೆ ಎಂದ ನಟವ್ಯಕ್ತಿ ಮೇಲೆ ಜಗ್ಗೇಶ್ ಹಲ್ಲೆ ಆರೋಪ: ಘಟನೆ ತಿರುಚಲಾಗಿದೆ ಎಂದ ನಟ

  ನಿರ್ಮಾಪಕ ಸುಂದರ್ ಮದುವೆ

  ನಿರ್ಮಾಪಕ ಸುಂದರ್ ಮದುವೆ

  ದಾವಣಗೆರೆಯ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಮೂರ್ತಿ ನಾಯ್ಕ್ ಅವರ ಮಗಳು ಲಕ್ಷ್ಮಿ ನಾಯ್ಕ್ ಇದ್ದಕ್ಕಿದ್ದಂತೆ ಕಾಣೆಯಾಗಿ ಕನ್ನಡ ನಿರ್ಮಾಪಕ ಸುಂದರ್ ಗೌಡ ಅವರನ್ನು ಮದುವೆ ಆದ ಸುದ್ದಿ ಬ್ರೇಕಿಂಗ್ ನ್ಯೂಸ್ ಆಗಿದ್ದು ಇದೇ ವರ್ಷ. ಇನ್ನೂ ನಿರ್ಮಾಪಕ ಸುಂದರ್ ಗೌಡ ಅವರನ್ನು ಬಚಾವ್ ಮಾಡಲು ಹೋಗಿ ದುನಿಯಾ ವಿಜಯ್ ಸಂಕಷ್ಟಕ್ಕೆ ಸಿಲುಕಿದ್ದು ನಿಮಗೆ ಗೊತ್ತಿರಬಹುದು.

  ರಹಸ್ಯ ಮದುವೆ ಬಳಿಕ ವಿಡಿಯೋ ಸಂದೇಶ ಕಳುಹಿಸಿದ ಶಾಸಕನ ಪುತ್ರಿರಹಸ್ಯ ಮದುವೆ ಬಳಿಕ ವಿಡಿಯೋ ಸಂದೇಶ ಕಳುಹಿಸಿದ ಶಾಸಕನ ಪುತ್ರಿ

  ಯಶ್ ಬಾಡಿಗೆ ಮನೆ ಗಲಾಟೆ

  ಯಶ್ ಬಾಡಿಗೆ ಮನೆ ಗಲಾಟೆ

  ತಮ್ಮ ಬಾಡಿಗೆ ಮನೆ ಗಲಾಟೆ ಬಗ್ಗೆ ನಟ ಯಶ್ ತಮ್ಮ ಫೇಸ್ ಬುಕ್ ಲೈವ್ ಮೂಲಕ ಸ್ಪಷ್ಟನೆ ನೀಡಿದರು. ಬಾಡಿಗೆ ಮನೆಯ ವಿವಾದಕ್ಕೆ ಕಾರಣ ಏನು ಎಂಬುದನ್ನು ನಟ ಯಶ್ ಜನತೆ ಮುಂದೆ ಬಿಚ್ಚಿಟ್ಟಿದ್ದು ಇದೇ ವರ್ಷ.

  ಬಾಡಿಗೆ ಮನೆ ರಾದ್ಧಾಂತದ ಬಗ್ಗೆ ಕಡೆಗೂ ಸತ್ಯ ಬಾಯ್ಬಿಟ್ಟ ನಟ ಯಶ್.!ಬಾಡಿಗೆ ಮನೆ ರಾದ್ಧಾಂತದ ಬಗ್ಗೆ ಕಡೆಗೂ ಸತ್ಯ ಬಾಯ್ಬಿಟ್ಟ ನಟ ಯಶ್.!

  ಸುದೀಪ್ - ಯಶ್ ಫ್ಯಾನ್ಸ್ ವಾರ್

  ಸುದೀಪ್ - ಯಶ್ ಫ್ಯಾನ್ಸ್ ವಾರ್

  ಸುದೀಪ್ ಗೆ 'ಸರ್' ಎಂದಿಲ್ಲ ಅಂತ್ಹೇಳಿ ನಟ ಯಶ್ ವಿರುದ್ಧ ಸುದೀಪ್ ಫ್ಯಾನ್ಸ್ ಸಮರ ಸಾರಿದರು. ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಇದೇ ವಿಚಾರಕ್ಕೆ ದೊಡ್ಡ ಗಲಾಟೆಯೇ ನಡೆದು ಹೋಯ್ತು. ಕಡೆಗೆ ಸುದೀಪ್ ಈ ಬಗ್ಗೆ ಟ್ವೀಟ್ ಮಾಡಿ ಅಭಿಮಾನಿಗಳನ್ನು ಸಮಾಧಾನ ಪಡಿಸಿದರು.

  ಯಶ್ ಮಾಡಿಬಿಟ್ಟರೇ ಮಹಾಪರಾಧ? ಕುದಿಯುತ್ತಿದೆ ಸುದೀಪ್ ಅಭಿಮಾನಿಗಳ ರಕ್ತ!ಯಶ್ ಮಾಡಿಬಿಟ್ಟರೇ ಮಹಾಪರಾಧ? ಕುದಿಯುತ್ತಿದೆ ಸುದೀಪ್ ಅಭಿಮಾನಿಗಳ ರಕ್ತ!

  'ಪ್ಯಾಟೆ ಹುಡ್ಗೀರ್' ವಿವಾದ

  'ಪ್ಯಾಟೆ ಹುಡ್ಗೀರ್' ವಿವಾದ

  ಕಿರುತೆರೆಯಲ್ಲಿ ಭಾರಿ ಜನಪ್ರಿಯತೆ ಗಳಿಸಿದ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಕಾರ್ಯಕ್ರಮ ಕೂಡ ವಿವಾದದ ಕೇಂದ್ರಬಿಂದು ಆಯ್ತು. ಇಂದು ನಡೆಯುತ್ತಿದ್ದ ಆಡಿಷನ್ ನಲ್ಲಿ ಯುವತಿಯರಿಗೆ ಅಶ್ಲೀಲ ಪ್ರಶ್ನೆಗಳನ್ನು ಕೇಳಲಾಗಿದೆ ಅಂತ ಆಡಿಷನ್ ನಲ್ಲಿ ಭಾಗವಹಿಸಿದ್ದ ಯುವತಿಯರು ರೊಚ್ಚಿಗೆದ್ದಿದ್ದರು.

  'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಅಶ್ಲೀಲ ಆಡಿಷನ್: ರೊಚ್ಚಿಗೆದ್ದ ಯುವತಿಯರು!'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಅಶ್ಲೀಲ ಆಡಿಷನ್: ರೊಚ್ಚಿಗೆದ್ದ ಯುವತಿಯರು!

  'ಕಾಲಾ' ಕೋಲಾಹಲ

  'ಕಾಲಾ' ಕೋಲಾಹಲ

  ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ಕೊಟ್ಟ ರಜನಿಕಾಂತ್ ಅಭಿನಯದ 'ಕಾಲಾ' ಚಿತ್ರ ಬಿಡುಗಡೆಗೆ ಕರ್ನಾಟಕದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ, 'ಕಾಲಾ' ಚಿತ್ರಕ್ಕೆ ಕರ್ನಾಟಕದಲ್ಲಿ ನಿರೀಕ್ಷಿಸಿದಂತೆ ಭರ್ಜರಿ ಓಪನ್ನಿಂಗ್ ಸಿಗಲಿಲ್ಲ.

  'ಕಾಲಾ' ಕೋಲಾಹಲ: ಬುಕ್ ಮೈ ಶೋನಲ್ಲಿ 'ಕಾಲಾ' ಹೆಸರೇ ಇಲ್ಲ.!'ಕಾಲಾ' ಕೋಲಾಹಲ: ಬುಕ್ ಮೈ ಶೋನಲ್ಲಿ 'ಕಾಲಾ' ಹೆಸರೇ ಇಲ್ಲ.!

  English summary
  Sandalwood First Half Report 2018: Complete details about controversies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X