ಫಸ್ಟ್ ಹಾಫ್ ಬಿಟ್ಬಿಡಿ, ಸೆಕೆಂಡ್ ಹಾಫ್ ನಲ್ಲಿ ಕಾದಿದೆ ಭರಪೂರ ಮನರಂಜನೆ.!
Recommended Video

ಕೆಲವೊಂದು ಸಿನಿಮಾಗಳೇ ಹಾಗೆ... ಫಸ್ಟ್ ಹಾಫ್ ನಲ್ಲಿ ಸಿಕ್ಕಾಪಟ್ಟೆ ಬೋರು ಹೊಡೆಸಿ ಸೆಕೆಂಡ್ ಹಾಫ್ ನಲ್ಲಿ ಯದ್ವಾತದ್ವಾ ಕಿಕ್ ಕೊಡುತ್ತೆ. 2018 ರ ಸೆಕೆಂಡ್ ಹಾಫ್ ಕೂಡ ಹಾಗೇ ಮನರಂಜನೆಯ ಕಿಕ್ ಕೊಡಲಿ ಅನ್ನೋದು ಸಿನಿ ಪ್ರೇಮಿಗಳ ಬಯಕೆ.
ಈ ವರ್ಷದ ಮೊದಲಾರ್ಧದಲ್ಲಿ ಶಿವರಾಜ್ ಕುಮಾರ್ ಬಿಟ್ಟರೆ ಇನ್ಯಾರೂ ಸೆಂಚುರಿ ಬಾರಿಸಿಲ್ಲ. ಆದ್ರೆ, ದ್ವಿತೀಯಾರ್ಧದಲ್ಲಿ ಪ್ರೇಕ್ಷಕರಿಗೆ ಮನರಂಜನೆ ನೀಡಲು ಸ್ಟಾರ್ ಗಳೇ ಸಾಲಾಗಿ ನಿಂತಿದ್ದಾರೆ. ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಚಿತ್ರಗಳು ಈ ವರ್ಷದ ದ್ವಿತೀಯಾರ್ಧದಲ್ಲಿ ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗಲಿವೆ.
ಯಾವುವು ಆ ಬಹು ನಿರೀಕ್ಷಿತ ಸಿನಿಮಾಗಳು ಅಂತ ತಲೆಗೆ ಹುಳ ಬಿಟ್ಟುಕೊಳ್ಳುವ ಬದಲು ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ...

'ಕುರುಕ್ಷೇತ್ರ'
'ಡಿ-ಬಾಸ್' ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿರುವ ಸಿನಿಮಾ 'ಕುರುಕ್ಷೇತ್ರ'. 'ಉರಗ ಪತಾಕ' ದುರ್ಯೋಧನ ಕುರಿತಾದ ಚಿತ್ರ ಇದು. ಸ್ಯಾಂಡಲ್ ವುಡ್ ನಲ್ಲಿ ಲಾಂಗ್ ಗ್ಯಾಪ್ ಬಳಿಕ ತೆರೆ ಕಾಣಲಿರುವ ಪೌರಾಣಿಕ ಚಿತ್ರ ಈ 'ಕುರುಕ್ಷೇತ್ರ'. ದರ್ಶನ್, ರವಿಚಂದ್ರನ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರ್, ರವಿಶಂಕರ್ ಸೇರಿದಂತೆ ದೊಡ್ಡ ತಾರಾಬಳಗ ಇರುವ 'ಕುರುಕ್ಷೇತ್ರ' ಈ ವರ್ಷ ತೆರೆ ಕಾಣುವುದು ಪಕ್ಕಾ.

'ದಿ ವಿಲನ್'
ಶಿವರಾಜ್ ಕುಮಾರ್ ಹಾಗೂ ಸುದೀಪ್ ತೆರೆಹಂಚಿಕೊಂಡಿರುವ ಹ್ಯಾಟ್ರಿಕ್ ಡೈರೆಕ್ಟರ್ ಪ್ರೇಮ್ ಆಕ್ಷನ್ ಕಟ್ ಹೇಳಿರುವ ಸಿನಿಮಾ 'ದಿ ವಿಲನ್'. ಆಮಿ ಜಾಕ್ಸನ್, ಮಿಥುನ್ ಚಕ್ರವರ್ತಿ ಸೇರಿದಂತೆ ಮಲ್ಟಿ ಸ್ಟಾರ್ ಕಾಸ್ಟ್ ಹೊಂದಿರುವ 'ದಿ ವಿಲನ್' ಕೂಡ ಇದೇ ವರ್ಷ ಬಿಡುಗಡೆ ಆಗಲಿದೆ.

ಕೆ.ಜಿ.ಎಫ್
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸಿನಿಮಾ 'ಕೆ.ಜಿ.ಎಫ್'. 'ಉಗ್ರಂ' ಬಳಿಕ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಚಿತ್ರ ಇದಾಗಿದ್ದು, ಈಗಾಗಲೇ ಬಹು ನಿರೀಕ್ಷೆ ಹುಟ್ಟು ಹಾಕಿದೆ. ಟ್ರೈಲರ್ ಮಾತ್ರದಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡಿರುವ 'ಕೆ.ಜಿ.ಎಫ್' ಕೂಡ ಇದೇ ವರ್ಷ ತೆರೆಗೆ ಬರಲಿದೆ.

'ಅಂಬಿ ನಿಂಗ್ ವಯಸ್ಸಾಯ್ತೋ'
ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಕಿಚ್ಚ ಸುದೀಪ್ ಅಭಿನಯದ 'ಅಂಬಿ ನಿಂಗ್ ವಯಸ್ಸಾಯ್ತೋ' ಕೂಡ ಇದೇ ವರ್ಷ ಬಿಡುಗಡೆ ಆಗುವ ಸಾಧ್ಯತೆ ಇದೆ.

'ನಟ ಸಾರ್ವಭೌಮ' ಕೂಡ ಲಿಸ್ಟ್ ನಲ್ಲಿದೆ
ಪವನ್ ಒಡೆಯರ್ ನಿರ್ದೇಶನದ 'ನಟ ಸಾರ್ವಭೌಮ' ಸಿನಿಮಾದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ. ಪ್ಲಾನ್ ಪ್ರಕಾರ, ಎಲ್ಲವೂ ಪರ್ಫೆಕ್ಟ್ ಆಗಿ ಆದರೆ, ಇದೇ ವರ್ಷ 'ನಟ ಸಾರ್ವಭೌಮ' ತೆರೆಗೆ ಬರುವುದು ಗ್ಯಾರೆಂಟಿ.

ಪಟ್ಟಿಯಲ್ಲಿದೆ ಶಿವಣ್ಣನ ಚಿತ್ರಗಳು
'ಕವಚ' ಹಾಗೂ 'ರುಸ್ತುಂ' ಚಿತ್ರಗಳ ಶೂಟಿಂಗ್ ನಲ್ಲಿ ಶಿವಣ್ಣ ಪಾಲ್ಗೊಂಡಿದ್ದಾರೆ. ಚಿತ್ರೀಕರಣ ಬೇಗ ಮುಗಿದರೆ, ಸೆಕೆಂಡ್ ಹಾಫ್ ನಲ್ಲೂ ತೆರೆಮೇಲೆ ಶಿವಣ್ಣನ ಆರ್ಭಟ ಇರಲಿದೆ.


Click it and Unblock the Notifications











