For Quick Alerts
  ALLOW NOTIFICATIONS  
  For Daily Alerts

  ಅರ್ಧ ವರ್ಷ ಕಳೆದರೂ ಬರಲೇ ಇಲ್ಲ ಈ ಸ್ಟಾರ್ ಗಳ ಸಿನಿಮಾಗಳು

  By Naveen
  |

  ಆಗಲೇ ಅರ್ಧ ವರ್ಷ ಕಳೆದಿದೆ. ಗೋಡೆ ಮೇಲೆ ನೇತು ಹಾಕಿದ್ದ ಕ್ಯಾಲೆಂಡರ್ ಜನವರಿಯಿಂದ ಜೂನ್ ಗೆ ತಿರುಗಿದೆ. ಈ ಆರು ತಿಂಗಳಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಬೆಳವಣೆಗೆಗಳು ಆಗಿವೆ. ಆದರೆ, ಕನ್ನಡದ ಅನೇಕ ಸ್ಟಾರ್ ಸಿನಿಮಾಗಳು ಮಾತ್ರ ಇನ್ನು ಚಿತ್ರಮಂದಿರಕ್ಕೆ ಬಂದಿಲ್ಲ.

  ಚಿತ್ರಮಂದಿರವನ್ನು ತುಂಬಿಸುವ ತಾಕತ್ತು ಇರುವುದು ಸ್ಟಾರ್ ಗಳಿಗೆ. ಆದರೆ, ಅಂತಹ ಕನ್ನಡದ ದೊಡ್ಡ ಸ್ಟಾರ್ ಗಳ ಸಿನಿಮಾಗಳು ಈ ವರ್ಷ ಇನ್ನೂ ಬಿಡುಗಡೆಯಾಗಿಲ್ಲ. ಸುದೀಪ್, ದರ್ಶನ್, ಉಪೇಂದ್ರ, ಯಶ್, ಗಣೇಶ್ ಸೇರಿದಂತೆ ಸಾಕಷ್ಟು ನಟರು ಇನ್ನು ಪರದೆ ಮೇಲೆ ಎಂಟ್ರಿ ಕೊಟ್ಟಿಲ್ಲ.

  ಫಸ್ಟ್ ಹಾಫ್ ರಿಪೋರ್ಟ್: ಆರು ತಿಂಗಳಲ್ಲಿ ಮಕಾಡೆ ಮಲಗಿದ ಚಿತ್ರಗಳೇ ಹೆಚ್ಚು.! ಫಸ್ಟ್ ಹಾಫ್ ರಿಪೋರ್ಟ್: ಆರು ತಿಂಗಳಲ್ಲಿ ಮಕಾಡೆ ಮಲಗಿದ ಚಿತ್ರಗಳೇ ಹೆಚ್ಚು.!

  6 ತಿಂಗಳಿನಲ್ಲಿ ಒಟ್ಟು ಕನ್ನಡದ 98 ಸಿನಿಮಾ ಬಿಡುಗಡೆಯಾಗಿವೆ. ಹೀಗಿದ್ದರೂ ಈ ನಟರ ಸಿನಿಮಾಗಳನ್ನು ನೋಡುವ ಭಾಗ್ಯ ಇನ್ನೂ ಅಭಿಮಾನಿಗಳಿಗೆ ಸಿಕ್ಕಿಲ್ಲ. ಮುಂದೆ ಓದಿ...

  ಸೈಲೆಂಟ್ ಮೂಡ್ ನಲ್ಲಿ ಸುದೀಪ್

  ಸೈಲೆಂಟ್ ಮೂಡ್ ನಲ್ಲಿ ಸುದೀಪ್

  ನಟ ಸುದೀಪ್ ಅವರ 'ಹೆಬ್ಬುಲಿ' ಸಿನಿಮಾ 2017ರ ಫೆಬ್ರವರಿಯಲ್ಲಿ ಬಿಡುಗಡೆಯಾಗಿತು. ಆ ಸಿನಿಮಾದ ಬಂದು ಈಗ ಈಗಾಗಲೇ 15 ತಿಂಗಳು ಕಳೆದಿದ್ದು, ಇದರ ನಂತರ ಸುದೀಪ್ ಅವರ ಯಾವುದೇ ಹೊಸ ಸಿನಿಮಾ ರಿಲೀಸ್ ಆಗಿಲ್ಲ. ಸದ್ಯ 'ರಾಜು ಕನ್ನಡ ಮೀಡಿಯಂ' ಹಾಗೂ 'ಕಿಚ್ಚು' ಸಿನಿಮಾದ ಅತಿಥಿ ಪಾತ್ರಗಳಲ್ಲಿ ಪಾತ್ರಗಳನ್ನು ಮಾತ್ರ ಕಿಚ್ಚನ ಫ್ಯಾನ್ಸ್ ಕಣ್ಣು ತುಂಬಿಕೊಂಡರು. ಸದ್ಯ ಸುದೀಪ್ 'ದಿ ವಿಲನ್' ಚಿತ್ರದ ಶೂಟಿಂಗ್ ಹಾಗೂ ಡಬ್ಬಿಂಗ್ ಮುಗಿಸಿದ್ದು, 'ಪೈಲ್ವಾನ್' ಹಾಗೂ 'ಕೋಟಿಗೊಬ್ಬ 3' ಚಿತ್ರಗಳಲ್ಲಿ ಬಿಜಿ ಇದ್ದಾರೆ.

  ಪುನೀತ್ ಇನ್ನೂ ಪವರ್ ತೋರಿಸಿಲ್ಲ

  ಪುನೀತ್ ಇನ್ನೂ ಪವರ್ ತೋರಿಸಿಲ್ಲ

  ನಟ ಪುನೀತ್ ರಾಜ್ ಕುಮಾರ್ ಅವರ ಯಾವ ಸಿನಿಮಾ ಕೂಡ ಈ ವರ್ಷ ತೆರೆಗೆ ಬಂದಿಲ್ಲ. ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ 'ಅಂಜನೀಪುತ್ರ' ಬಿಡುಗಡೆಯಾಗಿತ್ತು. ಆ ಚಿತ್ರದ ನಂತರ ಅಪ್ಪು ಅವರ ಬೇರೆ ಸಿನಿಮಾ ಮತ್ತೆ ಬಂದಿಲ್ಲ. ಆದರೆ, 'ಹಂಬಲ್ ಪೋಲಿಟಿಷಿಯನ್ ನಾಗರಾಜ್' ಹಾಗೂ 'ರಾಜರಥ' ಚಿತ್ರಗಳ ಗೆಸ್ಟ್ ರೋಲ್ ನಲ್ಲಿ ಅಪ್ಪು ಕಾಣಿಸಿಕೊಂಡಿದ್ದರು. ಸದ್ಯ 'ನಟ ಸಾರ್ವಭೌಮ' ಸಿನಿಮಾದಲ್ಲಿ ಪುನೀತ್ ಬಿಜಿ ಇದ್ದು, ಈ ವರ್ಷದ ಕೊನೆಗೆ ಈ ಚಿತ್ರ ಬಿಡುಗಡೆಯಾಗಬಹುದು.

  'ಫಸ್ಟ್ ಹಾಫ್'ನಲ್ಲಿ ಶಿವಣ್ಣ ಕಿಂಗ್: ಸೆಂಚುರಿ ಸ್ಟಾರ್ ನ ಯಾರೂ ಮುಟ್ಟೋಕೆ ಆಗಲಿಲ್ಲ.! 'ಫಸ್ಟ್ ಹಾಫ್'ನಲ್ಲಿ ಶಿವಣ್ಣ ಕಿಂಗ್: ಸೆಂಚುರಿ ಸ್ಟಾರ್ ನ ಯಾರೂ ಮುಟ್ಟೋಕೆ ಆಗಲಿಲ್ಲ.!

  ದರ್ಶನ ನೀಡಲಿಲ್ಲ ದರ್ಶನ್

  ದರ್ಶನ ನೀಡಲಿಲ್ಲ ದರ್ಶನ್

  ದರ್ಶನ್ ಅವರ 'ತಾರಕ್' ಸಿನಿಮಾ ಸಪ್ಟೆಂಬರ್ 2017ರಲ್ಲಿ ಬಿಡುಗಡೆಯಾಗಿತ್ತು. ಫ್ಯಾಮಿಲಿ ಸಿನಿಮಾದಲ್ಲಿ ಡಿ ಬಾಸ್ ನೋಡಿ ಅಭಿಮಾನಿಗಳು ಖುಷಿ ಆಗಿದ್ದರು. ಆದರೆ ಆ ನಂತರ ಮತ್ತೆ ದರ್ಶನ್ ದರ್ಶನ ನೀಡಲಿಲ್ಲ. ಡಿ ಬಾಸ್ 50ನೇ ಸಿನಿಮಾ 'ಕುರುಕ್ಷೇತ್ರ' ಚಿತ್ರೀಕರಣ ಮುಗಿಸಿ 'ಯಜಮಾನ' ಚಿತ್ರದ ಶೂಟಿಂಗ್ ಕೆಲಸದಲ್ಲಿ ತೋಡಗಿದ್ದಾರೆ. ಈ ವರ್ಷ 'ಕುರುಕ್ಷೇತ್ರ' ಸಿನಿಮಾ ರಿಲೀಸ್ ಆಗಲಿದೆ.

  2 ವರ್ಷದಿಂದ 'ಕೆಜಿಎಫ್'ಗಾಗಿ ಕಾತುರ

  2 ವರ್ಷದಿಂದ 'ಕೆಜಿಎಫ್'ಗಾಗಿ ಕಾತುರ

  ರಾಕಿಂಗ್ ಸ್ಟಾರ್ ಯಶ್ ನಟನೆಯ ಹೊಸ ಸಿನಿಮಾ ಬಿಡುಗಡೆಯಾಗಿ ಎರಡು ವರ್ಷಗಳೆ ಕಳೆದಿದೆ. 2016ರ ಅಕ್ಟೋಬರ್ ನಲ್ಲಿ ಬಂದ 'ಸಂತು ಸ್ಟ್ರೈಟ್ ಫಾರ್ವಡ್' ಬಳಿಕ 'ಕೆಜಿಎಫ್' ಕೈಗೆತ್ತಿಕೊಂಡಿರುವ ಯಶ್ ತೆರೆ ಮೇಲೆ ಎರಡು ವರ್ಷದಿಂದ ಬಂದಿಲ್ಲ. 'ಕೆಜಿಎಫ್' ಯಶ್ ಕೆರಿಯರ್ ನ ಮಹತ್ವದ ಸಿನಿಮಾ ಆಗಿದ್ದು, ಈ ವರ್ಷದ ಕೊನೆಯಲ್ಲಿ ಆ ಚಿತ್ರ ರಿಲೀಸ್ ಆಗಬಹುದು. ಅದರ ನಂತರ ನಿರ್ದೇಶಕರಾದ ಹರ್ಷ, ನರ್ತನ್ ಹಾಗೂ ಅನಿಲ್ ಕುಮಾರ್ ಚಿತ್ರದಲ್ಲಿ ಯಶ್ ತೊಡಗಲಿದ್ದಾರೆ

  ಉಪೇಂದ್ರ ಮತ್ತೆ ಬಾರಲಿಲ್ಲ

  ಉಪೇಂದ್ರ ಮತ್ತೆ ಬಾರಲಿಲ್ಲ

  ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾದಿಂದ ಬ್ರೇಕ್ ಪಡೆದು ಪ್ರಜಾಕೀಯ ಶುರು ಮಾಡಿದ್ದರು. ಅದೇ ಕಾರಣಕ್ಕೆ 'ಉಪೇಂದ್ರ ಮತ್ತೆ ಬಾ' ಚಿತ್ರದ ನಂತರ ಉಪೇಂದ್ರ ಅವರ ಯಾವ ಸಿನಿಮಾವೂ ಇದುವರೆಗೆ ರಿಲೀಸ್ ಆಗಲಿಲ್ಲ. ಸದ್ಯ ಉಪ್ಪಿ ಮತ್ತೆ ಸಿನಿಮಾರಂಗಕ್ಕೆ ಮರಳಿದ್ದು, 'ಹೋಮ್ ಮಿನಿಸ್ಟರ್' ಹಾಗೂ 'ಐ ಲವ್ ಯೂ' ಸಿನಿಮಾಗಳಲ್ಲಿ ಅವರು ಬಿಜಿ ಇದ್ದಾರೆ.

  'ಕಿರಿಕ್ ಪಾರ್ಟಿ' ಮುಗಿಸಿ ರಕ್ಷಿತ್ ರಜೆ

  'ಕಿರಿಕ್ ಪಾರ್ಟಿ' ಮುಗಿಸಿ ರಕ್ಷಿತ್ ರಜೆ

  2016 ಡಿಸೆಂಬರ್ ರಲ್ಲಿ ಬಿಡುಗಡೆಯಾದ 'ಕಿರಿಕ್ ಪಾರ್ಟಿ' ಸಿನಿಮಾ ದೊಡ್ಡ ಕಲೆಕ್ಷನ್ ಮಾಡಿತ್ತು. ಮಾತ್ರವಲ್ಲದೆ ರಕ್ಷಿತ್ ಶೆಟ್ಟಿಗೆ ಸ್ಟಾರ್ ಪಟ್ಟ ತಂದುಕೊಟ್ಟಿತ್ತು. ಆ ಸಿನಿಮಾದ ನಂತರ ರಕ್ಷಿತ್ ಜವಾಬ್ದಾರಿ ಕೂಡ ಹೆಚ್ಚಿದ್ದು, ಅದಕ್ಕೆ ಹುಷಾರಾಗಿ ಸಿನಿಮಾ ಮಾಡುತ್ತಿದ್ದಾರೆ. 'ಅವನೇ ಶ್ರೀಮನ್ನಾರಾಯಣ' ಚಿತ್ರದ ತಯಾರಿಯಲ್ಲಿರುವ ರಕ್ಷಿತ್ ಈ ವರ್ಷ ಇನ್ನೂ ತಮ್ಮ ಖಾತೆ ತೆರೆದಿಲ್ಲ.

  ಸದ್ದು ಮಾಡದ ಸರ್ಜಾ

  ಸದ್ದು ಮಾಡದ ಸರ್ಜಾ

  ನಟ ಧ್ರುವ ಸರ್ಜಾ ಅಳೆದು ತೂಗಿ ಸಿನಿಮಾ ಮಾಡುತ್ತಾರೆ. ಮೂರು ಸೂಪರ್ ಹಿಟ್ ಸಿನಿಮಾ ಮಾಡಿರುವ ಧ್ರುವ ಯಾವಾಗಲೂ ಎರಡು ವರ್ಷಕ್ಕೊಂದು ಸಿನಿಮಾ ಮಾಡುತ್ತಾರೆ. 'ಭರ್ಜರಿ' ಸಿನಿಮಾ ಕಳೆದ ವರ್ಷ ಸಪ್ಟೆಂಬರ್ ನಲ್ಲಿ ರಿಲೀಸ್ ಆಗಿದೆ. ಅವರ ಮುಂದಿನ ಸಿನಿಮಾ 'ಪೋಗರು' ಶೂಟಿಂಗ್ ಇನ್ನೂ ನಡೆಯುತ್ತಿದೆ.

  ಗಣೇಶ ಇನ್ನೂ ಪ್ರತ್ಯಕ್ಷ ಆಗಿಲ್ಲ

  ಗಣೇಶ ಇನ್ನೂ ಪ್ರತ್ಯಕ್ಷ ಆಗಿಲ್ಲ

  ಕಳೆದ ವರ್ಷ ಕೊನೆಯಲ್ಲಿ 'ಚಮಕ್' ಕೊಟ್ಟ ಗಣೇಶ್ ಯಶಸ್ವಿ ಸಿನಿಮಾ ಮಾಡಿದ್ದರು. ಆ ಬಳಿಕ 'ಆರೆಂಜ್' ಆರಂಭ ಆಯ್ತು. ಈ ಸಿನಿಮಾದ ಕೆಲಸಗಳು ಇನ್ನೂ ಬಾಕಿ ಇರುವ ಕಾರಣ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ.

  ಜಗ್ಗೇಶ್ ರಾಜಕೀಯದಲ್ಲಿ ಜೈಕಾರ

  ಜಗ್ಗೇಶ್ ರಾಜಕೀಯದಲ್ಲಿ ಜೈಕಾರ

  ಸಿನಿಮಾ ಮತ್ತು ರಾಜಕೀಯ ಎರಡು ಕ್ಷೇತ್ರವನ್ನು ನಿಭಾಯಿಸುತ್ತಿರುವ ನಟ ಜಗ್ಗೇಶ್ 'ಮೇಲುಕೋಟೆ ಮಂಜ' ಸಿನಿಮಾದ ನಂತರ 'ಮುಗುಳುನಗೆ' ಸಿನಿಮಾ ಮಾಡಿದರು. ಈ ಎರಡು ಚಿತ್ರಗಳು ಕಳೆದ ವರ್ಷ ರಿಲೀಸ್ ಆಗಿತ್ತು. ಈ ವರ್ಷ ಜಗ್ಗೇಶ್ ಸಹ ತಮ್ಮ ಅಕೌಂಟ್ ಓಪನ್ ಮಾಡಿಲ್ಲ.

  ಕಿರುತೆರೆಯಲ್ಲಿ ರಮೇಶ್ ರಾಜ್ಯಬಾರ

  ಕಿರುತೆರೆಯಲ್ಲಿ ರಮೇಶ್ ರಾಜ್ಯಬಾರ

  ನಟ ರಮೇಶ್ ಅರವಿಂದ್ ಕಿರುತೆರೆ ಮತ್ತು ಹಿರಿ ತೆರೆ ಎರಡರಲ್ಲಿಯೂ ಸ್ಟಾರ್ ಆಗಿದ್ದಾರೆ. ಆದರೆ, ಈ ವರ್ಷ ರಮೇಶ್ ಅವರ ಯಾವ ಸಿನಿಮಾವೂ ರಿಲೀಸ್ ಆಗಿಲ್ಲ. ರಮೇಶ್ ತಮ್ಮ ನೂರನೇ ಸಿನಿಮಾ 'ಪುಷ್ಪಕ ವಿಮಾನ' ನಂತರ 'ಬಟರ್ ಪ್ಲೈ' ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ.

  ಲೇಟ್ ಆಗಿ ಬರ್ತಾರೆ ಅಂಬಿ

  ಲೇಟ್ ಆಗಿ ಬರ್ತಾರೆ ಅಂಬಿ

  ಈ ವರ್ಷ ರಿಲೀಸ್ ಆಗಿದ್ದ ಅನಿರುದ್ಧ್ ನಟನೆಯ 'ರಾಜಸಿಂಹ' ಚಿತ್ರದಲ್ಲಿ ಅಂಬರೀಶ್ ಒಂದು ಪಾತ್ರ ಮಾಡಿದ್ದರು. ಅದು ಬಿಟ್ಟರೆ ಅವರ ಬೇರೆ ಯಾವ ಸಿನಿಮಾ ಈ ವರ್ಷ ಬಂದಿಲ್ಲ. ಆದರೆ, ಅವರ 'ಅಂಬಿ ನಿಂಗೆ ವಯಸಾಯ್ತೋ' ಸಿನಿಮಾ ಈ ವರ್ಷ ಬಿಡುಗಡೆಯಾಗಲಿದೆ.

  ವಿಶೇಷ ಪಾತ್ರಗಳಲ್ಲಿ ರವಿಚಂದ್ರನ್

  ವಿಶೇಷ ಪಾತ್ರಗಳಲ್ಲಿ ರವಿಚಂದ್ರನ್

  'ಅಪೂರ್ವ' ನಂತರ 'ಬಕಾಸುರ' ಹಾಗೂ 'ಸೀಜರ್' ಸಿನಿಮಾಗಳಲ್ಲಿ ರವಿಚಂದ್ರನ್ ಕಾಣಿಸಿಕೊಂಡಿದ್ದರು. ಈ ವರ್ಷ ಈ ಎರಡು ಸಿನಿಮಾಗಳು ಬಿಡುಗಡೆಯಾಯ್ತು. ಆದರೆ ಈ ಎರಡು ಚಿತ್ರಗಳಲ್ಲಿ ರವಿಚಂದ್ರನ್ ವಿಶೇಷ ಪಾತ್ರ ಮಾಡಿದ್ದರು. ಅವರು ನಾಯಕನಾಗಿ ನಟಿಸಿರುವ 'ರಾಜೇಂದ್ರ ಪೊನ್ನಪ್ಪ' ಸಿನಿಮಾ ಈ ವರ್ಷ ರಿಲೀಸ್ ಆಗಲಿದೆ.

  ಪರದೆ ಮೇಲೆ ಬರಲಿಲ್ಲ ಸತೀಶ್

  ಪರದೆ ಮೇಲೆ ಬರಲಿಲ್ಲ ಸತೀಶ್

  'ಟೈಗರ್ ಗಲ್ಲಿ' ಸಿನಿಮಾ ಸಹ ಕಳೆದ ವರ್ಷ ಬಿಡುಗಡೆಯಾಗಿತ್ತು. ಆ ನಂತರ ಸತೀಶ್ ನೀನಾಸಂ ಅವರ ಯಾವ ಸಿನಿಮಾವೂ ಈ ವರ್ಷ ಬಂದಿಲ್ಲ. ಸದ್ಯ ಅವರ 'ಅಯೋಗ್ಯ' ಚಿತ್ರ ಇದೇ ವರ್ಷ ಬಿಡುಗಡೆಯಾಗಲಿದೆ.

  English summary
  Sandalwood First Half Report 2018: Kannada actors Puneeth Rajkumar, Sudeep, Darshan, Upendra, Ganesh and Yash are not given any release so far.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X